ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಓದಿರಿ ಹೊಸ ಲೇಖನಮಾಲೆ : ‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’

ಪರಾತ್ಪರ ಗುರು ಡಾ. ಆಠವಲೆ ಇವರ ಸಂಕಲ್ಪದಂತೆ ಕೆಲವು ವರ್ಷಗಳಲ್ಲೇ ಈಶ್ವರೀ ರಾಜ್ಯ ಸ್ಥಾಪನೆಯಾಗಲಿದೆ. ಬಹಳಷ್ಟು ಜನರ ಮನಸ್ಸಿನಲ್ಲಿ ‘ಈ ಹಿಂದೂ ರಾಷ್ಟ್ರವನ್ನು ಮುನ್ನಡೆಸುವವರು ಯಾರು ?’ ಎಂಬ ಪ್ರಶ್ನೆ ಬರುತ್ತದೆ. ಈಶ್ವರನು ಉಚ್ಚ ಲೋಕದಿಂದ ದೈವಿ ಬಾಲಕರನ್ನು ಪೃಥ್ವಿಯ ಮೇಲೆ ಜನ್ಮ ಪಡೆಯಲು ಕಳುಹಿಸಿದ್ದಾರೆ. ಅವರಲ್ಲಿರುವ ಪ್ರಬುದ್ಧ ವಿಚಾರ ಮತ್ತು ಅಲೌಕಿಕ ವೈಶಿಷ್ಟ್ಯಗಳನ್ನು ಈ ಮಾಲಿಕೆಯ ಅಂರ್ತಗತ ಪ್ರಕಟಿಸುತ್ತಿದ್ದೇವೆ. 

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/56464.html

ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !

ಪರಾತ್ಪರ ಗುರು ಡಾ. ಆಠವಲೆ

‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು. ತಾಯಿ-ತಂದೆಯವರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ-ತಂದೆಯರ ಸಾಧನೆಯಾಗಿ ಅವರೂ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು !

– ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧)

ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಗೋವಾದಲ್ಲಿನ ರಾಮನಾಥಿ ಆಶ್ರಮದಲ್ಲಿರುವ ದೈವೀ ಬಾಲಕ ಕು. ಶ್ರೀನಿವಾಸ ರವೀಂದ್ರ ದೇಶಪಾಂಡೆ (೧೦ ವರ್ಷ) ಇವನಲ್ಲಿನ ಸಂತರ ಬಗೆಗಿನ ಕೃತಜ್ಞತಾಭಾವ !

ಕು.ಶ್ರೀನಿವಾಸ ದೇಶಪಾಂಡೆ

 

ಶ್ರೀ ದೈವತ ವಾಘಮಾರೆ

೧. ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರ ದರ್ಶನವೆಂದರೆ ಶ್ರೀ ಮಹಾಲಕ್ಷ್ಮಿದೇವಿಯ ದರ್ಶನ’, ಎಂಬ ಭಾವವಿರುವ ಕು. ಶ್ರೀನಿವಾಸ !

‘೨೪.೧೦.೨೦೨೧ ರಂದು ಬಾಲಸಾಧಕರು ಮತ್ತು ಅವರ ಪಾಲಕರಿಗಾಗಿ ಸತ್ಸಂಗವನ್ನು ಆಯೋಜಿಸಲಾಗಿತ್ತು. ಸತ್ಸಂಗ ಪ್ರಾರಂಭವಾಗುವ ಮೊದಲು ನಾನು ಶ್ರೀನಿವಾಸನಿಗೆ, “ಇಂದಿನ ಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರು ಬಂದರೆ ನಿನಗೆ ಏನು ಅನಿಸುವುದು ?” ಎಂದು ಕೇಳಿದೆನು. ಆಗ ಅವನು ನನಗೆ, “ನನಗೆ ಶ್ರೀ ಮಹಾಲಕ್ಷ್ಮಿದೇವಿಯ ದರ್ಶನವಾಗುವುದು”, ಎಂದು ಹೇಳಿದನು.

೨. ಓರ್ವ ಸಂತರ ಸತ್ಸಂಗಕ್ಕೆ ಹೋಗುವುದಿದೆ ಎಂದು ತಿಳಿದ ನಂತರ ಶ್ರೀನಿವಾಸನು ತಕ್ಷಣ ಕೃತಜ್ಞತೆಯನ್ನು ವ್ಯಕ್ತಪಡಿಸುವುದು

ರಾಮನಾಥಿ ಆಶ್ರಮಕ್ಕೆ ಬಂದ ನಂತರ ಶ್ರೀನಿವಾಸನಿಗೆ ಒಂದು ಸತ್ಸಂಗದಲ್ಲಿ ಓರ್ವ ಸಂತರ ಭೇಟಿಯಾಯಿತು. ಅವರು ಅವನಿಗೆ ಪ್ರತಿದಿನ ಬಾಲಸಾಧಕರೊಂದಿಗೆ ಸತ್ಸಂಗಕ್ಕೆ ಬರಲು ಹೇಳಿದರು. ೨-೩ ದಿನ ಸತ್ಸಂಗಕ್ಕೆ ಹೋದ ನಂತರ ಕೆಲವು ದಿನಗಳ ವರೆಗೆ ಶ್ರೀನಿವಾಸನಿಗೆ ಸತ್ಸಂಗಕ್ಕೆ ಹೋಗಲು ಆಗಲಿಲ್ಲ. ಕೆಲವು ದಿನಗಳ ನಂತರ ನಾನು ಅವನಿಗೆ ‘ಇಂದು ನಿನಗೆ ಸತ್ಸಂಗಕ್ಕೆ ಹೋಗುವುದಿದೆ’, ಎಂದು ಹೇಳಿದೆ. ಆಗ ಅವನು ತಕ್ಷಣ ಕೃತಜ್ಞತೆಯನ್ನು ವ್ಯಕ್ತಪಡಿಸಿದನು.

೩. ಶ್ರೀನಿವಾಸನಲ್ಲಿರುವ ಭಾವ ಮತ್ತು ಸೇವೆಯಿಂದ ಪ.ಪೂ. ದಾಸ ಮಹಾರಾಜರು ಶ್ರೀನಿವಾಸನ ಬಗ್ಗೆ ‘ನನ್ನ ಶಿಷ್ಯನು ಏಕೆ ಬರಲಿಲ್ಲ ?’, ಎಂದು ಕೇಳುವುದು

ಒಮ್ಮೆ ಶ್ರೀನಿವಾಸನಿಗೆ ಪ.ಪೂ. ದಾಸ ಮಹಾರಾಜರ ಭೇಟಿ ಆಯಿತು. ಶ್ರೀನಿವಾಸನು ಕೆಲವು ದಿನ ಪ.ಪೂ. ದಾಸ ಮಹಾರಾಜರ ಬಳಿ ಸೇವೆಗಾಗಿ ಹೋಗುತ್ತಿದ್ದನು. ಆಗ ಪ.ಪೂ. ದಾಸ ಮಹಾರಾಜರಿಗೆ ಅವನಲ್ಲಿರುವ ಸಂತರ ಬಗೆಗಿನ ಭಾವ ತುಂಬಾ ಇಷ್ಟವಾಯಿತು. ಒಮ್ಮೆ ಅವನಿಂದ ತಪ್ಪಾಗಿದ್ದರಿಂದ ನಾವು ಅವನಿಗೆ, “ನೀನು, ಪ.ಪೂ. ದಾಸ ಮಹಾರಾಜರ ಬಳಿಗೆ ನಮ್ಮನ್ನು ಕೇಳಿಯೇ ಹೋಗಬೇಕು”, ಎಂದು ಹೇಳಿದೆವು. ಆದುದರಿಂದ ಅವನು ೩-೪ ದಿನ ಪ.ಪೂ. ದಾಸ ಮಹಾರಾಜರಿಗೆ ಭೇಟಿ ಆಗಲಿಲ್ಲ. ಆಗ ಪ.ಪೂ. ದಾಸ ಮಹಾರಾಜರು ಅವನನ್ನು ನೆನಪಿಸಿ ಅವನ ಬಗ್ಗೆ ಪ್ರೇಮದಿಂದ ವಿಚಾರಿಸಿದರು. ಪ.ಪೂ. ದಾಸ ಮಹಾರಾಜರು ತಮ್ಮ ಸೇವೆಯಲ್ಲಿನ ಓರ್ವ ಸಾಧಕನಿಗೆ, “೨-೩ ದಿನಗಳಿಂದ ನನ್ನ ಶಿಷ್ಯನು ಏಕೆ ಬರಲಿಲ್ಲ. ಎಲ್ಲಿ ಹೋಗಿದ್ದಾನೆ ?” ಎಂದು ಶ್ರೀನಿವಾಸನ ಬಗ್ಗೆ ಕೇಳಿದರು.

– ಶ್ರೀ. ಧೈವತ ವಾಘಮಾರೆ (ಶ್ರೀನಿವಾಸನ ಮಾವ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೧೦.೨೦೨೧)

ರಾಮನಾಥಿ ಆಶ್ರಮದಲ್ಲಿನ ಶ್ರೀ ಭವಾನಿದೇವಿಯ ದೇವಸ್ಥಾನದ ಹತ್ತಿರ ಆಡುತ್ತಿರುವಾಗ ‘ಯಾರೋ ಜೊತೆಗಿದ್ದಾರೆ’, ಎಂದು ಅನಿಸುವುದು ಮತ್ತು ನಂತರ ದೇವಿಯ ದರ್ಶನವನ್ನು ಪಡೆಯುವಾಗ ಸೂಕ್ಷ್ಮದಿಂದ ದೇವಿ ಕಾಣಿಸುವುದು !

‘೧೧.೧೦.೨೦೨೧ ರಂದು ನಾನು, ಕು. ನಂದನ ಕುದರವಳ್ಳಿ (ಆಧ್ಯಾತ್ಮಿಕ ಮಟ್ಟ ಶೇ. ೬೩, ೯ ವರ್ಷ) ಮತ್ತು ಕು. ಜಯಂತ ಮಲ್ಯ (ಆಧ್ಯಾತ್ಮಿಕ ಮಟ್ಟ ಶೇ. ೫೦, ೯ ವರ್ಷ) ಈ ನನ್ನ ಸ್ನೇಹಿತರೊಂದಿಗೆ ನಾನು ರಾಮನಾಥಿ ಆಶ್ರಮದಲ್ಲಿನ ಶ್ರೀ ಭವಾನಿದೇವಿಯ ದೇವಸ್ಥಾನದ ಹತ್ತಿರ ಆಡುತ್ತಿದ್ದೆನು. ಆಗ ನನಗೆ ನಮ್ಮ ಮೂರು ಜನರನ್ನು ಬಿಟ್ಟು ‘ನಮ್ಮೊಂದಿಗೆ ಇನ್ನೂ ಯಾರೋ ಒಬ್ಬರು ಇದ್ದಾರೆ’, ಎಂದು ಅನಿಸುತ್ತಿತ್ತು. ಆಟವಾಡಿದ ನಂತರ ನಾನು ದೇವಿಯ ದರ್ಶನವನ್ನು ಪಡೆದೆನು. ಆಗ ನನಗೆ ಸೂಕ್ಷ್ಮದಲ್ಲಿ ಕೈಯಲ್ಲಿ ಶಸ್ತ್ರಗಳನ್ನು ಹಿಡಿದ ದೇವಿಯು ಕಾಣಿಸಿದಳು. ನಾನು ಅವಳ ಚರಣಗಳಲ್ಲಿ ನಮಸ್ಕಾರ ಮಾಡಿ ಕೃತಜ್ಞತೆಯನ್ನು ವ್ಯಕ್ತಪಡಿಸಿದೆನು.

– ಕು. ಶ್ರೀನಿವಾಸ ದೇಶಪಾಂಡೆ (ಆಧ್ಯಾತ್ಮಿಕ ಮಟ್ಟ ಶೇ. ೬೨, ೧೦ ವರ್ಷ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೧೦.೨೦೨೧)

ತಂದೆಯ ನಿಧನದ ನಂತರ ಸ್ಥಿರವಾಗಿದ್ದು ಧರ್ಮಶಾಸ್ತ್ರಕ್ಕನುಸಾರ ಅವರ ಅಂತಿಮಸಂಸ್ಕಾರವನ್ನು ಮಾಡುವ ಕು. ಶ್ರೀನಿವಾಸ ರವೀಂದ್ರ ದೇಶಪಾಂಡೆ !

ಶ್ರೀಮತಿ ಮೇಘನಾ ವಾಘಮಾರೆ

೨೦.೫.೨೦೨೧ ರಂದು ಕೊರೊನಾದಿಂದ ಶ್ರೀನಿವಾಸನ ತಂದೆಯ ನಿಧನವಾಯಿತು. ಆ ಸಮಯದಲ್ಲಿ ಸಂಚಾರವಾಣಿಯಿಂದ ನನ್ನೊಂದಿಗೆ ಮಾತನಾಡುವಾಗ ಅವನು ಕೆಲವೊಂದು ಅಂಶಗಳನ್ನು ಹೇಳಿದನು. ಆಗ ಶ್ರೀನಿವಾಸನ ಬಗ್ಗೆ ಅರಿವಾದ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ.

೧. ತಂದೆಯ ನಿಧನದ ನಂತರ ನಾಮಜಪ ಮತ್ತು ಪ್ರಾರ್ಥನೆ ಮಾಡಿದ ನಂತರ ಶ್ರೀನಿವಾಸನು ಶಾಂತನಾಗುವುದು : ‘ತಂದೆಯ ನಿಧನದ ನಂತರ ಆರಂಭದಲ್ಲಿ ಶ್ರೀನಿವಾಸನಿಗೆ ಕೆಲವೊಮ್ಮೆ ತುಂಬಾ ಅಳು ಬರುತ್ತಿತ್ತು. ನಂತರ ಅವನು ನನ್ನೊಂದಿಗೆ (ಶ್ರೀ. ಧೈವತ ವಾಘಮಾರೆ ಇವರೊಂದಿಗೆ) ಸಂಚಾರಿವಾಣಿಯಲ್ಲಿ ಮಾತನಾಡಿದನು. ನಾನು ಹೇಳಿದ ನಾಮಜಪ ಮತ್ತು ಪ್ರಾರ್ಥನೆಯನ್ನು ಮಾಡಿದ ನಂತರ ಅವನು ತುಂಬಾ ಶಾಂತವಾದನು.

೨. ಧರ್ಮಶಾಸ್ತ್ರಕ್ಕನುಸಾರ ತಂದೆಯ ಅಂತ್ಯಸಂಸ್ಕಾರವನ್ನು ಮಾಡುವಾಗ ಶ್ರೀನಿವಾಸನಲ್ಲಿ ಆಗಿರುವ ವಿಚಾರಪ್ರಕ್ರಿಯೆ : ಉಪನಯನದ ಸಮಯದಲ್ಲಿ ಶ್ರೀನಿವಾಸನ ಚೌಲಕರ್ಮವನ್ನು ಮಾಡುವಾಗ (ತಲೆಯ ಮೇಲಿನ ಕೂದಲುಗಳನ್ನು ತೆಗೆಯುವಾಗ) ಅವನು ತುಂಬಾ ಅತ್ತಿದ್ದನು; ಆದರೆ ತಂದೆಯ ಅಂತಿಮ ಸಂಸ್ಕಾರದ ಸಮಯದಲ್ಲಿ ವಪನ ಮಾಡುವಾಗ (ತಲೆಯ ಮೇಲಿನ ಕೂದಲನ್ನು ತೆಗೆಯುವಾಗ) ಅವನು ಅಳಲಿಲ್ಲ. ಅವನು “ನನಗೆ ತಂದೆಯ ಎಲ್ಲ ವಿಧಿಗಳನ್ನು ಯೋಗ್ಯ ರೀತಿಯಲ್ಲಿ ಮಾಡುವುದಿತ್ತು, ಆದುದರಿಂದ ನಾನು ಅಳಲಿಲ್ಲ, ಎಲ್ಲ ವಿಧಿಗಳನ್ನು ಶಾಂತ ರೀತಿಯಿಂದ ಮಾಡಿದೆನು” ಎಂದು ಹೇಳಿದನು.

– ಶ್ರೀಮತಿ ಮೇಘನಾ ವಾಘಮಾರೆ (ಅಜ್ಜಿ) ಮತ್ತು ಶ್ರೀ. ಧೈವತ ವಾಘಮಾರೆ (ಮಾವ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೯.೫.೨೦೨೧)