ಪಾಶ್ಚಾತ್ಯರ ಅಂಧಾನುಕರಣೆಯಿಂದ ಇಂದಿನ ಸಂಗೀತ ಮತ್ತು ನೃತ್ಯಕಲೆಗೆ ಪ್ರಾಪ್ತವಾಗಿರುವ ವಿಕೃತರೂಪ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

೧. ದೂರಚಿತ್ರವಾಣಿಯಲ್ಲಿನ (ಟಿ.ವಿ.) ಒಂದು ನೃತ್ಯದ ಕಾರ್ಯಕ್ರಮವನ್ನು ನೋಡಿ ‘ಇದಕ್ಕೆ ಕಲೆಯ ಆವಿಷ್ಕಾರವೆನ್ನಬೇಕೆ ? ಎಂಬ ಪ್ರಶ್ನೆ ಬಂದಿತು 

ಒಮ್ಮೆ ಒಂದು ಪ್ರವಾಸದ ಸಮಯದಲ್ಲಿ ಒಬ್ಬ ಪರಿಚಯದ ವ್ಯಕ್ತಿಯ ಮನೆಗೆ ಹೋದಾಗ ನಮಗೆ ದೂರಚಿತ್ರವಾಣಿಯಲ್ಲಿ ಒಂದು ನೃತ್ಯದ ಕಾರ್ಯಕ್ರಮವನ್ನು ನೋಡುವ ಯೋಗ ಬಂದಿತು. ಆ ಕಾರ್ಯಕ್ರಮವನ್ನು ನೋಡಿ ‘ಇಂದಿನ ನೃತ್ಯಕಲೆ ಎಷ್ಟು ಕೀಳ್ಮಟ್ಟಕ್ಕಿಳಿದಿದೆ’, ಎಂಬುದು ನೋಡಲು ಸಿಕ್ಕಿತು. ‘ಇದಕ್ಕೆ ಕಲೆಯ ಆವಿಷ್ಕಾರವೆನ್ನಬೇಕೆ ?’, ಎಂಬ ಪ್ರಶ್ನೆ ನಮಗೆ ಬಂದಿತು.  ಈ ಕಾರ್ಯಕ್ರಮದ ಪರೀಕ್ಷಕರು ಕಲಾಕ್ಷೇತ್ರದ ಪ್ರಖ್ಯಾತ ವ್ಯಕ್ತಿಗಳಾಗಿದ್ದರು. ಈ ಸಂದರ್ಭದಲ್ಲಿ ಅತಿಥಿ (ಗೆಸ್ಟ್‌) ಪರೀಕ್ಷಕರೆಂದು ಹಿಂದಿನ ಪೀಳಿಗೆಯ ಇಬ್ಬರು ನಟಿಯರು ಉಪಸ್ಥಿತರಿದ್ದರು.

೨. ಪಾಶ್ಚಾತ್ಯರ ನೃತ್ಯಗಳ ಪ್ರಭಾವದಿಂದ ಆ ನೃತ್ಯಗಳು ಅಸಾತ್ತ್ವಿಕವೆನಿಸುವುದು 

ಈ ಕಾರ್ಯಕ್ರಮದಲ್ಲಿ ಯಾವ ಹಾಡಿನೊಂದಿಗೆ ಕಲಾವಿದರು ನೃತ್ಯವನ್ನು ಸಾದರಪಡಿಸುತ್ತಿದ್ದರೋ, ಆ ಹಾಡು ಬೇರೆಯೆ ಆಗಿತ್ತು ಹಾಗೂ ಆ ನೃತ್ಯವೂ ಬಹಳ ವಿಚಿತ್ರವಾಗಿತ್ತು. ಅದರಿಂದ ಸಾತ್ತ್ವಿಕ ಸ್ಪಂದನಗಳ ಅರಿವಾಗುತ್ತಿರಲಿಲ್ಲ. ಅದನ್ನು ನೋಡಿ ಆನಂದವೂ ಸಿಗುತ್ತಿರಲಿಲ್ಲ. ಸದ್ಯ ‘ಜಾಝ್‌’, ಟ್ವಾಪ್‌’, ‘ಹಿಪ್‌-ಹಾಪ್‌’, ‘ಚಾಚಾಚಾ’, ಇಂತಹ ಪಾಶ್ಚಾತ್ಯ ನೃತ್ಯಗಳ ಹಿಂದೆ ಓಡುತ್ತಾ ನಾವು ನಮ್ಮ ಭಾರತೀಯ ನೃತ್ಯಕಲೆಯನ್ನು ಮರೆಯುತ್ತಿದ್ದೇವೆ.

೩. ಒಂದು ಕಾಲದಲ್ಲಿ ಪ್ರಖ್ಯಾತರಾಗಿದ್ದ ದಿಗ್ಗಜ ಕಲಾವಿದರಿಂದ ಇಂದಿನ ಪೀಳಿಗೆಗೆ ಯೋಗ್ಯ ಮಾರ್ಗದರ್ಶನದ ಅಪೇಕ್ಷೆ ಇರುವಾಗ ಈ ಕಲಾವಿದರು ಇಂತಹ ಕಾರ್ಯಕ್ರಮಗಳನ್ನು ಆನಂದದಿಂದ ನೋಡುವುದು 

ಒಂದು ಕಾಲದಲ್ಲಿ ದಿಗ್ಗಜ ಕಲಾವಿದರಾಗಿದ್ದ ಈ ಇಬ್ಬರು ನಟಿಯರು ಕೂಡ ಈ ಕಾರ್ಯಕ್ರಮವನ್ನು ಆನಂದದಿಂದ ನೋಡುತ್ತಿದ್ದರು. ‘ಅವರಂತಹ ಅನುಭವಿಗಳಿಂದ ಇಂದಿನ ಪೀಳಿಗೆಗೆ ಯೋಗ್ಯ ಮಾರ್ಗದರ್ಶನವಾಗಬೇಕೆಂಬ ಅಪೇಕ್ಷೆಯಿದೆ; ಆದರೆ ಈ ಕಾರ್ಯಕ್ರಮವನ್ನು ನೋಡುವಾಗ ಅದರ ವಿರುದ್ಧ ನಡೆಯುತ್ತಿದೆ’, ಎಂಬುದು ಗಮನಕ್ಕೆ ಬರುತ್ತದೆ.

೪. ರ್ಯಾಪಿಂಗ್‌ ಎಂಬ ಪಾಶ್ಚಾತ್ಯ ಸಂಗೀತದ ಒಂದು ಪ್ರಕಾರವು ಕವಿತಾ ವಾಚನಕ್ಕಿಂತಲೂ ಕೆಳಮಟ್ಟದ್ದಾಗಿರುವುದು ಇತ್ತೀಚೆಗಷ್ಟೆ ಒಂದು ಚಲನಚಿತ್ರದಲ್ಲಿ ‘ರ್ಯಾಪಿಂಗ್’ ಎನ್ನುವ ಬೇರೆಯೆ ರೀತಿಯ

ಸಂಗೀತವನ್ನು ಮೊದಲ ಬಾರಿ ಕೇಳಿದೆ, ಈ ಹಾಡಿನ ಪ್ರಕಾರದಲ್ಲಿ ಹಾಡನ್ನು ವಾಚನ ಮಾಡಿದಂತೆ ಹೇಳಲಾಗುತ್ತದೆ. ‘ಸ್ವರ, ತಾಳ ಹಾಗೂ ಲಯದ ಮಿಲನವಾಗಿ ಇಂದಿನವರೆಗೆ ನಾವು ಕೇಳಿರುವ ಸುಮಧುರ ಸಂಗೀತದ ತುಲನೆಯಲ್ಲಿ ಈ ‘ರ್ಯಾಪಿಂಗ್’ ಶೈಲಿಯ ಹಾಡನ್ನು ಕೇಳಿದಾಗ ಇದಕ್ಕಿಂತ ‘ನಮ್ಮ ಕವಿತೆಗಳ ವಾಚನವೂ ಅನೇಕ ಪಟ್ಟು ಉತ್ತಮವಾಗಿದೆ, ಎಂದು ಅನಿಸುತ್ತದೆ. ಅಷ್ಟೇ ಅಲ್ಲ, ಕವಿತೆಗಳ ವಾಚನದೊಂದಿಗೂ ಇದನ್ನು ತುಲನೆ ಮಾಡುವುದು ಯೋಗ್ಯವಲ್ಲವೆನಿಸಿತು.

೫. ಒಂದು ಆಂಗ್ಲ ವಾಹಿನಿಯಲ್ಲಿ ಅಮೇರಿಕಾದ ಸಂಪೂರ್ಣ ಕಾಲ್ಪನಿಕ ಕಥೆಯನ್ನು ಆಧರಿಸಿದ ಒಂದು ಮಾಲಿಕೆ ಭಾರತದಲ್ಲಿ ಪ್ರಸಿದ್ಧವಾಗುತ್ತಿದೆ  

ಇದೆಲ್ಲವನ್ನೂ ನೋಡಿ ಯಾರ ಮನೆಗೆ ನಾವು ಹೋಗಿದ್ದೇವೆಯೋ, ಆ ವ್ಯಕ್ತಿಯೊಂದಿಗೆ ತನ್ನಿಂತಾನೆ ಇಂದಿನ ಕಲಾಕ್ಷೇತ್ರಕ್ಕೆ ಸಂಬಂಧಿತ ಮಾತುಕತೆ ಆರಂಭವಾಯಿತು. ಆಗ ನಮಗೆ ಸದ್ಯ ಒಂದು ಆಂಗ್ಲ ವಾಹಿನಿಯಲ್ಲಿ ಅಮೇರಿಕಾದ ಒಂದು ಆಂಗ್ಲ ಮಾಲಿಕೆ ಭಾರತದಲ್ಲಿ ತುಂಬಾ ಪ್ರಸಿದ್ದವಾಗಿದ್ದು, ಅದು ಕಾಲ್ಪನಿಕ ಕಥೆಯ ಮೇಲಾಧಾರಿತವಾಗಿದೆ, ಎಂದು ತಿಳಿಯಿತು.

೬. ವಾಸ್ತವದಿಂದ ದೂರ ಒಯ್ಯುವ ಹಾಗೂ ಸಮಾಜಕ್ಕೆ ಎಳ್ಳಷ್ಟೂ ಮಾರ್ಗದರ್ಶನ ಸಿಗದಂತಹ ಇಂತಹ ಮಾಲಿಕೆಗಳಿಂದ ಜನರ ವೃತ್ತಿ ಹಾಳಾಗಿದೆ !  

ಇಂತಹ ಅನೇಕ ನಿರರ್ಥಕ ಮಾಲಿಕೆಗಳ ಮೂಲಕ ಅಶ್ಲೀಲತೆ, ಸ್ವೇಚ್ಛಾಚಾರ, ಅನೈತಿಕತೆಯ ವರ್ಚಸ್ಸು ಹೆಚ್ಚುತ್ತಾ ಹೋಗುತ್ತಿದೆ. ಇದರಿಂದ ಮಾನವ  ಪಶುಸಮಾನನಾಗಿ ಅವನ ವೃತ್ತಿ ಕೆಟ್ಟಿದೆ. ಇಂತಹ ಈ ಮಾಲಿಕೆ ಭಾರತೀಯರ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದರೆ, ಜೀವಮಾನದಲ್ಲಿ ಪೂಜಾರ್ಚನೆಗಾಗಿ ಒಮ್ಮೆಯೂ ಮುಂಜಾನೆ ಏಳದ ಜನರು ಈ ಮಾಲಿಕೆಯನ್ನು ನೋಡಲು ಬೆಳಗ್ಗೆ ೬ ಗಂಟೆಗೆ ಅಲಾರಾಮ್‌ ಇಟ್ಟು ಏಳುತ್ತಾರೆಂದು ಕೇಳಿದೆ.

೭. ಇಂದಿನ ಕಲಾವಿದರು ಸಂಸ್ಕೃತಿ ರಕ್ಷಕರಲ್ಲ, ಸಂಸ್ಕೃತಿಭಕ್ಷಕರಾಗಿದ್ದಾರೆ !

ಇದೆಲ್ಲವನ್ನೂ ನೋಡಿ ‘ನಮ್ಮ ಒಳ್ಳೆಯ ವಿಷಯಗಳ ಮಹತ್ವ ನಮಗೆ ಬೇಕಿಲ್ಲ’, ಎಂಬುದು ಸ್ಪಷ್ಟವಾಗುತ್ತದೆ. ನಾವೇ ನಮ್ಮ ಸಂಸ್ಕೃತಿಯ ಭಕ್ಷಕರಾಗಿದ್ದೇವೆ. ಕಳೆದ ೧೦ ರಿಂದ ೧೫ ವರ್ಷಗಳಲ್ಲಿ ಕಲಾಕ್ಷೇತ್ರದಲ್ಲಿ ತಮ್ಮನ್ನು ಕಲಾವಿದರೆಂದು ಹೇಳಿಸಿಕೊಳ್ಳುವ ಭಕ್ಷಕರು ಕಲೆಯನ್ನು ಅತ್ಯಂತ ವೇಗದಲ್ಲಿ ಕೀಳ್ಮಟ್ಟಕ್ಕೆ ಒಯ್ದಿದ್ದಾರೆ, ಯಾವುದರ ಬಗ್ಗೆ ನಮಗೆ ದ್ವೇಷವೆನಿಸಬೇಕಾಗಿತ್ತೋ, ಅದನ್ನೇ ನಾವು ಅಂಗೀಕರಿಸಿದ್ದೇವೆ. ಅವರು ತಮ್ಮಲ್ಲಿರುವ ಚಿನ್ನಕ್ಕಿಂತ ಅಮೂಲ್ಯವಾಗಿರುವ ವಿಷಯಗಳನ್ನು ಮಣ್ಣಿಗೆ ಸಮಾನ ಮಾಡಿದ್ದಾರೆ.

೮. ‘ನೈತಿಕತೆಯನ್ನು ಅವನತಿಗೊಳಿಸುವ ಇಂತಹ ವಿಷಯಗಳಿಂದ ತಮ್ಮನ್ನು ಮತ್ತು ತಮ್ಮ ಮಕ್ಕಳನ್ನು ದೂರವಿಡಲು ಮತ್ತು ಮುಂದಿನ ಪೀಳಿಗೆಯಲ್ಲಿ ರಾಷ್ಟ್ರ ಹಾಗೂ ಧರ್ಮದ ಬಗ್ಗೆ ಗೌರವ ಮೂಡಲು ಹಿಂದೂ ರಾಷ್ಟ್ರ ಸ್ಥಾಪನೆಯು’, ಅನಿವಾರ್ಯವಾಗಿದೆ

ವಾಸ್ತವಿಕತೆಯಿಂದ ದೂರ ಒಯ್ಯುವ, ಅನೈತಿಕತೆಗೆ ಸ್ಥಾನ ನೀಡುವ, ಸ್ವೇಚ್ಛಾಚಾರಿ, ಜೀವನದಲ್ಲಿ ಮನುಷ್ಯನನ್ನು ಕುರುಡನನ್ನಾಗಿ ಮಾಡುವ ಯಾವುದೇ ಮನೋರಂಜನೆಯ ಮಾಧ್ಯಮವಿದ್ದರೂ, ಅದರಿಂದ ನಾವು ನಮ್ಮ ಮಕ್ಕಳನ್ನು ದೂರವಿಡಬೇಕು. ಅದಕ್ಕಾಗಿ ಸಮಷ್ಟಿ ಶಿಕ್ಷಣದ ಪದ್ಧತಿಯನ್ನು ಬದಲಾಯಿಸಬೇಕು. ನಮ್ಮ ಸಂಸ್ಕೃತಿಯನ್ನು ಜೋಪಾನ ಮಾಡುವ, ರಾಷ್ಟ್ರ ಮತ್ತು ಧರ್ಮವನ್ನು ಗೌರವಿಸಿ ಅದರ ರಕ್ಷಣೆ ಮಾಡುವ, ನೈತಿಕತೆಯ ಮಾರ್ಗದಲ್ಲಿ ನಡೆಯುವ ಹಾಗೂ ಇವೆಲ್ಲದರ ಹಿಂದೆ ಈಶ್ವರಪ್ರಾಪ್ತಿಯ ಧ್ಯೇಯ ದಲ್ಲಿ ಪ್ರೇರಣೆ ಪಡೆದಿರುವ ಪೀಳಿಗೆಯನ್ನು ರೂಪಿಸಲು ಹಿಂದೂ ರಾಷ್ಟ್ರದ ಸ್ಥಾಪನೆಯೆ ಅತ್ಯಾವಶ್ಯಕವಾಗಿದೆ. ಅದಕ್ಕಾಗಿ ‘ಪ್ರತಿಯೊಬ್ಬರಿಗೂ ಧರ್ಮಶಿಕ್ಷಣ ನೀಡಿ ಕೃತಿಶೀಲರನ್ನಾಗಿಸುವುದು’, ಇದೇ ಇಂದಿನ ಅವಶ್ಯಕತೆಯಾಗಿದೆ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಜಯಪುರ, ರಾಜಸ್ಥಾನ.