ಪಾಕಿಸ್ತಾನದ ಸಿಂಧನಲ್ಲಿ ಹಿಂದೂ ಉದ್ಯಮಿಗೆ ಗುಂಡಿಕ್ಕಿ ಕೊಲೆ

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ್ ಪ್ರಾಂತದ ಅನಾಜ್ ಮಂಡಿ ಭಾಗದಲ್ಲಿ ೪೪ ವರ್ಷ ವಯಸ್ಸಿನ ಹಿಂದೂ ಉದ್ಯಮಿ ಸುನಿಲ್ ಕುಮಾರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆಯನ್ನು ಖಂಡಿಸಲು ಸ್ಥಳೀಯ ಹಿಂದೂಗಳು ಪೊಲೀಸ ಠಾಣೆಯ ಎದುರು ಪ್ರತಿಭಟಿಸಿದ್ದಾರೆ ಮತ್ತು ಆರೋಪಿಗೆ ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆಯಿಂದ ಅಲ್ಲಿ ಬಂದ್ ಪಾಲಿಸಲಾಗಿದೆ.