ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಮನೋಲಯವಾದಂತಹ ಸಂತರ ಕೃತಿಯಿಂದ ಮಾನಸಿಕ ಸ್ತರದ ಅರ್ಥವನ್ನು ತೆಗೆಯಬೇಡಿ !

(ಪರಾತ್ಪರ ಗುರು) ಡಾ. ಆಠವಲೆ

‘ಕೆಲವೊಮ್ಮೆ ಕೆಲವು ಸಂತರ ವರ್ತನೆಯನ್ನು ನೋಡಿ ‘ಇವರಿಗೆ ಮನೋರೋಗವಾಗಿದೆಯೇ ?’, ಎಂದು ಕೆಲವರಿಗೆ ಅನಿಸುತ್ತದೆ. ಅಂತಹ ಸಮಯದಲ್ಲಿ ಸಂತರ ಮನೋಲಯವಾಗಿರುವುದರಿಂದ ಅವರಿಗೆ ಎಂದೂ ಮನೋರೋಗವಾಗುವುದಿಲ್ಲ, ಎಂಬುದನ್ನು ಗಮನದಲ್ಲಿಡಬೇಕು. ಅವರ ವರ್ತನೆಯು ಆ ಪರಿಸ್ಥಿತಿಗೆ ಆವಶ್ಯಕ ಅಥವಾ ಅವರ ಪ್ರಕೃತಿಗನುಸಾರವಾಗಿರುತ್ತದೆ. ಎಲ್ಲಕ್ಕಿಂತ ಮಹತ್ವದ್ದೆಂದರೆ ಸಂತರು ಈಶ್ವರನ ಸಗುಣ ರೂಪವಾಗಿರುವುದರಿಂದ ಅವರ ವರ್ತನೆಯ ಕಾರ್ಯಕಾರಣ ಭಾವವು ಸಾಮಾನ್ಯ ವ್ಯಕ್ತಿಗಳಿಗೆ ತಿಳಿಯುವುದು ಕಠಿಣವಾಗಿದೆ’.

– (ಪರಾತ್ಪರ ಗುರು) ಡಾ.ಆಠವಲೆ (೧೮.೧೧.೨೦೨೧)

ಎಲ್ಲಿ ಸ್ತ್ರೀ ರಕ್ಷಣೆಯ ಆದರ್ಶವಿರುವ ರಾಮ, ಕೃಷ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಎಲ್ಲಿ ಹಿಂದೂ ಧರ್ಮ ಹಾಗೂ ಭಾರತ ಇವೆರಡನ್ನು ನಾಚಿಸುವ ಇಂದಿನ ಜನ್ಮ ಹಿಂದೂಗಳು !

‘ರಾವಣನು ಸೀತೆಯನ್ನು ಅಪಹರಿಸಿದನೆಂದು ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಸೀತೆಯನ್ನು ರಾವಣನಿಂದ ಮುಕ್ತಗೊಳಿಸಿದನು. ನರಕಾಸುರನು ಬಂಧಿಸಿಟ್ಟ ೧೬,೦೦೦ ಕನ್ಯೆಯರನ್ನು ಶ್ರೀಕೃಷ್ಣನು ನರಕಾಸುರನೊಂದಿಗೆ ಯುದ್ಧ ಮಾಡಿ ಬಂಧಮುಕ್ತಗೊಳಿಸಿದನು. ಛತ್ರಪತಿ ಶಿವಾಜಿ ಮಹಾರಾಜರು ಸ್ತ್ರೀಯರ ಮೇಲೆ ಅತ್ಯಾಚಾರ ಮಾಡುವ ಪಾಟೀಲನ ಕೈ-ಕಾಲು ತುಂಡರಿಸಿದನು. ಸ್ತ್ರೀರಕ್ಷಣೆಯನ್ನು ಹೇಗೆ ಮಾಡಬೇಕು ?’, ಇದರ ಅನೇಕ ದಾಖಲೆಗಳು ಹಿಂದೂಗಳ ಎದುರು ಇದ್ದರೂ ಭಾರತದಲ್ಲಿ ಪ್ರತಿದಿನ ಸ್ತ್ರೀಯರ ಮೇಲೆ ಅತ್ಯಾಚಾರವಾಗುತ್ತಿದೆ. ಎಲ್ಲಿ ರಾಮ, ಕೃಷ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಎಲ್ಲಿ ಇಂದಿನ ಜನ್ಮಹಿಂದೂಗಳು ! ಸ್ತ್ರೀಯರ ರಕ್ಷಣೆಗಾಗಿ ಏನನ್ನೂ ಮಾಡದ ಇಂತಹ ಜನ್ಮಹಿಂದೂಗಳು ಹಿಂದೂ ಧರ್ಮ ಹಾಗೂ ಭಾರತ ಇವೆರಡಕ್ಕೂ ಲಜ್ಜಾಸ್ಪದವಾಗಿದ್ದಾರೆ.

– (ಪರಾತ್ಪರ ಗುರು) ಡಾ. ಆಠವಲೆ (೫.೧೧.೨೦೨೧)

ಸನಾತನದ ಸತ್ಸಂಗದಲ್ಲಿ ಆನಂದದ ಅರಿವಾಗಲು ಕಾರಣ

‘ಯಾವುದಾದರೊಂದು ಸಂಪ್ರದಾಯದ ಸಂತರ ಮಾರ್ಗದರ್ಶನ, ದರ್ಶನಸಮಾರಂಭವಿದ್ದರೆ ಅವರಲ್ಲಿ ಬರುವ ಭಕ್ತರು ಕೇವಲ ಆರ್ಥಿಕ, ಸಾಂಸಾರಿಕ, ಶಾರೀರಿಕ ಹಾಗೂ ಮಾನಸಿಕ ಸ್ತರದ ಅಡಚಣೆ ಹೇಳುತ್ತಾರೆ. ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದರೆ ಮನುಷ್ಯದ ಎಲ್ಲಾ ತೊಂದರೆಗಳು ಅವನ ಪ್ರಾರಬ್ಧಕ್ಕನುಸಾರ ಇರುತ್ತದೆ. ಅದುದರಿಂದ ಸನಾತನದಲ್ಲಿ ಪ್ರಾರಬ್ಧವನ್ನು ಎದುರಿಸಲು ಅಥವಾ ಪ್ರಾರಬ್ಧ ತೀವ್ರವಾಗಿದ್ದರೆ ಅದನ್ನು ಸಹಿಸಲು ಯೋಗ್ಯವಾದ ಸಾಧನೆಯನ್ನು ಕಲಿಸಲಾಗುತ್ತದೆ. ಸನಾತನದ ಸಾಧಕರು ನಿಷ್ಕಾಮ ಸಾಧನೆ ಮಾಡುತ್ತಾರೆ. ಸನಾತನದ ಸತ್ಸಂಗದಲ್ಲಿ ಸಾಧಕರು ತಮಗೆ ಬಂದ ಕೇವಲ ಆಧ್ಯಾತ್ಮಿಕ ಸ್ತರದ ಅನುಭೂತಿ ಹೇಳುತ್ತಾರೆ. ಹಾಗಾಗಿ ಸನಾತನದ ಸತ್ಸಂಗಗಳಲ್ಲಿ ಸಾಧಕರು ಆನಂದ ಅನುಭವಿಸುತ್ತಾರೆ’.

– (ಪರಾತ್ಪರ ಗುರು) ಡಾ. ಆಠವಲೆ