ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಓದಿರಿ ಹೊಸ ಲೇಖನಮಾಲೆ : ‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’

ಪರಾತ್ಪರ ಗುರು ಡಾ. ಆಠವಲೆ ಇವರ ಸಂಕಲ್ಪದಂತೆ ಕೆಲವು ವರ್ಷಗಳಲ್ಲೇ ಈಶ್ವರೀ ರಾಜ್ಯ ಸ್ಥಾಪನೆಯಾಗಲಿದೆ. ಬಹಳಷ್ಟು ಜನರ ಮನಸ್ಸಿನಲ್ಲಿ ‘ಈ ಹಿಂದೂ ರಾಷ್ಟ್ರವನ್ನು ಮುನ್ನಡೆಸುವವರು ಯಾರು ?’ ಎಂಬ ಪ್ರಶ್ನೆ ಬರುತ್ತದೆ. ಈಶ್ವರನು ಉಚ್ಚ ಲೋಕದಿಂದ ದೈವಿ ಬಾಲಕರನ್ನು ಪೃಥ್ವಿಯ ಮೇಲೆ ಜನ್ಮ ಪಡೆಯಲು ಕಳುಹಿಸಿದ್ದಾರೆ. ಅವರಲ್ಲಿರುವ ಪ್ರಬುದ್ಧ ವಿಚಾರ ಮತ್ತು ಅಲೌಕಿಕ ವೈಶಿಷ್ಟ್ಯಗಳನ್ನು ಈ ಮಾಲಿಕೆಯ ಅಂರ್ತಗತ ಪ್ರಕಟಿಸುತ್ತಿದ್ದೇವೆ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/55581.html

ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !

(ಪರಾತ್ಪರ ಗುರು) ಡಾ. ಆಠವಲೆ

‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು’. ತಾಯಿ-ತಂದೆಯವರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ-ತಂದೆಯರ ಸಾಧನೆಯಾಗಿ ಅವರೂ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು !

– ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧)

ಸತತವಾಗಿ ಈಶ್ವರನ ಅನುಸಂಧಾನದಲ್ಲಿ ಮತ್ತು ಕಲಿಯುವ ಸ್ಥಿತಿಯಲ್ಲಿರುವ ಮತ್ತು ಪ್ರಬುದ್ಧ ಬುದ್ಧಿಶಕ್ತಿಯಿರುವ ರಾಮನಾಥಿಯ ಸನಾತನ ಆಶ್ರಮದಲ್ಲಿನ ದೈವೀ ಬಾಲಕರು !

ಪೂ. ತನುಜಾ ಠಾಕೂರ್

‘ರಾಮನಾಥಿ (ಗೋವಾ)ದ ಸನಾತನ ಆಶ್ರಮದ ದೈವೀ ಬಾಲಕರ ಕಲಿಯುವ ವೃತ್ತಿಯು ವಿಶೇಷ ವಾಗಿದೆ’, ಎಂದು ನನಗೆ ತಿಳಿಯಿತು. ಅವರಿಗೆ ಸಂಬಂಧಿಸಿದ, ನನಗೆ ಅರಿವಾದ ಕೆಲವು ವಿಶೇಷ ಅಂಶಗಳನ್ನು ಇಲ್ಲಿ ಕೊಡಲಾಗಿದೆ.

೧. ಕಲಿಯುವ ವೃತ್ತಿ

೧ ಅ. ಸಜೀವ ಮತ್ತು ನಿರ್ಜೀವ ಈ ಎರಡೂ ರೀತಿಯಿಂದ ಕಲಿಯುವುದು : ಹೆಚ್ಚಿನ ದೈವೀ ಬಾಲಕರಲ್ಲಿ ಸಜೀವ ಮತ್ತು ನಿರ್ಜೀವ ಈ ಎರಡು ರೀತಿಯಿಂದ ಕಲಿಯುವ ವೃತ್ತಿ ಇದೆ. ‘ಅವರು ಸತತವಾಗಿ ಈಶ್ವರನ ಅನುಸಂಧಾನದಲ್ಲಿರುತ್ತಾರೆ; ಇದರಿಂದಾಗಿಯೇ ಅವರಿಗೆ ಪ್ರತಿಯೊಬ್ಬರಿಂದ ಏನಾದರೂ ಕಲಿಯಲು ಸಿಗುತ್ತದೆ’, ಎಂಬುದು ನನ್ನ ಗಮನಕ್ಕೆ ಬಂದಿತು.

೧ ಅ ೧. ಸೂಕ್ಷ್ಮ ಜ್ಞಾನೇಂದ್ರಿಯಗಳು ಜಾಗೃತವಾಗಿರುವುದರಿಂದ ನಿರ್ಜೀವ ವಸ್ತುಗಳಿಂದಲೂ ಸಹಜವಾಗಿ ಕಲಿಯುವುದು : ಹಿಂದಿನ ಜನ್ಮದ ಸಾಧನೆಯಿಂದ ಅವರ ಸೂಕ್ಷ್ಮ ಜ್ಞಾನೇಂದ್ರಿಯಗಳು ಜಾಗೃತವಾಗಿರುತ್ತವೆ. ಅವರು ಸತತವಾಗಿ ಅನುಸಂಧಾನದಲ್ಲಿ ಇರುವುದರಿಂದ ನಿರ್ಜೀವ ವಸ್ತುಗಳೊಂದಿಗೂ ಸಹಜವಾಗಿ ಮಾತನಾಡುತ್ತಾರೆ. ಹೀಗೆ ಒಬ್ಬರೇ ಅಲ್ಲ, ಎಲ್ಲ ದೈವೀ ಬಾಲಕರಿಂದ ನನಗೆ ಅನುಭವಿಸಲು ಸಿಗುತ್ತಿದೆ, ಉದಾ. ಓರ್ವ ಬಾಲಕನು ತನಗೆ ‘ಪಂಖಾದಿಂದ (ಫ್ಯಾನ್) ಏನು ಕಲಿಯಲು ಸಿಕ್ಕಿತು ?’, ಎಂದು ಹೇಳಿದರೆ, ಇನ್ನೊಬ್ಬ ಬಾಲಕನು ತನಗೆ ‘ನಲ್ಲಿಯಿಂದ ಏನು ಕಲಿಯಲು ಸಿಕ್ಕಿತು ?’, ಎಂದು ಹೇಳಿದನು.

೧ ಆ. ಹಿಂದಿ ಭಾಷೆಯು ಬರದಿದ್ದರೂ ಆ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುವುದು ಮತ್ತು ಒಂದು ತಿಂಗಳಲ್ಲಿಯೇ ಆ ಭಾಷೆಯನ್ನು ಅಳವಡಿಸಿಕೊಂಡು ಸತ್ಸಂಗದಲ್ಲಿ ಹಿಂದಿ ಭಾಷೆಯಲ್ಲಿ ಸರಿಯಾಗಿ ಮಾತನಾಡುವ ದೈವೀ ಬಾಲಕರು ! : ಸತ್ಸಂಗದಲ್ಲಿ ಉಪಸ್ಥಿತರಿದ್ದ ಬಹಳಷ್ಟು ದೈವೀ ಬಾಲಸಾಧಕರ ಮಾತೃಭಾಷೆಯು ಹಿಂದಿಯಲ್ಲ; ಆದರೆ ಅವರಿಗೆ ಹಿಂದಿ ಭಾಷೆಯಲ್ಲಿನ ಸತ್ಸಂಗದಲ್ಲಿ ಮಾತನಾಡಲು ಹೇಳಿದ ನಂತರ ಅವರು ‘ನನಗೆ ಹಿಂದಿ ಬರುವುದಿಲ್ಲ’, ಎಂದು ಹೇಳದೇ ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸಿದರು ಮತ್ತು ಒಂದು ತಿಂಗಳಲ್ಲಿಯೇ ಅವರು ತಮ್ಮ ವಿಚಾರಗಳನ್ನು ಹಿಂದಿ ಭಾಷೆಯಲ್ಲಿ ಅತ್ಯಂತ ಉತ್ತಮ ರೀತಿಯಿಂದ ಮಂಡಿಸಲು ಆರಂಭಿಸಿದರು. ಇದು ಅತ್ಯಂತ ಅಸಾಮಾನ್ಯ ವಿಷಯವಾಗಿದೆ. ಇಬ್ಬರು ದೈವೀ ಬಾಲಕರು ದಕ್ಷಿಣ ಭಾರತದವರಿದ್ದರೂ ಅವರು ಸಹ ಬೇಗ ಕಲಿತರು.

೧ ಇ. ಪರಾತ್ಪರ ಗುರು ಡಾ. ಆಠವಲೆಯವರ ಆಜ್ಞಾಪಾಲನೆಯನ್ನು ತಕ್ಷಣ ಮಾಡಿ ನಾಮಜಪ ಮುಂತಾದ ಉಪಾಯಗಳನ್ನು ಹುಡುಕಲು ಕಲಿತು ಅದನ್ನು ತಕ್ಷಣ ಕೃತಿಯಲ್ಲಿ ತರುವ ದೈವೀ ಬಾಲಕರು ! : ದೈವೀ ಬಾಲಕರು ಕೇವಲ ಸ್ಥೂಲದ ವಿಷಯ ಮಾತ್ರವಲ್ಲ, ಸೂಕ್ಷ್ಮದಲ್ಲಿನ ವಿಷಯದಲ್ಲಿಯೂ ಬೇಗನೆ ಕಲಿತುಕೊಂಡು ಅದನ್ನು ಕೃತಿಯಲ್ಲಿ ತರಲು ಪ್ರಯತ್ನಿಸುತ್ತಾರೆ.

ಒಂದು ದಿನ ಪ.ಪೂ. ಗುರುದೇವರು (ಪರಾತ್ಪರ ಗುರು ಡಾ. ಆಠವಲೆ) ದೈವೀ ಬಾಲಕರಿಗೆ, “ಈಗ ನೀವೆಲ್ಲರೂ ಆಧ್ಯಾತ್ಮಿಕ ಉಪಾಯಗಳನ್ನು ಮಾಡಲು ಕಲಿತುಕೊಳ್ಳಬೇಕು. ಅದಕ್ಕಾಗಿ ಬೇರೆಬೇರೆ ಪ್ರಯೋಗಗಳನ್ನು ಮಾಡಬೇಕಾಗುವುದು,’’ ಎಂದು ಹೇಳಿದರು. ಅದೇ ದಿನ ರಾತ್ರಿ ಓರ್ವ ದೈವೀ ಬಾಲಕನ ತಾಯಿಗೆ ಆಧ್ಯಾತ್ಮಿಕ ತೊಂದರೆ ಆಗುತ್ತಿತ್ತು. ಅವನು ತಾಯಿಯ ತೊಂದರೆಯ ಬಗ್ಗೆ ಸೂಕ್ಷ್ಮ ಪರೀಕ್ಷಣೆಯನ್ನು ಮಾಡಿ ಯೋಗ್ಯ ನಾಮಜಪ ಮತ್ತು ನ್ಯಾಸವನ್ನು ಕಂಡುಹಿಡಿದು ತನ್ನ ತಾಯಿಯ ಮೇಲೆ ನಾಮಜಪದೊಂದಿಗೆ ಉಪಾಯಗಳನ್ನು ಮಾಡಿದನು. ಇದರಿಂದಾಗಿ ‘ಅವನ ತಾಯಿಯ ತೊಂದರೆಯು ಕಡಿಮೆಯಾಯಿತು’, ಎಂದು ಅವನು ಹೇಳಿದನು.

೧ ಈ. ದೈವೀ ಬಾಲಕರು ಗುರುಕೃಪಾಯೋಗಾಂತರ್ಗತ ಸಾಧನೆಯ ಅಷ್ಟಾಂಗ ಸಾಧನೆಯ ಕುರಿತು ಸಹಜವಾಗಿ ಕಲಿತು ಅದನ್ನು ಕೃತಿಯಲ್ಲಿ ತರುವುದು : ದೈವೀ ಬಾಲಕರು ಗ್ರಂಥ, ‘ಸನಾತನ ಪ್ರಭಾತ’ ಅಥವಾ ‘ಪರಾತ್ಪರ ಗುರುದೇವರ ತೇಜಸ್ವಿ ವಿಚಾರ’ ಓದುತ್ತಾರೆ ಜೊತೆಗೆ ಅದನ್ನು ತಕ್ಷಣ ಕೃತಿಯಲ್ಲಿ ತರುತ್ತಾರೆ.   ಅವರು ಗ್ರಂಥ, ದೈನಿಕ ಓದುವುದರ ಜೊತೆಗೆ ಅದನ್ನು ಆಚರಣೆಯಲ್ಲೂ ತರುತ್ತಾರೆ. ಇದನ್ನೇ ನಿಜವಾದ ಅರ್ಥದಿಂದ ‘ಕಲಿಯುವುದು’ ಎನ್ನುತ್ತಾರೆ.

೨. ಪಂಚಜ್ಞಾನೇಂದ್ರಿಯಗಳು ಮತ್ತು ಪಂಚಕರ್ಮೇಂದ್ರಿಯಗಳು ಜಾಗೃತವಾಗಿರುವ ದೈವೀ ಬಾಲಕರು !

ಸತ್ಸಂಗವನ್ನು ಕೇಳುತ್ತಿರುವಾಗ ಮತ್ತು ಕೇಳಿದ ಅಂಶಗಳನ್ನು ಬರೆಯುವಾಗಲೂ ಅವರ ಸೂಕ್ಷ್ಮ ಪಂಚಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು ಜಾಗೃತವಾಗಿರುತ್ತವೆ. ಆದುದರಿಂದ ಅವರಿಗೆ ಸ್ಥೂಲ ಮತ್ತು ಸೂಕ್ಷ್ಮ ಹೀಗೆ ಎರಡೂ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಇದರಿಂದ ‘ಅವರು ಅಷ್ಟಾವಧಾನಿಯಾಗಿದ್ದಾರೆ’, ಎಂದು ಗಮನಕ್ಕೆ ಬರುತ್ತದೆ.

೩. ದೈವೀ ಬಾಲಕರಲ್ಲಿ ಅರಿವಾದ ಪ್ರೌಢಿಮೆ !

ದೈವೀ ಬಾಲಕರು ಕೇವಲ ೮-೧೦ ವರ್ಷದವರಾಗಿದ್ದೂ ಅವರಲ್ಲಿ ಕಲಿಯುವ ವೃತ್ತಿಯು ಬಹಳಷ್ಟಿದೆ. ಸತ್ಸಂಗದಲ್ಲಿ ಸಂತರು ಅಥವಾ ಸಾಧಕರು ಹೇಳುವುದನ್ನೆಲ್ಲ ದೈವೀ ಬಾಲಕರು ತಕ್ಷಣ ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳಲು ಪ್ರಯತ್ನಿಸುತ್ತಾರೆ. ಈ ದೈವೀ ಬಾಲಕರಲ್ಲಿ ಓರ್ವ ಬಾಲಕಿ ಕು. ಪ್ರಾರ್ಥನಾ ಪಾಠಕ (ವಯಸ್ಸು ೧೦, ಆಧ್ಯಾತ್ಮಿಕ ಮಟ್ಟ ಶೇ. ೬೭) ಇವಳ ಬರವಣಿಗೆಯ ಶೈಲಿಯು ಎಷ್ಟೊಂದು ಪರಿಪೂರ್ಣವಾಗಿದೆ, ಅಂದರೆ ಪ್ರೌಢ ವ್ಯಕ್ತಿಯೂ ಹಾಗೆ ಬರೆಯಲು ಸಾಧ್ಯವಿಲ್ಲ. ಅವಳು ವಹಿಯಲ್ಲಿ ನಾಲ್ಕು ಸ್ತಂಭಗಳನ್ನು ಮಾಡಿ ಬರೆಯುತ್ತಾಳೆ. ಮೊದಲನೇ ಸ್ತಂಭದಲ್ಲಿ ಸಾಧಕನ ಹೆಸರು, ಎರಡನೇ ಸ್ತಂಭದಲ್ಲಿ ಅವರಿಂದ ಕಲಿಯಲು ಸಿಕ್ಕಿದ ಅಂಶಗಳು, ಮೂರನೇ ಸ್ತಂಭದಲ್ಲಿ ಸಂತರು ಆ ಸಾಧಕನಿಗೆ ನೀಡಿದ ದೃಷ್ಟಿಕೋನ ಮತ್ತು ನಾಲ್ಕನೇ ಸ್ತಂಭದಲ್ಲಿ ಕೆಲವು ವಿಶೇಷ ಅಂಶಗಳಿದ್ದರೆ ಅದನ್ನು ಬರೆದಿರುತ್ತಾಳೆ. ‘ಹತ್ತನೇ ವಯಸ್ಸಿನಲ್ಲಿ ಈ ರೀತಿ ಬರೆಯುವುದನ್ನು ನೋಡಿದರೆ, ಇದರಿಂದ ಅವಳ ಬೌದ್ಧಿಕ ಕ್ಷಮತೆಯು ಎಷ್ಟು ಪ್ರಬುದ್ಧವಾಗಿದೆ ?’, ಎಂಬುದು ಕಂಡುಬರುತ್ತದೆ. ಕೆಲವು ದೈವೀ ಬಾಲಕರು ಅತೀ ಚಿಕ್ಕ ವಯಸ್ಸಿನವರಿರುವುದರಿಂದ ಅವರಿಗೆ ಸರಿಯಾಗಿ ಬರೆಯಲು ಬರುವುದಿಲ್ಲ, ಅದರೂ ಅವರು ತಮಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಬರೆಯಲು ಪ್ರಯತ್ನಿಸುತ್ತಾರೆ.

೪. ಅಹಂ ಅತ್ಯಲ್ಪವಾಗಿರುವುದು

ಅವರಲ್ಲಿನ ಕಲಿಯುವ ವೃತ್ತಿಯೇ ಅವರಲ್ಲಿ ಅಹಂಕಾರವು ತುಂಬಾ ಕಡಿಮೆ ಇದೆ ಎಂಬುದನ್ನು ತೋರಿಸುತ್ತದೆ. ಅಹಂಕಾರಿ ವ್ಯಕ್ತಿಗೆ ಕಲಿಯುವುದಕ್ಕಿಂತ ಕಲಿಸುವುದರಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ದೈವೀ ಬಾಲಕರು ತಮಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಅತ್ಯಂತ ನಯವಾಗಿ ಮತ್ತು ಕರ್ತೃತ್ವವನ್ನು ತೆಗೆದುಕೊಳ್ಳದೇ ಹೇಳುತ್ತಾರೆ. ಅವರ ವಿಚಾರಗಳನ್ನು ಕೇಳಿ ಪ.ಪೂ. ಗುರುದೇವ ಡಾ. ಆಠವಲೆಯವರು ದೈವೀ ಬಾಲಕರ ಸ್ತುತಿಯನ್ನು ಮಾಡುವಾಗ ಆ ಬಾಲಕರು ಅತ್ಯಂತ ಸಹಜ ರೀತಿಯಿಂದ ತಮ್ಮ ಕರ್ತೃತ್ವವನ್ನು ಪರಾತ್ಪರ ಗುರುದೇವರ ಚರಣಗಳಲ್ಲಿ ಅರ್ಪಿಸುತ್ತಾರೆ.

೫. ದೈವೀ ಬಾಲಕರ ಕೇವಲ ಮಾತುಗಳಿಂದಲೇ ದೈವೀ ವಾತಾವರಣವು ನಿರ್ಮಾಣವಾಗುವುದು

‘ದೈವೀ ಬಾಲಕರು ಕಲಿಯಲು ಸಿಕ್ಕಿದ ಯಾವುದೇ ಘಟನೆಗಳನ್ನು ಹೇಳುವಾಗ ಅವರ ಮಾತು ಕೇಳಿ ಭಾವಜಾಗೃತವಾಗುತ್ತದೆ. ಮನಸ್ಸು ಏಕಾಗ್ರವಾಗುತ್ತದೆ ಅಥವಾ ಕೆಲವೊಮ್ಮೆ ಧ್ಯಾನ ತಾಗುತ್ತದೆ. ಅವರೊಂದಿಗೆ ಮಾತನಾಡುವಾಗ ವಾತಾವರಣವು ಚೈತನ್ಯಮಯವಾಗುತ್ತದೆ ಮತ್ತು ವಿವಿಧ ರೀತಿಯ ದಿವ್ಯ ಪರಿಮಳವು ಬರುತ್ತವೆ.’

– ಪೂ. ತನುಜಾ ಠಾಕೂರ, ಸಂಸ್ಥಾಪಕರು, ವೈದಿಕ ಉಪಾಸನಾಪೀಠ (೩೦.೧೦.೨೦೨೧)

ಜಿಜ್ಞಾಸುವೃತ್ತಿ, ಪ್ರೇಮಭಾವ ಮತ್ತು ಭಾವವಸ್ಥೆಯಲ್ಲಿರಲು ಪ್ರಯತ್ನಿಸುವ ರಾಮನಾಥಿ ಆಶ್ರಮದಲ್ಲಿನ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಅಪಾಲಾ ಅಮಿತ ಔಂಧಕರ (೧೪ ವರ್ಷ) !

ಕು. ಅಪಾಲಾ ಔಂಧಕರ

‘೧.೧೧.೨೦೨೧ ರಂದು ಕು. ಅಪಾಲಾ ಅಮಿತ ಔಂಧಕರ (೧೪ ವರ್ಷ) ಇವಳ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಾಗಿರುವುದು ಘೋಷಿಸಲಾಯಿತು. ಆ ನಿಮಿತ್ತ ಅವಳ ಚಿಕ್ಕಮ್ಮ ಸೌ. ಅಕ್ಷತಾ ರೂಪೇಶ ರೆಡಕರ ಮತ್ತು ಚಿಕ್ಕಮ್ಮನ ಯಜಮಾನರು ಶ್ರೀ. ರೂಪೇಶ ರೆಡಕರ ಇವರಿಗೆ ಅರಿವಾದ ಅವಳ ಗುಣವೈಶಿಷ್ಟ್ಯಗಳು ಮತ್ತು ಅವಳ ಬಗ್ಗೆ ಬಂದ ಅನುಭೂತಿಗಳನ್ನು ಮುಂದೆ ಕೊಡಲಾಗಿದೆ.

ಸೌ. ಅಕ್ಷತಾ ರೂಪೇಶ ರೆಡಕರ (ಕು. ಅಪಾಲಾಳ ಚಿಕ್ಕಮ್ಮ), ಸನಾತನ ಆಶ್ರಮ, ರಾಮನಾಥಿ, ಗೋವಾ.

ಸೌ. ಅಕ್ಷತಾ ರೆಡಕರ

೧. ಅಪಾಲಾಳ ಬರವಣಿಗೆಯು ಅತ್ಯಂತ ಸುಂದರವಾಗಿವೆ. ಅವಳ ಬರವಣಿಗೆಯಲ್ಲಿ ಎಲ್ಲಿಯೂ ತಿದ್ದುಪಡಿಯಿರುವುದಿಲ್ಲ.

೨. ಕಲಿಯುವ ವೃತ್ತಿ

ಅಪಾಲಾ ಏನೇ ಕಲಿತರೂ, ಅದನ್ನು ಪರಿಪೂರ್ಣ ಕಲಿಯಲು ಪ್ರಯತ್ನಿಸುತ್ತಾಳೆ. ಅವಳು ಮರಾಠಿ ಮತ್ತು ಆಂಗ್ಲ ಈ ಭಾಷೆಗಳಲ್ಲಿ ಬೆರಳಚ್ಚು ಮಾಡಲು ಕಲಿತಳು. ಅವಳು ತನಗೆ ಕಲಿಯಲು ಸಿಕ್ಕಿದ ಅಂಶಗಳನ್ನು ತಕ್ಷಣ ಬೆರಳಚ್ಚು ಮಾಡಿಡುತ್ತಾಳೆ. ಬೆರಳಚ್ಚು ಮಾಡುವಾಗ ಶುದ್ಧಭಾಷೆಯಲ್ಲಿ ಬರೆಯಲು ಪ್ರಯತ್ನಿಸುತ್ತಾಳೆ.

೩. ಪ್ರೇಮಭಾವ

‘ನಮಗಿಂತ ವಯಸ್ಸಿನಲ್ಲಿ ಹಿರಿಯ ವ್ಯಕ್ತಿಯು ನಮ್ಮನ್ನು ಪ್ರೀತಿಸುತ್ತಾರೆ’, ಎಂದು ನಾವು ಹೇಳುತ್ತೇವೆ ಅಥವಾ ಕೇಳುತ್ತೇವೆ; ಆದರೆ ಅಪಾಲಾ ಇವಳು ನನಗಿಂತ ವಯಸ್ಸಿನಲ್ಲಿ ತುಂಬಾ ಚಿಕ್ಕವಳಿದ್ದರೂ ಬಾಲ್ಯದಿಂದ ಅವಳೇ ನನ್ನನ್ನು ತುಂಬಾ ಪ್ರೀತಿಸುತ್ತಿದ್ದಾಳೆ. ನಾನು ಅದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವಳು ದೊಡ್ಡವಳಾದರೂ, ನನ್ನ ಮೇಲಿನ ಪ್ರೀತಿಯು ಎಂದಿಗೂ ಕಡಿಮೆಯಾಗಲಿಲ್ಲ.

೪. ತತ್ವ ನಿಷ್ಠೆ

ಅವಳು ಆಯಾ ಸಮಯಕ್ಕೆ ನನಗೆ ನನ್ನಲ್ಲಿನ ಸ್ವಭಾವದೋಷಗಳ ಅರಿವು ಮಾಡಿಕೊಡುತ್ತಾಳೆ. ಅವಳು ಕೆಲವು ಅಂಶಗಳನ್ನು ಹೇಳಿದ ನಂತರ ಆ ಅಂಶಗಳು ನನ್ನ ಅಂತರ್ಮನಸ್ಸಿನ ವರೆಗೆ ತಲುಪುತ್ತವೆ ಮತ್ತು ನನಗೆ ಅವಳ ಮಾತು ಕೇಳುತ್ತಲೇ ಇರಬೇಕು ಎಂದೆನಿಸುತ್ತದೆ. ಅವಳಿಂದಲೇ ನಮ್ಮಿಬ್ಬರ ಕೌಟುಂಬಿಕ ಮತ್ತು ಆಧ್ಯಾತ್ಮಿಕ ಹೀಗೆ ಎರಡೂ ಸ್ತರಗಳಲ್ಲಿ ಆತ್ಮೀಯ ಸಂಬAಧ ಬೆಳೆದಿದೆ.

೫. ಸಾತ್ವಿಕತೆಯ ಸೆಳೆತ

ಈಗ ಅವಳ ಬಟ್ಟೆ ಮತ್ತು ಆಭರಣಗಳ ಆಯ್ಕೆ ಸಹ ಸಾತ್ವಿಕವಾಗಿದೆ.

೬. ಭಾವ

೬ ಅ. ನೃತ್ಯಾಭ್ಯಾಸದ ಮೊದಲು ಭಾವಪ್ರಯೋಗವನ್ನು ಮಾಡುವುದು : ಅವಳು ನೃತ್ಯಾಭ್ಯಾಸ ಮಾಡುವ ಮೊದಲು ಭಾವ ಪ್ರಯೋಗವನ್ನು ಮಾಡುತ್ತಾಳೆ. ಇದರಿಂದಾಗಿ ‘ಅವಳ ನೃತ್ಯಾಭ್ಯಾಸವು ಆಧ್ಯಾತ್ಮಿಕ ಮಟ್ಟದಲ್ಲಾಗಿ ಅವಳ ನೃತ್ಯವು ಭಾವಪೂರ್ಣವಾಗುತ್ತಿದೆ’, ಎಂದೆನಿಸುತ್ತದೆ. ‘ನಾನು ಸಹ ಪ್ರತಿಯೊಬ್ಬ ರೋಗಿಯ ಮೇಲೆ ಉಪಚಾರವನ್ನು (ಫಿಜಿಯೋಥೆರೆಪಿ) ಮಾಡುವ ಮೊದಲು ಭಾವಪ್ರಯೋಗ ಅಥವಾ ಭಾವವನ್ನಿಟ್ಟು ಸೇವೆಯನ್ನು ಮಾಡಿದರೆ ನನಗೂ ಸೇವೆಯ ಆನಂದ ಸಿಗುವುದು’, ಎಂದು ಅವಳಿಂದ ನನಗೆ ಕಲಿಯಲು ಸಿಕ್ಕಿತು.

೬ ಆ. ಅಪಾಲಾ ಹಾಡಿರುವ ಭಕ್ತಿಗೀತೆಗಳನ್ನು ಕೇಳುವಾಗ ಭಾವಜಾಗೃತವಾಗುವುದು : ಅಪಾಲಾಳು ಗಾಯನದ ೩ ಪರೀಕ್ಷೆಗಳನ್ನು ಕೊಟ್ಟಿದ್ದಾಳೆ; ಆದರೆ ಅವಳಿಂದ ಗಾಯನದ ವಿಶೇಷ ಅಭ್ಯಾಸವಾಗಲಿಲ್ಲ. ಅವಳು ಭಾವಗೀತೆ ಮತ್ತು ಭಕ್ತಿಗೀತೆಗಳನ್ನು ಹಾಡುವಾಗ ‘ಕೇಳುತ್ತಲೇ ಇರಬೇಕು’, ಎಂದೆನಿಸುತ್ತದೆ. ಇತರ ಗಾಯಕರು ಹಾಡಿದ ಯಾವುದಾದರೊಂದು ಭಕ್ತಿಗೀತೆಯನ್ನು ಕೇಳುವಾಗ ಹಾಡಿನಲ್ಲಿರುವ ಶಬ್ದಗಳ ಬಗ್ಗೆ ಕೆಲವೊಮ್ಮೆ ಏನೂ ಅರ್ಥವಾಗುವುದಿಲ್ಲ; ಆದರೆ ಅದೇ ಹಾಡನ್ನು ಅಪಾಲಾಳು ಹಾಡಿದರೆ, ಆ ಗೀತೆಯಲ್ಲಿನ ಭಾವಾರ್ಥವು ಗಮನಕ್ಕೆ ಬಂದು ನನ್ನ ಭಾವಜಾಗೃತವಾಗುತ್ತದೆ. ನಾನು ಕೆಲವೊಮ್ಮೆ ಭಾವಜಾಗೃತಿಗಾಗಿ ಅವಳು ಹಾಡಿದ ಕೆಲವು ಹಾಡುಗಳನ್ನು ಕೇಳುತ್ತೇನೆ.

೬ ಇ. ಅಪಾಲಾಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರನ್ನು ‘ಸಗುಣ ಮಾತಾ’ ಮತ್ತು ಶ್ರೀ ಭವಾನಿದೇವಿಗೆ ‘ನಿರ್ಗುಣ ಮಾತಾ’ ಎಂದು ಕರೆಯುತ್ತಾಳೆ. ಅದು ಅವಳಲ್ಲಿನ ಭಾವವಾಗಿದೆ.

ಅಪಾಲಾ ಇವಳಲ್ಲಿ ‘ವೇದಿಕೆಯ ಮೇಲೆ ಮಾತನಾಡುವ ಧೈರ್ಯ, ಒಂದೇ ಸಲ ಓದಿ ನೆನಪಿನಲ್ಲಿಡುವುದು, ಕಲಿಯುವ ವೃತ್ತಿ, ನೇತೃತ್ವಗುಣ, ಬೌದ್ಧಿಕ ಪ್ರೌಢಿಮೆ, ತಳಮಳ, ಎಲ್ಲರೊಂದಿಗೆ ಹೊಂದಿಕೊಳ್ಳುವುದು, ಗುರುದೇವರಲ್ಲಿ ಅಪಾರ ಶ್ರದ್ಧೆ, ಭಾವ’ ಮುಂತಾದ ಗುಣಗಳಿವೆ.

ಶ್ರೀ. ರೂಪೇಶ ಲಕ್ಷ್ಮಣ ರೆಡಕರ (ಕು. ಅಪಾಲಾಳ ಚಿಕ್ಕಮ್ಮನ ಪತಿ), ಸನಾತನ ಆಶ್ರಮ, ದೇವದ, ಪನವೇಲ.

೧. ಇತರರೊಂದಿಗೆ ಆತ್ಮೀಯತೆ ಬೆಳೆಸುವುದು

`ಅಪಾಲಾಳು ಮಾತಿನಿಂದ-ನಡತೆಯಿಂದ ಇತರರ ಮನಸ್ಸನ್ನು ಗೆಲ್ಲುತ್ತಾಳೆ. ೬೯ ವರ್ಷದ ನನ್ನ ತಾಯಿ (ಶ್ರೀಮತಿ ಉರ್ಮಿಳಾ ರೆಡಕರ, ಆಧ್ಯಾತ್ಮಿಕ ಮಟ್ಟ ಶೇ. ೬೩) ಮತ್ತು ಕು. ಅಪಾಲಾ ಇವರು ಸಂಚಾರಿವಾಣಿಯ ಮೂಲಕ ೩-೪ ಸಲವೇ ಮಾತನಾಡಿರಬಹುದು; ಆದರೂ ತಾಯಿಯವರು ಅನೇಕ ಬಾರಿ ಪ್ರಶಂಸೆಯಿಂದ ಅವಳನ್ನು ನೆನಪಿಸುತ್ತಾರೆ.

೨. ಜಿಜ್ಞಾಸೆ

ಅಪಾಲಾಳಲ್ಲಿ ತೀವ್ರ ಜಿಜ್ಞಾಸೆ ಇರುವುದರಿಂದ ‘ಸೂಕ್ಷ್ಮದಲ್ಲಿನ ಸ್ಪಂದನಗಳ ಅರಿವಾಗುವುದು, ದೇವತೆಗಳ ತತ್ವಗಳನ್ನು ಅನುಭವಿಸುವುದು ಮತ್ತು ಸೇವೆಯಲ್ಲಿನ ಹೊಸ ವಿಷಯಗಳನ್ನು ಕಲಿಯುವುದು’, ಇವುಗಳಲ್ಲಿ ಅವಳ ಸೆಳೆತವಿರುತ್ತದೆ. ಅದಕ್ಕಾಗಿ ಅವಳು ಸತತವಾಗಿ ಪ್ರಯತ್ನಿಸುತ್ತಾಳೆ.

೩. ಪ್ರಯೋಗಶೀಲ

ಭಾವವೃದ್ಧಿಗಾಗಿ ಪ್ರಯೋಗ ಮಾಡುವುದು, ಸೂಕ್ಷ್ಮ-ಪ್ರಯೋಗ ಅಥವಾ ನೃತ್ಯದಲ್ಲಿನ ವಿವಿಧ ಮುದ್ರೆಗಳನ್ನು ಮಾಡಿದ ನಂತರ ಬರುವ ಅನುಭೂತಿಗಳ ಅಧ್ಯಯನವನ್ನು ಮಾಡುವಾಗ ಅವಳು ಸತತವಾಗಿ ಬೇರೆ ಬೇರೆ ಪ್ರಯೋಗಗಳನ್ನು ಮಾಡುತ್ತಾಳೆ.

೪. ಅಪಾಲಾಳ ಬಗ್ಗೆ ಬಂದ ಅನುಭೂತಿ

೩೧.೧೦.೨೦೨೧ ರಂದು ನನ್ನ ಸಂಚಾರವಾಣಿಯಿಂದ ಕು. ಅಪಾಲಾ ಇವಳೊಂದಿಗೆ ಮಾತನಾಡಿದೆನು. ಆ ಸಮಯದಲ್ಲಿ ನನಗೆ ಆನಂದವಾಗಿ ‘ಅವಳ ಮಾತನ್ನು ಸತತವಾಗಿ ಕೇಳುತ್ತಲೇ ಇರಬೇಕು’, ಎಂದೆನಿಸುತ್ತಿತ್ತು. (ಬರವಣಿಗೆಯಲ್ಲಿನ ಎಲ್ಲ ಅಂಶಗಳ ದಿನಾಂಕ ೧.೧೧.೨೦೨೧)