ಪ್ರಾರಂಭದಲ್ಲಿ ಭೌತಿಕ ಆಕರ್ಷಣೆಯು ಸಾಧನೆಯಲ್ಲಿ ಅಡ್ಡಿಯಾಗುತ್ತದೆ ಮತ್ತು ದೃಢಪೂರ್ವಕವಾಗಿ ಸಾಧನೆ ಮಾಡಿದ ನಂತರ ಆನಂದ ದೊರಕಿರುವುದರಿಂದ ಅದು ಅಖಂಡವಾಗುತ್ತದೆ !

ಪರಾತ್ಪರ ಗುರು ಡಾ. ಆಠವಲೆಯವರು ಹಿಂದುತ್ವನಿಷ್ಠರಿಗೆ ಮಾಡಿದ ಅಮೂಲ್ಯ ಮಾರ್ಗದರ್ಶನ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹಿಂದುತ್ವನಿಷ್ಠರು : ‘ಸಾಧನೆಯಲ್ಲಿ ಯಾವುದಾದರೊಂದು ಪ್ರಯತ್ನ ಮಾಡುವೆನು, ಎಂಬ ವಿಚಾರ ಮಾಡುತ್ತೇನೆ; ಆದರೆ ಕೆಲವು ದಿನಗಳ ನಂತರ ಈ ವಿಚಾರ ಹೊರಟು ಹೋಗುತ್ತದೆ.’ ‘ಈಗ ನಾಳೆಯಿಂದ ಪ್ರಯತ್ನಿಸುವೆನು, ನಾಡಿದ್ದು ಮಾಡುವೆನು, ಎಂದೆನಿಸುತ್ತದೆ; ಆದರೆ ನಾಳೆ ಎಂದಿಗೂ ಬೆಳಗಾಗುವುದಿಲ್ಲ.’

ಪರಾತ್ಪರ ಗುರು ಡಾ. ಆಠವಲೆ : ‘ನನಗೆ ಸಾಧನೆಯ ಮಹತ್ವ ತಿಳಿದಿದೆ, ಆದರೆ ನಾನು ಸಾಧನೆ ಮಾಡಬೇಕು ಎಂದು ನನ್ನ ಬುದ್ಧಿಗೆ ಅನಿಸುತ್ತದೆ; ಆದರೆ ಮನಸ್ಸಿನಲ್ಲಿ ಈ ರೀತಿ ವಿಚಾರಗಳು ಬರುತ್ತವೆಯಲ್ಲ, ಆ ಸಮಯದಲ್ಲಿ ಮನಸ್ಸು ಮತ್ತು ಬುದ್ಧಿಯ ಯುದ್ಧವಾಗುತ್ತದೆ. ಶೇ. ೫೦ ಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವಾದರೆ, ಮನಸ್ಸು ಮತ್ತು ಬುದ್ಧಿಯ ಯುದ್ಧದಲ್ಲಿ ಬುದ್ಧಿ ಗೆಲ್ಲುತ್ತದೆ. ಅರ್ಧದಷ್ಟು ಮಾಯೆಯ (ಭೌತಿಕ ಜೀವನದ) ಆಕರ್ಷಣೆ ಮತ್ತು ಅರ್ಧದಷ್ಟು ಈಶ್ವರಪ್ರಾಪ್ತಿಯ ಆಕರ್ಷಣೆ ಇರುತ್ತದೆ. ಆ ಸ್ಥಿತಿಯಲ್ಲಿ ಕೆಲವೊಮ್ಮೆ, ‘ಹಾಗಾದರೆ ಉದ್ಯೋಗ ಮತ್ತು ನೌಕರಿ ಮಾಡೋಣ’, ಎಂದೆನಿಸುತ್ತದೆ, ಕೆಲವೊಮ್ಮೆ, ‘ಸಾಧನೆಯೇ ಮಾಡೋಣ’ ಎಂದೆನಿಸುತ್ತದೆ. ಆದ್ದರಿಂದ ಸಾಧನೆಯಲ್ಲಿ ಈ ರೀತಿ ಮೇಲೆ-ಕೆಳಗೆ ಆಗುತ್ತಿರುತ್ತದೆ ಮತ್ತು ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟದ ವರೆಗೆ ಸಾಧಕರು ತಲುಪಿದಾಗ ಏನಾಗುತ್ತದೆ ? ಮನೋಲಯವಾಗಲು ಪ್ರಾರಂಭವಾಗುತ್ತದೆ. ಮನಸ್ಸೇ ನಾಶವಾಗತೊಡಗುತ್ತದೆ. ಶೇ. ೭೦ ರಷ್ಟು ಮಟ್ಟದಲ್ಲಿ ಮನಸ್ಸೇ ನಾಶವಾಗುತ್ತದೆ. ಮುಂದೆ ಶೇ. ೭೦ ಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವು ಪ್ರಾಪ್ತವಾದಾಗ ಅವರು ಸಂತರಾಗುತ್ತಾರೆ. ಶೇ. ೮೦ ರಷ್ಟು ಮಟ್ಟದಲ್ಲಿ ಬುದ್ಧಿ ನಾಶವಾಗುತ್ತದೆ. ಈ ಸ್ಥಿತಿಯಲ್ಲಿ ಮನಸ್ಸು ಉಳಿದಿರುವುದಿಲ್ಲ, ಬುದ್ಧಿಯು ಉಳಿದಿರುವುದಿಲ್ಲ ಮತ್ತು ಏನಾಗುತ್ತದೆ ? ಆ ಸಾಧಕನು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯೊಂದಿಗೆ ಏಕರೂಪನಾಗುತ್ತಾನೆ. ಅವನ ಪ್ರತಿಯೊಂದು ವಿಚಾರವು ಈಶ್ವರನದೇ ಆಗಿರುತ್ತದೆ.

ಪ್ರಾರಂಭದಲ್ಲಿ ನಮಗೆ ಬುದ್ಧಿಯಿಂದ ಸಾಧನೆಯ ಮಹತ್ವವು ಗೊತ್ತಾಗುತ್ತದೆ. ಆಗ ಸಾಧನೆಯಲ್ಲಿ ನಿಧಾನವಾಗಿ ಸ್ವಲ್ಪ ಮೇಲೆ-ಕೆಳಗೆ ಆಗುತ್ತದೆ. ಇಂತಹ ಸ್ಥಿತಿಯಲ್ಲಿ ಸ್ವಲ್ಪ ದಿನ ಸಾಧನೆಯ ಪ್ರಯತ್ನಗಳನ್ನು ಮಾಡುವುದು, ಸ್ವಲ್ಪ ದಿನ ಮಾಡದಿರುವುದು, ಕೆಲವು ವಾರಗಳ ವರೆಗೆ ಮಾಡುವುದು, ಮಾಡದಿರುವುದು, ಈ ರೀತಿ ಮೇಲೆ-ಕೆಳಗೆ ಆಗುತ್ತಿರುತ್ತದೆ. ಹೀಗೆ ಆಗುತ್ತ ಆಗುತ್ತ ಸಾಧನೆಯ ಗ್ರಾಫ್‌ ಮೇಲೆ ಹೋಗುತ್ತದೆ ಮತ್ತು ಸಾಧಕನು ಶೇ. ೫೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದಾಗ ಅವನಿಗೆ ಈಶ್ವರನ ಅನುಭೂತಿಗಳು ಬರತೊಡಗುತ್ತವೆ. ಆನಂದದ ಅನುಭೂತಿಗಳು ಬರತೊಡಗುತ್ತವೆ ಮತ್ತು ನಂತರ ಅವನಿಗೆ, ನಮಗೆ ಪೃಥ್ವಿಯ ಮೇಲೆ ದೊರಕುವ ಸುಖದಲ್ಲಿ ಏನೂ ಅರ್ಥವಿಲ್ಲ, ಎಂದು ಗೊತ್ತಾಗುತ್ತದೆ. ಆನಂದವನ್ನು ಸುಖದೊಂದಿಗೆ ಹೋಲಿಸಲು ಸಾಧ್ಯವೇ ಇಲ್ಲ. ಸಾಧನೆಯಿಂದ ದೊರಕಿದ ಆನಂದವು ಅವನಿಗೆ ಸಾಧನಾಮಾರ್ಗದಲ್ಲಿ ಮುಂದೆ ಎಳೆಯುತ್ತದೆ ಮತ್ತು ಕೊನೆಗೆ ಅವನಿಗೆ ಶೇ. ೧೦೦ ರಷ್ಟು ಆಧ್ಯಾತ್ಮಿಕ ಮಟ್ಟ, ಅಂದರೆ ‘ಸತ್‌-ಚಿತ್‌-ಆನಂದ’ದ ಸ್ಥಿತಿ ಪ್ರಾಪ್ತವಾಗುತ್ತದೆ.