‘ನಿರರ್ಥಕ ವಿಚಾರಧ್ಯಾಸ ಮತ್ತು ಕೃತಿಯ ಅಟ್ಟಹಾಸ’, ಈ ಮಾನಸಿಕ ಕಾಯಿಲೆಯಿಂದ ಸಾಧಕಿಗೆ ಆಗುವ ತೊಂದರೆಗಳು ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ಜಪದಿಂದ ಕಡಿಮೆಯಾಗುವುದು

(ಸದ್ಗುರು) ಡಾ. ಮುಕುಲ ಗಾಡಗೀಳ

‘ನನಗೆ ‘‘OCD (Obsessive Compulive Disorder)’  ‘ನಿರರ್ಥಕ ವಿಚಾರಧ್ಯಾಸ (OCD ಅಂದರೆ ಸ್ವಲ್ಪದರಲ್ಲಿ ಮನಸ್ಸಿನಲ್ಲಿ ಒಂದೇ ವಿಚಾರ ಪುನಃ ಪುನಃ ಮತ್ತು ನಿರಂತರವಾಗಿ ಬರುವುದು – ಸಂಕಲಕರು) ಮತ್ತು ಬಹಳ ಕೃತಿ ಮಾಡಿದ ಅಟ್ಟಹಾಸ ಮಾಡುವುದು’, ಇದೊಂದು ಮಾನಸಿಕ ಕಾಯಿಲೆ ಆಗಿದೆ. ಈ ಕಾಯಿಲೆಯಲ್ಲಿ ಮನಸ್ಸಿನಲ್ಲಿ ಯಾವುದಾದರೊಂದು ವಿಷಯದ ನಿರರ್ಥಕ ವಿಚಾರಗಳಿ ರುತ್ತವೆ. ಮನಸ್ಸಿನಲ್ಲಿ ಪುನಃ ಪುನಃ ಆ ವಿಚಾರಗಳೇ ಬರುತ್ತವೆ. ಮನಸ್ಸಿನಲ್ಲಿ ಎಲ್ಲ ವಿಚಾರಗಳ ಗೊಂದಲವಿರುತ್ತದೆ. ಆದುದರಿಂದ ಮನಸ್ಸಿನಲ್ಲಿ ಏನು ನಡೆದಿದೆ ?’, ಎಂದು ಯಾರಿಗೂ ಹೇಳಲು ಬರುವುದಿಲ್ಲ. ಒಂದು ಬಾರಿ ಒಬ್ಬರಿಗೆ ಹೇಳಿದರೆ ಮನಸ್ಸಿಗೆ ಸಮಾಧಾನ ಅನಿಸುವುದಿಲ್ಲ. ಆದುದರಿಂದ ಬೇರೆ ಬೇರೆ ಜನರೊಂದಿಗೆ ಮತ್ತೇ ಮತ್ತೇ ಮಾತನಾಡಬೇಕು ಎಂದು ಅನಿಸುತ್ತದೆ. ಏನೇ ಮಾಡಿದರೂ ಮನಸ್ಸು ಶಾಂತವಾಗುವುದಿಲ್ಲ. ಇದರಲ್ಲಿ ಹೆಚ್ಚು ಮಾನಸಿಕ ತೊಂದರೆಯಾಗುತ್ತದೆ. ಕೆಲವು ವಿಚಾರಗಳು, ಹೇಗಿರುತ್ತವೆ ಎಂದರೆ, ಅವುಗಳನ್ನು ಯಾರಿಗೂ ಹೇಳಲು ಬರುವುದಿಲ್ಲ, ಹೇಳುವುದಷ್ಟೇ ಏಕೆ, ಅವುಗಳನ್ನು ಕಾಗದದಲ್ಲಿ ಬರೆಯಲೂ ಸಾಧ್ಯವಾಗುವುದಿಲ್ಲ. ಈ ತೊಂದರೆಗಳಿಗೆ ನಾನು ಕಳೆದ ೬-೭ ವರ್ಷಗಳಿಂದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ; ಆದರೆ ಅದರಿಂದ ನನಗೆ ಯಾವುದೇ ಲಾಭವಾಗಿಲ್ಲ.

೩೦.೪.೨೦೨೨ ರಂದು ಸದ್ಗುರು ಡಾ. ಮುಕುಲ ಗಾಡಗೀಳ ಇವರು ಈ ಕಾಯಿಲೆಗೆ ನನಗೆ ‘ಶ್ರೀ ಗುರುದೇವ ದತ್ತ | ಶ್ರೀ ಗಣೇಶಾಯ ನಮಃ | ಶ್ರೀ ಗಣೇಶಾಯ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |’, ಈ ನಾಮಜಪವನ್ನು ಪ್ರತಿದಿನ ೨ ರಿಂದ ೩ ಗಂಟೆಗಳ ಕಾಲ ಮಾಡಲು ಹೇಳಿದರು. ಅದರಂತೆ ನಾನು ಈ ನಾಮಜಪವನ್ನು ೧ ತಿಂಗಳು ಮಾಡಿದೆನು. ಈ ನಾಮಜಪವನ್ನು ಮಾಡುವ ಮೊದಲು ನನಗಾಗುವ ತೊಂದರೆಗಳು ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ನಾಮಜಪವನ್ನು ಮಾಡಿದ್ದರಿಂದ ನನ್ನಲ್ಲಾದ ಬದಲಾವಣೆಯನ್ನು ಮುಂದೆ ಕೊಟ್ಟಿದ್ದೇನೆ.

೧. ಶಾರೀರಿಕ ತೊಂದರೆ ಮತ್ತು ನಾಮಜಪದಿಂದಾದ ಬದಲಾವಣೆ

ಅ. ಬಹಳಷ್ಟು ಸಾಧಕರು ನನಗೆ, ”ಈ ಮೊದಲು ನಿನ್ನ ಮುಖದ ಮೇಲೆ ಉಗ್ರತೆ ಇರುತ್ತಿತ್ತು. ಈಗ ಅದು ಕಡಿಮೆಯಾಗಿ ಮುಖ ಸೌಮ್ಯವಾಗಿದೆ. ಈಗ ನಿನ್ನ ಮುಖ ನಳನಳಿಸುತ್ತಿದೆ’’ (ಫ್ರೆಶ್‌), ಎಂದು ಹೇಳಿದರು.

ಆ. ಮೊದಲು ನನ್ನ ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳಿದ್ದವು. ಈಗ ಅವುಗಳ ಪ್ರಮಾಣ ಕಡಿಮೆಯಾಗಿದೆ.

ಇ. ಮೊದಲು ನಾನು ಬೆಳಗ್ಗೆ ತಡವಾಗಿ ಏಳುತ್ತಿದ್ದೆನು, ಹಾಗೆಯೇ ಮಧ್ಯಾಹ್ನ ಮಲಗಿ ಮತ್ತೇ ರಾತ್ರಿ ಮಲಗುತ್ತಿದ್ದೆನು; ಏಕೆಂದರೆ ನನ್ನ ಮನಸ್ಸು ಯಾವಾಗಲೂ ವಿಚಾರ ಮಾಡಿ ದಣಿಯುತ್ತಿತ್ತು ಮತ್ತು ಅದರಿಂದ ನನಗೆ ನಿದ್ದೆ ಬರುತ್ತಿರಲಿಲ್ಲ. ಮೊದಲಿಗಿಂತ ನನ್ನ ನಿದ್ದೆಯ ಪ್ರಮಾಣ ಈಗ ಕಡಿಮೆಯಾಗಿದೆ.

ಈ. ಹಿಂದಿನ ತುಲನೆಯಲ್ಲಿ ನನ್ನ ಚಲನವಲನ, ಮಾತನಾಡು ವಾಗಿನ ಏರಿಳಿತ ಮತ್ತು ಶರೀರದ ಅಸ್ಥಿರತೆ ಕಡಿಮೆಯಾಗಿ ನಾನು ಕೆಲವೊಂದು ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಶಾಂತ ಮತ್ತು ಸ್ಥಿರಳಾಗಿದ್ದೇನೆ.

೨. ಮಾನಸಿಕ ತೊಂದರೆಗಳು ಮತ್ತು ಅದರಲ್ಲಿ ನಾಮಜಪದಿಂದಾದ ಬದಲಾವಣೆ

೨ ಅ. ತೊಂದರೆಯ ಸ್ವರೂಪ : ನಾನು ಮೊದಲು ಬಹಳ ನಿರಾಶೆಯಲ್ಲಿ ಮತ್ತು ನಿರುತ್ಸಾಹಿ ಇರುತ್ತಿದ್ದೆನು.

೨ ಅ ೧. ಬದಲಾವಣೆ : ಈಗ ನನ್ನ ಉತ್ಸಾಹ ಹೆಚ್ಚಾಗಿದೆ.

೨ ಆ. ತೊಂದರೆಯ ಸ್ವರೂಪ : ನನ್ನ ಮನಸ್ಸಿನಲ್ಲಿ ಭಯದ ಬೇರೆ ಬೇರೆ ವಿಚಾರಗಳಿರುತ್ತಿದ್ದವು. ಆ ವಿಚಾರಗಳು ನನ್ನ ಮನಸ್ಸಿನಲ್ಲಿ ಆಧ್ಯಾತ್ಮಿಕ ತೊಂದರೆಯಿಂದಾಗಿ ಬರುತ್ತಿದ್ದರೂ, ಅವು ಔಅಆ ಯಿಂದಾಗಿ ಹೆಚ್ಚಾಗುತ್ತಿದ್ದವು ಮತ್ತು ಮನಸ್ಸಿನಲ್ಲಿ ಆ ವಿಚಾರಗಳು ಪುನಃ ಪುನಃ ಬರುತ್ತಿದ್ದವು.

ಸ್ವಭಾವದೋಷ ಮತ್ತು ಅಹಂನಿಂದಾಗಿ ತುಂಬಾ ಪ್ರಸಂಗಗಳು ಘಟಿಸುತ್ತಿದ್ದವು; ನನಗೆ ಆ ಪ್ರಸಂಗಗಳನ್ನು ಅನೇಕ ದಿನ ಅಥವಾ ಅನೇಕ ತಿಂಗಳು ಬಿಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ಪ್ರಸಂಗಗಳಲ್ಲಿ ನಾನು ಅನೇಕ ವರ್ಷಗಳ ಕಾಲ ಸಿಲುಕಿಕೊಂಡಿದ್ದೆನು. ಆದುದರಿಂದ ನನಗೆ ಮಾನಸಿಕ ತೊಂದರೆಯಾಗುತ್ತಿತ್ತು. ಅದರ ಲಾಭ ಪಡೆದು ಕೆಟ್ಟ ಶಕ್ತಿಗಳು ನನ್ನ ಮನಸ್ಸಿನ ಆ ವಿಚಾರಗಳನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗುತ್ತಿದ್ದವು.

೨ ಆ ೧. ಬದಲಾವಣೆ : ಈಗ ನನಗೆ ಆ ಪ್ರಸಂಗಗಳನ್ನು ಬೇಗನೆ ಬಿಡಲು ಸಾಧ್ಯವಾಗುತ್ತಿದೆ. ಕೆಲವೊಮ್ಮೆ ಕೆಲವು ನಿಮಿಷಗಳಲ್ಲಿ ಮತ್ತು ಕೆಲವೊಮ್ಮೆ ಕೆಲವು ಗಂಟೆಗಳಲ್ಲಿ ನನಗೆ ಆ ಪ್ರಸಂಗಗಳಿಂದ ಹೊರಗೆ ಬರಲು ಸಾಧ್ಯವಾಗುತ್ತದೆ.

೨ ಇ. ತೊಂದರೆಯ ಸ್ವರೂಪ : ನನಗೆ ಸಮಷ್ಟಿಯಲ್ಲಿ ಬೆರೆಯುವುದು ಕಠಿಣವಾಗುತ್ತಿತ್ತು. ನನ್ನದು ಸಮಷ್ಟಿ ಪ್ರಕೃತಿಯಾಗಿರುವುದರಿಂದ ನನಗೆ ಒಬ್ಬಂಟಿಯಾಗಿರಲೂ ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ನನಗೆ ಹೆಚ್ಚು ಮಾನಸಿಕ ತೊಂದರೆಯಾಗುತ್ತಿತ್ತು. ಈ ತೊಂದರೆ ಯಲ್ಲಿ ಎಷ್ಟೋ ತಿಂಗಳುಗಳು ಕಳೆಯುತ್ತಿದ್ದವು. ಸಾಧಕರೊಂದಿಗೆ ಇದ್ದರೂ ನನಗೆ ಹೆದರಿಕೆ ಆಗುತ್ತಿತ್ತು. ನಾನೊಬ್ಬಳೇ ಕೋಣೆಗೆ ಹೋಗುತ್ತಿರಲಿಲ್ಲ.

೨ ಇ ೧. ಬದಲಾವಣೆ : ಈಗ ಈ ತೊಂದರೆಯಾಗುವುದು ನಿಂತಿದೆ. ನಾನು ಕೋಣೆಯಲ್ಲಿ ಒಬ್ಬಳೇ ಹೋಗುತ್ತೇನೆ ಮತ್ತು ಸಮಯ ಬಂದರೆ ಒಬ್ಬಳೇ ಇರುತ್ತೇನೆ.

೨ ಈ. ತೊಂದರೆಯ ಸ್ವರೂಪ : ಪ್ರತಿದಿನ ‘ಸ್ವಂತದ ತಯಾರಿ, ಉದಾ. ನಿದ್ದೆಯಿಂದ ಏಳುವುದು, ಸ್ನಾನ ಮಾಡುವುದು, ಬಟ್ಟೆಗಳನ್ನು ತೊಳೆಯುವುದು’ ಇತ್ಯಾದಿ ಕೃತಿಗಳನ್ನು ಮಾಡಲು ನನಗೆ ಎಷ್ಟು ಒತ್ತಡ ಬರುತ್ತಿತ್ತೆಂದರೆ, ‘ಬೆಳಗಾಗಲೇಬಾರದು’, ಎಂದು ನನಗೆ ಅನಿಸುತ್ತಿತ್ತು.

೨ ಈ ೧. ಬದಲಾವಣೆ : ಈಗ ನನಗೆ ಪ್ರತಿದಿನ ತಯಾರಾಗಲು ಒತ್ತಡ ಬರುವುದಿಲ್ಲ. ಕೆಲವೊಮ್ಮೆ ನನ್ನ ಮನಸ್ಸಿನಲ್ಲಿ ‘ಹೇಗೆ ಮಾಡುವುದು ?’, ಎಂಬ ವಿಚಾರ ಬರುತ್ತದೆ. ಆದರೆ ನನಗೆ ಒತ್ತಡವಾಗುವುದಿಲ್ಲ.

೨ ಉ. ತೊಂದರೆಯ ಸ್ವರೂಪ : ನನ್ನ ಮನಸ್ಸಿನಲ್ಲಿ ಅರ್ಬುದರೋಗದಂತಹ ಕಾಯಿಲೆಯ ಭಯವಿರುತ್ತಿತ್ತು. ‘ನನಗೆ ಅರ್ಬುದರೋಗವಾದರೆ ಹೇಗೆ ?’, ಈ ವಿಚಾರದಿಂದ ನನ್ನ ಶರೀರ ತಣ್ಣಗಾಗುತ್ತಿತ್ತು. ನನ್ನ ಮನಸ್ಸಿನಲ್ಲಿ ಈ ವಿಚಾರ ಬಂದಾಗ ನನಗೆ ‘ಮುಂದೇನು ಮಾಡಬೇಕು ?, ಎಂಬುದು ಹೊಳೆಯುವುದೇ ನಿಂತು ಹೋಗುತ್ತಿತ್ತು.

೨ ಉ ೧. ಬದಲಾವಣೆ : ಈಗ ನನ್ನ ಮನಸ್ಸಿನಲ್ಲಿನ ಭಯ ಕಡಿಮೆಯಾಗಿದೆ. ನನ್ನ ಮನಸ್ಸಿನಲ್ಲಿ ವಿಚಾರ ಬಂದಾಗ ನನಗೆ ಕೆಲವು ಕ್ಷಣ ಭಯವಾಗುತ್ತದೆ; ಆದರೆ ಅದರಿಂದ ‘ಶರೀರ ತಣ್ಣಗಾಗುವುದು, ಹೊಳೆಯದಂತಾಗುವುದು’, ಈ ರೀತಿಯ ತೊಂದರೆಯಾಗುವುದಿಲ್ಲ.

೨ ಊ. ತೊಂದರೆಯ ಸ್ವರೂಪ : ‘ಬಹಿರ್ಮುಖತೆ ಮತ್ತು ‘ನಿಷ್ಕರ್ಷ ತೆಗೆಯುವುದು’, ಈ ಸ್ವಭಾವದೋಷಗಳಿಂದ ನನ್ನ ಮನಸ್ಸಿನಲ್ಲಿ ಸಾಧಕರ ಬಗ್ಗೆ ವಿಚಾರಗಳು ಬರುತ್ತಿದ್ದವು, ‘ಅವರು ಇಂತಹ ತಪ್ಪು ಮಾಡಿದ್ದಾರೆ.’ ವಾಸ್ತವದಲ್ಲಿ ನನಗೆ ಅವರ ಸ್ಥಿತಿ ತಿಳಿದಿರುತ್ತಿರಲಿಲ್ಲ.

೨ ಊ ೧. ಬದಲಾವಣೆ : ಸದ್ಯ ನನ್ನ ಮನಸ್ಸಿನಲ್ಲಿ ಮೇಲಿನ ವಿಚಾರಗಳು ಬಂದರೂ, ನನಗೆ ಅವುಗಳನ್ನು ಬಿಡಲು ಸಾಧ್ಯ ವಾಗುತ್ತದೆ ಅಥವಾ ‘ಆ ಸಾಧಕರ ನಿರ್ದಿಷ್ಟವಾಗಿ ಯಾವ ಸ್ಥಿತಿ ಇತ್ತು ?’, ಎಂದು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಲು ಸಾಧ್ಯವಾಗುತ್ತಿದೆ. ಸದ್ಯ ಕೆಲವೊಮ್ಮೆ ಮನಸ್ಸಿನಲ್ಲಿ ಸಾಧಕರ ತಪ್ಪುಗಳ ಬಗ್ಗೆ ವಿಚಾರಗಳು ಬರುತ್ತವೆ; ಆದರೆ ಅವುಗಳ ಪರಿಣಾಮ ನನ್ನ ಶರೀರ ಅಥವಾ ಮನಸ್ಸಿನ ಮೇಲೆ ಆಗುವುದಿಲ್ಲ.

೨ ಎ. ತೊಂದರೆಯ ಸ್ವರೂಪ : ಯಾರಾದರೂ ನನ್ನ ಬಗ್ಗೆ ಏನಾದರು ಮಾತನಾಡಿದರೆ ಅಥವಾ ಯಾರದ್ದಾದರೂ ತಪ್ಪು ಕಾಣಿಸಿದರೆ, ನನಗೆ ಅದರಿಂದÀ ತೊಂದರೆಯಾಗುತ್ತಿತ್ತು ಮತ್ತು ನಾನು ಸಿಡಿಮಿಡಿಗೊಂಡು ಅಲ್ಲಿಂದ ಹೊರಟು ಹೋಗುತ್ತಿದ್ದೆ.

೨ ಎ ೧. ಬದಲಾವಣೆ : ಈಗ ನಾಮಜಪ ನಡೆದಿರುವುದರಿಂದ ಯಾರೂ ಏನೇ ಹೇಳಿದರೂ ಅಥವಾ ತಪ್ಪಿದರೂ, ನನ್ನ ಮೇಲೆ ಅದರ ಪರಿಣಾಮವಾಗುವುದಿಲ್ಲ. ನಾನು ನನ್ನ ಸೇವೆಯನ್ನು ಮಾಡುತ್ತೇನೆ. ನನ್ನ ಸೇವೆಯ ಫಲನಿಷ್ಪತ್ತಿ ಮುಂಚೆಗಿಂತ ಹೆಚ್ಚಾಗಿದೆ.

೨ ಏ. ತೊಂದರೆಯ ಸ್ವರೂಪ : ಮೊದಲು ಕೆಲವು ಪ್ರಸಂಗಗಳು ಘಟಿಸಿದರೆ ನಾನು ಸೇವೆಯನ್ನು ಬಿಟ್ಟುಬಿಡುತ್ತಿದ್ದೆನು ಮತ್ತು ಆ ಪ್ರಸಂಗದಿಂದ ಹೊರಗೆ ಬರಲು ನನಗೆ ಸಮಯ ತಗಲುತ್ತಿತ್ತು.

೨ ಏ ೧. ಬದಲಾವಣೆ : ಇತ್ತೀಚೆಗಷ್ಟೇ ಓರ್ವ ಸಾಧಕನೊಂದಿಗೆ ಒಂದು ಪ್ರಸಂಗ ಘಟಿಸಿತು. ಆಗ ನಾನು ಸ್ವಲ್ಪ ಅಸ್ಥಿರಳಾದೆನು; ಆದರೆ ದೇವರ ಕೃಪೆಯಿಂದ ನನ್ನ ಸೇವೆ ಮುಂದುವರೆಯಿತು. ಆ ಪ್ರಸಂಗದಿಂದ ನನಗೆ ಸ್ವಲ್ಪ ಸಮಯದಲ್ಲಿಯೇ ಹೊರಗೆ ಬರಲು ಸಾಧ್ಯವಾಯಿತು.

೨ ಐ. ತೊಂದರೆಯ ಸ್ವರೂಪ : ವ್ಯಷ್ಟಿ ಸಾಧನೆಯ ವರದಿಯ ಸಮಯದಲ್ಲಿ ವರದಿಸೇವಕರು ನನಗೆ ಸ್ವಭಾವದೋಷ-ನಿರ್ಮೂಲನೆಗಾಗಿ ಪಟ್ಟಿಯನ್ನು ಬರೆಯಲು ಹೇಳುತ್ತಿದ್ದರು; ಆದರೆ ನನಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ; ಏಕೆಂದರೆ ನನ್ನ ಮನಸ್ಸು ಯಾವಾಗಲೂ ಗೊಂದಲದಲ್ಲಿರುತ್ತಿತ್ತು. ನನ್ನ ಮನಸ್ಸಿನಲ್ಲಿನ ಅನಾವಶ್ಯಕ ವಿಚಾರಗಳ ಪ್ರಮಾಣ ಬಹಳವಿದ್ದುದರಿಂದ ನಾನು ದಣಿದು ಹೋಗುತ್ತಿದ್ದೆ ಮತ್ತು ನನಗೆ ಪಟ್ಟಿ ಬರೆಯಲು ಬೇಕಾದ ಶಕ್ತಿ ಸಾಕಾಗುತ್ತಿರಲಿಲ್ಲ.

೨ ಐ ೧. ಬದಲಾವಣೆ : ಮನಸ್ಸಿನಲ್ಲಿನ ವಿಚಾರಗಳು ಕಡಿಮೆ ಯಾದುದರಿಂದ ನನ್ನಿಂದ ಸ್ವಭಾವದೋಷ ಮತ್ತು ಅಹಂಅನ್ನು ಜಯಿಸಲು ಮಾಡಬೇಕಾದ ಪ್ರಯತ್ನ ತಾನಾಗಿಯೇ ಆಗುತ್ತದೆ. ಈಗ ನನಗೆ ಪಟ್ಟಿ ಬರೆಯಲು ಸಾಧ್ಯವಾಗುತ್ತಿದೆ.

೩. ಬೌದ್ಧಿಕ ಸ್ತರದ ತೊಂದರೆ ಮತ್ತು ನಾಮಜಪದಿಂದಾದ ಬದಲಾವಣೆ

೩ ಅ ತೊಂದರೆಯ ಸ್ವರೂಪ : ಮೊದಲು ನನಗೆ ‘ಸೇವೆಯನ್ನು ಹೇಗೆ ಮಾಡಬೇಕು ? ಎಂಬುದು ಹೊಳೆಯುತ್ತಿರಲಿಲ್ಲ. ನನಗೆ ಸೇವೆಯ ಬಗೆಗಿನ ಈಶ್ವರೀ ಜ್ಞಾನ ಗ್ರಹಣ ಮಾಡಲು ಸಾಧ್ಯವಾಗುತ್ತಿರಲಿಲ್ಲ.

೩ ಅ ೧. ಬದಲಾವಣೆ : ನನ್ನ ಏಕಾಗ್ರತೆ ಹೆಚ್ಚಾಗಿದೆ. ಸೇವೆಯಲ್ಲಿನ ಸೂಕ್ಷ್ಮ ವಿಚಾರಗಳು ನನಗೆ ತಾನಾಗಿಯೇ ಹೊಳೆಯು ತ್ತವೆ. ಒಂದು ಬಾರಿ ನಾಮಜಪವನ್ನು ಮಾಡುತ್ತಿರುವಾಗ ನನ್ನ ಮನಸ್ಸಿನಲ್ಲಿ ಸೇವೆಯ ಬಗ್ಗೆ ಒಂದು ವಿಚಾರ ಬಂದಿತು ಮತ್ತು ಅದನ್ನು ನಾನು ಜವಾಬ್ದಾರ ಸಾಧಕಿಗೆ ಹೇಳಿದೆನು. ಆ ಸಮಯದಲ್ಲಿ ‘ಆ ವಿಚಾರ ಹೆಚ್ಚು ಯೋಗ್ಯವಿತ್ತು ಮತ್ತು ಆ ವಿಚಾರವನ್ನು ದೇವರೇ ನನಗೆ ನೀಡಿದ್ದನು’, ಎಂದು ನನ್ನ ಗಮನಕ್ಕೆ ಬಂದಿತು.

– ಓರ್ವ ಸಾಧಕಿ

ಮಾನಸೋಪಚಾರ ತಜ್ಞರಿಗೆ ಹೇಳಿದಾಗ ಅವರು, ”ಈ ಕಾಯಿಲೆಯಲ್ಲಿ ಮನಸ್ಸಿನಲ್ಲಿನ ವಿಚಾರಗಳು ಪರಸ್ಪರ ಸಿಲುಕಿಕೊಂಡಿರುತ್ತವೆ. ಅವುಗಳು ಬಿಡುತ್ತಾ ಹೋದ ಹಾಗೆ ನಿನಗೆ ಇನ್ನಷ್ಟು ತೋಚುವುದು ಮತ್ತು ದೇವರ ವಿಚಾರಗಳನ್ನು ಗ್ರಹಣ ಮಾಡಲು ಸಾಧ್ಯವಾಗುವುದು’’, ಎಂದು ಹೇಳಿದರು.

೩ ಆ. ತೊಂದರೆಯ ಸ್ವರೂಪ : ‘ಮನಸ್ಸಿನಲ್ಲಿ ಬಂದ ವಿಚಾರ ಯಾವ ಸ್ವಭಾವದೋಷ ಅಥವಾ ಅಹಂನಿಂದಾಗಿ ಬಂದಿದೆ ?’, ಇದು ನನಗೆ ತಿಳಿಯುತ್ತಿರಲಿಲ್ಲ.

೩ ಆ ೧. ಬದಲಾವಣೆ : ‘ಮನಸ್ಸಿನಲ್ಲಿ ಬಂದ ವಿಚಾರ ಯಾವ ಸ್ವಭಾವದೋಷದಿಂದ ಬಂದಿದೆ ?’, ಎಂಬುದು ನನಗೆ ತಿಳಿಯುತ್ತದೆ ಮತ್ತು ‘ಅದರ ಮೂಲ ಏನಿದೆ?’, ಎಂಬುದು ನನಗೆ ತಿಳಿಯುತ್ತದೆ. ಆದುದರಿಂದ ನನ್ನ ಮನಸ್ಸು ಶಾಂತವಾಗಿರುತ್ತದೆ. ‘ಈಗ ಮನಸ್ಸು ಸ್ವಲ್ಪ ಅಸ್ಥಿರವಾದರೂ, ಮನಸ್ಸಿನಲ್ಲಿ ಯಾವ ವಿಚಾರ ನಡೆದಿವೆ ?’, ಎಂಬುದರ ಕಡೆಗೆ ನನ್ನ ಗಮನವಿರುತ್ತದೆ.

೪. ಇತರ ತೊಂದರೆಗಳು

೪ ಅ. ತೊಂದರೆಯ ಸ್ವರೂಪ : ನನಗಾಗುವ ತೊಂದರೆಗಳ ಬಗ್ಗೆ ನಾನು ಸಾಧಕರೊಂದಿಗೆ ಮಾತನಾಡುತ್ತಲೇ ಇರುತ್ತಿದ್ದೆ. ಒಬ್ಬ ಸಾಧಕನೊಂದಿಗೆ ಮಾತನಾಡಿದರೂ ಸಮಾಧಾನವೆನಿಸದ ಕಾರಣ ನಾನು ಅನೇಕ ಸಾಧಕರೊಂದಿಗೆ ಮಾತನಾಡುತ್ತಿದ್ದೆ. ಇದರಿಂದ ಅವರ ಸಮಯ ಹೋಗುತ್ತಿತ್ತು ಮತ್ತು ನಾನು ಅದೇ ವಿಚಾರಗಳಲ್ಲಿ ಸಿಲುಕಿರುತ್ತಿದ್ದೆನು.

೪ ಅ ೧. ಬದಲಾವಣೆ : ಈಗ ಸಾಧಕರೊಂದಿಗೆ ಮಾತನಾಡದೇ ಸ್ವಂತದ ಸ್ತರದಲ್ಲಿ ಪ್ರಯತ್ನಿಸಿ ನನಗೆ ತೊಂದರೆದಾಯಕ ವಿಚಾರಗಳಿಂದ ಹೊರಗೆ ಬರಲು ಸಾಧ್ಯವಾಗುತ್ತಿದೆ. ತೀರಾ ಆವಶ್ಯಕತೆ ಅನಿಸಿದರೆ ಅನೇಕ ಜನರೊಂದಿಗೆ ಮಾತನಾಡದೇ, ಯಾವುದಾದರೊಬ್ಬ ಸಾಧಕನೊಂದಿಗಷ್ಟೇ ಮಾತನಾಡುತ್ತೇನೆ.

೪ ಆ. ತೊಂದರೆಯ ಸ್ವರೂಪ : ನನಗೆ ಸೇವೆಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ.

೪ ಆ ೧. ಬದಲಾವಣೆ : ಈಗ ನನಗೆ ಸ್ವಲ್ಪ ಸೇವೆಯನ್ನಾದರೂ ಮಾಡಲು ಸಾಧ್ಯವಾಗುತ್ತಿದೆ.

೫. ಆಧ್ಯಾತ್ಮಿಕ ತೊಂದರೆ ಕಡಿಮೆಯಾದ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಜವಾಬ್ದಾರ ಸಾಧಕಿ ಹೇಳುವುದು

‘ನಿನಗಾಗುವ ಆಧ್ಯಾತ್ಮಿಕ ತೊಂದರೆ ಈಗ ಕಡಿಮೆಯಾಗಿದೆ’, ಎಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಜವಾಬ್ದಾರ ಸಾಧಕಿ ಇವರು ನನಗೆ ಹೇಳಿದರು. ಜವಾಬ್ದಾರ ಸಾಧಕಿಯು ನನಗೆ, ”ಮೊದಲು ನಿನ್ನ ತೊಂದರೆಯೇ ಕಾಣಿಸುತ್ತಿತ್ತು; ಆದರೆ ಈಗ ಗುಣಗಳು ಹೊರಗೆ ಬರುತ್ತಿವೆ. ಎರಡರ ಪ್ರಮಾಣ ಶೇ. ೫೦-೫೦ ರಷ್ಟಿದೆ’’ ಎಂದು ಹೇಳಿದರು.

– ಓರ್ವ ಸಾಧಕಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩.೪.೨೦೨೨)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.