ಭಾರತದಲ್ಲಿ ಯಾವ ದೇವಸ್ಥಾನಗಳ ಮೇಲೆ ಮಸೀದಿ ಕಟ್ಟಲಾಗಿವೆ ಅಲ್ಲಿ ಮತ್ತೆ ದೇವಸ್ಥಾನಗಳು ಕಟ್ಟುವೆವು ! – ಹಿಂದುತ್ವನಿಷ್ಠ ಮತ್ತು ನ್ಯಾಯವಾದಿ ಜೆ. ಸಾಯಿದೀಪಕ

ಸರ್ವೋಚ್ಚ ನ್ಯಾಯಾಲಯದಲ್ಲಿನ ಪ್ರಖರ ಹಿಂದುತ್ವನಿಷ್ಠ ಮತ್ತು ನ್ಯಾಯವಾದಿ ಜೆ. ಸಾಯಿದೀಪಕ ಇವರ ಹೇಳಿಕೆ

ನ್ಯಾಯವಾದಿ ಜೆ. ಸಾಯಿದೀಪಕ

ನವ ದೆಹಲಿ – ನಾವು ಸಾಧ್ಯವಾದಷ್ಟು ಹಿಂದೂಗಳ ದೇವಸ್ಥಾನಗಳ ಮೇಲೆ ಕಟ್ಟಲಾಗಿರುವ ಮಸೀದಿಗಳನ್ನು ತೆರವುಗೊಳಿಸಿ ಅಲ್ಲಿ ಮತ್ತೆ ದೇವಸ್ಥಾನಗಳನ್ನು ಕಟ್ಟುವೆವು. ನಾವು ಭಾರತದಲ್ಲಿನ ಪ್ರತಿಯೊಂದು ದೇವಸ್ಥಾನಗಳನ್ನು ಹಿಂಪಡೆಯುವೆವು. ನಮ್ಮ ದೇವಸ್ಥಾನಗಳು ನೆಲೆಸಮ ಮಾಡಿ ಕಟ್ಟಿರುವ ಎಲ್ಲಾ ಜಾಗ ಕಾನೂನು ರೀತಿಯಲ್ಲಿ ಹೋರಾಡಿ ಅದನ್ನು ಖಾಲಿ ಮಾಡಿಸುವೆವು’, ಎಂದು ಸರ್ವೋಚ್ಚ ನ್ಯಾಯಾಲಯದ ಪ್ರಖರ ಹಿಂದುತ್ವನಿಷ್ಠ ಮತ್ತು ನ್ಯಾಯವಾದಿ ಜೆ. ಸಾಯಿದೀಪಕ ಇವರು ಹೇಳಿಕೆ ನೀಡಿದರು. ಒಂದು ಸಂದರ್ಶದಲ್ಲಿ ಅವರು ಈ ಹೇಳಿಕೆ ನೀಡಿದರು. ‘ಮಸೀದಿ ಕೆಡವಿ ಮತ್ತೆ ದೇವಸ್ಥಾನ ಕಟ್ಟುತ್ತಿರೇ ? ಎಷ್ಟು ದೇವಸ್ಥಾನಗಳು ಕಟ್ಟುವಿರಿ ?’ ಎಂಬ ಪ್ರಶ್ನೆಗೆ ಉತ್ತರಿಸುವಾಗ ಮಾತನಾಡುತ್ತಿದ್ದರು.

ನ್ಯಾಯವಾದಿ ಜೆ. ಸಾಯಿದೀಪಕ ಮಾತು ಮುಂದುವರಿಸಿ,

೧. ಜಾತ್ಯತೀತತೆಯ ಚೌಕಟ್ಟಿಗೆ ಕೇವಲ ಹಿಂದೂ ಸಂಸ್ಥೆಗಳನ್ನೇ ಅಷ್ಟೇ ನಾಶ ಮಾಡಿಲ್ಲ, ದೇಶಕ್ಕೆ ಅದರ ಸಾಂಸ್ಕೃತಿಕ ಪರಂಪರೆಯಿಂದ ಕೂಡ ದೂರಗೊಳಿಸಿದ್ದಾರೆ, ಒಂದು ಸಾಂಸ್ಕೃತಿಕ ಬಿರುಕು ನಿರ್ಮಾಣ ಮಾಡಿರುವುದು ಇಂದಿಗೂ ಮುಂದುವರೆದಿದೆ’, ಎಂದು ಹೇಳಿದರು.

೨. ಮಸೀದಿಯ ಹೆಸರಿನಲ್ಲಿ ನಡೆದಿರುವ ಹಿಂಸಾಚಾರದ ಕುರಿತು ನ್ಯಾಯವಾದಿ ಸಾಯಿದೀಪಕ ಇವರು, ನೀವು ನ್ಯಾಯಾಲಯದಲ್ಲಿ ಉತ್ತರ ನೀಡಿ, ನೀವು, ನಮಗೆ ನ್ಯಾಯಾಲಯದಲ್ಲಿ ತಪ್ಪಿತಸ್ಥರೆಂದು ಸಾಬೀತುಪಡಿಸಿ. ಸಾಕ್ಷಿ ಸಮೇತ ಉತ್ತರ ನೀಡಿ. ನಾವು ಸಾಕ್ಷಿಗಳ ಪ್ರಸ್ತುತಪಡಿಸಿದ ನಂತರ ಅದಕ್ಕೆ ಪ್ರತ್ಯುತ್ತರವಾಗಿ ಕತ್ತಿಗಳನ್ನು ಏಕೆ ಎತ್ತುತ್ತೀರಿ ?, ಎಂದು ಕೇಳಿದರು.