45 Muslims Families Convert Back Hinduism : ಹಾಪುಡ (ಉತ್ತರ ಪ್ರದೇಶ)ಇಲ್ಲಿ 45 ಮುಸ್ಲಿಂ ಕುಟುಂಬಗಳಿಂದ ಸನಾತನ ಧರ್ಮದ ಸ್ವೀಕಾರ

ಹಪೂಡ (ಉತ್ತರ ಪ್ರದೇಶ) – ಇಲ್ಲಿನ ಸಲ್ಮಾನ ಖಾನ್ ಮತ್ತು ಅವರ ಕುಟುಂಬದ 45 ಕುಟುಂಬಗಳು ಇಸ್ಲಾಂ ಧರ್ಮವನ್ನು ತೊರೆದು ಸನಾತನ ಧರ್ಮವನ್ನು ಸ್ವೀಕರಿಸಿದರು. ಅವರು ಧರ್ಮಪರಿವರ್ತನೆಯ ನಂತರ ಸಲ್ಮಾನ ಖಾನ್ ತಮ್ಮ ಹೆಸರನ್ನು ಸಂಸಾರ ಸಿಂಗ್ ಎಂದು ಬದಲಾಯಿಸಿಕೊಂಡರು. ಅಲ್ಲದೆ, ಅಜ್ಜನ ಹೆಸರನ್ನು ಶ್ಯಾಮಲಾಲ್ ಸಿಂಗ್ ಎಂದು ಹೆಸರಿಟ್ಟರು. ಅವರ ಅಜ್ಜನ ಮರಣದ ನಂತರ, ಬ್ರಜ್ಘಾಟ್‌ನಲ್ಲಿ ಅವರ ಶವವನ್ನು ಹಿಂದೂ ಸಂಪ್ರದಾಯಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಿದರು. ತದ ನಂತರ ಅವರ ಅಸ್ಥಿ ಕಲಶವನ್ನು ವಿಸರ್ಜಿಸಲಾಯಿತು. ಅವರು ಇದೇ ಮೊದಲಬಾರಿ ಗಂಗೆಯಲ್ಲಿ ಸ್ನಾನ ಮಾಡಿ ಶುದ್ಧಿಯಾಗಿ, ಸನಾತನ ಧರ್ಮವನ್ನು ಸ್ವೀಕರಿಸಿದರು. ಅವರಿಗೆ ಅವರ ಗೋತ್ರ ತಿಳಿಯದ ಕಾರಣ ಅವರು ಭಗವಾನ ಶಿವ ಮತ್ತು ಪಾರ್ವತಿಯ ಹೆಸರಿನಲ್ಲಿ ಗೌರಿಶಂಕರ ಗೋತ್ರವನ್ನು ಸ್ವೀಕರಿಸಿ ಮನೆಗೆ ಮರಳಿದರು.

ಸಂಸಾರ ಸಿಂಗ್ ಮಾತನಾಡಿ, “ಈಗ ದೇಶದಲ್ಲಿ ಹಿಂದೂಗಳ ಹಿತಾಸಕ್ತಿ ಸುರಕ್ಷಿತವಾಗಿದ್ದು, ಅವರ ಕುಟುಂಬವು ಸನಾತನ ಧರ್ಮವನ್ನು ಸ್ವೀಕರಿಸಿ ಧನ್ಯತೆಯನ್ನು ಅನುಭವಿಸುತ್ತಿದೆ.” ಎಂದು ಹೇಳಿದರು. ಅವರ ಕುಟುಂಬವು ಮೂಲತಃ ಇಸ್ಲಾಮಾಬಾದ(ಪಾಕಿಸ್ತಾನ) ಆಗಿದ್ದು, ಅವರ ಪೂರ್ವಜರು ಹಿಂದೂಗಳಾಗಿದ್ದರು; ಆದರೆ ಮೊಘಲರು ಅವರನ್ನು ಮುಸ್ಲಿಮರಾಗಲು ಅನಿವಾರ್ಯ ಗೊಳಿಸಿದರು. ಬ್ರಿಟಿಷರು ಭಾರತವನ್ನು ತೊರೆದ ನಂತರ, ದೇಶ ವಿಭಜನೆಯ ನಂತರ ಕುಟುಂಬವು ಭಾರತದಲ್ಲಿ ಉಳಿಯಲು ನಿರ್ಧರಿಸಿತು ಮತ್ತು ಸಂಪೂರ್ಣ ಕುಟುಂಬವು ಇಸ್ಲಾಮಾಬಾದ್ ನಿಂದ ಬಂದು ದೆಹಲಿಯಲ್ಲಿ ನೆಲೆಸಿದರು. ಇದು ಈಗ ಸುಮಾರು 150 ಸದಸ್ಯರನ್ನು ಹೊಂದಿರುವ 45 ಕ್ಕೂ ಹೆಚ್ಚು ಕುಟುಂಬಗಳನ್ನು ಹೊಂದಿದೆ. ಸಂಸಾರ್ ಸಿಂಗ್ ಪ್ರಕಾರ ಸುಮಾರು 4 ವರ್ಷಗಳ ಹಿಂದೆ ಅವರೆಲ್ಲರೂ ಇಸ್ಲಾಂ ಧರ್ಮವನ್ನು ತೊರೆದು ಸನಾತನ ಧರ್ಮವನ್ನು ಸ್ವೀಕರಿಸಲು ನಿರ್ಧರಿಸಿದ್ದರು; ಆದರೆ ಕೆಲವರ ವಿರೋಧದಿಂದಾಗಿ ಅವರ ಕುಟುಂಬ ಸನಾತನ ಧರ್ಮ ಸ್ವೀಕರಿಸುವುದರ ಬಗ್ಗೆ ಚಿಂತಿಸಿತ್ತು. ಕೊನೆಗೆ ಅವರ ಅಜ್ಜನವರು ಕುಟುಂಬ ಸದಸ್ಯರು ಈಗ ಹಿಂದೂ ಸಂಪ್ರದಾಯಗಳ ಪ್ರಕಾರ ಉಪವಾಸಗಳು, ಹಬ್ಬಗಳು ಮತ್ತು ಇತರ ಆಚರಣೆಗಳನ್ನು ಆಚರಿಸಬೇಕೆಂದು ನಿರ್ಧರಿಸಿದರು. ಇದರೊಂದಿಗೆ, ಅವರ ಮರಣದ ನಂತರ, ಅವರನ್ನು ಬ್ರಜಘಾಟ್‌ನಲ್ಲಿ ಅಂತ್ಯಸಂಸ್ಕಾರ ಮಾಡಿ, ಅವರ ಹೆಸರನ್ನು ವಂಶಾವಳಿಯಲ್ಲಿ ದಾಖಲಿಸಬೇಕು, ಎಂದು ನಿರ್ಧರಿಸಲಾಯಿತು. ಅವರ ಇಚ್ಛೆಯಂತೆ, ಸಂಸಾರ ಸಿಂಗ್ ಅವರು ಅವರ ಅಂತ್ಯಸಂಸ್ಕಾರ ನೆರವೇರಿಸಿದರು. ತದನಂತರ, ಅರ್ಚಕ ಅಂಕುರ ಶರ್ಮಾ ಅವರ ವಂಶಾವಳಿಯಲ್ಲಿ ಕುಟುಂಬದ ಸದಸ್ಯರ ಹೆಸರನ್ನು ದಾಖಲಿಸಲಾಗಿದೆ.

ಸನಾತನ ಧರ್ಮಕ್ಕೆ ಮರಳಿದ ಬಗ್ಗೆ ಹೆಮ್ಮೆಯೆನಿಸುತ್ತಿದೆ !

ಸಂಸಾರ ಸಿಂಗ್ ಮತ್ತು ಸಂಜು ಮಾತನಾಡಿ, ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ನಮ್ಮ ಪೂರ್ವಜರು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡಿದ್ದರು. ನಮ್ಮ ಕುಟುಂಬದ ಸದಸ್ಯರು ಅನೇಕ ವರ್ಷಗಳಿಂದ ಸ್ವಧರ್ಮಕ್ಕೆ ಮರಳುವ ಕನಸು ಕಾಣುತ್ತಿದ್ದರು; ಆದರೆ ಅವರಿಗೆ ಧೈರ್ಯವನ್ನು ತೋರಿಸಲು ಸಾಧ್ಯವಾಗಲಿಲ್ಲ; ಆದರೆ ಈಗ ದೇಶದಲ್ಲಿ ಹಿಂದೂಗಳ ಹಿತಾಸಕ್ತಿ ಸುರಕ್ಷಿತವಾಗಿದೆ ಮತ್ತು ಸನಾತನ ಧರ್ಮವನ್ನು ಸ್ವೀಕರಿಸಲು ಅವರು ಧನ್ಯತೆಯನ್ನು ಅನುಭವಿಸುತ್ತಿದ್ದಾರೆ’, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಮುಸ್ಲಿಮ್ ದಾಳಿಕೋರರು ಯಾವ ಪೂರ್ವಜರನ್ನು ಒತ್ತಾಯಪೂರ್ವಕ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ್ದರೋ, ಅವರ ವಂಶಸ್ಥರು ಈಗ ಹಿಂದೂ ಧರ್ಮಕ್ಕೆ ಮರಳಲು ಬಯಸುತ್ತಾರೆ, ಇಂತಹವರಿಗಾಗಿ ಈಗ ಕೇಂದ್ರ ಸರಕಾರ ವಿಶೇಷ ಯೋಜನೆಯನ್ನು ಜಾರಿಗೊಳಿಸುವುದು ಆವಶ್ಯಕವಾಗಿದೆ !
  • ಛತ್ರಪತಿ ಶಿವಾಜಿ ಮಹಾರಾಜರು ಈ ದೇಶದಲ್ಲಿ ಮೂರೂವರೆ ನೂರು ವರ್ಷಗಳ ಹಿಂದೆ ಆರಂಭಿಸಿದ ಶುದ್ಧೀಕರಣ ಆಂದೋಲನಕ್ಕೆ ಈಗ ರಾಜಾಶ್ರಯ ಸಿಗುವುದು ಆವಶ್ಯಕವಾಗಿದೆ !