ಕುಟುಂಬದವರಿಂದಲೂ ಸಾಧನೆಯಲ್ಲಿ ಅದ್ವಿತೀಯ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುವ ಏಕಮೇವಾದ್ವಿತೀಯ ಪ.ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

ಎಲ್ಲ ಓದುಗರಿಗೆ, ತಮ್ಮ ಮಕ್ಕಳಲ್ಲಿ ಸುಸಂಸ್ಕಾರಗಳನ್ನು ಹೇಗೆ ಮಾಡಬೇಕು ? ಎಂಬುದನ್ನು ತಿಳಿದುಕೊಳ್ಳಲು ಉಪಯುಕ್ತ ಲೇಖನಮಾಲೆ !

ಪ.ಪೂ. ದಾದಾ ಆಠವಲೆ

‘ಸನಾತನ ಪ್ರಭಾತ’ದಲ್ಲಿ ಸಂತರ ಸಾಧನೆಯ ಪ್ರವಾಸ, ಅವರ ಬೋಧನೆ, ಅವರ ಸಂದರ್ಭದ ಲೇಖನಗಳನ್ನು ನಿಯಮಿತವಾಗಿ ಪ್ರಕಟಿಸಲಾಗುತ್ತದೆ. ಸಂಚಿಕೆ ೨೩/೦೪ ರಿಂದ ಪ್ರಾರಂಭವಾಗಿರುವ ಈ ಲೇಖನಮಾಲೆಯಿಂದ ‘ಸನಾತನ ಪ್ರಭಾತ’ದ ಸಂಸ್ಥಾಪಕ-ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರ ತಂದೆ ಪ.ಪೂ. ಬಾಳಾಜಿ (ಪ.ಪೂ. ದಾದಾ) ಆಠವಲೆಯವರ ಸಂದರ್ಭದ ಲೇಖನವನ್ನು ಪ್ರಕಟಿಸುತ್ತಿದ್ದೇವೆ.

ಸಂಚಿಕೆ ೨೩/೦೮ ರಲ್ಲಿ ನಾವು ಪ.ಪೂ. ಬಾಳಾಜಿ ಆಠವಲೆರವರ ಬರವಣಿಗೆಯ ಬಗೆಗಿನ ವೈಶಿಷ್ಟ್ಯಗಳನ್ನು ನೋಡಿದೆವು. ಇಂದು ಲೇಖನ ಮಾಲೆಯ ಕೊನೆಯ ಭಾಗವನ್ನು ನೋಡೋಣ.

(ಭಾಗ ೫)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/52893.html
(ಪರಾತ್ಪರ ಗುರು) ಡಾ. ಆಠವಲೆ

ಪ.ಪೂ. ದಾದಾರವರು ರಚಿಸಿದ ಆಂಗ್ಲ ಕವಿತೆ !

Kill desire not body

(ಎಡಗಡೆಯ ನೇರ ಗೆರೆಯ ನಿರ್ದಿಷ್ಟ (ದಪ್ಪ ಮಾಡಿದ)
ಅಕ್ಷರಗಳು ‘Jayant’ ಈ ಹೆಸರನ್ನು ಸೂಚಿಸುತ್ತದೆ.)

Jayant
Jack told a Saint that a thief always shot
rich men and stole gold.

And so he said “Should I kill him
to save men ? “No” said the Saint.

You should not kill his body,
kill his desire to gain much gold”.

And the Saint gave the thief Divine power
“What you touch will be gold”.

Note ! The thief was hungry. He touched food;
it became gold. He could not eat it.

Then he gave up stealing because
his desire to steal gold was killed.

(ಆಂಗ್ಲ ಗ್ರಂಥ- ‘Poetry created around Names (Poetry
that teaches how to spiritualise worldly life)’)

ರಾಷ್ಟ್ರದ ಬಗ್ಗೆ ಪ.ಪೂ. ದಾದಾರವರ ವಿಚಾರಗಳು

೫ ಅ. ಪ್ರಜಾಪ್ರಭುತ್ವ

೫ ಅ ೧. ‘ವ್ಯಕ್ತಿಸ್ವಾತಂತ್ರ್ಯಕ್ಕಾಗಿ ಹೋರಾಡುವವರೇ’, ಇದಕ್ಕೆ ಉತ್ತರ ಕೊಡಿ ! : ಪ್ರಜಾಪ್ರಭುತ್ವದಲ್ಲಿ ರಾಜ್ಯಸರಕಾರವು ಪ್ರಾಸಂಗಿಕವಾಗಿ ನೀತಿಸಂಹಿತೆ ಹೊರಡಿಸಿದಾಗ ನಾವು ನಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ನಿರ್ಬಂಧಗಳನ್ನು ಹೇರುತ್ತೇವಲ್ಲ ? ಅದೇ ರೀತಿ ನಾಗರಿಕನಿಗೆ ತನ್ನ ಪ್ರಗತಿಗಾಗಿ ಪ್ರೇರೇಪಿಸುವ ಸ್ವಾತಂತ್ರ್ಯಕ್ಕೂ ನಿಯಮಗಳ ಅನುಷ್ಠಾನಕ್ಕೂ ಏನಾದರೂ ಮೂಲಭೂತ ವ್ಯತ್ಯಾಸವಿದೆಯೇ ?

೫ ಅ ೨. ಚುನಾವಣೆಗಳಿಗೆ ಮಹತ್ವವನ್ನು ನೀಡುವವರೇ ಇದನ್ನು ಗಮನದಲ್ಲಿಡಿ ! : ಸಾವಿರಾರು ಮೂರ್ಖರ ಮತಗಳಿಗಿಂತ ಒಬ್ಬ ವಿದ್ವಾಂಸನ ಮತ (ಅಭಿಪ್ರಾಯವು) ಹೆಚ್ಚು ಉಪಯುಕ್ತವಾಗಿರುತ್ತದೆ.

೫ ಆ. ನಾಗರಿಕರಿಗೆ ಯಾವಾಗ ದೇಶದ ಬಗ್ಗೆ ಪ್ರೀತಿ ಮತ್ತು ಗೌರವ ಎನಿಸುತ್ತದೆಯೋ ಆಗಲೇ ದೇಶವು ಬಲಿಷ್ಠವಾಗುತ್ತದೆ ! : ವ್ಯಕ್ತಿ ಆತ್ಮಕೇಂದ್ರಿತನಾಗಿದ್ದರೆ ಮತ್ತು ಅವನಿಗೆ ದೇಶದ ಕಲ್ಯಾಣದ ಕಾಳಜಿ ಎನಿಸುವುದೇ ಇಲ್ಲ. ಆಗ ಸಮಾಜ ಮತ್ತು ದೇಶದ ಮೌಲ್ಯ ಅಥವಾ ಗುಣಮಟ್ಟ ಕಡಿಮೆಯಾಗುತ್ತದೆ. ಸ್ವಾರ್ಥ ಹೆಚ್ಚಾದರೆ ಜನರು ತಮ್ಮ ತಮ್ಮಲ್ಲಿಯೇ ಜಗಳವಾಡುತ್ತಾರೆ. ಜನರು ನಿಸ್ವಾರ್ಥಿಗಳಾದರೆ ಮತ್ತು ಅವರಲ್ಲಿ ದೇಶದ ಬಗ್ಗೆ ಅತ್ಯಧಿಕ ಪ್ರೇಮ ನಿರ್ಮಾಣವಾದರೆ, ಮಾತ್ರ ಅವರು ಒಟ್ಟುಗೂಡುತ್ತಾರೆ ಮತ್ತು ದೇಶ ಸದೃಢ ಹಾಗೂ ಬಲಿಷ್ಠವಾಗುತ್ತದೆ.

೫ ಇ. ಪ್ರತಿಯೊಬ್ಬರೂ ಸ್ವಾರ್ಥವನ್ನು ಬಿಟ್ಟು ಸಮಾಜ ಮತ್ತು ದೇಶದ ಬಗ್ಗೆ ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸುವುದು ಆವಶ್ಯಕ ! : ನಮ್ಮ ದೇಶಭಕ್ತರ ಸ್ವಾರ್ಥತ್ಯಾಗದಿಂದ ಇಂದು ನಾವು ಸ್ವಾತಂತ್ರ್ಯದ ಫಲವನ್ನು ಆಸ್ವಾದಿಸುತ್ತಿದ್ದೇವೆ. ‘ನಮ್ಮ ಪೀಳಿಗೆ ದಾಸ್ಯತ್ವದಲ್ಲಿ ಸಿಲುಕಬಾರದು’, ಎಂದು ಅನಿಸುತ್ತಿದ್ದರೆ, ನಮ್ಮಲ್ಲಿರುವ ಪ್ರತಿಯೊಬ್ಬರೂ ಸಮಾಜ ಮತ್ತು ದೇಶದ ಬಗ್ಗೆ ತಮ್ಮ ಕರ್ತವ್ಯವೆಂದು ನಿಸ್ವಾರ್ಥವಾಗಿ ಏನಾದರೂ ಮಾಡಬೇಕು. ಪ್ರತಿಯೊಬ್ಬರೂ ಭ್ರಷ್ಟಾಚಾರವನ್ನು ಮಾಡತೊಡಗಿದರೆ, ಲಂಚವನ್ನು ತೆಗೆದುಕೊಳ್ಳತೊಡಗಿದರೆ ಮತ್ತು ಸ್ವಾರ್ಥಕ್ಕಾಗಿ ಸಮಾಜವನ್ನು ಲೂಟಿ ಮಾಡತೊಡಗಿದರೆ, ಬೇಗನೆ ಸಮಾಜದ  ಅಧೋಗತಿಯಾಗಿ ಅದು ನಾಶಗೊಳ್ಳಬಹುದು.

೫ ಇ. ತಂದೆಯವರು ಮಗನು ಸೈನ್ಯವನ್ನು ಸೇರಲು ನಿರಾಕರಿಸಬಾರದು ಎಂದು ಅವರಿಗೆ ತಿಳಿಯದಂತೆ ಸೈನ್ಯದಲ್ಲಿ ಭರ್ತಿಯಾಗಿ ಆ ಕುರಿತು ಅವರಿಗೆ ಪತ್ರದ ಮೂಲಕ ತಿಳಿಸುವ ದೇಶಭಕ್ತ ಪುತ್ರ ! : ಗೋವಾ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಒಬ್ಬ ಯುವಕನು ತನ್ನ ತಂದೆಯವರಿಗೆ ಮುಂದಿನ ಪತ್ರವನ್ನು ಬರೆದನು. ‘ಬಾಬಾ, ಗೋವಾ ನಿಮಗೆ ಬಹಳ ಇಷ್ಟವಾಗುತ್ತದೆ ಮತ್ತು ಗೋವಾದ ಮೇಲೆ ನಿಮಗೆ ಪ್ರೀತಿಯಿದೆ. ಆ ಗೋವಾದ ಸ್ವಾತಂತ್ರ್ಯಕ್ಕಾಗಿ ನಾನು ಇಂದು ಸೈನ್ಯದಲ್ಲಿ ಭರ್ತಿಯಾಗುತ್ತಿದ್ದೇನೆ; ಆದರೆ ನಾನು ಇದನ್ನು ನಿಮಗೆ ತಿಳಿಯದಂತೆ ಮಾಡುತ್ತಿದ್ದೇನೆ. ನನ್ನ ಬಗ್ಗೆ ನಿಮಗಿರುವ ಅಪಾರ ಪ್ರೇಮವು ನನಗೆ ನೆನಪಿದೆ. ನನ್ನ ಪತ್ರದಿಂದ ನಿಮ್ಮ ಮನಸ್ಸು ಸ್ತಬ್ಧ ಮತ್ತು ದುಃಖಿತವಾಗಬಹುದು; ಆದರೆ ‘ಇನ್ನೊಬ್ಬರ ಮಗನು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣದ ಬಲಿದಾನ ಮಾಡಬೇಕು’, ಎಂದು ವಿಚಾರವನ್ನು ಪ್ರತಿಯೊಬ್ಬ ತಂದೆಯು ಮಾಡಿದರೆ, ದೇಶ ಹೇಗೆ ಸ್ವತಂತ್ರವಾಗುವುದು ?

೫ ಉ. ಎಲ್ಲ ಮಕ್ಕಳು ಯುದ್ಧದಲ್ಲಿ ಮರಣ ಹೊಂದಿದರೂ, ‘ದೇಶಕ್ಕೆ ಅರ್ಪಿಸಲು ಪುತ್ರನಿಲ್ಲ’, ಎಂದು  ದುಃಖಿಸುವ ವೀರಮಾತೆ !
ಒಬ್ಬ ಮಾತೆಯ ಐವರೂ ಪುತ್ರರೂ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಮರಣ ಹೊಂದಿದರು. ಅವರ ನೆರೆಹೊರೆಯವರು ಮತ್ತು ದೇಶದ ಮುಖಂಡರು ಅವಳಿಗೆ ಸಮಾಧಾನ ಹೇಳಲು ಬಂದರು. ಆ ಸಮಯದಲ್ಲಿ ಅವಳು ಅಳುತ್ತಾ ಅವರಿಗೆ ಹೀಗೆಂದಳು,“ಯುದ್ಧದಲ್ಲಿ ನನ್ನ ಐವರೂ ಪುತ್ರರು ಮರಣ ಹೊಂದಿದರು, ಎಂದು ನನಗೆ ದುಃಖವೆನಿಸುತ್ತಿಲ್ಲ; ಆದರೆ ದೇಶಕ್ಕಾಗಿ ಮತ್ತೊಬ್ಬ ಪುತ್ರನನ್ನು ಅರ್ಪಿಸಲು ಸಾಧ್ಯವಿಲ್ಲ, ಎಂದು ನನಗೆ ದುಃಖವಾಗುತ್ತಿದೆ.” (ಖಂಡ ೩)

೬. ಪ.ಪೂ. ದಾದಾರವರು ರಚಿಸಿದ ಕವಿತೆ

೬ ಅ. ‘ಸಂತವಾಙ್ಮಯದಲ್ಲಿ ಈಶ್ವರ ಮತ್ತು ಅಧ್ಯಾತ್ಮ ಇದೇ ಕೇಂದ್ರಬಿಂದುವಾಗಿರುವುದರಿಂದ ಅದು ಕಾಲದ ಪ್ರವಾಹದಲ್ಲಿ ಉಳಿಯುತ್ತದೆ ! : ‘ರವಿ ಕಾಣದಿರುವುದನ್ನು ಕವಿ ಕಂಡನು’ ಎಂದರೆ ‘ಯಾವ (ಅಂಧಕಾರ) ರವಿ(ಸೂರ್ಯ) ನೋಡಲು ಸಾಧ್ಯವಿಲ್ಲವೋ, ಅದನ್ನು (ಮನುಷ್ಯನ ಮನಸ್ಸಿನ ಅಂಧಃಕಾರ ಎಂದರೆ ದುಃಖ) ಕವಿಯು ನೋಡಬಲ್ಲನು’, ಎಂದು ಹೇಳಲಾಗಿದೆ. ಕವಿ ಅಂಧಃಕಾರವನ್ನು ನೋಡಿ ತನ್ನ ಕವಿತೆಯ ಮೂಲಕ ಅದನ್ನು ದೂರಗೊಳಿಸುವ ಪ್ರಯತ್ನಿಸುತ್ತಾನೆ. ಅಜ್ಞಾನವೇ ನಿಜವಾದ ಅರ್ಥದಿಂದ ಅಂಧಃಕಾರದ ಮೂಲವಾಗಿದೆ ಮತ್ತು ಕೇವಲ ನಿಜವಾದ ಜ್ಞಾನದಿಂದಲೇ (ಅಧ್ಯಾತ್ಮದಿಂದಲೇ) ಅದು ದೂರವಾಗಬಹುದು, ಎಂದು ಸಂತ ಕವಿಗಳು ತಿಳಿಯುತ್ತಾರೆ.  ಸಾಧಾರಣವಾಗಿ ಕವಿ ಮತ್ತು ಸಂತ ಕವಿಗಳಲ್ಲಿ ಇದೇ ವ್ಯತ್ಯಾಸವಿದೆ. ಇಂದಿನವರೆಗಿನ ಇತಿಹಾಸವನ್ನು ನೋಡಿದರೆ, ವಾಙ್ಮಯ ತಾತ್ಕಾಲಿಕ ಸುಖವನ್ನು ನೀಡುತ್ತದೆ, ಆದರೆ ಸಂತವಾಙ್ಮಯವು ಚಿರಂತನ ಸುಖ (ಆನಂದ)ವನ್ನು ನೀಡುತ್ತದೆ. ಸಂತವಾಙ್ಮಯ ಕೇವಲ ಆಶಯಧನವಷ್ಟೇ ಅಲ್ಲ, ಚೈತನ್ಯಮಯವಾಗಿರುವುದರಿಂದ ಇತರ ವಾಙ್ಮಯಕ್ಕಿಂತ ಅದರಲ್ಲಿ ಎಷ್ಟೋ ಪಟ್ಟು ಅಧಿಕ ಶಕ್ತಿಯಿರುತ್ತದೆ. ಹಾಗೆಯೇ ಈಶ್ವರ ಮತ್ತು ಅಧ್ಯಾತ್ಮ ಇದೇ ಅದರ ಕೇಂದ್ರಬಿಂದುವಾಗಿರುವುದರಿಂದ ಅದು ಕಾಲದ ಪ್ರವಾಹದಲ್ಲಿ ಉಳಿಯುತ್ತದೆ.

೬ ಆ. ಪ.ಪೂ. ದಾದಾರವರ ಕವಿತೆಗಳ ಮಾಧ್ಯಮದಿಂದ ಕಂಡು ಬರುವ ಭಾಷಾಪ್ರಭುತ್ವ : ಭಾಷೆಯ ಶ್ರೀಮಂತಿಕೆ ಮುಖ್ಯವಾಗಿ ವಿಚಾರಧನ ಮತ್ತು ಶಬ್ದಸಂಪತ್ತುಗಳನ್ನು ಅವಲಂಬಿಸಿರುತ್ತದೆ. ಈ ಕಾವ್ಯರಚನೆಯು ಪ.ಪೂ. ದಾದಾರವರ ವಿಲಕ್ಷಣ ಪ್ರಜ್ಙಾಶಕ್ತಿಯ ಪ್ರತೀಕವಾಗಿದೆ. ಇದರಿಂದ ಅವರ ಭಾಷಾಪ್ರಭುತ್ವವೂ ಕಂಡು ಬರುತ್ತದೆ. ಪ.ಪೂ. ದಾದಾರವರ ಅಂತಃಸ್ಫೂರ್ತಿ ಜಾಗೃತಗೊಂಡು ಅವರು ಈ ಕವಿತೆಗಳನ್ನು ರಚಿಸಿದ್ದಾರೆ ಮತ್ತು ಅವರ ಅಧ್ಯಾತ್ಮ ಇದೇ ಕೇಂದ್ರಬಿಂದುವಾಗಿದೆ. ಈ ಕಾವ್ಯದ ಪ್ರಾರಂಭದ ಮತ್ತು / ಅಥವಾ ಕೊನೆಯ ಅಕ್ಷರಗಳಿಂದ ವ್ಯಕ್ತಿಯ ಹೆಸರು ಸಿದ್ಧವಾಗುತ್ತದೆ. ಪ.ಪೂ. ದಾದಾರವರ ಕವಿತೆಯ ಭಾಷೆ ಅತ್ಯಂತ ಸರಳ ಮತ್ತು ರಸಭರಿತವಾಗಿದೆ. ಎಲ್ಲಕ್ಕಿಂತ ಈ ಕವಿತೆಗಳ ಮಹತ್ವದ ವೈಶಿಷ್ಟ್ಯವೆಂದರೆ ಎಲ್ಲ ಕವಿತೆ ಆಧ್ಯಾತ್ಮಿಕ ವಿಷಯಕ್ಕೆ ಸಂಬಂಧಿಸಿದ್ದು, ಅದು ಬೋಧಪ್ರದ ಮತ್ತು ಉಪದೇಶ ನೀಡುವಂತದ್ದಾಗಿದೆ.

೬ ಇ. ಪ.ಪೂ. ದಾದಾರವರ ಈ ಕಾವ್ಯಗಳಲ್ಲಿರುವ ವಿವಿಧ ವಿಷಯಗಳು : ಯಾವುದೇ ವ್ಯಕ್ತಿಯ ಗುಣವೈಶಿಷ್ಟ್ಯಗಳನ್ನು ಹೇಳುವುದರೊಂದಿಗೆ ಪ್ರೋತ್ಸಾಹ ನೀಡುವ, ‘ಮಾಯೆಯಲ್ಲಿ ಸಿಲುಕದೇ ಆದರ್ಶ ಜೀವನವನ್ನು ಹೇಗೆ ಜೀವಿಸುವುದು ?’, ಎಂದು ಬೋಧಿಸುವ, ಕುಟುಂಬದವರಿಗೆ ಮಾರ್ಗದರ್ಶನ ಮಾಡುವ, ಹೀಗೆ ವಿವಿಧ ಮಗ್ಗಲುಗಳನ್ನು ಪ.ಪೂ. ದಾದಾರವರು ಈ ಕಾವ್ಯಗಳ ಮೂಲಕ ಮಂಡಿಸಿದ್ದಾರೆ. ಇದರೊಂದಿಗೆ ಗುರುಗಳ ವಿಷಯದಲ್ಲಿ ಭಕ್ತಿಭಾವವನ್ನು ತೋರಿಸುವ ಮತ್ತು ಸಂತರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಕಾವ್ಯಗಳಿವೆ. ಪ.ಪೂ. ದಾದಾರವರು ಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗ ಈ ಮೂರೂ ಯೋಗಮಾರ್ಗಗಳಿಗನುಸಾರ ಸಾಧನೆಯನ್ನು ಮಾಡಿರುವುದರಿಂದ ಅದರ ಅದ್ಭುತ ಸಮಾಗಮವೂ ಅವರ ಕಾವ್ಯಗಳಿಂದ ಕಂಡು ಬರುತ್ತದೆ.  ವಿವಿಧ ಹೆಸರುಗಳ ರಚನೆಯಾಗುವ ಈ ಕವಿತೆಯನ್ನು ನಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಅವರ ಹುಟ್ಟುಹಬ್ಬದಂದು ಶುಭಾಶಯಪತ್ರಗಳ ರೂಪದಲ್ಲಿ ಕೊಡಬಹುದು.

೬ ಈ. ಕವಿತೆಗಳ ವೈಶಿಷ್ಟ್ಯಗಳು : ಯಾರದಾದರೂ ಹುಟ್ಟುಹಬ್ಬ ಅಥವಾ ಮಹತ್ವದ ದಿನ ಇಂತಹ ವಿಶೇಷ ಪ್ರಸಂಗಗಳಲ್ಲಿ ದಾದಾರವರು ಕವಿತೆಯನ್ನು ರಚಿಸಿ ಆಯಾ ವ್ಯಕ್ತಿಗೆ ಉಡುಗೊರೆಯೆಂದು ಕೊಡುತ್ತಿದ್ದರು. ಈ ಕವಿತೆಗಳ ವೈಶಿಷ್ಟ್ಯಗಳೇನೆಂದರೆ, ಬಹುತೇಕ ಕವಿತೆಯಲ್ಲಿರುವ ಪ್ರತಿಯೊಂದು ಸಾಲಿನ ಮೊದಲ ಅಕ್ಷರದಿಂದ ಆ ವ್ಯಕ್ತಿಯ ಹೆಸರು ರಚನೆಯಾಗುತ್ತದೆ. ಕೆಲವೊಮ್ಮೆ ಮೊದಲ ಅಕ್ಷರದೊಂದಿಗೆ, ಕೊನೆಯ ಅಕ್ಷರದಿಂದಲೂ ಯಾವುದಾದರೂ ಹೆಸರು ರಚನೆಯಾಗುತ್ತದೆ. ಕೆಲವೊಮ್ಮೆ ಒಂದು  ಸಾಲು ಬಿಟ್ಟು ಒಂದು ಸಾಲಿನ ಮೊದಲ ಅಕ್ಷರದಿಂದ ವ್ಯಕ್ತಿಯ ಹೆಸರು ರಚನೆಯಾಗುತ್ತದೆ; ಆದರೆ ಪ.ಪೂ. ದಾದಾರವರ ಕಾವ್ಯಲೇಖನದ ಎಲ್ಲಕ್ಕಿಂತ ದೊಡ್ಡ ವೈಶಿಷ್ಟ್ಯವೆಂದರೆ ಅವರ ಕೆಲವು ಕವಿತೆಗಳಲ್ಲಿ ಒಂದು ಸಾಲು ಬಿಟ್ಟು ಒಂದು ಸಾಲಿನ ಮೊದಲ ಮತ್ತು ಕೊನೆಯ ಅಕ್ಷರಗಳಿಂದ ವ್ಯಕ್ತಿಯ ಹೆಸರು ರಚನೆಯಾಗುವುದು. ಎಲ್ಲ ಕವಿತೆಗಳು ಮಾರ್ಗದರ್ಶಕವಾಗಿವೆ.

೧.  ಎಲ್ಲ ಕವಿತೆಗಳು ವ್ಯಾವಹಾರಿಕ ಅಥವಾ ಆಧ್ಯಾತ್ಮಿಕ ಬೋಧನೆಯನ್ನು ನೀಡುವಂತಹದ್ದಾಗಿವೆ.

೨. ಅವರು ಯಾರ ಹೆಸರಿನಿಂದಲಾದರೂ ಮರಾಠಿ ಮತ್ತು ಆಂಗ್ಲ ಎರಡೂ ಭಾಷೆಯಲ್ಲಿ ಕವಿತೆಯನ್ನು ರಚಿಸುತ್ತಿದ್ದರು.

೩. ಪ.ಪೂ. ದಾದಾರವರು ಒಂದೇ ಅರ್ಥದ ಕವಿತೆಯನ್ನು ವಿವಿಧ ಹೆಸರುಗಳ ಆದ್ಯ (ಪ್ರಾರಂಭದ) ಅಕ್ಷರದಿಂದ ರಚಿಸುತ್ತಿದ್ದರು.

೪. A ರಿಂದ  Z   ಅಕ್ಷರಗಳಿಂದ ರಚಿತ ಸಾಲು ಮತ್ತು ಶಬ್ದಗಳನ್ನು ಅವರು ಸಿದ್ಧಪಡಿಸಿದರು. ಯಾರ ಬಗ್ಗೆ ಕವಿತೆಯನ್ನು ರಚಿಸುವುದಿದ್ದರೆ, ಅವರ ಗುಣಧರ್ಮಕ್ಕೆ ಅನುಗುಣವಾಗಿ ಶಬ್ದಗಳನ್ನು ತೆಗೆದುಕೊಂಡು ಕವಿತೆಯನ್ನು ರಚಿಸುತ್ತಿದ್ದರು.

೫. ಅವರು ಸುಮಾರು ೨೦ ವರ್ಷಗಳ ವರೆಗೆ ಕವಿತೆಯನ್ನು ರಚಿಸಿದರು.

೬. ಒಂದೊಂದು ಹೆಸರಿನ ಅವರು ೮ ರಿಂದ ೩೦ ಕವಿತೆಗಳನ್ನು ಕೂಡ ರಚಿಸಿದ್ದಾರೆ.

೭. ಕವಿತೆಯಲ್ಲಿರುವ ಸಾಲು ೮ ರಿಂದ ೧೫ ಶಬ್ದಗಳಲ್ಲಿವೆ.

೮. ಕೆಲವು ಕವಿತೆಗಳಲ್ಲಿ ವ್ಯಕ್ತಿಯ ಹೆಸರು, ಇನ್ನು ಕೆಲವು ಕವಿತೆಗಳಲ್ಲಿ ವ್ಯಕ್ತಿಯ ಮತ್ತು ಅವರ ಪತ್ನಿಯ ಅಥವಾ ಪತಿಯ ಹೆಸರು ಇದೆ.

೯. ಸಂತರ ಬಗ್ಗೆ ಕವಿತೆ – ಪ.ಪೂ. ಭಕ್ತರಾಜ ಮಹಾರಾಜ, ಪ.ಪೂ. ಅಣ್ಣಾ ಕರಂದೀಕರ, ಪ.ಪೂ. ಕಾಣೆ ಮಹಾರಾಜ, ಪ.ಪೂ. ಕ್ಷೀರಸಾಗರ ಮಹಾರಾಜ, ಪೂ. ಮಲಂಗಶಹಾಬಾಬಾ, ಪೂ. ನರೇಶಬಾಬಾ ಮತ್ತು ಪೂ. ಭಗತಬಾಬಾ ಇವರುಗಳ ಬಗ್ಗೆಯೂ ಅವರು ಕವಿತೆಯನ್ನು ರಚಿಸಿದ್ದಾರೆ.

೧೦. ಯಾವುದಾದರೂ ಕವಿತೆ ಸಂತರ ವಿಷಯದಲ್ಲಿ ಇದ್ದರೆ, ಹಿಂದೂಗಳಿಗೆ ಕವಿತೆಯನ್ನು ಕೊಡುವಾಗ ‘ಸಂತ’, ಕ್ರಿಶ್ಚಿಯನ್ನರಿಗೆ ಕವಿತೆ ಕೊಡುವಾಗ ಅವರು ‘ಫಾದರ್’ ಅಥವಾ ‘ಬಿಶಪ್’ ಎಂದು ಉಲ್ಲೇಖಿಸುತ್ತಿದ್ದರು.

೧೧. ಕವಿತೆಯ ಮೂರು ವಹಿಗಳು (ನೋಟಬುಕ್) – ಪ್ರತಿಯೊಂದು ವಹಿಯಲ್ಲಿ (ನೋಟಬುಕ್‌ನಲ್ಲಿ) ಯಾರ ಹೆಸರಿನ ಕವಿತೆಯಿದೆ ಎಂದು ಅನುಕ್ರಮಣಿಕೆ ಇದೆ. ಅದೇ ಹೆಸರಿನ ಕವಿತೆ ಮತ್ತೊಂದು ವಹಿಯಲ್ಲಿದ್ದರೆ ಅದರ ಸಂದರ್ಭವನ್ನು ಎರಡೂ ವಹಿಗಳಲ್ಲಿ ಕೊಟ್ಟಿದ್ದಾರೆ.

೧೨. ದಾದಾರವರು ಒಂದೇ ವಿಷಯವನ್ನು ವಿವಿಧ ಶಬ್ದಗಳಲ್ಲಿ ಬರೆಯುತ್ತಿದ್ದರು, ಉದಾ. ‘ಬ್ಯಾಂಕಿನ ಚೆಕ್’, ‘ನಾಮ’

೧೩. ದಾದಾ ಮೊದಲು ರಾಮಮೋಹನ ಆಂಗ್ಲ ಶಾಲೆಯಲ್ಲಿ ಮತ್ತು ಬಳಿಕ ಆರ್ಯನ ಎಜ್ಯುಕೇಶನ ಸೊಸೈಟಿಯಲ್ಲಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರು ಎರಡೂ ಶಾಲೆಯ ಮುಖ್ಯೋಪಾಧ್ಯಾಯರ ಬಗ್ಗೆ ಅವರು ಸೇವಾನಿವೃತ್ತರಾದ ಬಳಿಕ ಆಂಗ್ಲ ಭಾಷೆಯಲ್ಲಿ ಕವಿತೆಯನ್ನು ರಚಿಸಿದ್ದರು.

೧೪. ಹೆಸರಿನ ಆದ್ಯ (ಪ್ರಥಮ) ಅಕ್ಷರದಿಂದ ರಚಿಸಿದ ಲೇಖನಗಳಿಂದ ನೀಡಿರುವ ಸಂದೇಶದಿಂದ ವ್ಯಕ್ತಿಯನ್ನು ಅಂತರ್ಮುಖಗೊಳಿಸುವುದು : ದಾದಾರವರು ವ್ಯಕ್ತಿಯ ಹೆಸರಿನ ಅಕ್ಷರಗಳಿಗೆ ಅನುಗುಣವಾಗಿ ಕವಿತೆಯನ್ನು ರಚಿಸಿದ್ದಾರೆ. ಈ ಕವಿತೆ ಮರಾಠಿ ಮತ್ತು ಆಂಗ್ಲ ಈ ಎರಡೂ ಭಾಷೆಯಲ್ಲಿಯೂ ಇದೆ. ಕೆಲವು ಸಲ ಅವರು ಕವಿತೆಯಲ್ಲಿ ಹೆಸರಿನ ಆದಿ ಅಕ್ಷರಗಳು ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಬರುವಂತೆಯೂ ವೈಶಿಷ್ಟ್ಯಪೂರ್ಣವಾಗಿ ರಚಿಸಿದ್ದಾರೆ. ಈ ಕವಿತೆಗಳು ವೈಶಿಷ್ಟ್ಯವೆಂದರೆ ಇದು ಕೇವಲ ಓದಲು ಮಾತ್ರ ಸುಖದಾಯಕವಾಗಿರದೇ, ಅದರಲ್ಲಿ ನೀಡಿರುವ ಸಂದೇಶ ವ್ಯಕ್ತಿಯನ್ನು ಅಂತರ್ಮುಖಗೊಳಿಸುವಂತಿದೆ. ಪ್ರತಿಯೊಂದು ಕವಿತೆಯಲ್ಲಿ ಜೀವನ, ಸಾಧನೆ ಇತ್ಯಾದಿ ಸಂದರ್ಭದಲ್ಲಿ ಮಾರ್ಗದರ್ಶನವಿದೆ.

 (ಮುಕ್ತಾಯ)

– (ಪರಾತ್ಪರ ಗುರು) ಡಾ. ಜಯಂತ ಆಠವಲೆ (೧೧.೯.೨೦೨೧)