ಕುಟುಂಬದವರಿಂದಲೂ ಸಾಧನೆಯಲ್ಲಿ ಅದ್ವಿತೀಯ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುವ ಏಕಮೇವಾದ್ವಿತೀಯ ಪ.ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

ಎಲ್ಲ ಓದುಗರಿಗೆ, ತಮ್ಮ ಮಕ್ಕಳಲ್ಲಿ ಸುಸಂಸ್ಕಾರಗಳನ್ನು ಹೇಗೆ ಮಾಡಬೇಕು ? ಎಂಬುದನ್ನು ತಿಳಿದುಕೊಳ್ಳಲು ಉಪಯುಕ್ತ ಲೇಖನಮಾಲೆ !

ಪ.ಪೂ. ದಾದಾ ಆಠವಲೆ

‘ಸನಾತನ ಪ್ರಭಾತ’ದಲ್ಲಿ ಸಂತರ ಸಾಧನೆಯ ಪ್ರವಾಸ, ಅವರ ಬೋಧನೆ, ಅವರ ಸಂದರ್ಭದ ಲೇಖನಗಳನ್ನು ನಿಯಮಿತವಾಗಿ ಪ್ರಕಟಿಸಲಾಗುತ್ತದೆ. ಸಂಚಿಕೆ ೨೩/೦೪ ರಿಂದ ಪ್ರಾರಂಭವಾಗಿರುವ ಈ ಲೇಖನಮಾಲೆಯಿಂದ ‘ಸನಾತನ ಪ್ರಭಾತದ ಸಂಸ್ಥಾಪಕ-ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರ ತಂದೆ ಪ.ಪೂ. ಬಾಳಾಜಿ (ಪ.ಪೂ. ದಾದಾ) ಆಠವಲೆಯವರ ಸಂದರ್ಭದ ಲೇಖನವನ್ನು ಪ್ರಕಟಿಸುತ್ತಿದ್ದೇವೆ.

೨೩/೦೭ ರಂದು ನಾವು ಪ.ಪೂ. ಬಾಳಾಜಿ (ಪ.ಪೂ. ದಾದಾ) ಆಠವಲೆಯವರ ಮತ್ತು ಅವರ ಸಂತ ಕುಟುಂಬದವರ ಛಾಯಾಚಿತ್ರಗಳಿಂದ ಬಹಳಷ್ಟುಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದನ್ನು ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದ ಮೂಲಕ ಮಾಡಿದ ಪರೀಕ್ಷಣೆಯನ್ನು ನೋಡಿದೆವು. ಇಂದು ಅದರ ಮುಂದಿನ ಭಾಗವನ್ನು ನೊಡೋಣ.       

 (ಭಾಗ ೪)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/52442.html
(ಪರಾತ್ಪರ ಗುರು) ಡಾ. ಆಠವಲೆ

೪. ಪ.ಪೂ. ದಾದಾರವರ ಲೇಖನಗಳ ಸಂದರ್ಭದ ವೈಶಿಷ್ಟ್ಯಗಳು

೪ ಅ. ‘ಯಾವುದಾದರೊಂದು ಪುಸ್ತಕ ಅಥವಾ ಗ್ರಂಥವನ್ನು ಓದುವಾಗ ಅವರಿಗೆ ಇಷ್ಟವಾದ, ಹೊಸತನ್ನು ಕಲಿಸುವಂತಹ ಲೇಖನಗಳನ್ನು ಅವರು ತಮ್ಮ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು, ನಂತರ ಅವುಗಳನ್ನು ಆಗಾಗ ಓದುತ್ತಿದ್ದರು.

೪ ಆ. ಡಾ. ಜಯಂತ ಆಠವಲೆಯವರು ತಮ್ಮ ಸೋದರಮಾವನಿಗೆ (ತಾಯಿಯ ಸಹೋದರ) ಬರೆದ ವೈಶಿಷ್ಟ್ಯಪೂರ್ಣ ಪತ್ರದ ಪ್ರತಿಯನ್ನು ಪ.ಪೂ. ದಾದಾರವರು ತಮ್ಮ ಸಂಗ್ರಹದಲ್ಲಿ ಇಟ್ಟುಕೊಂಡಿರುವುದು

೪ ಆ ೧. ೧೯೭೫ ನೇ ವರ್ಷದಲ್ಲಿನ (೩೩ ವರ್ಷ) ವಿಚಾರ : ಇಂದು ದಾದಾರವರ ಕಾಗದಪತ್ರಗಳನ್ನು ನೋಡುತ್ತಿರುವಾಗ ನನಗೆ ಮುಂದಿನ ಪತ್ರ ಸಿಕ್ಕಿತು.

– (ಪರಾತ್ಪರ ಗುರು) ಡಾ. ಜಯಂತ ಆಠವಲೆ

೪ ಇ. ಪ.ಪೂ. ದಾದಾರವರು ನಿತ್ಯದ ಕೃತಿಗಳನ್ನು ಭಾವದ ಸ್ತರದಲ್ಲಿ ಮಾಡಿ ಈಶ್ವರನ ಕೃಪೆಯನ್ನು ಅನುಭವಿಸುವ ಮಾರ್ಗವನ್ನು ತೋರಿಸುವುದು : ‘ಪ.ಪೂ. ದಾದಾರವರು ಭಕ್ತಿಯೋಗದ ಮೇಲಾಧಾರಿತ ಅನೇಕ ಸುವಚನಗಳನ್ನು ಮತ್ತು ಅಂಶಗಳನ್ನು ಬರೆದಿದ್ದಾರೆ. ಅವುಗಳಿಂದ ಅವರು ದಿನನಿತ್ಯದ ಕೃತಿಗಳನ್ನು ಭಾವದ ಸ್ತರದಲ್ಲಿ ಮಾಡಿ ಈಶ್ವರನ ಕೃಪೆಯನ್ನು ಅನುಭವಿಸುವ ಮಾರ್ಗವನ್ನು ತೋರಿಸಿದ್ದಾರೆ. ಸನಾತನದ ಗ್ರಂಥಗಳನ್ನು ಅಧ್ಯಾತ್ಮಶಾಸ್ತ್ರದ ಮೇಲೆ ವೈಜ್ಞಾನಿಕಶೈಲಿಯಲ್ಲಿ ಮತ್ತು ಆಧುನಿಕ ಭಾಷೆಯಲ್ಲಿ ಬರೆಯಲಾಗಿದೆ. ಅದರಲ್ಲಿದ್ದ ಭಕ್ತಿಯೋಗದ ನ್ಯೂನತೆಯನ್ನೂ ಪ.ಪೂ. ದಾದಾರವರು ಬರೆದಿರುವ ಲೇಖನಗಳಿಂದ ಇಲ್ಲವಾಗಿದೆ. – ಸೌ. ಮಂಜಿರಿ ಆಗವೇಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೫.೭.೨೦೧೩) (ಖಂಡ ೩)

೪ ಈ. ಪ.ಪೂ. ದಾದಾರವರ ಲೇಖನಗಳಲ್ಲಿ ಸಾಮಾನ್ಯ ವ್ಯಕ್ತಿಯನ್ನೂ ಸಾಧಕನನ್ನಾಗಿ ಮಾಡುವ ಕ್ಷಮತೆಯಿರುವುದು : ‘ಪ.ಪೂ. ದಾದಾರವರ ಆಂಗ್ಲ ಲೇಖನಗಳ ಭಾಷಾಂತರ ಮಾಡುವ ಸೇವೆಯು ನನಗೆ ಸಿಕ್ಕಿತು. ಅವರ ಆಂಗ್ಲ ಅಥವಾ ಮರಾಠಿ ಲೇಖನಗಳಲ್ಲಿ ಸಾತ್ತ್ವಿಕತೆಯ ಅರಿವಾಗುತ್ತದೆ. ಜನಸಾಮಾನ್ಯರಿಗೆ ತಿಳಿಯಬೇಕೆಂದು ಅವರು ಸುಲಭ ಭಾಷಾಶೈಲಿಯನ್ನು ಉಪಯೋಗಿಸಿದ್ದಾರೆ. ‘ದಿನನಿತ್ಯದ ಜೀವನದಲ್ಲಿ ನಡೆಯುವ ಚಿಕ್ಕ-ಪುಟ್ಟ ವಿಷಯಗಳಿಂದ ಈಶ್ವರನನ್ನು ಹೇಗೆ ಸ್ಮರಿಸಬೇಕು ?’, ಎನ್ನುವುದನ್ನು ಅವರು ತಮ್ಮ ಲೇಖನಗಳಲ್ಲಿ ನಿಖರವಾಗಿ ತೋರಿಸಿಕೊಟ್ಟಿದ್ದಾರೆ.  – ಆಧುನಿಕ ಪಶುವೈದ್ಯ ಅಜಯ ಜೋಶಿ (ಅನುವಾದಕರು), ಸನಾತನ ಆಶ್ರಮ, ಗೋವಾ (೨೨.೧.೨೦೧೪) (ಖಂಡ ೩)

೪ ಉ. ‘ಪ್ರತಿಯೊಂದು ವಿಷಯವನ್ನು ಆಧ್ಯಾತ್ಮೀಕರಣ ಮಾಡುವುದು’, ಪರಾತ್ಪರ ಗುರು ಡಾಕ್ಟರರ ವಿಷಯದ ಬೀಜವು ಪ.ಪೂ. ದಾದಾರವರ ಲೇಖನದಲ್ಲಿದೆ ಎಂದು ಅರಿವಾಗುವುದು : ‘ಪ.ಪೂ. ದಾದಾರವರು ಬರೆದಿರುವ ‘ಸುಗಮ ಅಧ್ಯಾತ್ಮಶಾಸ್ತ್ರ’, ಗ್ರಂಥವು ಅತ್ಯಂತ ಸರಳ ಮತ್ತು ರಸಭರಿತ ಭಾಷೆಯಲ್ಲಿದ್ದು ಜನಸಾಮಾನ್ಯರ ವಿಚಾರವನ್ನು ಮಾಡಿ ಬರೆಯಲಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿತು. ‘ಜೀವನದ ಪ್ರತಿಯೊಂದು ವಿಷಯವು ಅಧ್ಯಾತ್ಮಶಾಸ್ತ್ರಕ್ಕೆ ಸಂಬಂಧಿಸಿದೆ. ಈ ಶಾಸ್ತ್ರವನ್ನು ಕಲಿಯುವುದು ಮತ್ತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಜೀವನದ ನಿಜವಾದ ತಿರುಳಾಗಿದೆ’, ಇದನ್ನು ಅವರು ಈ ಗ್ರಂಥದಲ್ಲಿ ತುಂಬಾ ಸುಂದರವಾಗಿ ಬರೆದಿದ್ದಾರೆ. ಪರಾತ್ಪರ ಗುರು ಡಾಕ್ಟರರ ‘ಪ್ರತಿಯೊಂದು ವಿಷಯವನ್ನು ಆಧ್ಯಾತ್ಮೀಕರಣ ಮಾಡುವುದು’, ಎಂಬ ಅಂಶದ ಬೀಜವು ಪ.ಪೂ. ದಾದಾರವರ ಲೇಖನಗಳಲ್ಲಿರುವುದು ಕಂಡು ಬಂದಿತು ಮತ್ತು ಪ.ಪೂ. ದಾದಾರವರ ಬಗ್ಗೆ ಕೃತಜ್ಞತಾಭಾವ ಜಾಗೃತವಾಯಿತು.  – ಶ್ರೀ. ರೋಹಿತ ಸಾಳುಂಕೆ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೮.೮.೨೦೧೪) (೧ ರಿಂದ ೩) (ಖಂಡ ೩)

೪ ಊ. ಲೇಖನದಲ್ಲಿನ ವಿಷಯಗಳು

೪ ಊ ೧.‘ಪ.ಪೂ. ದಾದಾರವರ ಕಥೆ, ಕವಿತೆ, ಲೇಖನ ಇತ್ಯಾದಿ ಎಲ್ಲ ಲೇಖನಗಳ ಕೇಂದ್ರಬಿಂದು ‘ಅಧ್ಯಾತ್ಮ’ವೇ ಆಗಿದೆ.

೪ ಊ ೨. ತಾತ್ತ್ವಿಕ ಮಾಹಿತಿಗಿಂತ ಪ್ರತ್ಯಕ್ಷ ಕೃತಿ ಮಾಡುವ ಸಂದರ್ಭದಲ್ಲಿ ಲೇಖನ : ಲೇಖನಗಳಲ್ಲಿ ತಾತ್ತ್ವಿಕ ಮಾಹಿತಿಗಿಂತ ಪ್ರತ್ಯಕ್ಷ ಕೃತಿ ಮಾಡುವ ಬಗ್ಗೆ ಹೆಚ್ಚು ಮಾಹಿತಿಯಿದೆ; ಕಾರಣ ಅಧ್ಯಾತ್ಮವು ಕೇವಲ ಓದುವುದಲ್ಲ, ಅದು ಕೃತಿಯ ವಿಷಯವಾಗಿದೆ.

೪ ಎ. ಪ.ಪೂ. ದಾದಾರವರು ಲೇಖನಗಳ ಬಗ್ಗೆ ಹೇಳಿದ ವಿಚಾರಗಳು

‘ನಾನು ಈಶ್ವರನ ಜ್ಞಾನಭಂಡಾರವನ್ನು ಒಡೆದಿದ್ದೇನೆ, ಈ ಎಲ್ಲ ಜ್ಞಾನವು ಅವನದ್ದೇ ಆಗಿದೆ. ನಾನು ಕೇವಲ ಆ ಜ್ಞಾನವನ್ನು ಹೊರುವ(ಕೂಲಿ)ವವನಾಗಿದ್ದೇನೆ’. – ತುಕಾರಾಮ ಗಾಥಾ

ಸಂತ ತುಕಾರಾಮ ಮಹಾರಾಜರ ಈ ವಚನದಂತೆ ಲೇಖನಕ್ಕೆ ಮತ್ತು ನನಗೆ ಇಷ್ಟು ಮಾತ್ರ ಸಂಬಂಧ.  ಈ ಭಂಡಾರ ಸಂತರದ್ದೇ ಆಗಿದೆ. ನಾನು ನಿಮಿತ್ತ ಮಾತ್ರ. ಮಾತನಾಡಿಸಿಕೊಳ್ಳುವ (ಬರೆಸಿಕೊಳ್ಳುವ) ಒಡೆಯ ಬೇರೇಯೇ ಆಗಿದ್ದಾನೆ ! – (ಪ.ಪೂ.) ಬಾಳಾಜಿ ಆಠವಲೆ (೧೯೯೦) (ಖಂಡ ೧)

(ಪರಾತ್ಪರ ಗುರು) ಡಾ. ಜಯಂತ ಆಠವಲೆ

ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರಿಗೆ ದೊರೆತ ಪಿತ್ರಾರ್ಜಿತ ಆಸ್ತಿ ಎಂದರೆ ಪ.ಪೂ. ದಾದಾರವರ ಲೇಖನಗಳು !

ಲೇಖನಗಳನ್ನು ಬರೆಯುತ್ತಿರುವ ಪ.ಪೂ.ಬಾಳಾಜಿ(ದಾದಾ) ಆಠವಲೆ

೧. ಸಂಸ್ಕಾರ

ಬಹಳಷ್ಟು ಜನರಿಗೆ ‘ಪಿತ್ರಾರ್ಜಿತ ಆಸ್ತಿ’ ಎಂದರೆ ಮನೆ, ಹಣ ಇತ್ಯಾದಿ ಅನಿಸುತ್ತದೆ. ನಮಗೆ ಐದೂ ಜನ ಸಹೋದರರಿಗೆ ಪಿತ್ರಾರ್ಜಿತ ಆಸ್ತಿ ಎಂದರೆ ‘ತಾಯಿ-ತಂದೆ ಮಾಡಿದ ಸಂಸ್ಕಾರಗಳು ಮತ್ತು ಬೆಳೆಸಿದ ಸಾಧನೆಯ ಆಸಕ್ತಿ’ ಎನ್ನಬಹುದು. ವ್ಯಾವಹಾರಿಕ ವಿಷಯಕ್ಕಿಂತ ಈ ಆಸ್ತಿ ಅಮೂಲ್ಯವಾಗಿದೆ.

೨. ಒಳ್ಳೆಯ ಲೇಖನಗಳ ಆಯ್ದುಕೊಳ್ಳುವುದು ಮತ್ತು ಗ್ರಂಥಲೇಖನ

ತಂದೆಯವರು ಸೇವಾನಿವೃತ್ತರಾದ ಬಳಿಕ ಕೊನೆಯವರೆಗೆ ಅಧ್ಯಾತ್ಮದ ಬಗೆಗಿನ ಲೇಖನಗಳನ್ನು ಸ್ವಯಂಸ್ಫೂರ್ತಿಯಿಂದ ಬರೆದರು ಅಥವಾ ಅನೇಕ ಗ್ರಂಥಗಳಿಂದ ಪ್ರಮುಖ ಅಂಶಗಳನ್ನು ಒಂದೆಡೆ ಬರೆದಿಟ್ಟರು. ದಾದಾರಿಗೆ ಅಧ್ಯಾತ್ಮದಲ್ಲಿ ಆಸಕ್ತಿಯಿತ್ತು, ಆದುದರಿಂದ ಅವರು ಅನೇಕ ಗ್ರಂಥಗಳನ್ನು ಓದುತ್ತಿದ್ದರು. ಅವರ ಸಮಯದಲ್ಲಿ ಗಣಕಯಂತ್ರಗಳಿರಲಿಲ್ಲ. ಹಾಗಾಗಿ ಅವರು ಮಹತ್ವದ ಲೇಖನಗಳನ್ನು ಪುಸ್ತಕಗಳಲ್ಲಿ ಬರೆದಿಡುತ್ತಿದ್ದರು. ಅವರ ಇಂತಹ ಬಹಳಷ್ಟು ಪುಸ್ತಕಗಳು ಇಂದಿಗೂ ನನಗೆ ಗ್ರಂಥಲೇಖನ ಮಾಡುವಾಗ ಸಹಾಯವಾಗುತ್ತವೆ. ಇಷ್ಟೇ ಅಲ್ಲ, ಗ್ರಂಥಗಳನ್ನು ಮುದ್ರಿಸಲು ಕೊಡುವಾಗ ಅನುಕ್ರಮಣಿಕೆಯನ್ನು ಮಾಡಿ ಲೇಖನಗಳನ್ನು ಜೋಡಿಸುವುದಿರುತ್ತದೆ. ಅದರಂತೆ ಬಹುತೇಕ ಎಲ್ಲ ಗ್ರಂಥಗಳ ಹಸ್ತಲಿಖಿತಗಳನ್ನು ಅವರು ತಯಾರಿಸಿದ್ದರು. ಆ ಹಸ್ತಲಿಖಿತಗಳು ಮರಾಠಿ ಮತ್ತು ಆಂಗ್ಲ ಹೀಗೆ ಎರಡೂ ಭಾಷೆಗಳಲ್ಲಿವೆ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ನನ್ನ ಸಂದರ್ಭದಲ್ಲಿ ಏನು ಹೇಳಬಹುದೆಂದರೆ, ಎರಡು ಪೆಟ್ಟಿಗೆಗಳು ತುಂಬುವಷ್ಟು, ಹಸ್ತಲಿಖಿತಗಳನ್ನು ಅವರು ನನಗೆ ನೀಡಿದ್ದರಿಂದ ನನಗೆ ಗ್ರಂಥಗಳನ್ನು ಬರೆಯಲು ಸಹಾಯವಾಯಿತು.

– (ಪರಾತ್ಪರ ಗುರು) ಡಾ. ಜಯಂತ ಆಠವಲೆ (ಖಂಡ ೧)