ನಿಯತಕಾಲಿಕೆಗಳ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !
ರಾಷ್ಟ್ರರಕ್ಷಣೆ ಮತ್ತು ಧರ್ಮ ಜಾಗೃತಿಯು ‘ದೈನಿಕ ‘ಸನಾತನ ಪ್ರಭಾತ’ ದ ಧ್ಯೇಯವಾಗಿದೆ. ದೈನಿಕದಲ್ಲಿ ರಾಷ್ಟ್ರ ಮತ್ತು ಧರ್ಮದ ಬಗೆಗಿನ ಮಾರ್ಗದರ್ಶಕ ಲೇಖನಗಳನ್ನು ಪ್ರಕಟಿಸಲಾಗುತ್ತದೆ. ಹಾಗೆಯೇ ಹಿಂದೂ ಧರ್ಮದಲ್ಲಿನ ಪ್ರಮುಖ ಹಬ್ಬ ಮತ್ತು ಉತ್ಸವಗಳ ಹಿಂದಿನ ಅಧ್ಯಾತ್ಮಶಾಸ್ತ್ರ, ಹಾಗೆಯೇ ಅವುಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ. ದೈನಿಕದ ಮಾಧ್ಯಮದಿಂದ ಸಾರ್ವಜನಿಕ ಉತ್ಸವಗಳಲ್ಲಿ ತಪ್ಪು ಆಚರಣೆಗಳ ವಿರುದ್ಧ ಜನಜಾಗೃತಿಯನ್ನೂ ಮಾಡಲಾಗುತ್ತದೆ. ಇದರಿಂದ ಸಮಾಜಕ್ಕೆ ಧರ್ಮಶಿಕ್ಷಣ ದೊರಕಿ ಸಮಾಜ ಧರ್ಮಾಚರಣಿಯಾಗುತ್ತದೆ. ‘ಸಮಾಜಕ್ಕೆ ಏನು ಇಷ್ಟವಾಗುತ್ತದೆ’ ಎಂಬುದಕ್ಕಿಂತ ಸಮಾಜಕ್ಕೆ ಏನು ಆವಶ್ಯಕವಾಗಿದೆ’, ಎಂಬುದರ ವಿಚಾರವನ್ನು ಮಾಡಲಾಗುತ್ತದೆ. ದೇಶ-ವಿದೇಶಗಳಲ್ಲಿನ ಮಹತ್ವದ ಘಟನೆಗಳ ವಾರ್ತೆಗಳನ್ನು ನೀಡುವಾಗ ಆ ಘಟನೆಗಳ ಕಡೆಗೆ ನೋಡುವ ಯೋಗ್ಯ ದೃಷ್ಟಿಕೋನವನ್ನೂ ದೈನಿಕದಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ಸಮಾಜಕ್ಕೆ ಯಾವುದು ಯೋಗ್ಯ ಮತ್ತು ಯಾವುದು ಅಯೋಗ್ಯ, ಎಂಬುದು ಗಮನಕ್ಕೆ ಬರುತ್ತದೆ.
ದೈನಿಕ ‘ಸನಾತನ ಪ್ರಭಾತ’ವು ಭಾಷಾಶುದ್ಧಿಗೆ ಮಹತ್ವವನ್ನು ನೀಡುತ್ತದೆ; ಏಕೆಂದರೆ ಭಾಷೆ ಎಷ್ಟು ಶುದ್ಧವೋ, ಅಷ್ಟು ‘ಸನಾತನ ಪ್ರಭಾತ’ದಿಂದ ಉತ್ತಮ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ದೈನಿಕದಲ್ಲಿ ಸಂಸ್ಕೃತ ಸುಭಾಷಿತಗಳು, ಶ್ಲೋಕಗಳು, ಸಂತರ ಸುವಚನಗಳನ್ನು ಅರ್ಥಸಹಿತ ಪ್ರಕಟಿಸಲಾಗುತ್ತದೆ. ಇದರಿಂದ ದೈನಿಕದ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ದೈನಿಕದ ಸಾತ್ತ್ವಿಕತೆಯ ಬಗ್ಗೆ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಬಹಳಷ್ಟು ಸಂಶೋಧನೆಗಳನ್ನು ಮಾಡಲಾಗಿದೆ. ಈ ಸಂಶೋಧನೆಗಳನ್ನು ಆಗಾಗ ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುತ್ತದೆ.
ದೈನಿಕದಲ್ಲಿನ ವಾರ್ತೆಗಳನ್ನು (ವರದಿಗಳನ್ನು) ಬೆರಳಚ್ಚು, ಸಂಕಲನ ಮತ್ತು ಕರಡಚ್ಚು ತಿದ್ದುಪಡಿ (proof checking), ಜಾಹೀರಾತುಗಳ ಸಂರಚನೆ ಇತ್ಯಾದಿ ಎಲ್ಲ ಸೇವೆಗಳನ್ನು ಸಾಧಕರು ತಮ್ಮ ‘ಸಾಧನೆ’ ಎಂದು ಮಾಡುತ್ತಾರೆ. ‘ದೈನಿಕ’ಕ್ಕೆ ಸಂಬಂಧಿಸಿದ ಸೇವೆ ಮಾಡುವಾಗ ಸಾಧಕರಲ್ಲಿನ ಸ್ವಭಾವದೋಷಗಳು ಮತ್ತು ಅಹಂಗಳಿಂದಾಗಿ ಅವರಿಂದಾಗುವ ಚಿಕ್ಕ-ದೊಡ್ಡ ತಪ್ಪುಗಳಿಂದ ದೈನಿಕ ‘ಸನಾತನ ಪ್ರಭಾತ’ದ ಸಾತ್ತ್ವಿಕತೆಯ ಮೇಲೆ ಯಾವ ಪರಿಣಾಮವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಯುನಿವರ್ಸಲ್ ಔರಾ ಸ್ಕ್ಯಾನರ್(ಯು.ಎ.ಎಸ್.)’ ಎಂಬ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಇತರ ಅಂಶಗಳನ್ನು ಮುಂದೆ ಕೊಡಲಾಗಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
ದೈನಿಕ ‘ಸನಾತನ ಪ್ರಭಾತ’ದ ೨೪.೫.೨೦೨೧ ರ ಸಂಚಿಕೆಯಲ್ಲಿ ಅತ್ಯಧಿಕ ತಪ್ಪುಗಳು ಆಗಿದ್ದವು. ಅದರ ತುಲನೆಗಾಗಿ ೨೪.೫.೨೦೨೧ ಈ ದಿನದ ಸಂಚಿಕೆಯ ಮತ್ತು ಇತರ ದಿನಗಳ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಗಳ ‘ಯು.ಎ.ಎಸ್.’ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು.
೧ ಅ. ಅತ್ಯಧಿಕ ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಯಲ್ಲಿ ಬಹಳಷ್ಟು ನಕಾರಾತ್ಮಕ ಊರ್ಜೆ ಕಂಡು ಬರುವುದು : ಇತರ ದಿನಗಳ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಅವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು. ತದ್ವಿರುದ್ಧ ಅತ್ಯಧಿಕ ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಮತ್ತು ಅಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಇದು ಮುಂದೆ ನೀಡಲಾದ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.
೨. ನಿಷ್ಕರ್ಷ
ಇತರ ದಿನಗಳ ದೈನಿಕ ‘ಸನಾತನ ಪ್ರಭಾತ’ ಸಂಚಿಕೆಗಳಿಗಿಂತ ಅತ್ಯಧಿಕ ತಪ್ಪುಗಳಿರುವ ದೈನಿಕದಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಮಾಣವು ಮೂರು ಪಟ್ಟಿಗಿಂತ ಹೆಚ್ಚು ಕಡಿಮೆಯಿದೆ. ಸಾಧಕರಿಂದಾಗುವ ತಪ್ಪುಗಳಿಂದಾಗಿ ದೈನಿಕ ‘ಸನಾತನ ಪ್ರಭಾತ’ ಸಂಚಿಕೆಯಲ್ಲಿ ಬಹಳಷ್ಟು ನಕಾರಾತ್ಮಕ ಸ್ಪಂದನಗಳು ನಿರ್ಮಾಣವಾಗಿ ದೈನಿಕದ ಸಾತ್ತ್ವಿಕತೆ ಬಹಳಷ್ಟು ಕಡಿಮೆಯಾಯಿತು. ‘ಸಾಧಕರಿಂದಾಗುವ ತಪ್ಪುಗಳ ದೈನಿಕ ‘ಸನಾತನ ಪ್ರಭಾತ’ದ ಸಾತ್ತ್ವಿಕತೆಯ ಮೇಲೆ ಸೂಕ್ಷ್ಮದಿಂದ ಎಷ್ಟೊಂದು ಪರಿಣಾಮವಾಗುತ್ತದೆ’, ಎಂಬುದು ಇದರಿಂದ ತಿಳಿಯುತ್ತದೆ.
೩. ಪರಾತ್ಪರ ಗುರು ಡಾ.ಆಠವಲೆಯವರು ದೈನಿಕದಲ್ಲಿನ ತಪ್ಪುಗಳ ಅಧ್ಯಯನ ಮಾಡುವುದರ ಹಿಂದಿನ ಉದ್ದೇಶ
೩. ೧. ದೈನಿಕ ‘ಸನಾತನ ಪ್ರಭಾತ’ದಲ್ಲಿ ‘ತಪ್ಪು ವಾರ್ತೆಗಳು ಪ್ರಕಟವಾದವು’, ಎಂಬಂತಹ ಗಂಭೀರ ತಪ್ಪುಗಳಾಗುವುದಿಲ್ಲ, ವ್ಯಾಕರಣ ಮತ್ತು ವಾಕ್ಯರಚನೆಗಳಂತಹ ತಪ್ಪುಗಳಾಗುತ್ತವೆ. ಈ ತಪ್ಪುಗಳಿಂದ ವಾಚಕರಿಗೆ ಯಾವುದೇ ಹಾನಿಯಾಗುವುದಿಲ್ಲ. ಇದರಿಂದ ಕಳೆದ ೧೦-೧೫ ವರ್ಷಗಳಿಂದ ದೈನಿಕ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರ ಪ್ರಗತಿಯು ಬೇಗನೆ ಆಗುವುದಿಲ್ಲ. ಅವರ ಜೀವನದ ಸಾಧನೆಯ ಸಮಯ ಈ ತಪ್ಪುಗಳಿಂದಾಗಿ ವ್ಯರ್ಥವಾಗಬಾರದೆಂದು, ನಾನು ಈ ತಪ್ಪುಗಳ ಅಧ್ಯಯನವನ್ನು ಮಾಡುತ್ತಿದ್ದೇನೆ. – ಪರಾತ್ಪರ ಗುರು ಡಾ.ಆಠವಲೆ
೪. ಸಾಧಕರೇ, ನಮ್ಮ ‘ಸೇವೆಯಲ್ಲಿನ ಚಿಕ್ಕ-ದೊಡ್ಡ ತಪ್ಪುಗಳಿಂದ ನಮ್ಮ ಸಾಧನೆಯಲ್ಲಿ ಹಾನಿಯಂತು ಆಗುತ್ತದೆ; ಆದರೆ ಅದರೊಂದಿಗೆ ದೈನಿಕ ‘ಸನಾತನ ಪ್ರಭಾತ’ದ ಸಾತ್ತ್ವಿಕತೆಯೂ ಕಡಿಮೆಯಾಗುತ್ತದೆ’, ಎಂಬುದನ್ನು ಗಮನದಲ್ಲಿಟ್ಟು ಪರಿಪೂರ್ಣ ಸೇವೆ ಮಾಡಿರಿ !
ಸಾಧಕರಲ್ಲಿನ ಸ್ವಭಾವದೋಷಗಳು ಮತ್ತು ಅಹಂ (ನನ್ನತನದ ಅರಿವು) ಇವುಗಳಿಂದಾಗಿ ಅವರಿಂದ ಸೇವೆಯಲ್ಲಿ ಚಿಕ್ಕ-ದೊಡ್ಡ ತಪ್ಪುಗಳಾಗುತ್ತವೆ. ಅನೇಕ ಸಾಧಕರ ಒಲವು ಸಾಧನೆಗಿಂತ ಕಾರ್ಯದ ಕಡೆಗೆ ಹೆಚ್ಚಿರುತ್ತದೆ, ಆದುದರಿಂದ ಅವರಿಗೆ ಹೇಗಾದರೂ ಮಾಡಿ ಸೇವೆಯನ್ನು ಮಾಡಿ ಮುಗಿಸುವುದಿರುತ್ತದೆ. ‘ಸೇವೆಯ ಮಾಧ್ಯಮದಿಂದ ನನಗೆ ನನ್ನಲ್ಲಿನ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆ ಮಾಡಿ ಈಶ್ವರೀ ಚೈತನ್ಯವನ್ನು ಗ್ರಹಿಸುವುದಿದೆ’, ಎಂಬುದನ್ನು ಅವರು ಮರೆಯುತ್ತಾರೆ. ಸೇವೆಯಲ್ಲಾಗುವ ತಪ್ಪುಗಳ ಅಧ್ಯಯನ ಮಾಡುವುದು, ಆ ತಪ್ಪುಗಳು ಪುನಃ ಪುನಃ ಆಗದಂತೆ ಉಪಾಯಯೋಜನೆಗಳನ್ನು ಮಾಡುವುದು, ತಪ್ಪುಗಳಿಗಾಗಿ ಯೋಗ್ಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದು (ತಪ್ಪುಗಳಿಂದ ಸಾಧಕರ ಸಾಧನೆಯು ಖರ್ಚಾಗುತ್ತದೆ; ಯೋಗ್ಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದರಿಂದ ತಪ್ಪುಗಳ ಕೆಲವು ಪ್ರಮಾಣದಲ್ಲಿಯಾದರೂ ಪರಿಮಾರ್ಜನೆ ಆಗುತ್ತದೆ ಮತ್ತು ಸಾಧಕರ ಸಾಧನೆಯು ಉಳಿಯುತ್ತದೆ. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಯಾವಾಗಲೂ ಯೋಗ್ಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಲು ಹೇಳುತ್ತಾರೆ.) ಇತ್ಯಾದಿ ವಿಷಯಗಳ ಸಂಸ್ಕಾರವನ್ನು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಮೇಲೆ ಮಾಡಿದ್ದಾರೆ. ಇಂದಿಗೂ ಅವರು ಇದರ ಅರಿವನ್ನು ಸಾಧಕರಿಗೆ ಸತತವಾಗಿ ಮಾಡಿಕೊಡುತ್ತಾರೆ.
ಸಾಧಕರು ತಮ್ಮಿಂದಾಗುವ ತಪ್ಪುಗಳ ಅಧ್ಯಯನವನ್ನು ಆಳವಾಗಿ ಮಾಡದೇ ತಾತ್ಕಾಲಿಕ ಉಪಾಯ ಯೋಜನೆಗಳನ್ನು ಮಾಡುವುದಕ್ಕಿಂತ ‘ಈ ತಪ್ಪುಗಳಿಂದ ನನ್ನ ಸಾಧನೆಯ ಮತ್ತು ಗುರುಕಾರ್ಯದ ಎಷ್ಟು ಹಾನಿಯಾಗುತ್ತಿದೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಂತರ್ಮುಖರಾಗಿ ತಮ್ಮಿಂದಾಗುವ ತಪ್ಪುಗಳ ಆಳವಾದ ಚಿಂತನೆಯನ್ನು ಮಾಡುವುದು ಆವಶ್ಯಕವಾಗಿದೆ. ಇದರಿಂದ ಸಾಧಕರಿಗೆ ‘ಸಾಧನೆಯಲ್ಲಿ ನಾನು ಎಲ್ಲಿ ಕಡಿಮೆ ಬೀಳುತ್ತಿದ್ದೇನೆ ?’, ಎಂಬುದು ಗಮನಕ್ಕೆ ಬಂದು ಅದಕ್ಕೆ ಯೋಗ್ಯ ಉಪಾಯಯೋಜನೆಯನ್ನು ಮಾಡಿ ಗಾಂಭೀರ್ಯದಿಂದ ಪ್ರಯತ್ನವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಸಾಧಕರೇ ಯಾವುದೇ ಸೇವೆಯನ್ನು ತಪ್ಪುಗಳಿಲ್ಲದೇ ಮತ್ತು ಪರಿಪೂರ್ಣಮಾಡಿದರೆ, ಅದು ದೇವರಿಗೆ ಖಂಡಿತ ತಲುಪುತ್ತದೆ’, ಇದನ್ನು ಗಮನದಲ್ಲಿಟ್ಟು ತಳಮಳದಿಂದ ಪ್ರಯತ್ನಿಸಿ ಗುರುಕೃಪೆ ಪಡೆಯಿರಿ !’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೮.೯.೨೦೨೧)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |