ರಾತ್ರಿ ಮಲಗುವ ಮೊದಲು ಆಧ್ಯಾತ್ಮಿಕ ಉಪಾಯವನ್ನು ಅವಶ್ಯ ಮಾಡಬೇಕು !

(ಪೂ.) ಶ್ರೀ. ಸಂದೀಪ ಆಳಶಿ,

‘ಸದ್ಯದ ಆಪತ್ಕಾಲದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ಬಹಳ ಹೆಚ್ಚಾಗಿದೆ. ಆದುದರಿಂದ ಹೆಚ್ಚಿನ ಸಾಧಕರ ಮೇಲೆ ದಿನವಿಡೀ ನಡುನಡುವೆ ಕಪ್ಪು (ತೊಂದರೆ ದಾಯಕ) ಆವರಣ ಬರುತ್ತಿರುತ್ತದೆ. ಸಾಧಕರು ನಡುನಡುವೆ ಅದನ್ನು ತೆಗೆಯುತ್ತಿರಬೇಕು. ರಾತ್ರಿ ಮಲಗುವ ಮೊದಲು ಆವರಣ ತೆಗೆಯದಿದ್ದರೆ ರಾತ್ರಿಯಿಡಿ ಆವರಣಯುಕ್ತ ಇದ್ದರೆ ಕೆಟ್ಟ ಶಕ್ತಿಗಳ ದಾಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ರಾತ್ರಿ ಮಲಗುವ ಮೊದಲು ೧೦ ನಿಮಿಷಗಳ ಕಾಲ ಉಪ್ಪು ನೀರಿನ ಉಪಾಯ ಮಾಡಬೇಕು. ವಿಪರೀತ ಆಯಾಸದಿಂದ ಉಪ್ಪುನೀರಿನಲ್ಲಿ ಕಾಲು ಮುಳುಗಿಸಿಡಲು ಸಾಧ್ಯವಾಗದಿದ್ದರೆ ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿ ಎರಡೂ ಕೈಯ ಮುಷ್ಠಿಯಲ್ಲಿ ಉಪ್ಪು ತೆಗೆದುಕೊಂಡು ಉಪಾಯ ಮಾಡಿದರೂ ನಡೆಯುತ್ತದೆ. ಉಪಾಯ ಮಾಡುವಾಗ ನಾಮಜಪವನ್ನು ಭಾವಪೂರ್ಣವಾಗಿ ಮಾಡಬೇಕು. ಮಲಗುವ ಮೊದಲು ಸ್ವಲ್ಪ ಸಮಯ ನಾಮಜಪಿಸಿದರೆ ರಾತ್ರಿಯಿಡಿ ಅದು ನಡೆಯುತ್ತದೆ. ಇದರಿಂದ ರಾತ್ರಿ ಯಿಡಿ ರಕ್ಷಣಾ ಕವಚವು ಲಭಿಸಲು ಸಾಧ್ಯವಾಗುತ್ತದೆ.

ನಾನು ಪ್ರತಿದಿನ ರಾತ್ರಿ ಮಲಗುವ ಮೊದಲು ಮೇಲಿನಂತೆ ಉಪಾಯ ಮಾಡುತ್ತೇನೆ. ಒಂದು ದಿನ ನನಗೆ ಕೆಲವು ಕಾರಣಗಳಿಂದ ಈ ರೀತಿಯ ಉಪಾಯ ಮಾಡಲು ಸಾಧ್ಯವಾಗಲಿಲ್ಲ, ಆ ರಾತ್ರಿ ನನಗೆ ನಿದ್ದೆ ಸರಿಯಾಗಿ ಬರಲಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ಉಪಾಯ ಮಾಡದಿದ್ದರೆ ಪರಿಣಾಮ ತಕ್ಷಣ ಕಂಡುಬರುತ್ತದೆ. ಇದರಿಂದ ಈ ಉಪಾಯಗಳ ಮಹತ್ವ ನನ್ನ ಗಮನಕ್ಕೆ ಬಂದಿತು. ನಾವೆಲ್ಲ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಿಸಿದ ಈ ನಾಮಜಪಾದಿ ಉಪಾಯ ಮಾಡೋಣ ಮತ್ತು ಬೇಗನೆ ತೊಂದರೆ ಮುಕ್ತರಾಗೋಣ !’

– ಪೂ. ಸಂದೀಪ ಆಳಶಿ (೨೦.೧೧.೨೦೨೪)

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.