ಸಮಷ್ಟಿ ಪ್ರಾರಬ್ಧದಿಂದ ವ್ಯಷ್ಟಿ ಪ್ರಾರಬ್ಧದ ಮೇಲಾಗುವ ಪರಿಣಾಮ !

ಶ್ರೀ. ನಿಷಾದ ದೇಶಮುಖ

೧. ವ್ಯಷ್ಟಿ ಪ್ರಾರಬ್ಧವಿರುವ ಲಕ್ಷಾಂತರ ಜೀವಗಳಿಂದ ಸಮಷ್ಟಿ ಪ್ರಾರಬ್ಧದ ಕಾಲ ನಿರ್ಮಾಣವಾಗುವುದು

‘ಅನೇಕ (ಒಂದು ಸಾವಿರ) ಗ್ರಾಮ್‌ ಸೇರಿ ಒಂದು ಕಿಲೋಗ್ರಾಮ್‌ ಆಗುತ್ತದೆ, ಹಾಗೆ ತೀವ್ರ ಪಾಪಕರ್ಮಗಳನ್ನು ಮಾಡಿದ ಲಕ್ಷಾಂತರ ಜೀವಗಳು ಅವರ ಪ್ರಾರಬ್ಧಭೋಗವನ್ನು ಭೋಗಿಸಲು ಒಟ್ಟಿಗೆ ಜನ್ಮ ಪಡೆದ ನಂತರ ಆ ಕಾಲದಲ್ಲಿ ಸಮಷ್ಟಿ ಪ್ರಾರಬ್ಧದ ಕಾಲವು ನಿರ್ಮಾಣವಾಗುತ್ತದೆ. ‘ಸಮಷ್ಟಿ ಪುಣ್ಯ ಅಥವಾ ಪಾಪ ಇವುಗಳ ಕರ್ಮಗಳ ತೀವ್ರತೆ ಮತ್ತು ಅದರಲ್ಲಿ ಸಮಷ್ಟಿಯ ಪಾಲ್ಗೊಳ್ಳುವಿಕೆ’ ಇವೆರಡೂ ಘಟಕಗಳಿಗನುಸಾರ ‘ಪ್ರಾರಬ್ಧದ ಫಲವು ಎಷ್ಟು ಅವಧಿಯ ನಂತರ ಭೋಗಿಸಬೇಕಾಗುತ್ತದೆ’, ಎಂಬುದು ನಿರ್ಧರಿಸಲಾಗುತ್ತದೆ, ಉದಾ. ‘ಲವ್‌ ಜಿಹಾದ್‌’ದ ಘಟನೆ, ಭ್ರಷ್ಟಾಚಾರ ಇತ್ಯಾದಿ ಪಾಪಗಳ ತೀವ್ರತೆ ಮತ್ತು ಅದರಲ್ಲಿ ಸಮಷ್ಟಿಯ ಪಾಲ್ಗೊಳ್ಳುವಿಕೆ ಎಷ್ಟಿದೆ ?’, ಇದರ ಮೇಲೆ ಅದರ ಫಲವು ಎಷ್ಟು ಅವಧಿಯ ನಂತರ ಭೋಗಿಸಲು ಸಿಗುತ್ತದೆ ಎಂಬುದು ನಿರ್ಧರಿಸಲ್ಪಡುತ್ತದೆ.

೨. ಸಮಷ್ಟಿ ಪ್ರಾರಬ್ಧದಿಂದ ವ್ಯಷ್ಟಿ ಪ್ರಾರಬ್ಧದ ಮೇಲಾಗುವ ಪರಿಣಾಮ !

೨ ಅ. ಮಂದ ವ್ಯಷ್ಟಿ ಪ್ರಾರಬ್ಧವಿದ್ದರೆ ಸಮಷ್ಟಿ ಪ್ರಾರಬ್ಧದ ಪರಿಣಾಮ ಕಡಿಮೆಯಾಗುವುದು : ಸಮಷ್ಟಿ ಪ್ರಾರಬ್ಧದಿಂದ ಯಾವುದಾದರೊಂದು ಘಟನೆ ಘಟಿಸುತ್ತದೆ (ಉದಾ. ಕೊರೋನಾ ಮಹಾಮಾರಿ, ಚಂಡಮಾರುತ, ಯುದ್ಧ, ಅಣುಬಾಂಬ್‌ ಬೀಳುವುದು ಇತ್ಯಾದಿ), ಆ ಸಮಯದಲ್ಲಿ ಯಾರ ಮಂದ ಪ್ರಾರಬ್ಧವಿದ್ದರೆ, ಅವರ ಮೇಲೆ ಶೇ. ೨೦-೩೦ ರಷ್ಟು ಪರಿಣಾಮವಾಗುತ್ತದೆ, ಉದಾ. ಮೂಳೆಮುರಿತ ಇತ್ಯಾದಿ. ಯಾರ ಮಧ್ಯಮ ಪ್ರಾರಬ್ಧವಾಗಿದ್ದರೆ, ಅವರ ಮೇಲೆ ಶೇ. ೫೦-೬೦ ರಷ್ಟು ಪರಿಣಾಮವಾಗುತ್ತದೆ, ಉದಾ. ಕುರುಡುತನ ಬರುವುದು, ಕೈ ಅಥವಾ ಕಾಲು ಕತ್ತರಿಸಬೇಕಾಗುವುದು ಇತ್ಯಾದಿ; ಇದರ ವಿರುದ್ಧ ಯಾರ ತೀವ್ರ ಪ್ರಾರಬ್ಧವಿದ್ದರೆ, ಅವರ ಮೇಲೆ ನೇರವಾಗಿ ಪರಿಣಾಮಬೀರಿ ವಿವಿಧ ಘಟನೆಗಳಿಂದ ಅವರ ಮೃತ್ಯುವಾಗುತ್ತದೆ, ಉದಾ. ಭೂಕಂಪ ಅಥವಾ ಅತಿವೃಷ್ಟಿ ಇತ್ಯಾದಿಗಳಿಂದ ಕಟ್ಟಡವು ಕುಸಿದು ಅದರ ಕೆಳಗೆ ಸಿಕ್ಕಿ ಮರಣಹೊಂದುವುದು, ಮಿಂಚು ಬೀಳುವುದರಿಂದ ಸಾವನ್ನಪ್ಪುವುದು ಇತ್ಯಾದಿ.

೨ ಆ. ಸಮಷ್ಟಿ ಅಥವಾ ವ್ಯಷ್ಟಿ ಸ್ತರದಲ್ಲಿ ಮಾಡಿದ ಪರಿಹಾರೋಪಾಯ ದಿಂದ ಸಮಷ್ಟಿ ಪ್ರಾರಬ್ಧದ ಪರಿಣಾಮವು ಕಡಿಮೆಯಾಗುವುದು : ಯಾವುದಾದರೊಂದು ಊರಿನಲ್ಲಿ ಮಹಾಮಾರಿ ಹರಡಿದ ನಂತರ ಅದರ ಪರಿಣಾಮವು ಆ ಊರಿನಲ್ಲಿನ ಪ್ರತಿಯೊಂದು ಮನೆಯಲ್ಲಿಯೂ ಹೆಚ್ಚುಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಊರಿ ನಲ್ಲಿನ ಯಾವುದಾದರೊಂದು ಪರಿಸರದಲ್ಲಿ ಹೆಚ್ಚು ಸ್ವಚ್ಛತೆ ಇದ್ದರೆ, ಇತರ ಸ್ಥಳಗಳ ತುಲನೆಯಲ್ಲಿ ಆ ಸ್ಥಳದ ಮೇಲೆ ಮಹಾಮಾರಿಯ ಪರಿಣಾಮವು ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಅದೇ ರೀತಿ ‘ಯಾವುದಾದರೊಂದು ಮನೆಯಲ್ಲಿನ ವ್ಯಕ್ತಿಗಳು ಮಹಾಮಾರಿಯಿಂದ ರಕ್ಷಣೆಯಾಗಲು ಹೇಗೆ ಪರಿಹಾರೋಪಾಯ ಮಾಡಿದ್ದಾರೆ ?’, ಎಂಬುದರ ಮೇಲೆಯೂ ಮಹಾಮಾರಿಯ ಪರಿಣಾಮವು ಹೆಚ್ಚುಕಡಿಮೆ ಆಗುತ್ತದೆ.

೩. ಸಂತರ ಆಜ್ಞಾಪಾಲನೆ ಮಾಡಿದ್ದರಿಂದ ಆಗುವ ಲಾಭ !

ಹೀಗಿದ್ದರೂ, ಸಾಧನೆ ಮಾಡುವ ದಾರ್ಶನಿಕರು, ಜ್ಯೋತಿಷ್ಯರು ಮತ್ತು ನಿಜವಾದ ಸಂತರು ಹೇಳುವುದನ್ನು ಕೇಳಿ ಯಾರು ಆಪತ್ಕಾಲಕ್ಕಾಗಿ ಸಾಧನೆ ಎಂದು ಎಲ್ಲ ಸಿದ್ಧತೆಗಳನ್ನು ಮಾಡಿದ್ದಾರೆಯೋ, ಅವರ ಸಾಧನೆಯ ಮಟ್ಟಕ್ಕನುಸಾರ ಅವರ ಮೇಲಾಗುವ ಸಮಷ್ಟಿ ಪ್ರಾರಬ್ಧದ ಪರಿಣಾಮಗಳನ್ನು ನಿರ್ಧರಿಸಲಾಗುತ್ತದೆ.

೩ ಅ. ಮಂದ ಪ್ರಾರಬ್ಧ : ಯಾವ ಸಾಧಕರ ಮಂದ ಪ್ರಾರಬ್ಧವಾಗಿದ್ದರೆ ಮತ್ತು ಅವರು ಸಾಧನೆಯೆಂದು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಪ್ರಯತ್ನಗಳನ್ನು ಮಾಡಿದ್ದರೆ, ಅವರ ಮೇಲೆ ಸಮಷ್ಟಿ ಪ್ರಾರಬ್ಧದ ಪರಿಣಾಮವು ನಗಣ್ಯವಾಗುವುದು, ಉದಾ. ಕೆಲವು ಅವಧಿಯವರೆಗೆ ಅನಾರೋಗ್ಯದಲ್ಲಿರುವುದು; ಆದರೆ ವೈದ್ಯರು ಮಾಡಿದ ಔಷಧೋಪಚಾರದಿಂದ ರೋಗವು ಗುಣಮುಖವಾಗುವುದು

೩ ಆ. ಮಧ್ಯಮ ಪ್ರಾರಬ್ಧ : ಯಾವ ಸಾಧಕರ ಪ್ರಾರಬ್ಧವು ಮಧ್ಯಮ ವಾಗಿದ್ದರೆ, ಆದರೆ ಅವರು ಸಾಧನೆಯೆಂದು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಈ ಎಲ್ಲ ಸ್ತರಗಳಲ್ಲಿ ಉತ್ತಮ ಪ್ರಯತ್ನಗಳನ್ನು ಮಾಡಿ ಶ್ರೀ ಗುರುಗಳ ಕೃಪೆಯನ್ನು ಪ್ರಾಪ್ತಗೊಳಿಸಿದ್ದರೆ, ಅವರ ಮಧ್ಯಮ ಪ್ರಾರಬ್ಧದ ತೊಂದರೆಯೂ ದೂರವಾಗುವುದು, ಉದಾ. ಅಪಘಾತ ಅಥವಾ ಇತರ ದುರ್ಘಟನೆಯಲ್ಲಿ ಶಾಶ್ವತ ಸ್ವಲ್ಪ ದೈಹಿಕ ಹಾನಿಗೊಳಗಾಗಬಹುದು; ಆದರೆ ಶ್ರೀ ಗುರುಗಳ ಕೃಪೆಯಿಂದ ಪ್ರಾಣಕ್ಕೆ ಅಪಾಯವಾಗದೇ ಸಾಧನೆಯನ್ನು ಮಾಡಲು ಸಾಧ್ಯವಾಗುವುದು.

೩ ಇ. ತೀವ್ರ ಪ್ರಾರಬ್ಧ : ಯಾವ ಸಾಧಕರ ತೀವ್ರ ವ್ಯಷ್ಟಿ ಪ್ರಾರಬ್ಧವಿದ್ದರೆ; ಆದರೆ ಅವರು ಕೊನೆಯ ಕ್ಷಣದವರೆಗೆ ಸಾಧನೆಯನ್ನು ಮಾಡಿದ್ದರೆ, ವ್ಯಷ್ಟಿ ಮತ್ತು ಸಮಷ್ಟಿ ಪ್ರಾರಬ್ಧವಿರುವುದರಿಂದ ಪ್ರಸಂಗಗಳು ಘಟಿಸಿದರೂ ಆ ಸಾಧಕನ ಆಧ್ಯಾತ್ಮಿಕ ಹಾನಿಯಾಗುವುದಿಲ್ಲ, ಉದಾ. ಪ್ರವಾಹ ಅಥವಾ ಅಪಘಾತದಿಂದ ಜೀವ ಹೋದರೂ, ಅಂತರ್ಮನಸ್ಸಿನಿಂದ ಸಾಧನೆಯಾಗುತ್ತಿರುವುದರಿಂದ ಸಾಧನೆಯ ದೃಷ್ಟಿಯಲ್ಲಿ ಉತ್ತಮ ಗತಿ ಮತ್ತು ಉಚ್ಚ ಸ್ವರ್ಗಲೋಕ ಅಥವಾ ಮಹರ್ಲೋಕದಲ್ಲಿ ಸ್ಥಾನ ಸಿಗುವುದು.

ಒಟ್ಟಿನಲ್ಲಿ ವ್ಯಕ್ತಿಯ ಮಂದ, ಮಧ್ಯಮ ಅಥವಾ ತೀವ್ರ ವ್ಯಷ್ಟಿ ಪ್ರಾರಬ್ಧಕ್ಕನುಸಾರ ಅವನ ಮೇಲೆ ಸಮಷ್ಟಿ ಪ್ರಾರಬ್ಧದ ಪರಿಣಾಮವಾಗುತ್ತದೆ; ಆದರೆ ವ್ಯಕ್ತಿಯು ಸಾಧನೆ ಮಾಡುತ್ತಿದ್ದರೆ, ಸಾಧನೆಯ ಬಲದಿಂದ ಆ ಮಂದ, ಮಧ್ಯಮ ಅಥವಾ ತೀವ್ರ ವ್ಯಷ್ಟಿ ಪ್ರಾರಬ್ಧದ ತೀವ್ರತೆಯನ್ನು ಕಡಿಮೆ ಮಾಡಬಹುದು.

೪. ಯೋಗ್ಯ ಕ್ರಿಯಮಾಣವನ್ನು ಉಪಯೋಗಿಸುವ ಮಹತ್ವ !

ಸ್ಥೂಲ ಸ್ತರದಲ್ಲಿ ಸಮಾಜದ ರಕ್ಷಣೆಗಾಗಿ ಮಾಡಿದ ಆವಶ್ಯಕ ಸಿದ್ಧತೆ ಮತ್ತು ಸೂಕ್ಷ್ಮ ಸ್ತರದಲ್ಲಿ ತನ್ನೊಂದಿಗೆ ಸಮಾಜದ ಸಾಧನೆಯಾಗಲು ಮಾಡಿದ ಪ್ರಯತ್ನ’, ಎಂದರೆ ಸಮಷ್ಟಿ ಪ್ರಾರಬ್ಧದ ಸಂದರ್ಭದಲ್ಲಿ ಉಪಯೋಗಿಸಿದ ಯೋಗ್ಯ ಕ್ರಿಯಮಾಣವಾಗಿದೆ. ಸಮಷ್ಟಿ ಪ್ರಾರಬ್ಧದ ಸಂದರ್ಭದಲ್ಲಿ ‘ವ್ಯಕ್ತಿಯು ಯೋಗ್ಯ ಕ್ರಿಯಮಾಣವನ್ನು ಎಷ್ಟು ಉಪಯೋಗಿಸುತ್ತಾನೆ ?’, ಇದೂ ಅಷ್ಟೇ ಮಹತ್ವವಿದೆ.

೪ ಅ. ಮಂದ ಮತ್ತು ಮಧ್ಯಮ ವ್ಯಷ್ಟಿ ಪ್ರಾರಬ್ಧವಾಗಿದ್ದರೂ ಯೋಗ್ಯ ಕ್ರಿಯಮಾಣವನ್ನು ಬಳಸದಿರುವುದರಿಂದ ಆಗುವ ಹಾನಿ ! : ವ್ಯಕ್ತಿಯ ವ್ಯಷ್ಟಿ ಸ್ತರದಲ್ಲಿ ಮಂದ ಮತ್ತು ಮಧ್ಯಮ ಪ್ರಾರಬ್ಧವಿದ್ದರೆ; ಆದರೆ ಅವನು ಯೋಗ್ಯ ಕ್ರಿಯಮಾಣವನ್ನು ಬಳಸದೇ ತದ್ವಿರುದ್ಧ ಕೃತಿ ಮಾಡಿದರೆ, ಸಮಷ್ಟಿ ಪ್ರಾರಬ್ಧದಿಂದ ಅವನಿಗೆ ಹೆಚ್ಚು ತೊಂದರೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಹಿರೋಶಿಮಾ ಮತ್ತು ನಾಗಾಸಾಕಿಯಲ್ಲಿ ಅಣುಬಾಂಬಿನ ಸ್ಫೋಟದಿಂದಾದ ಮೃತಪಟ್ಟವರಲ್ಲಿ ಮಂದ, ಮಧ್ಯಮ ಮತ್ತು ತೀವ್ರ ಪ್ರಾರಬ್ಧವಿರುವ ಜನರ ಪ್ರಮಾಣವು ಮುಂದಿನಂತಿತ್ತು.

ಮೇಲಿನ ಕೋಷ್ಟಕದಿಂದ ‘ಹಿರೋಶಿಮಾ ಮತ್ತು ನಾಗಾಸಾಕಿ ಯಲ್ಲಿ ಅಣುಬಾಂಬ್‌ ಸ್ಫೋಟದಿಂದ ಮೃತಪಟ್ಟಿರುವ ಪೈಕಿ ಶೇ. ೫೦ ರಷ್ಟು ಜನರು ಸ್ಥೂಲ ಮತ್ತು ಸೂಕ್ಷ್ಮ ಮಟ್ಟದಲ್ಲಿ ಯೋಗ್ಯ ಕ್ರಿಯಮಾಣವನ್ನು ಬಳಸಿದ್ದರೆ, ಅವರ ಪ್ರಾಣವು ಉಳಿಯುತ್ತಿತ್ತು’, ಎಂಬುದು ಗಮನಕ್ಕೆ ಬರುತ್ತದೆ.

೪ ಆ. ಮಂದ ಮತ್ತು ಮಧ್ಯಮ ವ್ಯಷ್ಟಿ ಪ್ರಾರಬ್ಧವಿದ್ದರೂ ಸಾಧನೆ ಮಾಡದಿರುವುದರಿಂದ ಸಮಷ್ಟಿ ಪ್ರಾರಬ್ಧ ಭೋಗಿಸಬೇಕಾಗುವುದು : ಮೂಲದಲ್ಲಿ ಸಮಷ್ಟಿಗೆ ಸಾಧನೆಯ ಬಲವಿಲ್ಲದಿರುವುದರಿಂದ ಕೆಟ್ಟ ಶಕ್ತಿಗಳು ಸಮಾಜದ ತೊಂದರೆಯನ್ನು ಹೆಚ್ಚಿಸುತ್ತವೆ. ಹಿರೋಶಿಮಾ ಮತ್ತು ನಾಗಾಸಾಕಿಯಲ್ಲಿನ ಪ್ರಸಂಗದಲ್ಲಿ ಕೆಟ್ಟ ಶಕ್ತಿಗಳು ಮಂದ ಮತ್ತು ಮಧ್ಯಮ ಪ್ರಾರಬ್ಧವಿರುವ ಜನರಿಗೂ ಅವರ ಮನಸ್ಸು ಮತ್ತು ಬುದ್ಧಿಯ ಮೇಲೆ ತೊಂದರೆದಾಯಕ (ಕಪ್ಪು) ಶಕ್ತಿಯ ಆವರಣವನ್ನು ನಿರ್ಮಾಣ ಮಾಡಿ ಅಣುಬಾಂಬ್‌ಸ್ಫೋಟದ ಪರಿಣಾಮವು ಹೆಚ್ಚು ಸಂಭವವಾಗುವ ಸ್ಥಳದಲ್ಲಿ ಕರೆದೊಯ್ದರು.

೪ ಇ. ಮಂದ ಮತ್ತು ಮಧ್ಯಮ ವ್ಯಷ್ಟಿ ಪ್ರಾರಬ್ಧವಿದ್ದರೂ ಸಾಧನೆ ಮಾಡದಿರುವುದರಿಂದ ಅಕಾಲಿಕ ಮರಣ ಹೊಂದಿರುವುದರಿಂದ ಆಗುವ ಹಾನಿ ! : ಸಾಧನೆ ಮಾಡದಿರುವುದರಿಂದ, ಅಂದರೆ ಅಯೋಗ್ಯ ಕ್ರಿಯಮಾಣದಿಂದ ಅಣುಬಾಂಬ್‌ಸ್ಫೋಟದಲ್ಲಿ ಲಕ್ಷಾಂತರ ಜೀವಗಳು ಪ್ರಾರಬ್ಧಕ್ಕನುಸಾರ ನಿರ್ಧರಿತ ಸಮಯದ ಮೊದಲೇ ಮರಣ ಹೊಂದಿದರು. ಅಂದರೆ ಅವರಿಗೆ ಅಕಾಲಿಕ ಸಾವು ಬಂದಿತು. ಆದ್ದರಿಂದ ಅವರಿಗೆ ದೀರ್ಘಕಾಲ ಭೂಲೋಕದಲ್ಲಿಯೇ ಇದ್ದು ವಿವಿಧ ಯಾತನೆಗಳನ್ನು ಸಹಿಸುತ್ತ ಕೊಡು-ಕೊಳ್ಳುವ ಲೆಕ್ಕವನ್ನು ತೀರಿಸಬೇಕಾಗುತ್ತಿದೆ. ಇದಕ್ಕಿಂತಲೂ ಕೆಟ್ಟ ವಿಷಯವೆಂದರೆ, ಅಕಾಲಿಕ ಮರಣ ಹೊಂದಿರುವ ಸುಮಾರು ಶೇ. ೭೦ ರಷ್ಟು ಜೀವಗಳನ್ನು ದೊಡ್ಡ ಕೆಟ್ಟ ಶಕ್ತಿಗಳು ತಮ್ಮ ದಾಸರನ್ನಾಗಿ ಮಾಡಿಕೊಳ್ಳುತ್ತವೆ ಮತ್ತು ಅವರಿಂದ ಲಕ್ಷಾಂತರ ವರ್ಷಗಳ ವರೆಗೆ ವಿವಿಧ ಕೆಟ್ಟ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತವೆ. ಆದ್ದರಿಂದ ಅಕಾಲಿಕ ಮರಣ ಹೊಂದಿದ ಜೀವಗಳಿಗೆ ನಿಜ ಹೇಳುವುದಾದರೆ ನರಕಯಾತ£ಯನ್ನೇ ಸಹಿಸಿ ಕೊಳ್ಳಬೇಕಾಗುತ್ತದೆ. ಯಾರಾದರೊಬ್ಬ ಸಂತರು ಅವರಿಗಾಗಿ ಶ್ರಾದ್ಧ ಇತ್ಯಾದಿ ಧಾರ್ಮಿಕ ವಿಧಿಗಳನ್ನು ಮಾಡಿ ಅವರಿಗೆ ಗತಿ ನೀಡಿದರೆ, ಮಾತ್ರ ಅವರಿಗೆ ಮುಂದಿನ ಲೋಕಕ್ಕೆ ಹೋಗಲು ಸಾಧ್ಯವಾಗುತ್ತದೆ.

೫. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಯೋಗ್ಯ ಕ್ರಿಯಮಾಣವನ್ನು ಉಪಯೋಗಿಸಲು ಕಲಿಸುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಮಷ್ಟಿಗೆ ಕಾಲಕ್ಕನುಸಾರ ಸ್ಥೂಲ ಮತ್ತು ಸೂಕ್ಷ್ಮ ಎರಡೂ ಸ್ತರಗಳಲ್ಲಿ ಯೋಗ್ಯ ಕ್ರಿಯಮಾಣವನ್ನು ಬಳಸುವ, ಅಂದರೆ ಆಪತ್ಕಾಲವನ್ನು ಎದುರಿಸಲು ಕಲಿಸುತ್ತಿದ್ದಾರೆ. ನಮಗೆ ಲಭಿಸಿದ ಇಂತಹ ದಿವ್ಯ ಶ್ರೀ ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’

– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ, ಆಧ್ಯಾತ್ಮಿಕ ಮಟ್ಟ ಶೇ. ೬೩), ಫೋಂಡಾ, ಗೋವಾ. (೮.೩.೨೦೨೪)