ಪೂಜ್ಯ (ಸೌ.) ಶಶಿಕಲಾ ಕಿಣಿ ಇವರು ೧೮ ನವೆಂಬರ್ ೨೦೨೪ ರಂದು ಸಂತ ಪದವಿಯಲ್ಲಿ ವಿರಾಜಮಾನರಾದರು ಎಂದು ಸನಾತನದ ೭೫ ನೇ ಸಂತರಾದ ಪೂ.ರಮಾನಂದ ಗೌಡ ಇವರು ಘೋಷಿಸಿದರು. ಮಂಗಳೂರಿನ ಸಾಧಕಿ ಸೌ. ಮಂಜುಳಾ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೪೩ ವರ್ಷಗಳು) ಇವರ ಗಮನಕ್ಕೆ ಬಂದಿರುವ ಅವರ ಗುಣವೈಶಿಷ್ಟಗಳು ಮತ್ತು ಸೌ. ಶಶಿಕಲಾ ಕಿಣಿಯವರಿಗೆ ಬಂದಿರುವ ಅನುಭೂತಿಗಳನ್ನು ಇಲ್ಲಿ ನೀಡಲಾಗಿದೆ.
೧. ಸನಾತನದ ಸಂಪರ್ಕದ ನಂತರ ಸಾಧನೆಯ ಆರಂಭ ‘ಸೌ. ಶಶಿಕಲಾ ಕಿಣಿ (ಅಕ್ಕಾ) ಇವರಿಗೆ ಚಿಕ್ಕಂದಿನಿಂದಲೇ ‘ಶ್ರೀರಾಮ’ ದೇವರು ಇಷ್ಟವಾಗುತ್ತಿದ್ದನು. ವಿವಾಹದ ಬಳಿಕ ಅವರು ಮಂಗಳೂರಿಗೆ ಬಂದರು. ತದನಂತರ ಅವರು ಕರ್ಮಕಾಂಡಾನುಸಾರ ಸಾಧನೆಯನ್ನು ಮಾಡಲು ಪ್ರಾರಂಭಿಸಿದರು. ಮಂಗಳೂರಿನಲ್ಲಿ ನಡೆದ ಸನಾತನದ ಮೊದಲ ಪ್ರವಚನಕ್ಕೆ ಅವರು ಉಪಸ್ಥಿತರಿದ್ದರು. ತದನಂತರ ಒಂದೇ ಒಂದು ಸತ್ಸಂಗವನ್ನು ಅವರು ತಪ್ಪಿಸಲಿಲ್ಲ. ಸತ್ಸಂಗದಲ್ಲಿ ಹೇಳುವ ಸಾಧನೆಯ ಅಂಶಗಳನ್ನು ಅವರು ಆಚರಿಸಲು ಪ್ರಯತ್ನಿಸಿದರು.
೨. ಸೌ. ಶಶಿಕಲಾ ಕಿಣಿ ಇವರ ಗುಣವೈಶಿಷ್ಟ್ಯಗಳು
೨ ಅ. ಹಸನ್ಮುಖಿ ಮತ್ತು ಶಾಂತ ಸ್ವಭಾವ : ‘ಸೌ. ಶಶಿಕಲಾ ಅವರು ಯಾವಾಗಲೂ ನಗುಮುಖಿ ಮತ್ತು ಆನಂದದಿಂದ ಇರುತ್ತಾರೆ. ಅವರು ಮಿತಭಾಷಿಗಳಾಗಿದ್ದು ಅವರು ಶಾಂತಸ್ವಭಾವದವರಾಗಿದ್ದಾರೆ.
೨ ಆ. ಪ್ರೇಮಭಾವ : ಅಕ್ಕನವರ ಮನೆಗೆ ಯಾರೇ ಸಾಧಕರು ಹೋದರೂ, ಅವರು ಪ್ರೇಮಭಾವದಿಂದ ಸಾಧಕರಿಗೆ ತಿನ್ನಲು ಏನಾದರೂ ಕೊಡುತ್ತಾರೆ. ಹಾಗೆಯೇ ಸಾಧಕರ ಬಳಿ ಆಶ್ರಮಕ್ಕೆ ಕೊಡಲು ತಿಂಡಿ ಕಳುಹಿಸುತ್ತಾರೆ. ಹಬ್ಬದ ದಿನದಂದು ದೇವರಿಗೆ ನೈವೇದ್ಯ ತೋರಿಸಿದ ಬಳಿಕ ಅವರು ಆಶ್ರಮಕ್ಕಾಗಿ ಏನಾದರೂ ಪ್ರಸಾದವನ್ನು ಪಕ್ಕಕ್ಕೆ ತೆಗೆದಿಡುತ್ತಾರೆ.
೨ ಇ. ಸಾಧಕಿಯೊಂದಿಗೆ ಮನಮುಕ್ತವಾಗಿ ಮಾತನಾಡುವುದು : ಅವರ ಮನಸ್ಸಿನಲ್ಲಿ ಏನು ವಿಚಾರವಿದ್ದರೂ, ಅದನ್ನು ಅವರು ಯಾರಾದರೊಬ್ಬ ಸಾಧಕಿಯೊಂದಿಗೆ ಮನಮುಕ್ತವಾಗಿ ಮಾತನಾಡಿ ಅದರ ಬಗ್ಗೆ ದೃಷ್ಟಿಕೋನವನ್ನು ತಿಳಿದುಕೊಳ್ಳುತ್ತಾರೆ. ‘ಮನಸ್ಸಿನಲ್ಲಿ ಯಾವುದೇ ವಿಚಾರವಿರಬಾರದು ಮತ್ತು ಅದರಲ್ಲಿ ಸಿಲುಕಿಕೊಳ್ಳ ಬಾರದು’ ಎಂದು ಅವರ ತಳಮಳವಿರುತ್ತದೆ.
೨ ಈ. ಸೇವೆಯ ತೀವ್ರ ತಳಮಳ : ಅಕ್ಕನವರಲ್ಲಿ ಸೇವೆಯ ತೀವ್ರ ತಳಮಳವಿದೆ. ‘ಸನಾತನ ಪ್ರಭಾತ’ ಈ ಸಾಪ್ತಾಹಿಕ ಪತ್ರಿಕೆ ಪ್ರಾರಂಭವಾದ ಬಳಿಕ ಅವರು ‘ಸಂಚಿಕೆಯನ್ನು ವಿತರಿಸುವ ಮತ್ತು ಚಂದಾದಾರರನ್ನು ಮಾಡುವುದು’ ಈ ಸೇವೆಗಳನ್ನು ಮಾಡಿದರು. ವಿವಿಧ ಶಾಲೆಗಳಿಗೆ ಹೋಗಿ ‘ಬಾಲಸಂಸ್ಕಾರ ವರ್ಗವನ್ನು ತೆಗೆದುಕೊಳ್ಳುವುದು, ಮನೆಮನೆಗೆ ತೆರಳಿ ಪ್ರಸಾರ ಮಾಡುವುದು, ಗ್ರಂಥಪ್ರದರ್ಶನವನ್ನು ಏರ್ಪಡಿಸುವುದು’ ಇತ್ಯಾದಿ ಸೇವೆಗಳನ್ನು ಅವರು ಮಾಡುತ್ತಿದ್ದರು. ಈಗ ಶಾರೀರಿಕ ತೊಂದರೆಯಿಂದಾಗಿ ಹೊರಗೆ ಹೋಗಿ ಸೇವೆ ಮಾಡುತ್ತಿಲ್ಲ, ಆಗ ನನ್ನಿಂದ ಗುರುಸೇವೆ ಆಗುತ್ತಿಲ್ಲ ಎಂದು ಅವರಿಗೆ ಬಹಳ ಖೇದವೆನಿಸುತ್ತದೆ.
೨ ಉ. ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವುದು : ಈ ವರ್ಷ ಗುರುಪೂರ್ಣಿಮೆಯ ಸಮಯದಲ್ಲಿ ಅವರು ಸಭಾಗೃಹಕ್ಕೆ ಬಂದಿದ್ದರು. ಅವರಿಗೆ ಸಹಜವಾಗಿ ಮಹಡಿಯನ್ನು ಹತ್ತಲು ಇಳಿಯಲು ಇತರರ ಸಹಾಯ ಬೇಕಾಗುತ್ತದೆ; ಆದರೆ ಗುರುಪೂರ್ಣಿಮೆಯ ದಿನದಂದು ಅವರು ಉತ್ಸಾಹದಿಂದ ಬಂದರು ಮತ್ತು ಕಾರ್ಯಕ್ರಮ ಮುಗಿಯುವ ವರೆಗೆ ಕುಳಿತುಕೊಂಡಿದ್ದರು. ಅವರಿಗೆ ಅಷ್ಟು ಸಮಯದ ವರೆಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ; ಆದರೆ ಅವರಲ್ಲಿರುವ ಭಾವದಿಂದ ಅವರಿಗೆ ಪೂರ್ಣ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಲು ಸಾಧ್ಯವಾಯಿತು.
೨ ಊ. ಭಾವ
೨ ಊ ಸಂತರ ಬಗ್ಗೆ ಭಾವ : ಅಕ್ಕನವರ ಮನಸ್ಸಿನಲ್ಲಿ ಸಂತರ ಬಗ್ಗೆ ಅತ್ಯಧಿಕ ಭಾವವಿದೆ. ಸಂತರು ಹೇಳಿದ ಅಂಶಗಳನ್ನು ಅವರು ಆಚರಣೆಯಲ್ಲಿ ತರಲು ಪ್ರಯತ್ನಿಸುತ್ತಾರೆ. ಸನಾತನದ ೭೫ ನೇ (ಸಮಷ್ಟಿ) ಸಂತರಾಗಿರುವ ಪೂ. ರಮಾನಂದ ಗೌಡ ಅವರು ಶಶಿಕಲಾ ಅಕ್ಕನವರನ್ನು ಭೇಟಿಯಾಗಲು ಹೋದಾಗ ಅವರು ಚಿಕ್ಕ ಮಕ್ಕಳಂತೆ ‘ನಾನು ಇನ್ನೂ ಏನು ಮಾಡಲಿ ? ನನಗೆ ಮಾರ್ಗದರ್ಶನ ಮಾಡಿರಿ’ ಎಂದು ಪೂ. ಅಣ್ಣನವರಲ್ಲಿ ಕೇಳುತ್ತಾರೆ.
೨ ಊ ೨. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬಗ್ಗೆ ಕೃತಜ್ಞತಾ ಭಾವ : ಅಕ್ಕನವರಲ್ಲಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬಗ್ಗೆ ಬಹಳ ಕೃತಜ್ಞತಾಭಾವವಿದೆ. ದಿನವಿಡೀ ಪ್ರತಿಯೊಂದು ಕೃತಿಗಾಗಿ ಅವರು ಪ.ಪೂ. ಗುರುದೇವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಅದರಿಂದ ‘ಅವರಿಗೆ ಬಹಳ ಆನಂದ ಸಿಗುತ್ತದೆ’ ಎಂದು ಅವರು ಹೇಳಿದರು. ‘ಗುರುದೇವರು ನನ್ನ ಕೈಹಿಡಿದು ಕೊಂಡು ಇಲ್ಲಿಯವರೆಗೆ ತಂದಿದ್ದಾರೆ’ ಎನ್ನುವ ವಿಚಾರದಿಂದ ಅವರಲ್ಲಿ ಪ.ಪೂ. ಗುರುದೇವರ ಬಗ್ಗೆ ಕೃತಜ್ಞತೆಯ ಭಾವ ಉಮ್ಮಳಿಸಿ ಬರುತ್ತದೆ. ಅಕ್ಕ ಶರಣಾಗತಭಾವದಿಂದ ಪ.ಪೂ.ಗುರುದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ. ಆಗ ಅವರಿಗೆ ಬಹಳ ಆನಂದ ಸಿಗುತ್ತದೆ.
೩. ಸೌ. ಶಶಿಕಲಾ ಕಿಣಿಯವರಿಗೆ ಬಂದಿರುವ ಅನುಭೂತಿ
೩ ಅ. ‘ಶ್ರೀಕೃಷ್ಣನು ನಿರಂತರವಾಗಿ ಜೊತೆಯಲ್ಲಿದ್ದು, ಅವನೇ ನನ್ನ ಕೈಯನ್ನು ಹಿಡಿದುಕೊಂಡಿದ್ದಾನೆ’, ಎಂದು ಅಕ್ಕನವರಿಗೆ ಅನಿಸುವುದು : ಅಕ್ಕನವರು ನಿರಂತರವಾಗಿ ದೇವರ ಅನುಸಂಧಾನದಲ್ಲಿರಲು ಪ್ರಯತ್ನಿಸುತ್ತಾರೆ. ‘ಮಹಾಪ್ರಸಾದವನ್ನು ತಯಾರಿಸುತ್ತಿರುವಾಗ ಅವರು ಶ್ರೀಕೃಷ್ಣನಿಗಾಗಿ ಮಹಾಪ್ರಸಾದ ವನ್ನು ಸಿದ್ಧಪಡಿಸುತ್ತಿದ್ದೇನೆ’, ಎನ್ನುವ ಭಾವವನ್ನು ಇಡುತ್ತಾರೆ. ಎಲ್ಲ ಸ್ಥಳಗಳಲ್ಲಿಯೂ ಅವರಿಗೆ ಶ್ರೀಕೃಷ್ಣನೇ ಕಾಣಿಸುತ್ತಾನೆ. ‘ಶ್ರೀಕೃಷ್ಣನು ನಿರಂತರ ವಾಗಿ ತನ್ನೊಂದಿಗಿದ್ದು, ಅವನೇ ನನ್ನ ಕೈ ಹಿಡಿದುಕೊಂಡಿದ್ದಾನೆ’ ಎಂದು ಅಕ್ಕನವರಿಗೆ ಅನಿಸುತ್ತದೆ.
೩ ಆ. ಆಧಾರವಿಲ್ಲದಿದ್ದರೆ ಅಕ್ಕನವರಿಗೆ ನಿಂತುಕೊಳ್ಳಲು ಸಾಧ್ಯವಾಗದಿರುವುದು. ಒಮ್ಮೆ ಮಹಾಪ್ರಸಾದ ತಯಾರಿಸುತ್ತಿರುವಾಗ ಬಿದ್ದಾಗ ಅವರಿಗೆ ‘ಯಾರೋ ಹಿಡಿದುಕೊಂಡರು’ ಎಂದು ಅನಿಸಿದಾಗ ‘ಕೃಷ್ಣನೇ ತಮ್ಮನ್ನು ಹಿಡಿದುಕೊಂಡನು ಎಂದು ಅವರಿಗೆ ಅನಿಸುವುದು : ಅಕ್ಕನವರಿಗೆ ಒಂದು ಕೈಯಿಂದ ಆಧಾರವನ್ನು ಹಿಡಿದುಕೊಳ್ಳದೇ ನಿಂತುಕೊಳ್ಳಲು ಅಥವಾ ನಡೆಯಲು ಸಾಧ್ಯ ವಾಗುವುದಿಲ್ಲ. ಮಹಾಪ್ರಸಾದವನ್ನು ತಯಾರಿಸುತ್ತಿರುವಾಗಲೂ ಅವರಿಗೆ ಒಂದು ಕೈಯಿಂದ ಆಧಾರ ಪಡೆಯಬೇಕಾಗುತ್ತದೆ. ಆಗ ಅವರು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಾರೆ. ‘ಕೃಷ್ಣ’ ನಾನು ಕೈಬಿಡುತ್ತಿದ್ದೇನೆ. ನನಗೆ ಏನಾದರೂ ಆದರೆ ನೀನೇ ನೋಡಿಕೊ’ ಒಮ್ಮೆ ಮಹಾಪ್ರಸಾದವನ್ನು ತಯಾರಿಸುತ್ತಿರುವಾಗ ಅವರು ಕೈಬಿಟ್ಟರು. ಆಗ ಅವರಿಗೆ ಒಮ್ಮೆಲೇ ಬಿದ್ದಂತೆ ಆಯಿತು; ಆದರೆ ಅಷ್ಟುರಲ್ಲಿ ‘ಯಾರೋ ಅವರನ್ನು ಹಿಡಿದುಕೊಂಡರು’ ಎಂದು ಅವರಿಗೆ ಅನಿಸಿತು. ‘ಕೃಷ್ಣನೇ ಅವರನ್ನು ಹಿಡಿದುಕೊಳ್ಳುತ್ತಾನೆ’ ಎಂದು ಅವರ ಭಾವವಿರುತ್ತದೆ.
೯ ಇ. ಅಕ್ಕನವರಿಗೆ ಸ್ಲಿಪ್ಡಿಸ್ಕ್ ತೊಂದರೆಯಿಂದಾಗಿ ಸರಿಯಾಗಿ ನಿಂತುಕೊಳ್ಳಲು ಇತರರ ಆಧಾರವಿಲ್ಲದೇ ಸಹಜವಾಗಿ ಆಗುವುದಿಲ್ಲ. ಒಮ್ಮೆ ಸ್ನಾನ ಮಾಡಿ ಬರುವಾಗ ಮೆಟ್ಟಿಲಿನಿಂದ ಅವರ ಕಾಲು ಜಾರಿತು. ಆಗ ಅವರಿಗೆ ಯಾರೋ ತನ್ನನ್ನು ಹಿಡಿದುಕೊಂಡರು’ ಎಂದು ಅವರಿಗೆ ಅನಿಸಿತು. ಈ ಅನುಭೂತಿ ಅವರಿಗೆ ಎರಡು ಬಾರಿ ಆಗಿದೆ.
೯ ಈ. ಅಕ್ಕನವರು ‘ಪ.ಪೂ. ಗುರುದೇವರಲ್ಲಿ ಶರಣಾಗತಿಯಿಂದ ಪ್ರಾರ್ಥಿಸುತ್ತಾರೆ, ಆಗ ಅವರಿಗೆ ಬಹಳ ಆನಂದ ಸಿಗುತ್ತದೆ’, ಎನ್ನುವುದನ್ನು ಅವರು ಅನುಭವಿಸಿದ್ದಾರೆ. ‘ಅಕ್ಕನವರು ಹೇಳುತ್ತಾರೆ, ”ನನಗೆ ಈಗ ಬೇರೆ ಯಾವುದೇ ಆಸೆಯಿಲ್ಲ. ಕೇವಲ ಭಗವಂತನ ಚರಣಗಳೇ ಬೇಕು. ಇಷ್ಟ ನನ್ನ ಆಸೆಯಾಗಿದೆ.’’
-ಸೌ. ಮಂಜುಳಾ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೪೩ ವರ್ಷಗಳು) ಮಂಗಳೂರು (೬.೮.೨೦೨೪)
(‘ಈ ಲೇಖನವು ಸೌ. ಶಶಿಕಲಾ ಕಿಣಿ ಇವರು ಸಂತಪದವಿಯಲ್ಲಿ ವಿರಾಜಮಾನರಾಗುವ ಮೊದಲಿನದ್ದಾಗಿದೆ ಹಾಗಾಗಿ ಲೇಖನದಲ್ಲಿ ಶಶಿಕಲಾ ಕಿಣಿ ಇವರ ಹೆಸರಿನ ಮುಂದೆ ‘ಪೂ.’ ಎಂದು ಹಾಕಿಲ್ಲ.’ – ಸಂಕಲನಕಾರರು)