ಗುರುದೇವರ ಕೃಪೆ ಮತ್ತು ಈಶ್ವರ ಶ್ರದ್ಧೆಯ ಬಲದಿಂದ ಸ್ವರಕ್ಷಣಾ ತರಬೇತಿ ವರ್ಗದಲ್ಲಿ ಕಲಿಸಿದ ತಂತ್ರಗಳನ್ನು ಉಪಯೋಗಿಸಿ ಕಿರುಕುಳ ಕೊಡುತ್ತಿದ್ದ ಇಬ್ಬರು ಯುವಕರಿಂದ ಯುವತಿಯನ್ನು ಮುಕ್ತಗೊಳಿಸಿದ ಸಾಧಕಿ !

ಕು. ಸಂಧ್ಯಾ ಕುರಾಪಾಟಿ

೧. ಇಬ್ಬರು ಯುವಕರು ಒಬ್ಬ ಯುವತಿಗೆ ತೊಂದರೆ ಕೊಡುತ್ತಿರುವುದನ್ನು ನೋಡಿ ಸಾಧಕಿ ಸಿಡಿಮಿಡಿಗೊಳ್ಳುವುದು

‘ಡಿಸೆಂಬರ್‌ ೨೦೨೪ ರಲ್ಲಿ ಸುಮಾರು ಮಧ್ಯಾಹ್ನದ ೩ ಗಂಟೆಯ ಸಮಯದಲ್ಲಿ ನಾನು ಒಂದು ಅಂಗಡಿಗೆ ಹೋಗುತ್ತಿದ್ದೆ. ಆಗ ಮಾರ್ಗದಲ್ಲಿ ದೇವಿಯ ಮಂದಿರದ ಮುಂದೆ ನನಗೆ ಇಬ್ಬರು ಯುವಕರು ಮತ್ತು ಒಬ್ಬ ಯುವತಿ ಕಾಣಿಸಿದರು. ‘ಅಲ್ಲಿ ಏನೋ ಆಗುತ್ತಿದೆಯೆಂದು ನನಗನಿಸಿತು. ನಾನು ಮಾರ್ಗದ ಬದಿಯಲ್ಲಿ ನಿಂತುಕೊಂಡೆ. ಆ ಯುವಕರ ಕೈಯಲ್ಲಿ ‘ಸೆಲ್ಫೀ ಸ್ಟಿಕ್’ (ಛಾಯಾಚಿತ್ರ ತೆಗೆಯಲು ಸಂಚಾರಿವಾಣಿಯನ್ನು ಇಡುವ ಸ್ಟ್ಯಾಂಡ್) ಇತ್ತು. ಅವರಲ್ಲಿ ಒಬ್ಬ ಯುವಕ ‘ಸೆಲ್ಫೀ ಸ್ಟಿಕ್‌’ನ ಮೇಲೆ ಸಂಚಾರಿವಾಣಿ ಅಳವಡಿಸಿ ಯುವತಿಯ ಛಾಯಾಚಿತ್ರ ತೆಗೆಯುತ್ತಿದ್ದನು, ಇನ್ನೊಬ್ಬ ಯುವಕ ಸೆಲ್ಫೀ ಸ್ಟಿಕ್‌ನಿಂದ ಆ ಯುವತಿಗೆ ಹಿಂದಿನಿಂದ ಹೊಡೆಯುತ್ತಿದ್ದನು. ಪ್ರಾರಂಭದಲ್ಲಿ ನನಗೆ ಅವರು ಗೆಳೆಯ-ಗೆಳತಿಯರಿರಬಹುದೆಂದು ಅನಿಸಿತು, ‘ಅವರು ಗೆಳೆಯ-ಗೆಳತಿಯರಿರಬಹುದು; ಆದರೆ ಆ ಯುವತಿ ಆ ಇಬ್ಬರನ್ನು ದೂರ ತಳ್ಳಲು ಪ್ರಯತ್ನಿಸುತ್ತಿದ್ದಳು ಹಾಗೂ ಅವಳು ಅಳುತ್ತಿದ್ದಳು’. ಅದನ್ನು ನೋಡಿ ನಾನು ಸಿಡಿಮಿಡಿಗೊಂಡೆ.

೨. ಯುವತಿಗೆ ತೊಂದರೆ ಕೊಡುವ ಆ ಯುವಕರನ್ನು ಎದುರಿಸಲು ಗುರುದೇವರು ಸೂಕ್ಷ್ಮದಿಂದ ಸಾಧಕಿಗೆ ಧೈರ್ಯ ಕೊಡುವುದು ಹಾಗೂ ಸಾಧಕಿಯು ತರಬೇತಿ ವರ್ಗದಲ್ಲಿ ಕಲಿಸಿದಂತೆ ಯುವಕರಿಗೆ ಪ್ರಹಾರ ಮಾಡಿದಾಗ ಇಬ್ಬರೂ ಓಡಿ ಹೋಗುವುದು

ಅನಂತರ ನಾನು ಗುರುದೇವರಿಗೆ (ಪರಾತ್ಪರ ಗುರು ಡಾ. ಆಠವಲೆಯವರಿಗೆ) ಸೂಕ್ಷ್ಮದಿಂದ ಹೇಳಿದೆ,  ”ಗುರುದೇವರೇ,  ಇಲ್ಲಿ ಏನು ಘಟಿಸುತ್ತಿದೆಯೊ, ಇದನ್ನು ನೀವು ನೋಡುತ್ತಿದ್ದೀರಿ ! ನಾನು ಈಗ ಏನು ಮಾಡಲಿ ?’, ಎಂಬುದು ನನಗೆ ತಿಳಿಯುವುದಿಲ್ಲ.’ ಆಗ ಗುರುದೇವರು ಸೂಕ್ಷ್ಮದಲ್ಲಿ ನನಗೆ ಹೇಳಿದರು, ‘ಸಂಧ್ಯಾ, ನೀನು ಮುನ್ನುಗ್ಗು, ನಾನಿದ್ದೇನೆ !’ ಅದೇ ಕ್ಷಣ ನಾನು ಗುರುದೇವರು, ಭವಾನಿ ದೇವಿ ಮತ್ತು ಶ್ರೀಕೃಷ್ಣ ಇವರಿಗೆ ಪ್ರಾರ್ಥನೆ ಮಾಡಿ ಹೆಜ್ಜೆ ಮುಂದಿಟ್ಟೆ. ಆ ಇಬ್ಬರು ಯುವಕರು ಅಕ್ಕಪಕ್ಕದಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತುಕೊಂಡಿದ್ದರು. ನಾನು ಅವರ ಬಲಬದಿಯಿಂದ ಮುಂದೆ ಹೋದೆ. ನಾನು ಅವರ ಸಮೀಪ ಹೋಗುತ್ತಿದ್ದಂತೆಯೆ ನನ್ನ ಬಲಗಾಲು ಎತ್ತಲ್ಪಟ್ಟು ಜೋರಾಗಿ ಪ್ರಹಾರ (ಸ್ವರಕ್ಷಣೆಯ ತರಬೇತಿಗನುಸಾರ) ಮಾಡಿದೆ. ಅದರಿಂದ ಆ ಯುವಕರಿಬ್ಬರೂ ಕೆಳಗೆ ಬಿದ್ದರು. ಒಬ್ಬ ಯುವಕನ ಕಣ್ಣಿನ ಬದಿಗೆ ತುಂಬಾ ಆಘಾತವಾಗಿತ್ತು; ಅವನಿಗೆ ಏಳಲು ಆಗುತ್ತಿರಲಿಲ್ಲ; ಆದರೆ ಇನ್ನೊಬ್ಬ ಎದ್ದು ಬಂದು ಕೈಯಲ್ಲಿದ್ದ ‘ಸೆಲ್ಫೀ ಸ್ಟಿಕ್‌’ನಿಂದ ನನಗೆ ಪ್ರಹಾರ ಮಾಡಲು ಪ್ರಯತ್ನಿಸಿದ. ಅಷ್ಟರಲ್ಲಿ ನಾನು ನನ್ನ ಕೈಯಿಂದ ಅದನ್ನು ತಡೆದು ಅವನ ‘ಸೆಲ್ಫೀ ಸ್ಟಿಕ್‌’ನಿಂದಲೆ ಅವನಿಗೆ ಹೊಡೆದೆ. ಅನಂತರ ಅವರಿಬ್ಬರೂ ಅಲ್ಲಿಂದ ಓಡಿ ಹೋದರು.

೩. ಸಮಾಜದ ವ್ಯಕ್ತಿ ಸಾಧಕಿಯನ್ನು ಪ್ರಶಂಸೆ ಮಾಡುವುದು

ಓರ್ವ ವೃದ್ಧ ವ್ಯಕ್ತಿಯು ಈ ಘಟನೆಯನ್ನು ನೋಡುತ್ತಿದ್ದರು. ಅವರು ನನ್ನನ್ನು ಸಮೀಪಕ್ಕೆ ಕರೆದು ನನಗೆ ಹಣ ಕೊಡಲು ಮುಂದಾದರು. ಆಗ ನಾನು ಅವರಿಗೆ ಹೇಳಿದೆ, ”ಅಜ್ಜಾ, ನನಗೆ ಹಣ ಬೇಡ, ನಿಮ್ಮ ಆಶೀರ್ವಾದ ಬೇಕಾಗಿದೆ.”

೪. ಕಠಿಣ ಪ್ರಸಂಗವನ್ನು ಎದುರಿಸುವ ಸಾಮರ್ಥ್ಯ ಕೇವಲ ಈಶ್ವರಭಕ್ತಿ ಮತ್ತು ಗುರುಭಕ್ತಿಯಿಂದಲೇ ಸಾಧ್ಯ

ನನ್ನ ಸ್ವಸಂರಕ್ಷಣ ತರಬೇತಿ ಪೂರ್ಣವಾಗದಿದ್ದರೂ ಗುರುದೇವರು, ಭವಾನಿ ದೇವಿ ಮತ್ತು ಶ್ರೀಕೃಷ್ಣ ಇವರ ಕೃಪೆಯಿಂದ ನನಗೆ ಆ ಇಬ್ಬರು ಯುವಕರನ್ನು ಎದುರಿಸಲು ಸಾಧ್ಯವಾಯಿತು. ಆಗ ನನಗೆ ‘ಸ್ವರಕ್ಷಣಾ ತರಬೇತಿ ಎಷ್ಟು ಚೆನ್ನಾಗಿ ಬರುತ್ತದೆ, ಎನ್ನುವುದಕ್ಕಿಂತಲೂ ನಮ್ಮ ಗುರು ಮತ್ತು ಈಶ್ವರನಲ್ಲಿನ ಭಕ್ತಿ ಮತ್ತು ಶ್ರದ್ಧೆ ಮಹತ್ವದ್ದಾಗಿದೆ ಎಂಬುದು ಅರಿವಾಯಿತು. ನಮ್ಮಲ್ಲಿ ಯಾವುದೇ ಪ್ರಸಂಗವನ್ನು ಎದುರಿಸುವ ಸಾಮರ್ಥ್ಯ ಕೇವಲ ಈಶ್ವರ ಮತ್ತು ಗುರುಭಕ್ತಿಯೆ ನಿರ್ಮಾಣ ಮಾಡಲು ಸಾಧ್ಯ.’

೫. ನನ್ನ ಧೈರ್ಯವನ್ನು ನೋಡಿ ಆ ಯುವತಿ ಹೇಳಿದಳು, ”ನನಗೆ ಸ್ವರಕ್ಷಣಾ ತರಬೇತಿ ಪಡೆಯಲಿಕ್ಕಿದೆ. ನೀವು ನಮ್ಮ ಪರಿಸರದಲ್ಲಿ ತರಬೇತಿವರ್ಗವನ್ನು ಆರಂಭಿಸಿರಿ.’

ನಾನು ಗುರುಚರಣಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದೆ.’

– ಕು. ಸಂಧ್ಯಾ ಕುರಾಪಾಟಿ (೧೯ ವರ್ಷ), ಸೋಲಾಪುರ (೧೧.೧.೨೦೨೫)

(ಇಂತಹ ಸಾಧಕಿಯರೆ ದೇಶದ ಶಕ್ತಿಯಾಗಿದ್ದಾರೆ. ಸದ್ಯ ಮಹಿಳೆಯರ ಮೇಲಾಗುವ ಅತ್ಯಾಚಾರ ಮತ್ತು ಲವ್‌ ಜಿಹಾದ್‌ನ ಘಟನೆಗಳನ್ನು ನೋಡುವಾಗ ಕಾಲಾನುಸಾರ ‘ಎಲ್ಲ ಮಹಿಳೆಯರು ಸ್ವರಕ್ಷಣಾ ತರಬೇತಿ ಪಡೆಯುವುದು’, ಅತ್ಯಂತ ಆವಶ್ಯಕವಾಗಿದೆ.’- ಸಂಕಲನಕಾರರು)