ನಾವು ಭಾರತದಲ್ಲಿ ಜನಿಸಿದೆವು ಈ ಸಂಸ್ಕೃತಿಯಲ್ಲಿ ಬೆಳೆದೆವು ಇದರ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೆ ಅಭಿಮಾನವಿರಬೇಕು

ಯೋಗಋಷಿ ರಾಮದೇವಬಾಬಾ

ಜಗತ್ತಿಗೆ ಭಾಷೆ, ಅರ್ಥವ್ಯವಸ್ಥೆ, ನ್ಯಾಯವ್ಯವಸ್ಥೆ, ಶಿಕ್ಷಣವ್ಯವಸ್ಥೆ, ಗಣಿತ, ಸಂಸ್ಕೃತಿ, ಆರೋಗ್ಯಶಾಸ್ತ್ರ ಮತ್ತು ಎಲ್ಲವನ್ನು ಮೊದಲು ಕಲಿಸಿದ್ದು ಭಾರತ. ನಮ್ಮ ಸಂಸ್ಕೃತಿಯು ಇಷ್ಟು ಪ್ರಾಚೀನವಾಗಿರುವಾಗ ಪ್ರಸ್ತುತ ನಾವು ಮಾತ್ರ ಇತರ ದೇಶಗಳತ್ತ ನೋಡುತ್ತಿದ್ದೇವೆ. ೨೦೦ ವರ್ಷಗಳ ಹಿಂದೆ ಅಲೋಪಥಿಯು ಅಸ್ತಿತ್ವದಲ್ಲಿರಲಿಲ್ಲ ಆಗ ಯಾವ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು? ಜಗತ್ತು ನಮ್ಮಲ್ಲಿಗೆ ಕಲಿಯಲು ಬರುತ್ತದೆ. ಆದುದರಿಂದ ನಾವು ಈ ದೇಶದಲ್ಲಿ ಜನಿಸಿದೆವು, ಈ ಸಂಸ್ಕೃತಿಯಲ್ಲಿ ಬೆಳೆದೆವು, ಇದರ ಬಗ್ಗೆ ನಮಗೆ ಅಭಿಮಾನವಿರಬೇಕು.

– ಯೋಗಋಷಿ ರಾಮದೇವಬಾಬಾ (೨೯.೪.೨೦೧೧)