ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ |
ನಿರ್ವಿಘ್ನಂ ಕುರುಮೇ ದೇವ, ಸರ್ವ ಕಾರ್ಯೇಷು ಸರ್ವದಾ ||
ಗಣಪತಿಯಲ್ಲಿ ಶಕ್ತಿ, ಬುದ್ಧಿ, ಸಂಪತ್ತು ಎಂಬ ಗುಣಗಳಿದ್ದು ಅವನು ಸಾತ್ತ್ವಿಕನಾಗಿದ್ದಾನೆ. ಅವನು ಭಕ್ತರ ಮೇಲೆ ಅನುಕಂಪ ತೋರಿಸುವವನಾಗಿದ್ದಾನೆ. ಗಣಪತಿಯು ವಿದ್ಯೆ, ಬುದ್ಧಿ ಮತ್ತು ಸಿದ್ಧಿಯ ದೇವತೆ ಆಗಿದ್ದಾನೆ. ಅವನು ದುಃಖಹರ್ತಾ ಆಗಿದ್ದಾನೆ, ಆದ್ದರಿಂದ ಪ್ರತಿಯೊಂದು ಮಂಗಲ ಕಾರ್ಯವನ್ನು ಗಣೇಶ ಪೂಜೆಯಿಂದ ಆರಂಭ ಮಾಡುತ್ತಾರೆ. ಗಣೇಶನ ಸ್ತುತಿಯಿಂದಲೇ ವಿದ್ಯಾರಂಭ ಮತ್ತು ಗ್ರಂಥ ಆರಂಭವನ್ನು ಮಾಡುತ್ತಾರೆ.
ಗಣೇಶ ಚತುರ್ಥಿಯಂದೇ ಗಣೇಶೋತ್ಸವ ಆರಂಭ ಏಕೆ ?
ತತ್ತ್ವಜ್ಞಾನಿ ಮಹನೀಯರ ಭಾವನೆ ಮತ್ತು ಮಾನ್ಯತೆ ಏನೆಂದರೆ, ಸತ್ವ, ರಜ, ಮತ್ತು ತಮ ಈ ಮೂರು ಗುಣಗಳಿವೆ. ಅವುಗಳಿಗೆ ಅಧಿಕಾರ ನೀಡುವ ಚೈತನ್ಯವು ನಾಲ್ಕನೆಯದಾಗಿದೆ. ಜಾಗೃತ, ಸ್ವಪ್ನ ಮತ್ತು ಸುಷುಪ್ತಿ ಈ ೩ ಅವಸ್ಥೆಗಳನ್ನು ನೋಡುವ ತುರ್ಯಾವಸ್ಥೆಯು ನಾಲ್ಕನೆಯ ಅವಸ್ಥೆ ಆಗಿದೆ. ಭೂತ, ಭವಿಷ್ಯ ಮತ್ತು ವರ್ತಮಾನ ಈ ಮೂರು ಕಾಲಗಳನ್ನು ಯಾವನು ನೋಡುತ್ತಾನೆ, ಅವನು ಕಾಲಾತೀತನಾಗಿದ್ದಾನೆ, ನಾಲ್ಕನೆಯ ವನಾಗಿದ್ದಾನೆ. ಯಾರಿಗೆ ಜ್ಞಾನಮಾರ್ಗದ ಸಾಕ್ಷಾತ್ಕಾರವಾಗಿದೆ, ಆ ಮಹಾಪುರುಷರ ಅನುಭವ ಏನೆಂದರೆ, ಮೂರು ಅವಸ್ಥೆಗಳು ಸಂಸಾರದ್ದಾಗಿವೆ ಮತ್ತು ನಾಲ್ಕನೆಯ ಅವಸ್ಥೆ ಇದು ಚೈತನ್ಯ ಸ್ವರೂಪದ ಸಾಕ್ಷಿ ಆಗಿದೆ. ಈ ಎಲ್ಲಾ ಕಾರಣಗಳಿಂದ ಗಣೇಶೋತ್ಸವವನ್ನು ಗಣೇಶಚತುರ್ಥಿಯಂದು ಆರಂಭಿಸಲಾಗಿದೆ. ೧೦-೧೧ ದಿನ ಉತ್ಸವ ಆಚರಿಸಿ ಶ್ರೀ ಗಣೇಶ ಮೂರ್ತಿಯ ವಿಸರ್ಜನೆ ಮಾಡುತ್ತಾರೆ.
ಹಿಂದೂ ಧರ್ಮದ ದೇವತೆಗಳ ಔದಾರ್ಯ !ಸನಾತನ ಧರ್ಮವು ಎಷ್ಟು ವಿಶಾಲ ಮತ್ತು ಉದಾರವಾಗಿದೆ ಎಂದರೆ, ನಿಮಗೆ ತಮ್ಮ ಮೂಲ ಸ್ವರೂಪ ತಿಳಿಯುವುದಕ್ಕಾಗಿ ಧರ್ಮವು ಹೇಗೆಲ್ಲಾ ಮಂಡಿಸಿ ಇಟ್ಟಿದೆ ಎಂದರೆ, ನಮಗೆ ಅದರ ಮೂಲ ಸ್ವರೂಪದಲ್ಲಿ ಸ್ಥಿತಿ ಇದೆ. ಅದರ ಮೂರ್ತಿ ತಯಾರಿಸಿ ಅದರ ಎದುರು ಹಾಡಿರಿ ಅಥವಾ ನೃತ್ಯ ಮಾಡಿರಿ. ನಿಮ್ಮ ಅಹಂಕಾರದ ವಿಸರ್ಜನೆಯನ್ನು ಮಾಡಿರಿ. ನಿಮ್ಮ ಅಹಂಕಾರ ವಿಸರ್ಜಿತಗೊಳಿಸುವುದರ ಜೊತೆಗೆ ಸಹಾಯ ಮಾಡುವ ಮೂರ್ತಿಯ ವಿಸರ್ಜನೆ ಮಾಡುವ ವ್ಯವಸ್ಥೆ ಕೂಡ ಇದೆ. ನಿಮ್ಮ ದೇವತೆಗಳು ನಿಮ್ಮ ಮೇಲೆ ಅಸಂತುಷ್ಟರಾಗುವುದಿಲ್ಲ. ನಿಮ್ಮ ಕಲ್ಯಾಣವಾಗುವುದನ್ನು ನೋಡಿ ಅವರು ಪ್ರಸನ್ನರಾಗುತ್ತಾರೆ, ಇದು ನಮ್ಮ ಹಿಂದೂ ಧರ್ಮದಲ್ಲಿನ ದೇವತೆಗಳ ಉದಾರತೆ ಆಗಿದೆ. ದೇವರ ಮೂರ್ತಿಯ ವಿಸರ್ಜನೆ ಆದ ನಂತರ ಕೂಡ ಅದರಲ್ಲಿ ದೇವತ್ವ ಇರುತ್ತದೆ. ಮನುಷ್ಯ ಶರೀರದ ವಿಸರ್ಜನೆ (ಮೃತ ದೇಹಕ್ಕೆ ಅಗ್ನಿ ನೀಡಿದ ನಂತರ ಕೂಡ) ಆದ ನಂತರ ಕೂಡ ಆತ್ಮತತ್ತ್ವ ಇರುತ್ತದೆ. ಈ ಸತ್ಯಸ್ವರೂಪವನ್ನು ತಿಳಿದುಕೊಳ್ಳುವುದಕ್ಕಾಗಿ ಸಾಧನೆ ಮತ್ತು ಸತ್ಸಂಗದ ಮಹತ್ವ ತಿಳಿದುಕೊಳ್ಳಬೇಕು. (ಆಧಾರ : ಮಾಸಿಕ ಋಷಿ ಪ್ರಸಾದ, ಆಗಸ್ಟ್ ೨೦೨೨) |