ಶ್ರಾವಣ ಕೃಷ್ಣ ಚತುರ್ದಶಿ’ಯಂದು (ಸಪ್ಟೆಂಬರ್ ೧ ರಂದು) ತಿಥಿಗನುಸಾರ ಸ್ವಾತಂತ್ರ್ಯದಿನವಿದೆ. ಆ ನಿಮಿತ್ತ …
ದೇಶದಾದ್ಯಂತ ಆಗಸ್ಟ್ ೧೫ ರಂದು ಸ್ವಾತಂತ್ರ್ಯದಿನವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ೧೯೪೭ ರಲ್ಲಿ ಆಗಸ್ಟ್ ೧೫ ರಂದೇ ದೇಶವು ಬ್ರಿಟಿಷ್‌ರ ಗುಲಾಮಗಿರಿಯಿಂದ ಮುಕ್ತವಾಯಿತು ಮತ್ತು ಈ ದಿನದಿಂದ ಪ್ರತಿವರ್ಷ ಆಗಸ್ಟ್ ೧೫ ರಂದು ದೇಶದಾದ್ಯಂತ ಸ್ವಾತಂತ್ರ್ಯದಿನ ವನ್ನು ಆಚರಿಸಲಾಗುತ್ತದೆ; ಆದರೆ ಮಧ್ಯಪ್ರದೇಶದ ಒಂದು ಸ್ಥಳದಲ್ಲಿ, ಸ್ವಾತಂತ್ರ್ಯದಿನವನ್ನು ತಿಥಿಗನುಸಾರವೇ ಆಚರಿಸಲಾಗುತ್ತದೆ. ಆ ಸ್ಥಳವೆಂದರೆ ಮಂದಸೌರನ ಪಶುಪತಿನಾಥ ದೇವಸ್ಥಾನ !
ಪರಂಪರೆಗನುಸಾರ ಪಶುಪತಿನಾಥ ದೇವಸ್ಥಾನದಲ್ಲಿ ಗರಿಕೆಯ ಅಭಿಷೇಕ ಮಾಡಿ ಸ್ವಾತಂತ್ರ್ಯದಿನವನ್ನು ಆಚರಿಸಲಾಯಿತು. ದೇವಸ್ಥಾನದ ಅರ್ಚಕ ಕೈಲಾಶ ಭಟ್ಟ ಇವರು, ಶ್ರಾವಣ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು; ಆದುದರಿಂದಲೇ ಹಳೆಯ ನಂಬಿಕೆಗನುಸಾರ, ಭಗವಾನ ಪಶುಪತಿನಾಥರಿಗೆ ಗರಿಕೆಯ ಅಭಿಷೇಕ ಮಾಡಿ ತಿಥಿಗನುಸಾರ ಸ್ವಾತಂತ್ರ್ಯದಿನ ವನ್ನು ಆಚರಿಸಲಾಗುತ್ತಿದೆ’, ಎಂದು ಹೇಳುತ್ತಾರೆ.
ದೇವಸ್ಥಾನದ ಸಮಿತಿಗೆ ಸಂಬಂಧಿಸಿದ ಜನರು, ‘ಕೊರೊನಾ ವಿಷಾಣುವಿನ ಉತ್ಪತ್ತಿಯಿಂದಾಗಿ ಎರಡು ವರ್ಷ ಪಶುಪತಿನಾಥ ದೇವಸ್ಥಾನದಲ್ಲಿ ಸ್ವಾತಂತ್ರ್ಯದಿನ ವನ್ನು ಸೀಮಿತ ರೂಪದಲ್ಲಿ ಆಚರಿಸಲಾಗುತ್ತಿತ್ತು, ಆದರೆ ಮರುವರ್ಷ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು, ಎಂದು ಹೇಳಿದರು. ದೇವಸ್ಥಾನದ ಆಡಳಿತಕ್ಕನುಸಾರ, ಮಂದಸೌರನ ಈ ಪ್ರಾಚೀನ ದೇವಸ್ಥಾನವು ೧೯೮೫ ರಿಂದ ‘ಶ್ರಾವಣ ಕೃಷ್ಣ ಚತುರ್ದಶಿ’ ಈ ತಿಥಿಯಂದು ‘ಸ್ವಾತಂತ್ರ್ಯದಿನ’ವನ್ನು ಆಚರಿಸುವ ಸಂಪ್ರದಾಯವನ್ನು ಅನುಸರಿಸುತ್ತಿದೆ.
(ಆಧಾರ : ದೈನಿಕ ‘ಸಕಾಳ’)