‘ಬಾಲಿವುಡ್‌ನ ಹಿಂದೂದ್ವೇಷ !’ ಈ ವಿಚಾರಸಂಕೀರಣದಲ್ಲಿ ‘ಸೆನ್ಸಾರ್ ಬೋರ್ಡ್’ನ ವ್ಯವಹಾರದ ಗುಟ್ಟು ರಟ್ಟು !

ಭಾರತವು ‘ಹಿಂದೂ ರಾಷ್ಟ್ರ’ವಾದ ನಂತರ ಬಾಲಿವುಡ್‌ನವರಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯವಾಗುವುದಿಲ್ಲ ! – ಶ್ರೀ. ಶರದ ಪೋಂಕ್ಷೆ, ಖ್ಯಾತ ಚಲನಚಿತ್ರ ನಟ

ಈ ದೇಶದ ವಿಭಜನೆ ಧರ್ಮದ ಹೆಸರಿನಲ್ಲಾದ ನಂತರ ಮುಸಲ್ಮಾನರಿಗೆ ಪಾಕಿಸ್ತಾನವು ‘ಇಸ್ಲಾಮಿ ರಾಷ್ಟ್ರ’ವೆಂದು ದೊರಕಿತು; ಆದರೆ ಕಾಂಗ್ರೆಸ್ ನ ಹೇಸಿಗೆ ತರಿಸುವಂತಹ ರಾಜಕಾರಣದಿಂದ ಭಾರತವು ಹಿಂದೂಗಳಿಗೆ ದೊರಕದೇ ‘ಸೆಕ್ಯುಲರ್’ ದೇಶವಾಯಿತು. ಇದರ ಅನೇಕ ದೂರಗಾಮಿ ಪರಿಣಾಮಗಳಾದವು. ಇದರಲ್ಲಿ ಒಂದೆಂದರೆ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮದ ವಿರುದ್ಧ ಕಾರ್ಯ ಮಾಡುತ್ತಿರುವ ಬಾಲಿವುಡ್‌ನಲ್ಲಿನ ಕೆಲವು ಗುಂಪುಗಳು; ಅವು ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಿವೆ. ಯಾವ ಸಮಯದಲ್ಲಿ ಈ ಭಾರತ ದೇಶವು ‘ಹಿಂದೂ ರಾಷ್ಟ್ರ’ವಾಗುವುದೋ, ಆಗ ಈ ಜನರು ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯ ತೋರಿಸಲಾರರು. ಇಸ್ಲಾಮ್‌ನ ವಿರುದ್ಧ ಏನೇ ಘಟಿಸಿದರೂ, ಅವರ ಜನರು ಬೀದಿಗಿಳಿಯುತ್ತಾರೆ. ಆ ರೀತಿ ಹಿಂದೂಗಳೂ ಮಾಡಬೇಕು, ಎಂಬ ಹೇಳಿಕೆಯನ್ನು ಪ್ರಸಿದ್ಧ ಮರಾಠಿ ಚಲನಚಿತ್ರ ನಟ ಶ್ರೀ. ಶರದ ಪೋಂಕ್ಷೆ ಇವರು ನೀಡಿದರು. ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ಬಾಲಿವೂಡ್‌ನ ಹಿಂದೂದ್ವೇಷ !’, ಈ ‘ಆನ್‌ಲೈನ್ ವಿಚಾರಸಂಕೀರಣ’ದಲ್ಲಿ ಅವರು ಮಾತನಾಡುತ್ತಿದ್ದರು.

ತಮಿಳು ಬರದಿದ್ದರೂ ‘ತಮಿಳು ಚಲನಚಿತ್ರ’ ಸೆನ್ಸಾರ್ ಮಾಡಲು ಆಗ್ರಹಿಸುವುದು ! – ಶ್ರೀ. ಸತೀಶ ಕಲ್ಯಾಣಕರ

‘ಸೆನ್ಸಾರ್ ಬೋರ್ಡ್’ನ ವ್ಯವಹಾರದ ಗುಟ್ಟನ್ನು ರಟ್ಟು ಮಾಡುವಾಗ ‘ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ’ಯ ಮಾಜಿ ಸದಸ್ಯ ಶ್ರೀ. ಸತೀಶ ಕಲ್ಯಾಣಕರ ಇವರು, ಚಲನಚಿತ್ರಗಳಿಂದ ದೊಡ್ಡ ಪ್ರಮಾಣದಲ್ಲಿ ಬೋಧನೆಯಾಗುವುದರಿಂದ ಸೆನ್ಸಾರ್ ಬೋರ್ಡ್ ಮೇಲೆ ದೊಡ್ಡ ಜವಾಬ್ದಾರಿ ಇದೆ. ಯಾವುದೇ ಧರ್ಮವನ್ನು ಗುರಿ ಮಾಡುವ ದೃಶ್ಯಗಳಿರಬಾರದೆಂದು, ಕಾನೂನಿನಲ್ಲಿ ಎಲ್ಲ ಪ್ರಕಾರದ ಕಲಮ್‌ಗಳಿವೆ. ‘ಪಿ.ಕೆ.’ ಚಲನಚಿತ್ರದ ಸಮಯದಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ವರ್ಜ್ಯಗೊಳಿಸದಿದ್ದರೆ ಸಮಾಜದಲ್ಲಿ ಅಶಾಂತತೆಯು ನಿರ್ಮಾಣವಾಗುವುದು, ಎಂದು ನಾನು ಲಿಖಿತ ಸ್ವರೂಪದಲ್ಲಿ ನೀಡಿದ್ದೆನು. ಆದರೂ ಆ ದೃಶ್ಯಗಳನ್ನು ತೆಗೆದುಹಾಕಲಿಲ್ಲ. ನಂತರ ಚಲನಚಿತ್ರಕ್ಕೆ ವ್ಯಾಪಕವಾಗಿ ವಿರೋಧವಾಯಿತು. ಎಲ್ಲಕ್ಕಿಂತ ದೊಡ್ಡ ವಿಷಾದದ ಸಂಗತಿಯೆಂದರೆ ನನಗೆ ತಮಿಳು ಭಾಷೆ ಬರದಿದ್ದರೂ ಒಂದು ತಮಿಳು ಚಲನಚಿತ್ರದ ‘ಸೆನ್ಸಾರ್’ ಮಾಡಲು ‘ಸೆನ್ಸಾರ್ ಬೋರ್ಡ್’ ಅಧಿಕಾರಿಗಳು ನನಗೆ ಆಗ್ರಹ ಮಾಡಿದರು. ನಾನು ನಿರಾಕರಿಸದಾಗ ಅವರು ‘ಕೇವಲ ದೃಶ್ಯಗಳನ್ನು (ಸೀನ್) ನೋಡಿ ಸೆನ್ಸಾರ್ ಮಾಡಿರಿ’ ಎಂದು ಹೇಳಿದರು. ಒಟ್ಟಾರೆ ಸೆನ್ಸಾರ್ ಬೋರ್ಡ್ ಎಂದರೆ ಒಂದು ಹಾಸ್ಯಾಸ್ಪದ ವಿಷಯವಾಗಿ ಹೋಗಿದೆ. ಯಾವುದೇ ರೀತಿಯಲ್ಲಿ ಸಮ್ಮತಿ ಸಿಗುತ್ತಿರುವುದರಿಂದ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಪಕರು ಚಲನಚಿತ್ರವನ್ನು ತಯಾರಿಸುತ್ತಿದ್ದಾರೆ. ವಾಸ್ತವದಲ್ಲಿ ಸೆನ್ಸಾರ್ ಬೋರ್ಡ್’ಗೆನೇ ಪ್ರಶಿಕ್ಷಣವನ್ನು ನೀಡುವ ಆವಶ್ಯಕತೆ ಇದೆ’, ಎಂದು ಹೇಳಿದರು.

‘ಹಿಂದೂ ಐ.ಟಿ. ಸೆಲ್‌ನ ಶ್ರೀ. ರಮೇಶ್ ಸೋಲಂಕಿ ಇವರು ಮಾತನಾಡುತ್ತಾ, ಬಾಲಿವುಡ್‌ನಲ್ಲಿರುವ ಹಣವೆಲ್ಲವೂ ಅಪರಾಧ ಜಗತ್ತಿನಿಂದ ಪೂರೈಕೆಯಾಗುವುದರಿಂದ, ಹಿಂದೂ ಧರ್ಮವನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುವ ಚಲನಚಿತ್ರಗಳ ಸರಣಿ ನಿರ್ಮಿಸಲಾಗುತ್ತಿದೆ. ಇದರಿಂದ ಸಾವಿರಾರು ಕೋಟಿ ರೂಪಾಯಿಗಳ ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಮಾಡಲಾಗುತ್ತದೆ. ‘ರಾವಣ-ಲೀಲಾ’ ಎಂಬ ಚಲನಚಿತ್ರ ಮತ್ತು ‘ಕನ್ಯಾದನ್’ ನಂತಹ ಜಾಹಿರಾತುದಾರರು ಇತರ ಪಂಥಗಳ ಹಲಾಲಾ, ಕನ್ಫೆಶನ್ ಪದ್ದತಿಯಿಂದ ಆಗುವ ಅತ್ಯಾಚಾರಗಳ ಬಗ್ಗೆ ಚಲನಚಿತ್ರಗಳನ್ನು ಏಕೆ ನಿರ್ಮಿಸುತ್ತಿಲ್ಲ ?, ಎಂದರು.

ಈ ಸಮಯದಲ್ಲಿ, ‘ಹಿಂದೂ ಜನಜಾಗೃತಿ ಸಮಿತಿ’ ಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ರಾಜ್ಯ ಸಮನ್ವಯಕರಾದ ಶ್ರೀ. ಸುನೀಲ್ ಘನವಟ ಇವರು ಮಾತನಾಡುತ್ತಾ, ಗದರ್ ಚಲನಚಿತ್ರದಲ್ಲಿ ನಟಿಯ ಹೆಸರು ‘ಸಕಿನಾ’ ಮತ್ತು ಇನ್ನೊಂದು ಚಲನಚಿತ್ರದಲ್ಲಿ ಜಾನಿ ಲಿವರ್‌ನ ‘ಅಬ್ದುಲ್ಲಾ’ ಹೆಸರಿನ ಬಗ್ಗೆ ಆಕ್ಷೇಪದ ನಂತರ ಆ ಹೆಸರುಗಳನ್ಣೇ ಸಂಪೂರ್ಣವಾಗಿ ಕೈಬಿಡಲಾಗುತ್ತದೆ; ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಸೆನ್ಸಾರ್ ಬೋರ್ಡ್ ಏಕೆ ನೋಡುವುದಿಲ್ಲ ? ಸೆನ್ಸಾರ್ ಬೋರ್ಡ್‌ನಲ್ಲಿ ಒಂದು ಧಾರ್ಮಿಕ ಪ್ರತಿನಿಧಿಯನ್ನು ನೇಮಿಸಬೇಕು, ಎಂದು ನಮ್ಮ ಹಳೆಯ ಬೇಡಿಕೆಯಾಗಿದೆ; ಇಂದು ಕೇವಲ ‘ರಾವಣ-ಲೀಲಾ’ದಂತಹ ಚಲನಚಿತ್ರಗಳು ಮಾತ್ರವಲ್ಲ, ಮರಾಠಿ-ಹಿಂದಿ ಭಾಷೆಯ ೪೮ ಕ್ಕೂ ಹೆಚ್ಚು ದೂರದರ್ಶನ ಮಾಲಿಕೆಗಳಿಂದ ಹಿಂದೂ ಧರ್ಮ, ಸಂಸ್ಕೃತಿ ಮತ್ತು ಕುಟುಂಬ ವ್ಯವಸ್ಥೆಯ ಮೇಲೆ ಆಘಾತ ಮಾಡಲಾಗುತ್ತಿವೆ. ಅಂತಹ ನಿರ್ಮಾಪಕರನ್ನು ಜೈಲಿಗೆ ಹಾಕಬೇಕು. ಆಗ ಮಾತ್ರ ಹೀಗೆ ಮಾಡುವ ಮುಂಚೆ ಇತರರು ನಾಲ್ಕು ಬಾರಿ ಯೋಚಿಸುವಂತಾಗುತ್ತದೆ, ಎಂದರು.