ನೇಪಾಳದಲ್ಲಿ ಪುನಃ ರಾಜಶಾಹಿಯನ್ನು ಸ್ಥಾಪಿಸಿ ಹಿಂದೂ ರಾಷ್ಟ್ರವನ್ನು ಘೋಷಿಸುವ ಬೇಡಿಕೆಯಲ್ಲಿ ಏರಿಕೆ !

ಕಾಠಮಾಂಡು (ನೇಪಾಳ) – ನೇಪಾಳದಲ್ಲಿ ಪುನಃ ರಾಜರ ಆಡಳಿತ ತಂದು ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಬೇಡಿಕೆಯು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕಾಠಮಾಂಡುವಿನಲ್ಲಿ ಹಿಂದಿನ ರಾಜ ಜ್ಞಾನೇಂದ್ರ ಶಹಾರವರ ಸಮರ್ಥಕರು ನೇಪಾಳದಲ್ಲಿ ಪುನಃ ರಾಜರ ಆಡಳಿತ ಪುನರ್ಸ್ಥಾಪಿಸಲು ಹಾಗೂ ಹಿಂದೂ ಧರ್ಮವನ್ನು ಪುನಃ ರಾಜ್ಯದ ಧರ್ಮವನ್ನಾಗಿಸಲು ಮನವಿ ಮಾಡಿದ್ದಾರೆ. ಜ್ಞಾನೇಂದ್ರ ಶಹಾರವರು ಪಶ್ಚಿಮ ನೇಪಾಳದ ಪ್ರವಾಸದಿಂದ ಹಿಂತಿರುಗುವಾಗ ಮಾರ್ಚ್ ೯ ರಂದು ಕಾಠಮಾಂಡುವಿನಲ್ಲಿರುವ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ೧೦ ಸಾವಿರ ಜನರು ಸೇರಿದ್ದರು. ಈ ಸಮಯದಲ್ಲಿ ಗುಂಪು ‘ರಾಜರಿಗಾಗಿ ಅರಮನೆಯನ್ನು ತೆರವುಗೊಳಿಸಿ’, ‘ರಾಜರೇ ಮರಳಿ ಬನ್ನಿ, ದೇಶವನ್ನು ಉಳಿಸಿ’ ಎಂಬ ಘೋಷಣೆಗಳನ್ನು ಕೂಗಿದರು. ‘ನಮಗೆ ಏನು ಬೇಕು ? ರಾಜರ ಆಡಳಿತ ಹಾಗೂ ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿಸಿ’ ಎಂಬ ಘೋಷಣೆ ಕೂಗಲಾಯಿತು.