ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ ಚಿನ್ಮಯ ಪ್ರಭು ಇವರನ್ನು ಬೇಕಂತಲೇ ಬಿಡುಗಡೆಗೊಳಿಸುತ್ತಿಲ್ಲ ! – ಪೂ. (ನ್ಯಾಯವಾದಿ) ರವೀಂದ್ರ ಘೋಷ್

ಪೂ. (ನ್ಯಾಯವಾದಿ) ರವೀಂದ್ರ ಘೋಷ್ ಇವರ ಆರೋಪ

ಕೋಲಕಾತಾ (ಬಂಗಾಲ) – ಬಾಂಗ್ಲಾದೇಶದಲ್ಲಿನ ಇಸ್ಕಾನ್‌ನ ಸದಸ್ಯ ಚಿನ್ಮಯ ಪ್ರಭು ಇವರನ್ನು ಸಲ್ಲದ ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗಿದೆ. ವಿವಿಧ ಕಾರಣಗಳು ನೀಡಿ ಅವರ ಜಾಮೀನು ಮುಂದೂಡಲಾಗುತ್ತಿದೆ. ಈ ಸಂದರ್ಭದಲ್ಲಿ ಅವರ ನ್ಯಾಯವಾದಿ ಪೂ. ರವೀಂದ್ರ ಘೋಷ್ ಇವರು, ಚಿನ್ಮಯ ಪ್ರಭು ಇವರ ಮೇಲೆ ಆಧಾರ ರಹಿತ ಆರೋಪ ಮಾಡಲಾಗಿದೆ. ಚಿನ್ಮಯ ಪ್ರಭು ಇವರನ್ನು ಜೈಲಿನಿಂದ ಬೇಗನೆ ಬಿಡುಗಡೆ ಆಗಬಾರದು ಎಂದು ಪೊಲೀಸರ ಮತ್ತು ಸರಕಾರದ ಇಚ್ಛೆ ಆಗಿದೆ’, ಎಂದು ಆರೋಪಿಸಿದ್ದಾರೆ. ಆದರೆ ನಾವು ಅವರನ್ನು ಹೊರತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ’, ಎಂದೂ ಸಹ ಹೇಳಿದರು.

ಪೂ. ಘೋಷ್ ಪ್ರಸ್ತುತ ಬಂಗಾಲದ ಬರಾಕಪುರದಲ್ಲಿ ವಾಸಿಸುತ್ತಿದ್ದಾರೆ. ಅವರು ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದಾರೆ. ಕೊಲಕಾತಾದಲ್ಲಿ ಅವರು ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದರು ಮತ್ತು ಇಸ್ಕಾನ್ ಕೊಲಕಾತಾ ಅಧ್ಯಕ್ಷ ರಾಧಾರಮಣ ದಾಸ್ ಇವರನ್ನು ಭೇಟಿ ಮಾಡಿದರು.

ಬಾಂಗ್ಲಾದೇಶಕ್ಕೆ ಹೋಗಿ ಅತ್ಯಾಚಾರ ಸಹಿಸುವವರ ಪರವಾಗಿ ಹೋರಾಡುವೆನು !

ಪೂ. ರವೀಂದ್ರ ಘೋಷ್ ಬಾಂಗ್ಲಾದೇಶದಲ್ಲಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಮತ್ತು ‘ಬಾಂಗ್ಲಾದೇಶ್ ಮೈನಾರಿಟಿ ವಾಚ್’ ನ ಅಧ್ಯಕ್ಷರಾಗಿದ್ದಾರೆ. ಕೊಲಕಾತಾದ ಇಸ್ಕಾನ್ ದೇವಸ್ಥಾನದ ಹೊರಗೆ ಪತ್ರಕರ್ತರ ಜೊತೆಗೆ ಮಾತನಾಡುವಾಗ ಪೂ. ಘೋಷ್ ಇವರು, ನಾನು ಬಾಂಗ್ಲಾದೇಶಕ್ಕೆ ಹೋಗುವೆನು ಮತ್ತು ಅಲ್ಲಿಯ ಅತ್ಯಾಚಾರ ಸಹಿಸುವ ಜನರಿಗಾಗಿ ಹೋರಾಡುವೆನು’, ಎಂದು ಹೇಳಿದರು.

ನಾನು ಚಿನ್ಮಯ ಪ್ರಭು ಇವರ ಪರವಾಗಿ ಹೋರಾಡುತ್ತಲೇ ಇರುವೆ !

ಪೂ. ಘೋಷ್ ಇವರು, ಚಿತಗಾವ ಸತ್ರ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದು ಜಾಮೀನು ಪಡೆಯುವ ಪ್ರಯತ್ನ ಮಾಡಿದ್ದರು; ಆದರೆ ಅವರಿಗೆ ಹಾಗೆ ಮಾಡಲು ಅನುಮತಿ ಇರಲಿಲ್ಲ. ಈಗ ಈ ಪ್ರಕರಣದ ವಿಚಾರಣೆ ಜನವರಿ ೨, ೨೦೨೫ ರಂದು ನಡೆಯುವುದು. ನನ್ನ ಆರೋಗ್ಯ ಸರಿ ಇದ್ದರೆ ನಾನು ಸರ್ವೋಚ್ಚ ನ್ಯಾಯಾಲಯದಲ್ಲಿ ಉಪಸ್ಥಿತನಾಗುವೆ. ನನಗೆ ಅದು ಸಾಧ್ಯವಾಗದೇ ಇದ್ದಲ್ಲಿ ನಾನು ಓರ್ವ ಒಳ್ಳೆಯ ನ್ಯಾಯವಾದಿ ವ್ಯವಸ್ಥೆ ಮಾಡುವೆನು. ನಾನು ಅವರ ಹೋರಾಟ ಮುಂದುವರೆಸುವೆನು’, ಎಂದು ದಾವೆ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ೬ ಸಾವಿರದ ೬೫೦ ದಾಳಿಯ ಘಟನೆಗಳು

ಪೂ. ಘೋಷ್ ಇವರು, ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ ಸ್ಥಾಪನೆಯಾದ ನಂತರ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ೬ ಸಾವಿರದ ೬೫೦ ಘಟನೆಗಳು ಘಟಿಸಿವೆ. ನಾನು ನ್ಯಾಯವಾದಿ ಆಗಿದ್ದು ರಾಜಕಾರಣದ ಜೊತೆಗೆ ನನ್ನ ಸಂಬಂಧವಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನವಾಗಿರಬೇಕು’, ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಲ್ಲಿಯವರೆಗೆ ಸರಕಾರದ ನಿಲುವು ನೋಡಿದರೆ ಪೂ. (ನ್ಯಾಯವಾದಿ) ರವೀಂದ್ರ ಘೋಷ್ ಇವರ ಆರೋಪ ಸುಳ್ಳು ಎಂದು ಅನಿಸುತ್ತಿಲ್ಲ. ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ ಹಿಂದೂ ಮತ್ತು ಭಾರತ ದ್ವೇಷಿ ಆಗಿರುವುದರಿಂದ ಚಿನ್ಮಯ ಪ್ರಭು ಇವರ ಸಂದರ್ಭದಲ್ಲಿ ಜೈಲಿನಲ್ಲಿಯೇ ಏನಾದರೂ ಹೆಚ್ಚು ಕಡಿಮೆ ಮಾಡಿದರೆ, ಆಶ್ಚರ್ಯ ಅನಿಸಬಾರದು. ಅದಕ್ಕು ಮೊದಲೇ ಅವರ ಬಿಡುಗಡೆಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ಮಾಡುವುದು ಅಗತ್ಯವಾಗಿದೆ !