ಸೀತಾಪುರ (ಉತ್ತರಪ್ರದೇಶ) – ಇಲ್ಲಿಯ ಉಪಜಿಲ್ಲಾಧಿಕಾರಿಯ ಆದೇಶದ ನಂತರ ಅನೇಕ ವರ್ಷಗಳಿಂದ ಅಕ್ರಮವಾಗಿ ಕಟ್ಟಲಾಗಿರುವ ಮದರಸಾ ನೆಲೆಸಮ ಮಾಡಲಾಯಿತು. ಭಾಜಪ ನಾಯಕ ಆಶೀಷ ಚೌಧರಿ ಇವರ ದೂರಿನ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಉಪಜಿಲ್ಲಾಧಿಕಾರಿ ಶಿಖಾ ಶುಕ್ಲಾ ಇವರು, ಈ ಅಕ್ರಮ ಮದರಸಾ ಸರಕಾರಿ ಜಾಗದಲ್ಲಿ ಕಟ್ಟಲಾಗಿತ್ತು. (ಸರಕಾರಿ ಜಾಗದ ರಕ್ಷಣೆ ಮಾಡುವ ಜವಾಬ್ದಾರಿ ಸರಕಾರದಾಗಿರುತ್ತದೆ ಅದರ ಜಾಗದಲ್ಲಿ ಈ ರೀತಿ ಕಾಮಗಾರಿ ಯಾರು ಮಾಡುತ್ತಿದ್ದರೆ, ಇದರ ಮಾಹಿತಿ ಅವರಿಗೆ ಹೇಗೆ ಸಿಗುವುದಿಲ್ಲ ? ಸ್ವಂತ ಜಾಗದ ಬಗ್ಗೆ ಸರಕಾರಿ ಅಧಿಕಾರಿಗಳು ಹೀಗೆ ನಿದ್ರೆಸುತ್ತಾರೆಯೆ ? – ಸಂಪಾದಕರು)
೧. ನೆಲಸಮ ಮಾಡಲಾದ ಮದರಸಾ ಸುಮಾರು ೪೦ ವರ್ಷಗಳ ಹಿಂದೆ ಅಹಮದ್ ಮತ್ತು ಹಬೀಬ್ ಇವರು ಕಟ್ಟಿದ್ದರು. (೪೦ ವರ್ಷ ಸರಕಾರದಲ್ಲಿ ಯಾರು ಅಧಿಕಾರಿಗಳಿದ್ದರೂ, ಆ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)
೨. ಈ ಮದರಸಾದ ನೋಂದಣಿ ಇರಲಿಲ್ಲ ಮತ್ತು ಅದು ಯಾವುದೇ ಮಾನ್ಯತೆ ಇಲ್ಲದೆಯೇ ನಡೆಯುತ್ತಿತ್ತು. (ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)
೩. ೨೦೧೮ ರಲ್ಲಿ ನ್ಯಾಯಾಲಯವು ಮದರಸಾವನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು; ಆದರೆ ಆ ಸಮಯದಲ್ಲಿ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ. (ನ್ಯಾಯಾಲಯದ ಆದೇಶದ ನಂತರ ೬ ವರ್ಷ ಕ್ರಮ ಕೈಗೊಳ್ಳದಿರುವ ಇಲಾಖೆಯ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು, ಆಗ ಮಾತ್ರ ಇತರ ಅಧಿಕಾರಿಗಳಿಗೆ ಕಡಿವಾಣ ಬೀಳುತ್ತದೆ !- ಸಂಪಾದಕರು)
ಸಂಪಾದಕೀಯ ನಿಲುವುಇಂತಹ ದೂರು ಏಕೆ ನೀಡಬೇಕಾಗುತ್ತದೆ ? ಸರಕಾರಕ್ಕೆ ಇದು ತಿಳಿದಿಲ್ಲವೇ ? ಸರಕಾರ ಮತ್ತು ಪೊಲೀಸ್ ವ್ಯವಸ್ಥೆ ನಿದ್ರಿಸುತ್ತಿತ್ತೇ ? |