Jain Temple Reopened : ಮೂರಾದಾಬಾದ್ (ಉತ್ತರ ಪ್ರದೇಶ)ನಲ್ಲಿ ೪೦ ವರ್ಷಗಳ ನಂತರ ತೆರೆದ ಜೈನ ಮಂದಿರ

ಮಂದಿರದ ಜಾಗದಲ್ಲಿ ಮುಸಲ್ಮಾನರಿಂದ ಅತಿಕ್ರಮಣ

ಮುರಾದಾಬಾದ್ (ಉತ್ತರ ಪ್ರದೇಶ) – ಇಲ್ಲಿಯ ರತನಪುರ್ ಕಾಲಾ ಗ್ರಾಮದಲ್ಲಿ ೪೦ ವರ್ಷಗಳ ಕಾಲ ಮುಚ್ಚಿದ್ದ ಜೈನ ಮಂದಿರ ಈಗ ಸರಕಾರ ತೆರೆದಿದೆ. ಜಿಲ್ಲಾಧಿಕಾರಿ ಅನುಜ ಕುಮಾರ ಸಿಂಹ ಇವರು, ಜೈನ ಸಮಾಜದವರು ಮಂದಿರದ ಮೂರ್ತಿಗಳು ಬೇರೆ ಬೇರೆ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದರು. ಅದರಿಂದ ಈ ಮಂದಿರ ಖಾಲಿ ಇದೆ ಮತ್ತು ಮುಚ್ಚಲಾಗಿತ್ತು; ಆದರೆ ಮಂದಿರದ ಜಾಗ ಸಾಮಾಜಿಕ ಕಾರ್ಯಕ್ಕೆ ಉಪಯೋಗಿಸಲು ವಿನಂತಿಸಲಾಗಿತ್ತು. ಆದ್ದರಿಂದ ಈಗ ಜೈನ ಸಮಾಜದ ಜನರ ಇಚ್ಛೆಯಂತೆ ಗ್ರಂಥಾಲಯ ಕಟ್ಟಲಾಗುವುದು’, ಎಂದು ಹೇಳಿದರು.

ಸ್ಥಳೀಯ ಹಿಂದೂಗಳು, ಈ ಮಂದಿರದ ಮುಂದಿನ ಜಾಗದಲ್ಲಿ ಎರಡೂ ಬದಿಗೆ ಮುಸಲ್ಮಾನರು ಅತಿಕ್ರಮಣ ಮಾಡಿದ್ದಾರೆ. ಅಲ್ಲಿ ಅಕ್ರಮ ಅಂಗಡಿಗಳು ಕಟ್ಟಲಾಗಿದೆ ಎಂದು ಹೇಳಿದ್ದಾರೆ, ಆದರೆ ಮುಸಲ್ಮಾನರು ಈ ಆರೋಪ ತಳ್ಳಿ ಹಾಕಿದ್ದಾರೆ. ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.

ಮಂದಿರ ಏಕೆ ಮುಚ್ಚಿತ್ತು ?

ಹಿಂದೆ ಜೈನ ಸಮಾಜದ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದವು. ನಿಧಾನವಾಗಿ ಪ್ರತಿಯೊಬ್ಬರು ಸ್ವಂತ ಮನೆಗಳನ್ನು ಮಾರಿ ಅಲ್ಲಿಂದ ಹೊರಟು ಹೋದರು; ಆದರೆ ಪ್ರದೀಪ ಜೈನ್ ಇವರ ಮನೆಯಲ್ಲಿ ಮಂದಿರವಿತ್ತು, ಅವರು ಮನೆ ಮಾರುವ ಬದಲು ಅದನ್ನು ಮುಚ್ಚಿದರು ಮತ್ತು ಅಲ್ಲಿಂದ ವಲಸೆ ಹೋದರು. ಅವರು ಮಂದಿರದಲ್ಲಿನ ಮೂರ್ತಿಗಳು ಮುರಾದಾಬಾದ್ ಮತ್ತು ಹಲ್ದ್ವಾನಿ ಇಲ್ಲಿಯ ಇತರ ಮಂದಿರಗಳಿಗೆ ಸಾಗಿಸಿದರು. ಅಂದಿನಿಂದ ಮಂದಿರ ಮುಚ್ಚಿದೆ. ಮಂದಿರದ ಅಕ್ಕಪಕ್ಕದಲ್ಲಿ ಮುಸಲ್ಮಾನರ ಜನಸಂಖ್ಯೆ ಇದೆ. ಈ ಮಂದಿರ ಮುಚ್ಚಿರುವುದರಿಂದ ಮುಸಲ್ಮಾನರು ಇಲ್ಲಿ ಕಸ ಹಾಕಲಾರಂಭಿಸಿದರು. ಈಗ ಈ ಮಂದಿರ ಸರಕಾರಕ್ಕೆ ಒಪ್ಪಿಸಲಾಗಿದೆ.