Sharmishta Mukherjee Statement : ನನ್ನ ತಂದೆಯ ನಿಧನದ ನಂತರ ಕಾಂಗ್ರೆಸ್ ಶೋಕಸಭೆ ಕೂಡ ನಡೆಸಿಲ್ಲ ! – ಶರ್ಮಿಷ್ಟ ಮುಖರ್ಜಿ

ಡಾ. ಮನಮೋಹನ್ ಸಿಂಹ ಇವರ ಸ್ಮೃತಿಸ್ಥಳದ ಬಗ್ಗೆ ಕಾಂಗ್ರೆಸ್‌ನ ಆಗ್ರಹದ ಬಗ್ಗೆ ಪ್ರಣವ ಮುಖರ್ಜಿ ಇವರ ಪುತ್ರಿಯಿಂದ ಅಸಮಾಧಾನ ವ್ಯಕ್ತ

ಶರ್ಮಿಷ್ಟ ಮುಖರ್ಜಿ

ನವದೆಹಲಿ – ನನ್ನ ತಂದೆಯ ನಿಧನ ಆದ ನಂತರ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯು ಶೋಕ ಸಭೆ ಕೂಡ ಆಯೋಜಿಸಿರಲಿಲ್ಲ, ಎಂದು ಭಾರತದ ಮಾಜಿ ರಾಷ್ಟ್ರಪತಿ ಮತ್ತು ಕಾಂಗ್ರೆಸ್ಸಿನ ದಿವಂಗತ ನಾಯಕ ಪ್ರಣವ ಮುಖರ್ಜಿ ಇವರ ಪುತ್ರಿ ಶರ್ಮಿಷ್ಟ ಮುಖರ್ಜಿ ಇವರು ವಿಷಾದ ವ್ಯಕ್ತಪಡಿಸಿದರು. ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುತ್ತಾ, ತಂದೆಯ ನಿಧನದ ಸಮಯದಲ್ಲಿ ಕಾಂಗ್ರೆಸ್ಸಿನ ಓರ್ವ ಹಿರಿಯ ನಾಯಕರು ನನಗೆ, ರಾಷ್ಟ್ರಪತಿಗಳಿಗಾಗಿ ಈ ರೀತಿಯ ಶೋಕ ಸಭೆಯ ಆಯೋಜನೆ ಮಾಡಲಾಗುವುದಿಲ್ಲ; ಆದರೆ ಅದು ಸಂಪೂರ್ಣವಾಗಿ ತಪ್ಪಾಗಿದೆ’, ಎಂದು ಹೇಳಿದ್ದರು. ತಂದೆಯ ‘ಡೈರಿ’ ಇಂದ ನನಗೆ, ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಇವರ ನಿಧನದ ನಂತರ ಕಾರ್ಯಕಾರಿ ಸಮಿತಿಯ ಸಭೆ ಕರೆಯಲಾಗಿತ್ತು ಮತ್ತು ನನ್ನ ತಂದೆಯೆ ಶೋಕ ಸಂದೇಶದ ಮಸೂದೆ ಬರೆದಿದ್ದರು’, ಎಂಬುದು ತಿಳಿಯಿತು.

ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಹ ಇವರ ಪಾರ್ಥಿವದೇಹಕ್ಕೆ ಡಿಸೆಂಬರ್ ೨೮ ರಂದು ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಿತು. ಅದರ ಮೊದಲು ಡಿಸೆಂಬರ್ ೨೭ ರಂದು ಕಾಂಗ್ರೆಸ್‌ನಿಂದ, ಡಾ. ಸಿಂಹ ಇವರು ದೇಶದ ಸುಪುತ್ರರಾಗಿದ್ದಾರೆ. ಆದ್ದರಿಂದ ಅವರ ಸ್ಮೃತಿ ಸ್ಥಳ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಲಾಗಿತ್ತು. ಕೇಂದ್ರ ಸರಕಾರದಿಂದ ಜಾಗ ನೀಡಲು ಒಪ್ಪಿಗೆ ಕೂಡ ನೀಡಲಾಗಿದೆ. ಇದರಿಂದ ಶರ್ಮಿಷ್ಟ ಮುಖರ್ಜಿ ಇವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಶರ್ಮಿಷ್ಟ ಮುಖರ್ಜಿ ಇವರ ಆರೋಪದಲ್ಲಿ ವಾಸ್ತವ ಇದ್ದು ಕಾಂಗ್ರೆಸ್ ಕೇವಲ ಪ್ರಣವ ಮುಖರ್ಜಿ ಅಷ್ಟೇ ಅಲ್ಲದೆ, ಮಾಜಿ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಇವರ ಅಂತ್ಯ ಸಂಸ್ಕಾರದ ಸಮಯದಲ್ಲಿ ಕೂಡ ಅವರನ್ನು ಅವಮಾನಿಸಿದ್ದರು. ಯಾವ ಪಕ್ಷ ಅವರ ಜೊತೆಗೆ ಜೀವನಪರ್ಯಂತ ನಿಷ್ಠರಾಗಿರುವ ನಾಯಕರನ್ನು ಅವಮಾನಿಸಬಹುದಾದರೆ ಅವರ ದೃಷ್ಟಿಯಲ್ಲಿ ಸಾಮಾನ್ಯ ಜನರ ಕಥೆ ಏನು ? ಜನರೇ ಕಾಂಗ್ರೆಸ್ಸಿನ ನಿಜರೂಪ ತಿಳಿಯಿರಿ !