‘ಅಖಾಡಾ ಪರಿಷತ್ತು ಮತ್ತು ರಾಜ್ಯ ಸರಕಾರ ಪವಿತ್ರ ಕುಂಭಮೇಳದಲ್ಲಿ ರಾಜಕೀಯ ಮಾಡುತ್ತಿರುವವರನ್ನು ತಡೆಯಬೇಕಂತೆ’ – ಮೌಲಾನಾ ಶಹಾಬುದ್ದೀನ ರಜ್ವಿ

ಕುಂಭಮೇಳದಲ್ಲಿ ಸಂತರು ಹಾಕಿರುವ ಫಲಕಗಳ ಬಗ್ಗೆ ಕಿಡಿ ಕಾರಿದ ಬರೇಲಿಯ ಮೌಲಾನಾ ಶಹಾಬುದ್ದೀನ ರಜ್ವಿ

ಬರೇಲಿ (ಉತ್ತರ ಪ್ರದೇಶ) – ಸಂತರು ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ವಿವಿಧ ಹೋರ್ಡಿಂಗ್ಸ್‌ಗಳನ್ನು ಹಾಕಿದ್ದಾರೆ. ಅದರಲ್ಲಿ ರತ್ನಾಗಿರಿಯ ನಾಣಿಜಧಾಮದ ಜಗದ್ಗುರು ರಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಮಹಾರಾಜರು ಕೆಲವು ಫಲಕಗಳನ್ನೂ ಹಾಕಿದ್ದಾರೆ. ಈ ಫಲಕಗಳಲ್ಲಿ ‘ಸನಾತನ ಸಾತ್ವಿಕ್ ಹೈ, ಪರ್ ಕಾಯರ್ ನಹಿ’ (ಸನಾತನ ಸಾತ್ವಿಕವಾಗಿದೆ; ಆದರೆ ಹೇಡಿಯಲ್ಲ), ಇನ್ನೊಂದು ಫಲಕದಲ್ಲಿ ‘ಡರೆಂಗೆ ತೊ ಮರೆಂಗೆ’ (ಹೆದರಿಕೊಂಡರೆ ಸಾಯುತ್ತೇನೆ) ಮತ್ತು ಮೂರನೇ ಫಲಕದಲ್ಲಿ ‘ವಕ್ಫ್ ಕೆ ನಾಮ್ ಪರ್ ಸಂಪತ್ತಿ ಕಿ ಲೂಟ ಹೈ, ಧರ್ಮನಿರಪೇಕ್ಷ ದೇಶ ಮೆ ಯೆ ಕೈಸಿ ಛೂಟ ಹೈ,’ (ವಕ್ಫ ಹೆಸರಿನಲ್ಲಿ ಸಂಪತ್ತಿನ ಲೂಟಿ ನಡೆದಿದೆ. ಜಾತ್ಯತೀತತೆಯ ದೇಶದಲ್ಲಿ ಇಂತಹ ವಿನಾಯತಿ ಹೇಗೆ ನೀಡಲಾಗುತ್ತಿ ?) ಎಂದು ಬರೆಯಲಾಗಿದೆ. ಇದನ್ನು ಈಗ ಮುಸ್ಲಿಮರು ವಿರೋಧಿಸುತ್ತಿದ್ದಾರೆ. ಮೌಲಾನಾ ಶಹಾಬುದ್ದೀನ್ ರಜ್ವಿ ಮಾತನಾಡಿ, ಕುಂಭಮೇಳ ಪವಿತ್ರ ಧಾರ್ಮಿಕ ಜಾತ್ರೆಯಾಗಿದೆ, ಇಲ್ಲಿ ರಾಜಕೀಯ ಮಾಡುವುದು ಜಾತ್ರೆಯ ಪಾವಿತ್ರ್ಯತೆಗೆ ವಿರುದ್ಧವಾಗಲಿದೆ. ಇಂತಹ ಕೃತ್ಯಗಳನ್ನು ಮಾಡುವವರನ್ನು ಅಖಾಡಾ ಪರಿಷತ್ತು ಮತ್ತು ಸರಕಾರ ತಡೆಯಬೇಕು ಎಂದು ಹೇಳಿದರು.

ಸನಾತನ ಮಂಡಳಕ್ಕೆ ನನ್ನ ಬೆಂಬಲ !

ಮೌಲಾನಾ ಮಾತು ಮುಂದುವರೆಸಿ, ಅಸಹಾಯಕ ವಿಧವೆಯರಿಗೆ ಸಹಾಯ ಮಾಡಲು ವಕ್ಫ್ ಮಂಡಳಿಯನ್ನು ಸ್ಥಾಪಿಸಲಾಗಿತ್ತು. ವಕ್ಫ್ ಬೋರ್ಡ್‌ನಲ್ಲಿರುವ ಎಲ್ಲ ಭೂಮಿಯನ್ನು ಮುಸ್ಲಿಮರಿಗೆ ನೀಡಲಾಗಿದೆ. ಯಾವುದೇ ಹಿಂದೂ ಬೋರ್ಡ್‌ಗೆ ನೀಡಿಲ್ಲ ಮತ್ತು ಮಂಡಳಿಯ ಮೇಲೆ ಸರಕಾರದ ನಿಯಂತ್ರಣವಿದೆ. ಹಾಗೆಯೇ ಈ ರೀತಿ `ಸನಾತನ ಮಂಡಳಿಯ(ಬೋರ್ಡ್‌ನ) ಸ್ಥಾಪನೆಯಾದರೆ ಅದನ್ನು ನಾನು ಬೆಂಬಲಿಸುತ್ತೇನೆ. ಮಂದಿರಗಳು ಮತ್ತು ಮಠಗಳ ಭೂಮಿ ಮತ್ತು ಆಸ್ತಿಯನ್ನು ಮೇಲ್ವಿಚಾರಣೆ ಮಾಡಲು ಸನಾತನ ಮಂಡಳಿಯನ್ನು ಸ್ಥಾಪಿಸುವುದು ಬಹಳ ಅವಶ್ಯಕವಾಗಿದೆ’, ಎಂದು ಹೇಳಿದರು.

‘ಸಾಧು-ಸಂತರು ಹಿಂದೂ-ಮುಸ್ಲಿಂ ಏಕತೆಯ ಶತ್ರುಗಳಂತೆ!

ಸಾಧು-ಸಂತರು ಹಿಂದೂಗಳನ್ನು ಜಾತ್ಯತೀತತೆಯ ಆತ್ಮಘಾತುಕ ನಿದ್ರೆಯಿಂದ ಜಾಗೃತಗೊಳಿಸುತ್ತಿರುವುದರಿಂದ, ಮತಾಂಧ ಮುಸ್ಲಿಮರಿಗೆ ತೊಂದರೆಯಾಗುತ್ತಿರುವುದರಿಂದ ಅವರು ಅದನ್ನು ವಿರೋಧಿಸುತ್ತಿದ್ದಾರೆ. ಮುಸ್ಲಿಮರು ಭಾರತವನ್ನು ವಿಭಜಿಸಿ 2 ದೇಶಗಳಾದ ಬಳಿಕವೂ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಸಾಧಿಸಲಾಗಲಿಲ್ಲ; ಈ ಒಗ್ಗಟ್ಟು ಏಕಪಕ್ಷೀಯವಾಗಿದ್ದರಿಂದ ಈಗ ಹಿಂದೂಗಳಿಗೆ ಇದು ತಿಳಿಯಲು ಪ್ರಾರಂಭವಾಗಿದೆ ಎಂದು ಹೇಳಿದರು.

ಮೌಲಾನಾ ಅವರು, ಸಾಧು-ಸಂತರು ಹಿಂದೂ-ಮುಸ್ಲಿಂ ಏಕತೆಯ ಶತ್ರುಗಳಾಗಿದ್ದಾರೆ. ಅವರು ಹಿಂದೂ ಮತ್ತು ಮುಸ್ಲಿಮರ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಬಯಸುತ್ತಾರೆ ಎಂದು ಆರೋಪಿಸಿದ್ದಾರೆ, ಅದು ಖಂಡಿತವಾಗಿಯೂ ಆಗುವುದಿಲ್ಲ, ಇಂತಹ ವಿಷಯಗಳನ್ನು ಪ್ರಚೋದಿಸುವ ಮತ್ತು ಸಮಾಜವನ್ನು ಒಡೆಯುವವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ವಿನಂತಿಸುತ್ತೇನೆ’, ಎಂದು ಹೇಳಿದ್ದಾರೆ.