ಅಮೃತಸರ (ಪಂಜಾಬ) – ಇಲ್ಲಿನ ಪೊಲೀಸ್ ಠಾಣೆ ಮೇಲೆ ಬಾಂಬ್ ಎಸೆದ ಪ್ರಕರಣದಲ್ಲಿ ಪಂಜಾಬ ಪೊಲೀಸರ ವಿಶೇಷ ತಂಡವು ಇಬ್ಬರು ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಿದೆ. ಇವರ ಮಾಸ್ಟರ್‍ಮೈಂಡ್ ವಿದೇಶದಲ್ಲಿ ಕುಳಿತು ಇವರಿಂದ ಭಯೋತ್ಪಾದಕ ಕೃತ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದನು. ಈ ಭಯೋತ್ಪಾದಕರ ಹೆಸರು ಗುರ್ಜಿತ್ ಸಿಂಗ್ ಮತ್ತು ಬಲ್ಜಿತ್ ಸಿಂಗ್ ಆಗಿದೆ. ಇವರಿಬ್ಬರೂ ಬಾಂಬ್‌ಗಳನ್ನು ಎಸೆಯುವುದು ಮಾತ್ರವಲ್ಲದೆ ಮಾದಕ ಪದಾರ್ಥ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಮೂಲಕ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದರು. ಪೊಲೀಸರು ಇವರಿಂದ 1.4 ಕೆಜಿ ಹೆರಾಯಿನ್, 1 ಬಾಂಬ್ ಹಾಗೂ 2 ಪಿಸ್ತೂಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ 16 ಮಂದಿಯನ್ನು ಬಂಧಿಸಲಾಗಿದ್ದು, ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ನಡೆದ ಚಕಮಕಿಯಲ್ಲಿ 3 ಜನರು ಸಾವನ್ನಪ್ಪಿದ್ದಾರೆ.
ಸಂಪಾದಕೀಯ ನಿಲುವುಅಂತಹವರ ವಿರುದ್ಧ ತ್ವರಿತ ಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸುವುದು ಆವಶ್ಯಕವಾಗಿದೆ ! |