ಯಾರಿಗೆ ಸಂದೇಹವಿದೆಯೋ ಅವರು ಖುಷಿಯಿಂದ ನಮ್ಮ ದರ್ಬಾರ್‌ಗೆ ಬರಲಿ; ನಮ್ಮಲ್ಲಿರುವ ದೈವೀ ವಿದ್ಯೆಯ ದರ್ಶನ ಮಾಡಿಸುತ್ತೇವೆ! – Dhirendra Shastriji Bageshwar Dham

  • ಹಿಂದೂ ವಿರೋಧಿಗಳ ಸವಾಲಿಗೆ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಪ್ರತ್ಯುತ್ತರ!

  • ‘ಅಂನಿಸ್’ (ANiS) ಗೆ ತಕ್ಕ ಉತ್ತರ ನೀಡಲು ಭಕ್ತರ ಸಾಗರ!

ನಾಗಪುರ – ಹಿಂದೂ ಧರ್ಮದ ಪ್ರಚಾರ ಮತ್ತು ಸಂತರನ್ನು ಅವಮಾನಿಸುವ ಕಥಾಕಥಿತ ಜಾತ್ಯತೀತವಾದಿಗಳಿಗೆ ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ನಾಗಪುರದ ಮಣ್ಣಿನಿಂದಲೇ ಸವಾಲು ಹಾಕಿದ್ದಾರೆ. ಅಖಿಲ ಭಾರತ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ (ಅಂನಿಸ್) ಶ್ಯಾಮ್ ಮಾನವ್ ನೀಡಿದ ಸವಾಲನ್ನು ಸ್ವೀಕರಿಸುತ್ತಾ, ‘ಯಾರಿಗೆ ಅನುಮಾನವಿದೆಯೋ ಅವರು ದರ್ಬಾರ್‌ಗೆ ಬರಲಿ; ನಾವು ನಮ್ಮಲ್ಲಿರುವ ದೈವೀ ವಿದ್ಯೆಯ ದರ್ಶನ ಮಾಡಿಸುತ್ತೇವೆ’, ಎಂದು ಹಿಂದೂ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ. ಇನ್ನೊಂದೆಡೆ ಹಿಂದೂಗಳ ಶ್ರದ್ಧೆಯ ಮೇಲೆ ದಾಳಿ ಮಾಡುವ ‘ಅಂನಿಸ್’ಗೆ ತಕ್ಕ ಪ್ರತ್ಯುತ್ತರ ನೀಡಲು ಭಕ್ತರು ರೇಶಿಮ್ ಬಾಗ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.

ಪ್ರಸ್ತುತ ನಾಗಪುರದ ರೇಶಿಮ್ ಬಾಗ್ ಮೈದಾನದಲ್ಲಿ ಏಪ್ರಿಲ್ 26 ರಿಂದ 30 ರವರೆಗೆ ‘ಶ್ರೀರಾಮ ಕಥೆ’ಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ನಿಮಿತ್ತ ಶ್ಯಾಮ್ ಮಾನವ್ ಅವರು ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರಿಗೆ 80 ಲಕ್ಷ ರೂಪಾಯಿಗಳ ಸವಾಲು ಹಾಕಿದ್ದರು. ಶ್ಯಾಮ್ ಮಾನವ್ ಅವರು ಧೀರೇಂದ್ರ ಕೃಷ್ಣ ಶಾಸ್ತ್ರಿಗಳಿಗೆ 10 ಜನರ ಹೆಸರುಗಳು, ಅವರ ತಂದೆಯ ಹೆಸರು, ವಯಸ್ಸು ಮತ್ತು ಮೊಬೈಲ್ ಸಂಖ್ಯೆಯನ್ನು ನಿಖರವಾಗಿ ಹೇಳುವಂತೆ ಸವಾಲು ಹಾಕಿದ್ದಾರೆ. ಅಲ್ಲದೆ, ‘ಅತೀಂದ್ರಿಯ ಶಕ್ತಿ’ಯ ಪರೀಕ್ಷೆಗಾಗಿ ಮುಚ್ಚಿದ ಕೋಣೆಯಲ್ಲಿ ಇರಿಸಲಾದ 10 ವಸ್ತುಗಳನ್ನು ಗುರುತಿಸುವಂತೆಯೂ ಸವಾಲು ಹಾಕಿದ್ದಾರೆ. ಎರಡೂ ಪರೀಕ್ಷೆಗಳಲ್ಲಿ ಕನಿಷ್ಠ ಶೇ. 90% ರಷ್ಟು ನಿಖರತೆ ಇರಬೇಕು ಮತ್ತು ಈ ಪ್ರಕ್ರಿಯೆಯು ನಾಗಪುರದಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ನಡೆಯಬೇಕು ಎಂದು ‘ಅಂನಿಸ್’ ಹೇಳಿದೆ. ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಇದರಲ್ಲಿ ಯಶಸ್ವಿಯಾದರೆ 80 ಲಕ್ಷ ರೂಪಾಯಿ ನೀಡಲಾಗುವುದು, ಇಲ್ಲದಿದ್ದರೆ ಜನರ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುವು ದೇ ಅವರ ಕೆಲಸವೆಂದು ಪರಿಗಣಿಸಲಾಗುವುದು ಎಂದು ‘ಅಂನಿಸ್’ ಹೇಳಿದೆ. ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿಗಳು ಧರ್ಯದಿಂದ ಈ ಸವಾಲನ್ನು ಸ್ವೀಕರಿಸಿದ್ದಾರೆ.

ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿಗಳು ಮಾತನಾಡಿ, “ಈಗ ನಾವು ನಾಗಪುರದಲ್ಲೇ ಇದ್ದೇವೆ. ಮಧ್ಯಪ್ರದೇಶದಲ್ಲಿಲ್ಲ. ಒಂದು ಗಂಟೆಗಲ್ಲ, 5 ದಿನಗಳ ಕಾಲ ಇಲ್ಲೇ ಇರುತ್ತೇವೆ. ಕಥೆಯ ಮಂಟಪದಲ್ಲೇ ಇರುತ್ತೇವೆ. ರಾಜ್ಯ ಅವರದು, ನಗರ ಅವರದು ಮತ್ತು ವೇದಿಕೆಯೂ ಅವರದೇ. ನಾನು ಒಬ್ಬನೇ ಇದ್ದೇನೆ. ಯಾರಿಗೆ ಆಸೆಯಿದೆಯೋ ಅವರು ದರ್ಬಾರ್‌ಗೆ ಬನ್ನಿ. ನಮ್ಮಲ್ಲಿ ಯಾವ ವಿದ್ಯೆ ಮತ್ತು ಶಕ್ತಿ ಇದೆಯೋ, ಅದನ್ನು ನಾವು ಪ್ರದರ್ಶಿಸುತ್ತೇವೆ. ನಾವು ಮಾಂತ್ರಿಕರಲ್ಲ. ಈಶ್ವರ ನಮಗೆ ನೀಡುವ ಪ್ರೇರಣೆಯಂತೆ ನಾವು ಜನರಿಗೆ ಮಾರ್ಗದರ್ಶನ ನೀಡುತ್ತೇವೆ. ಅವರು ಬಂದರೆ ಅವರಿಗೂ ಮಾರ್ಗದರ್ಶನ ನೀಡುತ್ತೇವೆ.”

ಸನಾತನ ಧರ್ಮದ ಪ್ರಚಾರ ಎಂದರೆ ಮೂಢನಂಬಿಕೆಯಲ್ಲ!

ಈ ಹಿಂದೆ ಜನವರಿ 2023 ರಲ್ಲೂ ಇಂತಹದ್ದೇ ಒಂದು ಪಿತೂರಿ ನಡೆಸಲಾಗಿತ್ತು. ಬಾಗೇಶ್ವರ ಸರಕಾರ ಅವರ ವಿರುದ್ಧ ಶ್ಯಾಮ್ ಮಾನವ್ ದೂರು ನೀಡಿದ್ದರು. ‘ಧೀರೇಂದ್ರ ಕೃಷ್ಣ ಶಾಸ್ತ್ರಿಗಳು ಮೂಢನಂಬಿಕೆ ಹರಡುತ್ತಿದ್ದಾರೆ ಮತ್ತು ಅವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು’ ಎಂದು ಅವರು ಪೊಲೀಸರಿಗೆ ತಿಳಿಸಿದ್ದರು. ಇದಕ್ಕೆ ನಾಗಪುರ ಪೊಲೀಸರು ಪ್ರತಿಕ್ರಿಯಿಸಿ, ‘ವಿಡಿಯೋದಲ್ಲಿ ಆಕ್ಷೇಪಾರ್ಹವಾದುದು ಏನೂ ಇಲ್ಲ. ಅವರು ಮೂಢನಂಬಿಕೆ ಹರಡುವಂತಹ ಅಥವಾ ಕಾನೂನಿನ ಪ್ರಕಾರ ಅಪರಾಧವಾಗುವಂತಹ ಯಾವುದೇ ಮಾತನ್ನು ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಪೊಲೀಸರ ಈ ಹೇಳಿಕೆಯ ನಂತರ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿಗಳು, “ಸನಾತನ ಧರ್ಮದ ಪ್ರಚಾರ ಮಾಡುವುದು ಮೂಢನಂಬಿಕೆಯಲ್ಲ” ಎಂದು ಹೇಳಿದ್ದರು.

ನಾಗಪುರದಲ್ಲಿ ‘ಸಂತರ ಅವಮಾನವನ್ನು ಸಹಿಸುವುದಿಲ್ಲ’ ಎಂದು ಸ್ಥಳೀಯ ಭಕ್ತರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರ ತನಿಖೆಯಲ್ಲೂ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಕಾರ್ಯದಲ್ಲಿ ಯಾವುದೇ ಅನಧಿಕೃತ ಅಂಶಗಳಿಲ್ಲ ಎಂಬುದು ಸಾಬೀತಾಗಿದೆ.