
ಋಚಿಕ ಋಷಿ ಮತ್ತು ಸತ್ಯವತಿಯ ಪ್ರಸಾದಿಕ ಪುತ್ರನಾಗಿ ಜಮದಗ್ನಿ ಅವರ ಜನ್ಮವಾಯಿತು. ಜಮದಗ್ನಿಯವರು ಹುಟ್ಟಿ ನಿಂದಲೇ ಅಗ್ನಿಯಂತೆ ಅತ್ಯಂತ ತೇಜಸ್ವಿಯಾಗಿದ್ದರು. ಅವರಿಗೆ ಜನ್ಮತಃ ಎಲ್ಲ ವಿದ್ಯಾ-ಬುದ್ಧಿಗಳು ಸಿದ್ಧಿಸಿದ್ದವು. ಅವರು ಧನುರ್ವೇದದಲ್ಲಿ ನಿಪುಣರಾಗಿದ್ದರು. ಅವರು ಅವಿಶ್ರಾಂತ ಮತ್ತು ಅಪಾರ ಕಷ್ಟಪಟ್ಟರು. ಈ ಕಾರಣದಿಂದಾಗಿ ಅವರ ಕೀರ್ತಿಯು ನಾಲ್ಕೂ ದಿಕ್ಕುಗಳಲ್ಲಿ ಹರಡಿತು.
ಮಹರ್ಷಿ ಜಮದಗ್ನಿ ಋಷಿಗಳ ವಿವಾಹವು ರೇಣುಕೆಯೊಂದಿಗೆ ಆಯಿತು. ರೇಣುಕೆಯಿಂದ ಋಷಿ ಜಮದಗ್ನಿಯವರಿಗೆ ವಸುಮಾನ್ ಮುಂತಾದ ೫ ಪುತ್ರರು ಜನಿಸಿದರು. ಅವರಲ್ಲಿ ಎಲ್ಲರಿಗಿಂತ ಕಿರಿಯವನು ಪರಶುರಾಮ. ಅವನು ಈ ಪೃಥ್ವಿಯನ್ನು ೨೧ ಬಾರಿ ಕ್ಷತ್ರಿಯರಹಿತರನ್ನಾಗಿ ಮಾಡಿದನು. ಆ ಕಾಲದಲ್ಲಿ ಕ್ಷತ್ರಿಯ ರಾಜರು ಉನ್ಮತ್ತರಾಗಿದ್ದರು (ಅಹಂಕಾರಿಗಳಾಗಿದ್ದರು); ಆದ್ದರಿಂದ ಅವರನ್ನು ನಾಶ ಮಾಡಿ ಪೃಥ್ವಿಯ ಭಾರವನ್ನು ಇಳಿಸುವ ಕಾರ್ಯವನ್ನು ಭಗವಾನ್ ಪರಶುರಾಮರು ಮಾಡಿದರು. ಪರಶುರಾಮರೆಂದರೆ ಸಾಕ್ಷಾತ್ ಶ್ರೀವಿಷ್ಣುವಿನ ಅವತಾರ! ಸಾಕ್ಷಾತ್ ಭಗವಂತನು ಮಹಾನ್ ಅವತಾರ ಕಾರ್ಯಕ್ಕಾಗಿ ಭೂಲೋಕದಲ್ಲಿ ಅವತರಿಸಲು ಯಾರನ್ನು ಮಾಧ್ಯಮವನ್ನಾಗಿ ಆರಿಸಿಕೊಂಡನೋ, ಯಾವ ಮನೆಯಲ್ಲಿ ಪ್ರಕಟವಾಗುವುದು ಭಗವಂತನಿಗೆ ಶ್ರೇಯಸ್ಕರವೆನಿಸಿತೋ, ಅವರೇ ಮಹಾನ್ ಮಹರ್ಷಿ ಜಮದಗ್ನಿ ಮತ್ತು ಮಾತಾ ರೇಣುಕಾ !
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಶ್ರೀರಾಮನ ಮೇಲಿನ ಆಘಾತ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !