ವಾಸ್ತುಶಾಸ್ತ್ರ ವಿಷಯದ ಲೇಖನಮಾಲೆ : ಲೇಖನ ೧೫
ಪ್ರವೇಶದ್ವಾರದ ವಿಷಯವನ್ನು ತಿಳಿದು ಕೊಳ್ಳುವಾಗ, ನಾವು ಕಳೆದ ಸಂಚಿಕೆಯಲ್ಲಿನ ಲೇಖನದಲ್ಲಿ, ಜಾಗವನ್ನು ಪ್ರವೇಶಿಸಲು ಇರುವ ದ್ವಾರವನ್ನು ‘ಪ್ರಾಂಗಣ ಪ್ರವೇಶ’ ಎಂದು ಕರೆದರೆ, ಮನೆಯೊಳಗೆ ಪ್ರವೇಶಿಸಲು ಇರುವ ದ್ವಾರವನ್ನು ‘ಸಿಂಹ ದ್ವಾರ’ ಎಂದು ಕರೆಯುತ್ತಾರೆ ಎಂಬ ಬಗ್ಗೆ ತಿಳಿದುಕೊಂಡೆವು. ಪ್ರಾಂಗಣ ಪ್ರವೇಶ ಮತ್ತು ಸಿಂಹದ್ವಾರಗಳು ಯಾವ ದಿಕ್ಕಿನಲ್ಲಿವೆ ಎಂಬುದರ ಆಧಾರದ ಮೇಲೆ ವಾಸ್ತುಮಾಲೀಕನ ಮೇಲೆ ಶುಭ-ಅಶುಭ ಪರಿಣಾಮಗಳು ಉಂಟಾಗುತ್ತವೆ. ಈ ಬಗ್ಗೆ ‘ಸಮರಾಙ್ಗಣಸೂತ್ರಧಾರ’ ಗ್ರಂಥದಲ್ಲಿ ಈ ಕೆಳಗಿನಂತೆ ತಿಳಿಸಲಾಗಿದೆ.
ಈ ಹಿಂದಿನ ಲೇಖನ- ೧೪ ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/176449.html

ಉತ್ಸಂಙ್ಗೋ ಹೀನಬಾಹುಶ್ಚ ಪೂರ್ಣ ಬಾಹುಸ್ತಥಾಪರಃ |
ಪ್ರತ್ಯಕ್ಷಾಯಶ್ಚತುರ್ಥಶ್ಚ ನಿವೇಶಃ ಪರಿಕೀರ್ತೀತಃ ||
– ‘ಸಮರಾಙ್ಗಣಸೂತ್ರಧಾರ’, ಅಧ್ಯಾಯ ೩೫, ಶ್ಲೋಕ ೧೧
ಅರ್ಥ : ಉತ್ಸಙ್ಗ, ಹೀನಬಾಹು, ಪೂರ್ಣಬಾಹು ಮತ್ತು ಪ್ರತ್ಯಕ್ಷಾಯ ಎಂಬ ಪ್ರವೇಶದ ೪ ವಿಧಗಳನ್ನು ಹೇಳಲಾಗಿದೆ. ಈ ನಾಲ್ಕು ಪ್ರವೇಶಗಳ ವರ್ಣನೆ ಮತ್ತು ಅವುಗಳ ಫಲಗಳ ಬಗ್ಗೆಯೂ ಗ್ರಂಥದಲ್ಲಿ ವಿವರಿಸಲಾಗಿದೆ. (ಭಾಗ ೨)
೧. ಉತ್ಸಙ್ಗ
ಉತ್ಸಙ್ಗ ಏಕದಿಕ್ಭ್ಯಾಂ ದ್ವಾರಾಭ್ಯಾಂ ವಾಸ್ತುವೇಶ್ಮನೋಃ |
ಸ ಸೌಭಾಗ್ಯಪ್ರಜಾವೃದ್ಧಿ ಧನಧಾನ್ಯಜಯಪ್ರದಃ || – ‘ಸಮರಾಙ್ಗಣಸೂತ್ರಧಾರ’, ಅಧ್ಯಾಯ ೩೫, ಶ್ಲೋಕ ೧೨
ಅರ್ಥ : ಯಾವ ಭೂಮಿಯ ಮತ್ತು ವಾಸ್ತುವಿನ ದ್ವಾರವು ಒಂದೇ ದಿಕ್ಕಿನಲ್ಲಿ ಇರುತ್ತದೆಯೋ, ಅದನ್ನು ‘ಉತ್ಸಙ್ಗ’ ಎಂದು ಕರೆಯುತ್ತಾರೆ. ಇಂತಹ ದ್ವಾರವು ಸೌಭಾಗ್ಯವನ್ನು ಮತ್ತು ಪ್ರಜೆಗಳ ಅಭಿವೃದ್ಧಿಯನ್ನು, ಧನಧಾನ್ಯಗಳನ್ನು ಮತ್ತು ವಿಜಯವನ್ನು ಪ್ರಾಪ್ತಮಾಡಿಕೊಡುವಂತಹದ್ದಾಗಿರುತ್ತದೆ.

೨. ಹೀನಬಾಹು
ಯತ್ರ ಪ್ರವೇಶತೋ ವಾಸ್ತು ಗೃಹಮ್ ಭವತಿ ವಾಮತಃ |
ತದ್ಹೀನಬಾಹುಕಂ ವಾಸ್ತು ನಿಂದಿತ ವಾಸ್ತುಚಿಂತಕೈಃ ||
– ‘ಸಮರಾಙ್ಗಣಸೂತ್ರಧಾರ’, ಅಧ್ಯಾಯ ೩೫, ಶ್ಲೋಕ ೧೩
ಅರ್ಥ : ಯಾವ ಸ್ಥಳದಲ್ಲಿ ಜಾಗದ ಒಳಗೆ ಪ್ರವೇಶಿಸಿದ ನಂತರ ಮನೆಯ ಪ್ರವೇಶವು ಎಡಭಾಗಕ್ಕೆ ಇರುತ್ತದೆಯೋ, ಅದನ್ನು ‘ಹೀನಬಾಹು ವಾಸ್ತು’ ಎಂದು ಕರೆಯುತ್ತಾರೆ. ಇದನ್ನು ಎಲ್ಲಾ ವಾಸ್ತುಶಾಸ್ತ್ರಜ್ಞರು ನಿಂದಿಸಿದ್ದಾರೆ. ಆದ್ದರಿಂದ ಈ ಪದ್ಧತಿಯ ವಾಸ್ತುಪ್ರವೇಶವನ್ನು ತಪ್ಪಿಸಬೇಕು. ಮುಂದಿನ ಶ್ಲೋಕದಲ್ಲಿ ಈ ಪ್ರವೇಶದ ಪರಿಣಾಮಗಳನ್ನು ವಿವರಿಸಲಾಗಿದೆ:
ತಸ್ಮಿನ್ ವಸನ್ನಲ್ಪವಿತ್ತಃ ಸ್ವಲ್ಪಮಿತ್ರೋಽಲ್ಪಬಾಂಧವಃ |
ಸ್ತ್ರೀಜಿತಶ್ಚ ಭವೇನ್ನಿತ್ಯಂ ವಿವಿಧವ್ಯಾಧಿಪೀಡಿತಃ ||
- ‘ಸಮರಾಙ್ಗಣಸೂತ್ರಧಾರ’, ಅಧ್ಯಾಯ ೩೫, ಶ್ಲೋಕ ೧೪
ಅರ್ಥ : ಈ ವಾಸ್ತುವಿನಲ್ಲಿ ವಾಸಿಸುವವರು ಕಡಿಮೆ ಹಣ, ಕಡಿಮೆ ಮಿತ್ರರು ಮತ್ತು ಬಂಧುಗಳನ್ನು ಹೊಂದಿರುತ್ತಾರೆ, ಅಲ್ಲದೆ ಅವರು ಸ್ತ್ರೀಯರಿಗೆ ವಶರಾಗುವವರು ಮತ್ತು ವಿವಿಧ ರೋಗಗಳಿಂದ ಪೀಡಿತರಾಗಿರುತ್ತಾರೆ.
೩. ಪೂರ್ಣಬಾಹು

ವಾಸ್ತುಪ್ರವೇಶತೋ ಯತ್ ತು ಗೃಹಂ ದಕ್ಷಿಣತೋ ಭವೇತ್ |
ಪ್ರದಕ್ಷಿಣಪ್ರವೇಶತ್ವಾತ್ ತದ್ ವಿದ್ಯಾತ್ ಪೂರ್ಣಬಾಹುಕಮ್ ||
– ‘ಸಮರಾಙ್ಗಣಸೂತ್ರಧಾರ’, ಅಧ್ಯಾಯ ೩೫, ಶ್ಲೋಕ ೧೫
ಅರ್ಥ : ಯಾವ ಜಾಗದಲ್ಲಿ ಪ್ರವೇಶಿಸಿದರೆ ಮನೆಯ ಪ್ರವೇಶವು ದಕ್ಷಿಣಕ್ಕೆ, ಅಂದರೆ ಬಲಭಾಗಕ್ಕೆ ಬಂದರೆ, ಅದನ್ನು ‘ಪೂರ್ಣಬಾಹು’ ಎಂದು ಕರೆಯುತ್ತಾರೆ. ಈ ವಾಸ್ತುಪ್ರವೇಶವನ್ನು ವಾಸ್ತುಶಾಸ್ತ್ರಜ್ಞರು ಉತ್ತಮವೆಂದು ಹೇಳಿದ್ದಾರೆ. ಇದರ ಲಾಭವನ್ನು ಕೆಳಗಿನ ಶ್ಲೋಕದಲ್ಲಿ ನೀಡಲಾಗಿದೆ:
ತತ್ರ ಪುತ್ರಾಂಶ್ಚ ಪೌತ್ರಾಂಶ್ಚ ಧನಧಾನ್ಯಸುಖಾನಿ ಚ |
ಪ್ರಾಪ್ನುವಂತಿ ನರಾ ನಿತ್ಯಂ ವಸಂತೋ ವಾಸ್ತುನಿ ಧ್ರುವಮ್ ||
– ‘ಸಮರಾಙ್ಗಣಸೂತ್ರಧಾರ’, ಅಧ್ಯಾಯ ೩೫, ಶ್ಲೋಕ ೧೬
ಅರ್ಥ : ಪೂರ್ಣಬಾಹು ವಾಸ್ತುವಿನಲ್ಲಿ ವಾಸಿಸುವ ವ್ಯಕ್ತಿಗೆ ಮಗ-ಮೊಮ್ಮಕ್ಕಳು, ಧನಧಾನ್ಯ ಇತ್ಯಾದಿ ಸುಖಗಳು ಪ್ರಾಪ್ತವಾಗುತ್ತವೆ ಮತ್ತು ಅವನು ಆ ವಾಸ್ತುವಿನಲ್ಲಿ ಚಿರಕಾಲದ ವರೆಗೆ ವಾಸಿಸುತ್ತಾನೆ.
೪. ಪ್ರತ್ಯಕ್ಷಾಯ
ಗೃಹಪೃಷ್ಠಂ ಸಮಶ್ರಿತ್ಯ ವಾಸ್ತುದ್ವಾರಂ ಯದಾ ಭವೇತ್ |
ಪ್ರತ್ಯಕ್ಷಾಯಸ್ತ್ವಸೌ ನಿಂದ್ಯೋ ವಾಮಾವರ್ತಪ್ರವೇಶವತ್ ||
– ‘ಸಮರಾಙ್ಗಣಸೂತ್ರಧಾರ’, ಅಧ್ಯಾಯ ೩೫, ಶ್ಲೋಕ ೧೭
ಅರ್ಥ : ಮನೆಯ ಹಿಂಭಾಗದಲ್ಲಿ ಜಾಗವನ್ನು ಪ್ರವೇಶಿಸುವ ದ್ವಾರವಿದ್ದರೆ, ಅದನ್ನು ‘ಪ್ರತ್ಯಕ್ಷಾಯ’ ಎಂದು ಕರೆಯುತ್ತಾರೆ. ವಾಸ್ತುಶಾಸ್ತ್ರದ ಪ್ರಕಾರ ಈ ಪ್ರವೇಶವೂ ನಿಂದನೀಯವಾಗಿದೆ. ಇದರ ಪರಿಣಾಮಗಳು ‘ಹೀನಬಾಹು’ ಪ್ರವೇಶದಂತೆಯೇ ವಾಸ್ತು ಮಾಲೀಕನಿಗೆ ಅನುಭವಕ್ಕೆ ಬರುತ್ತವೆ.
ಸಾಮಾನ್ಯವಾಗಿ ಮೇಲಿನ ಮಾಹಿತಿಯಿಂದ ನಮಗೆ ತಿಳಿಯುವುದೇನೆಂದರೆ, ಜಾಗದ ಒಳಗೆ ಪ್ರವೇಶಿಸಿದ ನಂತರ ಎಂದಿಗೂ ಎಡಬದಿಯಲ್ಲಿ ಮನೆಯ ಪ್ರವೇಶದ್ವಾರವಿರಬಾರದು. ಹಾಗೆಯೇ ಮನೆಯ ಹಿಂಭಾಗದಿಂದ ಅಂಗಳಕ್ಕೆ ಪ್ರವೇಶಿಸುವ ಬಾಗಿಲು ಇರಬಾರದು. ಆದ್ದರಿಂದ ಮೇಲಿನ ನಿಯಮಗಳ ಬಗ್ಗೆ ಸರಿಯಾಗಿ ವಿಚಾರ ಮಾಡಿ ಪ್ರವೇಶದ್ವಾರವನ್ನು ನಿಗದಿಪಡಿಸುವುದು ಆವಶ್ಯಕವಾಗಿದೆ.
– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ. (೨೫.೨.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು