ವಾಸ್ತುಶಾಸ್ತ್ರ ವಿಷಯದ ಲೇಖನಮಾಲೆ : ಲೇಖನ ೧೪

ಹಿಂದಿನ ವಾರದ ಲೇಖನಗಳಲ್ಲಿ ನಾವು ಭೂಮಿ ಮತ್ತು ವಾಸ್ತುವಿನ ‘ಪದವಿನ್ಯಾಸ’ದ ಬಗ್ಗೆ ತಿಳಿದುಕೊಂಡೆವು. ಈ ಪದವಿನ್ಯಾಸದ ಆಧಾರದ ಮೇಲೆ ವಾಸ್ತುವಿನ ಯಾವ ಭಾಗದಲ್ಲಿ ಏನಿರಬೇಕು ಮತ್ತು ಏನಿರಬಾರದು ಎಂಬ ಮಾಹಿತಿ ನಮಗೆ ಲಭ್ಯವಾಗುತ್ತದೆ. ಸಮಾಜದಲ್ಲಿ ವಾಸ್ತುವಿನಲ್ಲಿ ಎಲ್ಲಿ ಏನಿರಬೇಕು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ. ಈ ಬಗ್ಗೆ ಸಮಾಜದಲ್ಲಿ ಅನೇಕ ನಂಬಿಕೆಗಳು ಹಾಗೂ ಅಪನಂಬಿಕೆಗಳಿವೆ. ಆದ್ದರಿಂದ, ಮೂಲ ಗ್ರಂಥದಲ್ಲಿ ಈ ಬಗ್ಗೆ ಇರುವ ನಿಯಮಗಳು ಎಲ್ಲರಿಗೂ ತಿಳಿಯಲಿ ಎಂಬುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. ವಾಸ್ತುವಿನ ರಚನೆಯಲ್ಲಿ ನಾವು ಮೊದಲು ಪ್ರವೇಶದ್ವಾರದ ಬಗ್ಗೆ ವಿಚಾರ ಮಾಡುತ್ತೇವೆ, ಆದ್ದರಿಂದ ಮುಂದಿನ ಲೇಖನದಲ್ಲಿ ಪ್ರವೇಶದ್ವಾರದ ಬಗ್ಗೆ ತಿಳಿದುಕೊಳ್ಳೋಣ
ವಾಚಕರಿಗೆ ಸೂಚನೆ : ‘ಯು.ಎ.ಎಸ್.’ ಉಪಕರಣದ ಪರಿಚಯ’

ವಾಚಕರಿಗೆ ಸೂಚನೆ : ‘ಪಿಪ್ (ಪಾಲಿ-ಕಾಂಟ್ರಾಸ್ಟ್ ಇಂಟರ್ಫರೆನ್ಸ್ ಫೋಟೋಗ್ರಫಿ)’ ತಂತ್ರಜ್ಞಾನದ ಪರಿಚಯ

(ಭಾಗ ೧)
೧. ‘ಪ್ರಾಂಗಣ ಪ್ರವೇಶ’ ಮತ್ತು ‘ಸಿಂಹದ್ವಾರ’
ಭೂಮಿಯ ರಚನೆಯನ್ನು ಮಾಡುವಾಗ ‘ವಾಸ್ತು ಪ್ರವೇಶ’ವು ಅತ್ಯಂತ ಮಹತ್ವದ ವಿಷಯವಾಗಿದೆ. ಭೂಮಿಯನ್ನು ಆಯ್ಕೆ ಮಾಡಿದ ನಂತರ ನಾವು ಅದನ್ನು ‘ಏಕಾಶೀತಿಪದ ವಾಸ್ತುಮಂಡಲ’ದ (ಕಳೆದ ವಾರದ ಸಂಚಿಕೆಯಲ್ಲಿ ನೋಡಿ) ಪ್ರಕಾರ ರಚಿಸಬೇಕು, ಎಂಬುದನ್ನು ನಾವು ಇಲ್ಲಿಯ ವರೆಗೆ ನೋಡಿದ್ದೇವೆ. ಈಗ ವಾಸ್ತುವಿನಲ್ಲಿ ಎಲ್ಲಿಂದ ಪ್ರವೇಶಿಸಬೇಕು ಎಂಬ ವಿಚಾರ ಮಾಡಲಿಕ್ಕಿದೆ. ಇದಕ್ಕಾಗಿ ನಾವು ಇತರ ಎಲ್ಲಾ ಕೋಣೆಗಳು ಮತ್ತು ಸೌಲಭ್ಯಗಳ ವಿಚಾರವನ್ನು ಮಾಡುವುದಿರುತ್ತದೆ. ಈ ಬಗ್ಗೆ ಮೂಲ ವಾಸ್ತುಶಾಸ್ತ್ರದಲ್ಲಿ ಕೆಲವು ಮಹತ್ವದ ನಿಯಮಗಳಿವೆ. ಖಾಲಿ ಜಾಗಕ್ಕೆ ರಕ್ಷಣಾ ಗೋಡೆ (ಕಾಂಪೌಂಡ್ ವಾಲ್) ಕಟ್ಟುವುದು ಬಹಳ ಮಹತ್ವದ್ದಾಗಿರುತ್ತದೆ. ಇಂತಹ ಕಾಂಪೌಂಡ್‌ದ ಮುಖಾಂತರ ಜಾಗದ ಒಳಗೆ ಬರಲು ಇರುವ ಪ್ರವೇಶದ್ವಾರಕ್ಕೆ ‘ಪ್ರಾಂಗಣ ಪ್ರವೇಶ’ ಎಂದು ಕರೆಯುತ್ತಾರೆ. ಇನ್ನು ಭೂಮಿಯ ಮೇಲೆ ಮನೆ ನಿರ್ಮಾಣವಾದ ನಂತರ ಆ ಮನೆಯೊಳಗೆ ಪ್ರವೇಶಿಸಲು ಇರುವ ಮುಖ್ಯ ದ್ವಾರಕ್ಕೆ ‘ಸಿಂಹದ್ವಾರ’ (ಮೇನ್ ಎಂಟ್ರನ್ಸ್) ಎಂದು ಕರೆಯುತ್ತಾರೆ.
೨. ಪ್ರವೇಶದ್ವಾರ ಯಾವ ದಿಕ್ಕಿನಲ್ಲಿ ಮತ್ತು ಎಲ್ಲಿರಬೇಕು, ಎಂಬುದರ ಬಗ್ಗೆ ಶಾಸ್ತ್ರೀಯ ಉಲ್ಲೇಖ
ಭೂಮಿಗೆ ಕಾಂಪೌಂಡ್ ನಿರ್ಮಿಸಿದ ನಂತರ, ಮುಖ್ಯ ರಸ್ತೆಯು ಯಾವ ದಿಕ್ಕಿನಲ್ಲಿದೆ ಎಂಬುದರ ಆಧಾರದ ಮೇಲೆ ‘ಪ್ರಾಂಗಣ ಪ್ರವೇಶ’ದ ದಿಕ್ಕನ್ನು ನಿರ್ಧರಿಸಬೇಕಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ದಕ್ಷಿಣ ದಿಕ್ಕಿಗೆ ಮನೆಯ ಪ್ರವೇಶದ್ವಾರವಿದ್ದರೆ ಅದು ಅಶುಭ ಎಂಬ ತಪ್ಪು ಕಲ್ಪನೆ ಹರಡಿದೆ; ಆದರೆ ವಾಸ್ತುಶಾಸ್ತ್ರದ ಯಾವುದೇ ಗ್ರಂಥಗಳಲ್ಲಿ ದಕ್ಷಿಣ ದಿಕ್ಕಿನ ಪ್ರವೇಶದ್ವಾರವು ಅಯೋಗ್ಯ ಎಂದು ಹೇಳಲಾಗಿಲ್ಲ. ಬದಲಾಗಿ, ಪ್ರವೇಶದ್ವಾರವು ಯಾವ ದಿಕ್ಕಿನಲ್ಲಿ ಮತ್ತು ಎಲ್ಲಿರಬೇಕು, ಹಾಗೆಯೇ ದಕ್ಷಿಣ ದಿಕ್ಕಿನಲ್ಲಿ ದ್ವಾರವನ್ನು ನಿರ್ಮಿಸುವಾಗ ಅದನ್ನು ಯಾವ ಪದದಲ್ಲಿ ಅಂದರೆ ಯಾವ ಸ್ಥಾನದಲ್ಲಿ ಇರಿಸಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಅದರ ಜೊತೆಗೆ ಪೂರ್ವ ಮತ್ತು ಉತ್ತರ ದಿಕ್ಕುಗಳು ಶುಭವಾಗಿದ್ದರು ಸಹ, ಅಲ್ಲಿ ಎಲ್ಲಿ ಬೇಕಾದರೂ ಪ್ರವೇಶದ್ವಾರವನ್ನು ಇರಿಸುವಂತಿಲ್ಲ. ಅದಕ್ಕೂ ಶಾಸ್ತ್ರಬದ್ಧವಾದ ನಿರ್ದಿಷ್ಟ ಸ್ಥಾನಗಳಿವೆ.
೩. ವರ್ಣಕ್ಕನುಸಾರ ಪ್ರವೇಶದ್ವಾರದ ದಿಕ್ಕು

ಮೊದಲು ನಾವು ಯಾವ ವರ್ಣದವರಿಗೆ ಯಾವ ದಿಕ್ಕಿನ ಪ್ರವೇಶದ್ವಾರವು ಲಾಭದಾಯಕವಾಗಿದೆ ಎಂಬುದನ್ನು ನೋಡೋಣ. ವರ್ಣದ ಆಯ್ಕೆಯನ್ನು ಆಯಾ ವ್ಯಕ್ತಿಯ ಗುಣ ಮತ್ತು ಕರ್ಮಕ್ಕನುಸಾರ ಮಾಡಬೇಕು.
ಪ್ರತ್ಯಙ್ಮುಖಂ ಬ್ರಾಹ್ಮಣಾನಾಂ ಕ್ಷತ್ರಿಯಾಣಾಂ ತಥೋತ್ತರೇ |
ವೈಶ್ಯಾನಾಂ ಪೂರ್ವದಿಗ್ವಾರಂ ಶೂದ್ರಾಣಾಂ ದಕ್ಷಿಣೇ ಶುಭಮ್ ||
– ವಿಶ್ವಕರ್ಮಪ್ರಕಾಶ, ಅಧ್ಯಾಯ ೭, ಶ್ಲೋಕ ೧೩
ಅರ್ಥ : ಬ್ರಾಹ್ಮಣ ವರ್ಣದವರ ಮನೆಗೆ ದ್ವಾರ ಪಶ್ಚಿಮಾಭಿಮುಖ (ಪೂರ್ವ ದಿಕ್ಕಿಗೆ) ಇರಬೇಕು. ಕ್ಷತ್ರಿಯ ವರ್ಣದವರಿಗೆ ಮನೆಯ ದ್ವಾರವು ಉತ್ತರಾಭಿಮುಖ (ದಕ್ಷಿಣ ದಿಕ್ಕಿಗೆ) ಇರಬೇಕು. ವೈಶ್ಯರಿಗೆ ಮನೆಯ ದ್ವಾರವು ಪೂರ್ವಾಭಿಮುಖ (ಪಶ್ಚಿಮ ದಿಕ್ಕಿಗೆ) ಮತ್ತು ಶೂದ್ರ ವರ್ಣದವರಿಗೆ ಮನೆಯ ದ್ವಾರವು ದಕ್ಷಿಣಾಭಿಮುಖ (ಉತ್ತರ ದಿಕ್ಕಿಗೆ) ಇರುವುದು ಶುಭವಾಗಿರುತ್ತದೆ.
೪. ವಾಸ್ತುವಿನ ಮೂಲೆಗಳಲ್ಲಿ (ನಾಲ್ಕು ಮೂಲೆಗಳಲ್ಲಿ) ದ್ವಾರ ನಿಷೇಧ

ವಾಸ್ತುಶಾಸ್ತ್ರದ ಎಲ್ಲಾ ಗ್ರಂಥಗಳಲ್ಲಿ ವಾಸ್ತುವಿನ ಮೂಲೆಯಲ್ಲಿ ದ್ವಾರವಿರುವುದನ್ನು ನಿಷೇಧಿಸಲಾಗಿದೆ.
ಅ. ವರ್ಜಯೇತ್ ಕೋಣೇಷ್ವೇವ ವಿಶೇಷತಃ |
(ಆಧಾರ : ವಿಶ್ವಕರ್ಮಪ್ರಕಾಶ, ಅಧ್ಯಾಯ ೭, ಶ್ಲೋಕ ೨೦)
ಇದರ ಅರ್ಥ : ಮೂಲೆಯಲ್ಲಿ ದ್ವಾರವನ್ನು ಮಾಡಬಾರದು.
ಆ. ಗೃಹಕುಕ್ಷೌ ಕೃತಂ ದ್ವಾರಂ ಸರ್ವರೋಗಭಯಙ್ಕರಮ್ |
(ಆಧಾರ : ಸಮರಾಂಗಣಸೂತ್ರಧಾರ, ಅಧ್ಯಾಯ ೩೫, ಶ್ಲೋಕ ೫೯)
ಅರ್ಥ : ಮನೆಯ ಮೂಲೆಯಲ್ಲಿ ದ್ವಾರವನ್ನು ನಿರ್ಮಿಸುವುದು ಸರ್ವರೋಗಗಳಿಗೆ ಕಾರಣವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಫ್ಲಾಟ್‌ಗಳ ಪ್ರವೇಶದ್ವಾರವನ್ನು ಮೂಲೆಯಲ್ಲೇ ನಿರ್ಮಿಸಲಾಗುತ್ತದೆ. ಬಿಲ್ಡರ್‌ಗಳಿಗೆ ಒಂದೇ ಮಹಡಿಯಲ್ಲಿ ಹಲವು ಫ್ಲಾಟ್‌ಗಳನ್ನು ವಿನ್ಯಾಸಗೊಳಿಸಲು ಇದು ಅನುಕೂಲಕರವಾಗಿರುತ್ತದೆ; ಆದರೆ ಅದನ್ನು ಮಾಡುವಾಗ ‘ಮೂಲ ವಾಸ್ತುಶಾಸ್ತ್ರದ ಜ್ಞಾನವಿಲ್ಲದ ಕಾರಣ ನಾವು ಒಂದು ವಾಸ್ತುದೋಷವನ್ನು ಉಂಟುಮಾಡುತ್ತಿದ್ದೇವೆ’, ಎಂಬ ಅರಿವು ಅವರಿಗೆ ಇರುವುದಿಲ್ಲ; ಆದರೆ ‘ನಮ್ಮ ಫ್ಲಾಟ್‌ಗಳು ವಾಸ್ತು ಪ್ರಕಾರ ಇವೆ’ ಎಂಬ ಪ್ರಚಾರವನ್ನು ಮಾತ್ರ ಸಾರಾಸಗಟಾಗಿ ಮಾಡಲಾಗುತ್ತದೆ.
೫. ಮನೆಯ ಮಧ್ಯಭಾಗದಲ್ಲಿ ಪ್ರವೇಶದ್ವಾರ ನಿಷೇಧ !

ವಾಸ್ತುವಿನ ಮಧ್ಯಭಾಗದಲ್ಲಿ, ಅಂದರೆ ಬ್ರಹ್ಮಮಂಡಲದಲ್ಲಿ ಪ್ರವೇಶದ್ವಾರವನ್ನು ನಿರ್ಮಿಸುವುದು ವಾಸ್ತುಶಾಸ್ತ್ರದ ಪ್ರಕಾರ ನಿಷಿದ್ಧವಾಗಿದೆ. ಈ ರೀತಿಯ ಪ್ರವೇಶದ್ವಾರವು ಅನೇಕ ಮನೆಗಳಲ್ಲಿ ಇರುವ ಸಾಧ್ಯತೆ ಇರುತ್ತದೆ. ಇಂತಹ ವಾಸ್ತುಗಳಲ್ಲಿ ಮೆಟ್ಟಿಲು ಹತ್ತಿ ಮೇಲೆ ಹೋದಾಗ ಮಧ್ಯಭಾಗದಲ್ಲಿ ಪ್ರವೇಶ ಪಡೆಯಲಾಗುತ್ತದೆ, ಇದು ಕೂಡ ಒಂದು ರೀತಿಯ ವಾಸ್ತುದೋಷವಾಗಿದೆ.
ಗೃಹಮಧ್ಯೇ ಕೃತಂ ದ್ವಾರಂ ದ್ರವ್ಯಧಾನ್ಯವಿನಾಶನಮ್ |
ಅವಾಹತಕಲಹಂ ಶೋಕಂ ನಾರ್ಯಾವಾಸಂ ಪ್ರದೂಷಯೇತ್ ||
– ವಿಶ್ವಕರ್ಮಪ್ರಕಾಶ, ಅಧ್ಯಾಯ ೭, ಶ್ಲೋಕ ೭೮
ಅರ್ಥ : ಮನೆಯ ಮುಖ್ಯ ಪ್ರವೇಶದ್ವಾರವು ಮಧ್ಯಭಾಗದಲ್ಲಿದ್ದರೆ ಧನ-ಧಾನ್ಯಗಳ ನಾಶವಾಗುತ್ತದೆ. ವಿನಾಕಾರಣ ಕಲಹ, ಶೋಕ ಉಂಟಾಗುತ್ತದೆ ಹಾಗೂ ಮನೆಯ ಸ್ತ್ರೀಯರ ಮನಸ್ಸು ಕಲುಷಿತಗೊಳ್ಳುತ್ತದೆ.
ಆದ್ದರಿಂದ ಮೇಲಿನ ಪದ್ಧತಿಯಲ್ಲಿ ಪ್ರವೇಶದ್ವಾರ ನಿರ್ಮಿಸುವುದನ್ನು ತಪ್ಪಿಸಬೇಕು. ಏಕೆಂದರೆ ಪ್ರವೇಶದ್ವಾರ ವಾಸ್ತುವಿನ ದೃಷ್ಟಿಯಿಂದ ಮಹತ್ವದ ಭಾಗವಾಗಿದೆ. ಆದುದರಿಂದ ಬಹಳ ವಾಸ್ತುಗ್ರಂಥಗಳಲ್ಲಿ ಪ್ರವೇಶದ್ವಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಅಧ್ಯಾಯವನ್ನು ನೀಡಲಾಗಿದೆ. ಇದರಿಂದ ಪ್ರವೇಶದ್ವಾರವು ನಿರ್ದೋಷವಾಗಿರುವುದು ವಾಸ್ತುಶಾಸ್ತ್ರಕಾರರ ದೃಷ್ಟಿಯಿಂದ ಮಹತ್ವದ್ದಾಗಿತ್ತು ಎಂಬುದು ಗಮನಕ್ಕೆ ಬರುತ್ತದೆ.
(ಆಧಾರ ಗ್ರಂಥ : ವಿಶ್ವಕರ್ಮಪ್ರಕಾಶ, ಸಮರಾಂಗಣಸೂತ್ರಧಾರ)
– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ. (೧೨.೨.೨೦೨೬)
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಅಡುಗೆಮನೆ
ಗಾಂಧಿವಾದದ ಮುಖವಾಡ ಕಳಚಿದ ಭಾರತ !