ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿದ ಲೇಖನಮಾಲೆ : ಲೇಖನ ೧೨
ವಾಸ್ತುಶಾಸ್ತ್ರದ ಅಧ್ಯಯನದಲ್ಲಿ ಇಳಿಜಾರಿಗೆ ಅಸಾಧಾರಣ ಮಹತ್ವವಿದೆ. ಎಲ್ಲ ಹಳೆಯ ವಾಸ್ತುತಜ್ಞರು ಇಳಿಜಾರಿನ ಅಧ್ಯಯನ ಮಾಡಿಯೇ ಭವನ ನಿರ್ಮಾಣಕ್ಕಾಗಿ ಮಾರ್ಗದರ್ಶನ ನೀಡಿದ್ದಾರೆ. ‘ಅಪರಾಜಿತ ಪೃಚ್ಛ’, ‘ಸಮರಾಂಗಣ ಸೂತ್ರಧಾರ’, ‘ಮಯಮತಮ್’, ‘ಮಾನಸಾರ’, ‘ಮನುಷ್ಯಾಲಯ ಚಂದ್ರಿಕಾ’, ‘ವಾಸ್ತುವಿದ್ಯಾ’ ಇಂತಹ ಎಲ್ಲ ವಾಸ್ತುವಿಗೆ ಸಂಬಂಧಿಸಿದ ಗ್ರಂಥಗಳ ರಚನೆಕಾರರು ಇಳಿಜಾರಿನ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದಾರೆ. ಆ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ.ಹಾಗೆ ವಿಚಾರ ಮಾಡಿದರೆ ಸಮತಟ್ಟಾದ ಭೂಮಿಯು ಭವನ (ಮನೆ) ನಿರ್ಮಾಣಕ್ಕೆ ಉತ್ತಮವಾಗಿರುತ್ತದೆ; ಆದರೆ ಪ್ರತಿ ಬಾರಿಯೂ ಇಂತಹ ಭೂಮಿ ಲಭ್ಯವಾಗುವುದು ಕಠಿಣವಾಗಿರುತ್ತದೆ; ಆದ್ದರಿಂದ ಭೂಮಿ ಎತ್ತರ ತಗ್ಗಾಗಿದ್ದರೆ ಯಾವ ಭೂಮಿಗೆ ಆದ್ಯತೆ ನೀಡಬೇಕು, ಎಂಬ ಬಗ್ಗೆ ಶಾಸ್ತ್ರದಲ್ಲಿ ನಿಯಮಗಳನ್ನು ನೀಡಲಾಗಿದೆ. ಯಾವುದಾದರೊಂದು ದಿಕ್ಕಿನ ಬಗ್ಗೆ ಅಧ್ಯಯನ ಮಾಡುವಾಗ ಅದರ ಎದುರಿನ ದಿಕ್ಕಿನ ಇಳಿಜಾರು ಅಥವಾ ಏರಿಕೆ ಎಷ್ಟಿದೆ ? ಎಂಬುದನ್ನು ನಿರೀಕ್ಷಿಸಿ ಆ ತುಲನೆಯಲ್ಲಿಯೇ ಎರಡನೇ ದಿಕ್ಕಿನ ಇಳಿಜಾರಿನ ಅಧ್ಯಯನ ಮಾಡಬೇಕು.
ಹಿಂದಿನ ಲೇಖನ ಸಂಖ್ಯೆ ೧೧ ಓದಲು ಈ ಮುಂದಿನ ಲಿಂಕ್‌ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/173617.html
೧. ಪ್ಲವ (ಇಳಿಜಾರು) ಎಲ್ಲಿದ್ದರೆ ಏನು ಫಲ ಸಿಗುತ್ತದೆ ?
ಪೂರ್ವಪ್ಲವೇ ಭವೇಲ್ಲಕ್ಷ್ಮೀರಾಗ್ನೇಯ್ಯಾಂ ಶೋಕಮಾದಿಶೇತ್ |
ಯಾಮ್ಯಾಂ ಯಾತಿ ಯಮದ್ವಾರಂ ನೈಋತೇ ಚ ಮಹಾಭಯಮ್ ||
ಪಶ್ಚಿಮೇ ಕಲಹಂ ಕುರ್ಯಾದ್ವಾಯವ್ಯಾಂ ಮೃತ್ಯುಮಾದಿಶೇತ್ |
ಉತ್ತರೇ ವಂಶವೃದ್ಧಿ: ಸ್ಯಾದೀಶಾನೇ ರತ್ನಸಂಚಯ: ||
– ವಿಶ್ವಕರ್ಮಪ್ರಕಾಶ, ಅಧ್ಯಾಯ ೨, ಶ್ಲೋಕ ೧೫ ಮತ್ತು ೧೬
ಅರ್ಥ : ಪೂರ್ವಕ್ಕೆ ಇಳಿಜಾರು ಇರುವ ಭೂಮಿಯು ಧನವನ್ನು ನೀಡುತ್ತದೆ, ಆಗ್ನೇಯ ಮೂಲೆಯಲ್ಲಿ ಇಳಿಜಾರಿದ್ದರೆ ದುಃಖದಾಯಕ, ದಕ್ಷಿಣದಲ್ಲಿ ಮೃತ್ಯು ಮತ್ತು ನೈಋತ್ಯದಲ್ಲಿ ಇಳಿಜಾರು ಇರುವ ಭೂಮಿಯು ಮಹಾಭಯಕಾರಕವಾಗಿರುತ್ತದೆ. ಪಶ್ಚಿಮದಲ್ಲಿ ಇಳಿಜಾರಿದ್ದರೆ ಕಲಹ, ವಾಯವ್ಯದಲ್ಲಿ ಇಳಿಜಾರಿದ್ದರೆ ಮೃತ್ಯು, ಉತ್ತರದಲ್ಲಿ ಇಳಿಜಾರಿದ್ದರೆ ವಂಶವೃದ್ಧಿ ಮತ್ತು ಈಶಾನ್ಯ ದಿಕ್ಕಿನಲ್ಲಿ ಇಳಿಜಾರಿದ್ದರೆ ರತ್ನಲಾಭವಾಗುತ್ತದೆ.
ಈ ಶ್ಲೋಕದಿಂದ ನಮಗೆ ತಿಳಿಯುವುದೇನೆಂದರೆ, ಯಾವ ದಿಕ್ಕಿನಲ್ಲಿ ಇಳಿಜಾರಿದ್ದರೆ ಏನು ಫಲ ಸಿಗಬಹುದು. ಅದಕ್ಕನುಸಾರ ಭೂಮಿಯ ಆಯ್ಕೆ ಮಾಡುವಾಗ ಮೇಲಿನ ಶ್ಲೋಕದಂತೆ ಇಳಿಜಾರಿನ ವಿಚಾರ ಮಾಡಬೇಕು. ‘ಮಧ್ಯಭಾಗದಲ್ಲಿ ಇಳಿಜಾರು, ಅಂದರೆ ಗುಂಡಿ ಇರುವ ಭೂಮಿಯು ಕಷ್ಟಪ್ರದವಾಗಿರುತ್ತದೆ’, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಯಾವುದೇ ವಾಸ್ತುವಿಗೆ ಸಾಧಾರಣ ಉತ್ತರ-ಈಶಾನ್ಯ-ಪೂರ್ವ ಈ ದಿಕ್ಕುಗಳಲ್ಲಿ ಇಳಿಜಾರು ಇರಬೇಕು ಮತ್ತು ಆಗ್ನೇಯ-ದಕ್ಷಿಣ-ನೈಋತ್ಯ-ಪಶ್ಚಿಮ-ವಾಯವ್ಯ ಈ ದಿಕ್ಕುಗಳಲ್ಲಿ ಏರಿಕೆ ಇರಬೇಕು, ಎಂಬ ವಿಚಾರವನ್ನು ಎಲ್ಲ ವಾಸ್ತುಶಾಸ್ತ್ರಜ್ಞರು ಮಂಡಿಸಿದ್ದಾರೆ.

೨. ಏರಿಕೆ ಎಲ್ಲಿದ್ದರೆ ಯಾವ ಫಲ ಸಿಗುತ್ತದೆ ?
ಇಂದ್ರೋನ್ನತಂ ಪುತ್ರನಾಶಂ ವನ್ಹ್ಯುನ್ನತಂ ಅರ್ಥಪ್ರಾಪ್ತಿದಮ್
ಅಗ್ನಿನೀಚೋರ್ಥನಾಶಃಸ್ಯಾದ್ ಯಾಮ್ಯೋನ್ನತಮರೋಗಕೃತ್
ನಿಋತ್ಯುಚ್ಚಂ ಶ್ರಿಯೋಲಾಭಂ ಪುತ್ರದಂ ವರುಣೋನ್ನತಮ್ |
ವಾಯುನ್ನತಂ ದ್ರವ್ಯನಾಶಂ ಸೌಮ್ಯೋನ್ನತಮಥೋಗದಃ ||
– ವಾಸ್ತುವಿದ್ಯಾ (ಪ್ರಾಚೀನ ವಾಸ್ತು ಗ್ರಂಥ)
ಅರ್ಥ : ಯಾವ ರೀತಿ ಇಳಿಜಾರು ಎಲ್ಲಿದ್ದರೆ ಯಾವ ಫಲ ಸಿಗುತ್ತದೆ ಎಂದು ಹೇಳಲಾಗಿದೆಯೋ; ಅದೇ ರೀತಿ ಏರಿಕೆ ಎಲ್ಲಿ ಇದ್ದರೆ ಏನು ಪರಿಣಾಮವಾಗುತ್ತದೆ, ಎಂಬುದನ್ನೂ ಶಾಸ್ತ್ರದಲ್ಲಿ ಹೇಳಲಾಗಿದೆ. ಪೂರ್ವಕ್ಕೆ ಏರಿಕೆ ಇದ್ದರೆ, ಪುತ್ರನಾಶ; ಆಗ್ನೇಯ ದಿಕ್ಕಿನಲ್ಲಿ ಏರಿಕೆ ಇದ್ದರೆ, ಆರ್ಥಿಕ ಲಾಭ ಮಾಡಿಕೊಡುತ್ತದೆ (ಇಳಿಜಾರು ಇದ್ದರೆ ದ್ರವ್ಯನಾಶವಾಗುತ್ತದೆ); ದಕ್ಷಿಣದ ಏರಿಕೆ ರೋಗವನ್ನು ದೂರ ಮಾಡುವಂತಹದ್ದು ಮತ್ತು ನೈಋತ್ಯದಲ್ಲಿ ಇರುವ ಏರಿಕೆ ಸಂಪತ್ತನ್ನು ನೀಡುವಂತಹದ್ದಾಗಿರುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಏರಿಕೆ ಇದ್ದರೆ, ಪುತ್ರಸುಖವನ್ನು ನೀಡುವುದು, ವಾಯವ್ಯದ ಏರಿಕೆ ದ್ರವ್ಯ ನಾಶ ಮಾಡುವಂತಹದ್ದು, ಉತ್ತರ ದಿಕ್ಕಿನ ಏರಿಕೆ ಅನಾರೋಗ್ಯಕ್ಕೆ ಆಮಂತ್ರಣ ನೀಡುವಂತಹದ್ದು, ಹಾಗೆಯೇ ಈಶಾನ್ಯ ದಿಕ್ಕಿನ ಏರಿಕೆ ಮಹಾಕ್ಲೇಶ ನೀಡುವಂತಹದ್ದಾಗಿರುತ್ತದೆ.
೩. ಮಧ್ಯಭಾಗದಲ್ಲಿ ಇಳಿಜಾರು ಅಥವಾ ಏರಿಕೆ ಇದ್ದರೆ

ಪ್ರವಾಸದಾ ಮಧ್ಯನತಾ ಧರಿತ್ರೀ ಮಧ್ಯೋನ್ನತಾ ವಿತ್ತಸುಖಾದಿಹನ್ತ್ರೀ |
ವನ್ಹ್ಯಾದಿವಾಯ್ವನ್ತನತಾ ಧರಿತ್ರೀ ಪ್ರಾಯೇಣ ದಾರಿದ್ರ್ಯಫಲಪ್ರದಾ ಸ್ಯಾತ್ || – ಮನುಷ್ಯಾಲಯ ಚಂದ್ರಿಕಾ, ಅಧ್ಯಾಯ ೧, ಶ್ಲೋಕ, ೨೦
ಅರ್ಥ : ಮಧ್ಯಭಾಗದಲ್ಲಿ ತಗ್ಗು ಇರುವ ಭೂಮಿಯು ಯಾವಾಗಲೂ ಪ್ರವಾಸವನ್ನು ನೀಡುತ್ತದೆ ಮತ್ತು ಸ್ಥಳಾಂತರಗೊಳ್ಳುವಂತೆ ಮಾಡುತ್ತದೆ. ಮಧ್ಯಭಾಗದಲ್ಲಿರುವ ಎತ್ತರವಿರುವ ಭೂಮಿಯು ಸಂಪತ್ತು ಮತ್ತು ಸುಖವನ್ನು ನಾಶ ಪಡಿಸುತ್ತದೆ, ಹಾಗೆಯೇ ಆಗ್ನೇಯ ಮತ್ತು ವಾಯವ್ಯ ದಿಕ್ಕುಗಳಲ್ಲಿ ಇಳಿಜಾರು ಇರುವ ಭೂಮಿಯು ಮನೆಮಾಲೀಕನಿಗೆ ದಾರಿದ್ರ್ಯವನ್ನು ತರುತ್ತದೆ.
ಯಾವ ನಿಯಮವು ಭೂಮಿಯ ಇಳಿಜಾರಿಗೆ ಅನ್ವಯಿಸುತ್ತದೆಯೋ, ಅದೇ ನಿಯಮವು ಭವನದ ಮೇಲಿನ ಇಳಿಜಾರಿಗೂ ಅನ್ವಯಿಸುತ್ತದೆ. ಮನೆಯ ಮೇಲ್ಛಾವಣಿಯ ಇಳಿಜಾರನ್ನು ನಿಶ್ಚಿತಗೊಳಿಸುವಾಗಲೂ ಪೂರ್ವ ಮತ್ತು ಉತ್ತರ ದಿಕ್ಕುಗಳಿಗೆ ಹೆಚ್ಚು ಇಳಿಜಾರು ಅಥವಾ ಎರಡೂ ಕಡೆ ಸಮಾನವಾಗಿ ಇಡಬೇಕು; ಆದರೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಪೂರ್ವ ಮತ್ತು ಉತ್ತರ ದಿಕ್ಕಿನ ತುಲನೆಯಲ್ಲಿ ಹೆಚ್ಚು ಇಳಿಜಾರು ಇಡಬಾರದು. ಅದು ಕ್ಲೇಶಕರವಾಗಿರುತ್ತದೆ, ಎಂದು ಹೇಳಲಾಗಿದೆ. ಬಹಳಷ್ಟು ಬಾರಿ ವಾಸ್ತು ನಿರ್ಮಿಸುವಾಗ ಆಂತರಿಕ ರಚನೆಯಲ್ಲಿ ಮನೆಯನ್ನು ಪ್ರವೇಶಿಸಿದ ನಂತರ ಕೆಳಗೆ ಇಳಿದು ನಂತರ ಸೋಫಾ ಇತ್ಯಾದಿ ಕೂರುವ ವ್ಯವಸ್ಥೆ ಮಾಡಲಾಗಿರುತ್ತದೆ. ದೊಡ್ಡ ಬಂಗಲೆಗಳಲ್ಲಿ ಇಂತಹ ರಚನೆ ಮಾಡಿರುವುದು ಕಂಡುಬರುತ್ತದೆ; ಆದರೆ ಇದನ್ನು ಕೂಡ ವಾಸ್ತುವಿನ ಇಳಿಜಾರು ಎಂದು ಪರಿಗಣಿಸಲಾಗುತ್ತದೆ. ಅದು ಒಂದು ವೇಳೆ ಅಯೋಗ್ಯ ದಿಕ್ಕಿನಲ್ಲಿ, ಅಂದರೆ ದಕ್ಷಿಣ-ಪಶ್ಚಿಮ ಇತ್ಯಾದಿ ದಿಕ್ಕುಗಳಲ್ಲಿದ್ದರೆ ಒಂದು ಹೆಚ್ಚುವರಿ ದೋಷವು ವಾಸ್ತುವಿನಲ್ಲಿ ಸೇರ್ಪಡೆಯಾಗುತ್ತದೆ. ಆದ್ದರಿಂದ ವಾಸ್ತುವಿನ ಆಂತರಿಕ ರಚನೆ (ಡಿಸೈನಿಂಗ್) ಮಾಡುವಾಗ ವಾಸ್ತುಶಾಸ್ತ್ರದ ನಿಯಮಗಳನ್ನು ನಾವು ಎಲ್ಲಿಯಾದರೂ ಉಲ್ಲಂಘಿಸುತ್ತಿಲ್ಲವಲ್ಲವೇ, ಎಂಬುದನ್ನು ನಾವು ವಿಚಾರ ಮಾಡುವುದು ಆವಶ್ಯಕವಾಗಿದೆ. ಇದಕ್ಕಾಗಿಯೇ ಸದ್ಯದ ಎಲ್ಲ ಆಧುನಿಕ ವಾಸ್ತುವಿಶಾರದ ಮತ್ತು ವಾಸ್ತುಶಿಲ್ಪ ಅಭಿಯಂತರು ಪ್ರಾಚೀನ ಮತ್ತು ಪಾರಂಪರಿಕ ವಾಸ್ತುಶಾಸ್ತ್ರದ ಅಧ್ಯಯನವನ್ನು ಮಾಡಿ ಮನೆಗಳು, ಹಾಗೆಯೇ ಕಟ್ಟಡಗಳ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ. ಅದರಿಂದ ದೋಷಪೂರ್ಣ ವಾಸ್ತು ನಿರ್ಮಾಣ ಕಡಿಮೆಯಾಗಿ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಎಲ್ಲರಿಗೂ ಈ ಶಾಸ್ತ್ರದ ಅಧ್ಯಯನ ಮಾಡಿ ಸಾತ್ತ್ವಿಕ ವಾಸ್ತು ನಿರ್ಮಾಣ ಮಾಡುವ ಪ್ರೇರಣೆ ಸಿಗಲಿ, ಎಂದು ಭಗವಂತನ ಚರಣಗಳಲ್ಲಿ ಪ್ರಾರ್ಥನೆ !
(ಆಧಾರ : ಮಯಮತಮ್, ವಿಶ್ವಕರ್ಮಪ್ರಕಾಶ, ವಾಸ್ತುವಿದ್ಯಾ, ಮನುಷ್ಯಾಲಯ ಚಂದ್ರಿಕಾ)
_ ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ. (೨೯.೧.೨೦೨೬)

ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು