ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿದ ಲೇಖನಮಾಲೆ : ಲೇಖನ ೧೧
ವಾಸ್ತುಶಾಸ್ತ್ರದ ಅಧ್ಯಯನ ಮಾಡುವಾಗ ನಮಗೆ ಶಕ್ತಿಗಳ (ಊರ್ಜೆ) ಅಧ್ಯಯನ ಮಾಡುವುದು ಮಹತ್ವದ್ದಾಗಿರುತ್ತದೆ; ಏಕೆಂದರೆ ಈ ಜಗತ್ತಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಶಕ್ತಿಗಳು ಮನುಷ್ಯನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ೪ ಶಕ್ತಿಗಳು ಕಾರ್ಯನಿರ್ವಹಿಸುತ್ತವೆ. ವೈಶ್ವಿಕ (ಬ್ರಹ್ಮಾಂಡ) ಶಕ್ತಿ, ಭೂಗರ್ಭ ಶಕ್ತಿ, ವಿದ್ಯುತ್ ಶಕ್ತಿ, ಕಾಂತೀಯ ಶಕ್ತಿ ! ಈ ಲೇಖನದಲ್ಲಿ ನಾವು ಈ ಶಕ್ತಿಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಹಿಂದಿನ ಲೇಖನ ಸಂಖ್ಯೆ ೧೦ ಓದಲು ಈ ಮುಂದಿನ ಲಿಂಕ್‌ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/172778.html
೧. ವೈಶ್ವಿಕ ಶಕ್ತಿ
೧ ಅ. ಶುಭ ಶಕ್ತಿಯನ್ನು ಮನೆಯಲ್ಲಿ ಸತತವಾಗಿ ಸಂಗ್ರಹಿಸಿಡಬೇಕು ! : ವಾಸ್ತುಶಾಸ್ತ್ರದ ಪ್ರಕಾರ ವೈಶ್ವಿಕ (ಬ್ರಹ್ಮಾಂಡ) ಶಕ್ತಿಯು ಪೂರ್ವ ಮತ್ತು ಉತ್ತರ ದಿಕ್ಕುಗಳಿಂದ ಬರುತ್ತಿರುತ್ತದೆ. ಆ ಶಕ್ತಿಗಳು ಶುಭ ಸ್ವರೂಪದ್ದಾಗಿರುತ್ತವೆ. ಶುಭ ಶಕ್ತಿಯನ್ನು ಮನೆಯಲ್ಲಿ ಸತತವಾಗಿ ಸಂಗ್ರಹಿಸಿಡುವುದು ಮುಖ್ಯವಾಗಿರುತ್ತದೆ. ಆದ್ದರಿಂದ ಭೂಮಿ, ಕಾಮಗಾರಿ ಅಥವಾ ಮನೆಯ ಛಾವಣಿಯ ಇಳಿಜಾರು ಯಾವ ದಿಕ್ಕಿನಲ್ಲಿದೆ ಎಂಬುದರ ಅಧ್ಯಯನವು ಮುಖ್ಯವಾಗಿದೆ.
೧ ಆ. ವಾಸ್ತುಶಾಸ್ತ್ರದಲ್ಲಿ ಇಳಿಜಾರಿಗೆ ಇರುವ ಮಹತ್ವ : ಒಂದು ವೇಳೆ ವಾಸ್ತುವಿನ ಇಳಿಜಾರು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿದ್ದರೆ, ಆ ದಿಕ್ಕುಗಳಿಂದ ಬರುವ ಶುಭ ಶಕ್ತಿಯು ವಾಸ್ತುವಿನಲ್ಲಿ ದೀರ್ಘಕಾಲದ ವರೆಗೆ ಸಂಗ್ರಹವಾಗಿ ಉಳಿಯಬಲ್ಲದು. ಇದಕ್ಕೆ ವಿರುದ್ಧವಾಗಿ ಇಳಿಜಾರು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿದ್ದರೆ, ಈ ಶಕ್ತಿಯು ಪ್ರಭಾವಿತವಾಗಿ ತಕ್ಷಣವೇ ಹೊರಟುಹೋಗುತ್ತದೆ. ಅದು ನಮ್ಮ ವಾಸ್ತುವಿನಲ್ಲಿ ಸಂಗ್ರಹವಾಗಿ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ವಾಸ್ತುಶಾಸ್ತ್ರದಲ್ಲಿ ಇಳಿಜಾರಿಗೆ (ಪ್ಲವ) ಶಾಸ್ತ್ರಕಾರರು ಬಹಳ ಮಹತ್ವ ನೀಡಿದ್ದಾರೆ.
೧ ಇ. ಪೂರ್ವ ಮತ್ತು ಉತ್ತರ ದಿಕ್ಕನ್ನು ಮುಕ್ತವಾಗಿಡುವುದರ ಮಹತ್ವ : ವಾಸ್ತುಶಾಸ್ತ್ರದ ಪ್ರಕಾರ ಪೂರ್ವ ಮತ್ತು ಉತ್ತರ ದಿಕ್ಕುಗಳಿಂದ ಶುಭ ಶಕ್ತಿ ಬರುತ್ತದೆ. ಆದ್ದರಿಂದ ನಾವು ಕಂಪೌಂಡ್ ಗೋಡೆ, ಬಾಗಿಲು-ಕಿಟಕಿಗಳು, ಹಾಗೆಯೇ ಬಾಲ್ಕನಿಯನ್ನು ನಿರ್ಮಿಸುವಾಗ ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳನ್ನು ಸಾಧ್ಯವಾದಷ್ಟು ಮುಚ್ಚಿ, ಪೂರ್ವ ಮತ್ತು ಉತ್ತರ ದಿಕ್ಕುಗಳನ್ನು ತೆರೆದಿಟ್ಟರೆ ಆ ದಿಕ್ಕುಗಳಿಂದ ಬರುವ ಶಕ್ತಿಯು ವಾಸ್ತುವಿನಲ್ಲಿ ಸಂಗ್ರಹವಾಗಿ ಉಳಿಯುತ್ತದೆ. ಅದು ಅಲ್ಲಿ ವಾಸಿಸುವ ಜನರಿಗೆ ನಿರಂತರ ಶಕ್ತಿಯನ್ನು ನೀಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಒಂದು ವೇಳೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕು ತೆರೆದಿದ್ದರೆ, ಮಾಡಿದ ನಿರ್ಮಾಣವು ದುಪ್ಪಟ್ಟು ಸಮಯ ತೆಗೆದುಕೊಳ್ಳುವಂತಹುದು, ಹಣವನ್ನು ವ್ಯರ್ಥ ಮಾಡುವಂತಹುದು, ಹಾಗೆಯೇ ಶ್ರಮ ಮತ್ತು ಮಾನಸಿಕ ಕಿರಿಕಿರಿಯನ್ನು ಹೆಚ್ಚಿಸುವಂತದ್ದಾಗಿರುತ್ತದೆ. ಇದರ ಅರ್ಥ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಕಿಟಕಿ ಇತ್ಯಾದಿಗಳನ್ನು ಇಡಲೇಬಾರದು ಎಂದಲ್ಲ; ಆದರೆ ಬೆಳಕಿನ ಅವಶ್ಯಕತೆಗೆ ಅನುಗುಣವಾಗಿ ಇಡಬೇಕಾಗಿ ಬಂದಲ್ಲಿ, ಅದಕ್ಕೆ ಹೋಲಿಸಿದರೆ ಅದರ ಎದುರಿನ ದಿಕ್ಕು ಅಂದರೆ ಪೂರ್ವ ಅಥವಾ ಉತ್ತರ ದಿಕ್ಕುಗಳು ಹೆಚ್ಚು ತೆರೆದಿರುವುದು ಅಗತ್ಯವಾಗಿರುತ್ತದೆ.
೧ ಈ. ಪೀಠೋಪಕರಣಗಳನ್ನು ಯಾವ ದಿಕ್ಕಿನಲ್ಲಿ ಮಾಡಬೇಕು ? : ಶಕ್ತಿಯ ಹರಿವನ್ನು ಪರಿಗಣಿಸಿ ನಾವು ಮನೆಯಲ್ಲಿ ಪೀಠೋಪಕರಣಗಳು (ಸಾಹಿತ್ಯ) ಇತ್ಯಾದಿ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಮಾಡಬೇಕು, ಪೂರ್ವ-ಉತ್ತರದ ಜಾಗವನ್ನು ಖಾಲಿ ಬಿಟ್ಟರೆ ವಾಸ್ತುವಿನಲ್ಲಿ ಅದರ ಧನಾತ್ಮಕ ಪರಿಣಾಮಗಳಾಗುತ್ತವೆ.
೧ ಉ. ಮನೆಯ ಮೇಲಿನ Parapet Wall (ಛಾವಣಿಯ ಅಂಚಿನಲ್ಲಿ ನಿರ್ಮಿಸಲಾದ ಅಲ್ಪ ಎತ್ತರದ ಗೋಡೆ) ಎಲ್ಲಾ ದಿಕ್ಕುಗಳಲ್ಲಿ ಸಮಾನವಾಗಿರಬೇಕು ಅಥವಾ ದಕ್ಷಿಣ-ಪಶ್ಚಿಮದಲ್ಲಿ ಹೆಚ್ಚು ದಪ್ಪ ಮತ್ತು ಎತ್ತರವಾಗಿರಬೇಕು. ಛಾವಣಿಯ ಇಳಿಜಾರು ಎಲ್ಲಾ ಕಡೆಗಳಲ್ಲಿ ಸಮಾನವಾಗಿರಬೇಕು ಅಥವಾ ಪೂರ್ವ-ಉತ್ತರ ಭಾಗದಲ್ಲಿ ಹೆಚ್ಚಾಗಿರಬೇಕು.

೨. ಭೂಗರ್ಭ ಶಕ್ತಿ
೨ ಅ. ಭೂಗರ್ಭ ಶಕ್ತಿಯು ವಾಸ್ತುವಿನಲ್ಲಿರುವ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ : ಭೂಮಿಯ ಅಡಿಯಿಂದ ನೀರಿನ ಸೆಲೆಗಳು ಹರಿಯುತ್ತಿರುತ್ತವೆ. ಸೆಲೆಗಳನ್ನು ಭೂಮಿಯ ಅಡಿಯಿಂದ ಬರುವ ಶಕ್ತಿಯು ಮೇಲೆ ತಳ್ಳಲು ಪ್ರಯತ್ನಿಸುತ್ತದೆ. ಇದರಲ್ಲಿ ಒತ್ತಡ ಮತ್ತು ಶಕ್ತಿ ವಲಯ ನಿರ್ಮಾಣವಾಗುತ್ತದೆ. ಈ ವಲಯವು ಭೂಮಿಯ ಮೇಲ್ಮೈಯಲ್ಲಿ ಎಲ್ಲಿ ಬರುತ್ತದೆಯೋ, ಅದನ್ನು ‘ಭೂಗರ್ಭ ಒತ್ತಡ ಕ್ಷೇತ್ರ’ ಎಂದು ಕರೆಯುತ್ತಾರೆ. ಆಧುನಿಕ ಯಂತ್ರಗಳ ಸಹಾಯದಿಂದ ನಾವು ಈ ಸ್ಥಳಗಳನ್ನು ಕಂಡುಹಿಡಿಯಬೇಕಾಗುತ್ತದೆ. ವಾಸ್ತುವಿನಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ಈ ಶಕ್ತಿಯು ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ, ನಿರಾಶೆ ಮತ್ತು ಭಯದಂತಹ ಸಮಸ್ಯೆಗಳು ಭೂಗರ್ಭ ಶಕ್ತಿ ಇರುವ ಸ್ಥಳಗಳಲ್ಲಿ ಕಂಡುಬರಬಹುದು.
೨ ಆ. ಭೂಗರ್ಭದ ನೀರಿನ ಮೇಲೆ ರಚಿಸುವುದರ ಮಹತ್ವ : ಭೂಗರ್ಭದ ನೀರಿನ ಮೇಲೆ ಯಾವುದಾದರೂ ರಚನೆಯನ್ನು ನಿರ್ಮಿಸಿದಾಗ, ನೀರಿನ ಶಕ್ತಿಯ ನೈಸರ್ಗಿಕ ಕಾಂತೀಯ ಹರಿವನ್ನು ಪ್ರತಿಬಂಧಿಸಲಾಗುತ್ತದೆ ಮತ್ತು ಕಟ್ಟಡದಲ್ಲಿ ವ್ಯತ್ಯಯ ಉಂಟು ಮಾಡುವ ಕಂಪನಗಳು ನಿರ್ಮಾಣವಾಗುತ್ತವೆ.
೨ ಇ. ಈ ಶಕ್ತಿ ಹರಿವಿನ ಮೇಲೆ ನಾವು ಒಂದು ವೇಳೆ ನಿಯಮಿತವಾಗಿ ಮಲಗಿದರೆ, ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು.
೨ ಈ. ಭೂಗರ್ಭ ಶಕ್ತಿಯ ಒತ್ತಡವು ವಿಭಿನ್ನ ಕಾಯಿಲೆಗಳಿಗೆ ಕಾರಣವಾಗಿದೆ. ಭೂಗರ್ಭ ಶಕ್ತಿಯ ಒತ್ತಡವು ನಿಮ್ಮ ಆಹಾರದಿಂದ ಜೀವಸತ್ವಗಳು ಮತ್ತು ಖನಿಜಗಳು ಇತ್ಯಾದಿಗಳನ್ನು ಹೀರಿಕೊಳ್ಳುವುದನ್ನು ಪ್ರತಿಬಂಧಿಸುತ್ತದೆ.

೩. ವಿದ್ಯುತ್ ಶಕ್ತಿ
೩ ಅ. ವಿದ್ಯುತ್ ಶಕ್ತಿಯ ಎರಡು ರೂಪಗಳು : ಮೋಡಗಳ ಘರ್ಷಣೆಯಿಂದ ನಿರ್ಮಾಣವಾಗುವ ಮಿಂಚು ಮತ್ತು ಕಲ್ಲುಗಳ ಘರ್ಷಣೆಯಿಂದ ನಿರ್ಮಾಣವಾಗುವ ಅಗ್ನಿ ಇವು ವಿದ್ಯುತ್ ಶಕ್ತಿಯ ಎರಡು ರೂಪಗಳಾಗಿವೆ.
೩ ಆ. ಸಂಗ್ರಹವಾದ ಶಕ್ತಿಯ ಪರಿಣಾಮ : ಭೂಮಿಯ ಅಡಿಯಲ್ಲಿರುವ ವಿವಿಧ ಸ್ತರಗಳ ಪರಸ್ಪರ ಘರ್ಷಣೆಯಿಂದ ಅಲ್ಲಿಯೂ ವಿದ್ಯುತ್ ಶಕ್ತಿ ನಿರ್ಮಾಣವಾಗುತ್ತಿರುತ್ತದೆ. ಇದು ಅತ್ಯಂತ ಅಲ್ಪ ಪ್ರಮಾಣದಲ್ಲಿರುತ್ತದೆ; ಆದರೆ ಅದು ಸಂಗ್ರಹವಾಗುತ್ತಾ ಹೋಗಿ ವಿದ್ಯುತ್ ಶಕ್ತಿಯ ರೂಪದಲ್ಲಿ ಕೆಲಸ ಮಾಡುತ್ತದೆ. ಈ ಸಂಗ್ರಹವಾದ ಶಕ್ತಿಯು ಯಾವ ವಾಸ್ತುವಿನಲ್ಲಿರುತ್ತದೆಯೋ, ಅಲ್ಲಿ ವಾಸಿಸುವ ವ್ಯಕ್ತಿಗಳಿಗೆ ಅದು ಖಂಡಿತವಾಗಿಯೂ ತೊಂದರೆದಾಯಕವಾಗಿರುತ್ತದೆ. ಇದರಿಂದ ವಾಸ್ತುವಿನ ವಾತಾವರಣವೂ ಉಷ್ಣವಾಗಿರುತ್ತದೆ. ಮಾನಸಿಕ ನಿರಾಶೆ, ಒತ್ತಡ ಇತ್ಯಾದಿ ಪರಿಣಾಮಗಳು ಈ ಶಕ್ತಿಯಿಂದ ಉಂಟಾಗಬಹುದು.
೩ ಇ. ವಿದ್ಯುತ್ ಉಪಕರಣಗಳಿಂದಾಗುವ ಪರಿಣಾಮ : ಮನೆಯ ಹತ್ತಿರವಿರುವ ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಜನರೇಟರ್), ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ತಂತಿ ಇತ್ಯಾದಿ ವಿಷಯಗಳು ಕೂಡ ನಮ್ಮ ಮೇಲೆ ಪರಿಣಾಮ ಬೀರುತ್ತವೆ; ಏಕೆಂದರೆ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ತಂತಿಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳು ತಮ್ಮ ಸುತ್ತಲೂ ಕಾಂತೀಯ ಕ್ಷೇತ್ರವನ್ನು ನಿರ್ಮಿಸುತ್ತವೆ. ಆ ಕ್ಷೇತ್ರದೊಂದಿಗೆ ನಾವು ಹೆಚ್ಚು ಕಾಲ ಸಂಪರ್ಕಕ್ಕೆ ಬಂದರೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
೪. ಕಾಂತೀಯ ಶಕ್ತಿ
೪ ಅ. ಭೂಮಿಯ ಗರ್ಭದಲ್ಲಿರುವ ಕಾಂತೀಯ ಕ್ಷೇತ್ರದ ಪರಿಣಾಮ : ಭೂಮಿಯ ಗರ್ಭದಲ್ಲಿಯೂ ಕಾಂತೀಯ ಕ್ಷೇತ್ರವಿರುತ್ತದೆ. ಅದರಲ್ಲಿ ಎರಡು ಕ್ಷೇತ್ರಗಳು ಪರಸ್ಪರ ಹತ್ತಿರ ಬಂದಾಗ ಮತ್ತು ಅವುಗಳಲ್ಲಿನ ಸಜಾತೀಯ ಹಾಗೂ ವಿಜಾತೀಯ ಶಕ್ತಿ ಕೇಂದ್ರಗಳ ಸ್ಥಾನಗಳು ವಿರುದ್ಧವಾದರೆ, ಆ ಸ್ಥಳದಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ಇಡೀ ಭೂಮಿಯಲ್ಲಿ ಇಂತಹ ಸ್ಥಳಗಳು ಕಡಿಮೆ ಇವೆ; ಆದರೆ ಇಂತಹ ಸ್ಥಳಗಳಲ್ಲಿ ದಿಕ್ಸೂಚಿ (Compass) ಕೆಲಸ ಮಾಡುವುದಿಲ್ಲ. ಅದೃಷ್ಟವಶಾತ್ ನಾವು ವಾಸಿಸುವ ಕಡೆ ಇಂತಹ ಬಿಂದುಗಳು ಕಡಿಮೆ ಇವೆ. ಕಾಶ್ಮೀರದಲ್ಲಿ ಕೆಲವು ಸ್ಥಳಗಳಲ್ಲಿ ಇಂತಹ ಶಕ್ತಿಯನ್ನು ನಾವು ನೋಡಬಹುದು. ಈ ಶಕ್ತಿಯು ಭೂಮಿಯ ವಾಸದ ನಿಯಮಗಳಿಗೆ ವಿರುದ್ಧವಾಗಿರುವುದರಿಂದ ಇಲ್ಲಿ ವಾಸಿಸುವವರ ಜೀವನ ಖಂಡಿತವಾಗಿಯೂ ಕಷ್ಟಕರವಾಗಿರುತ್ತದೆ.
೫. ನಕಾರಾತ್ಮಕ ಶಕ್ತಿ ಇರುವ ಸ್ಥಳಗಳಲ್ಲಿ ವಾಸ್ತು ನಿರ್ಮಾಣ ಮಾಡದಿರಿ !
ವಾಸ್ತುವಿನ ದೃಷ್ಟಿಯಿಂದ ಅಧ್ಯಯನ ಮಾಡುವಾಗ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳ ಅಧ್ಯಯನವನ್ನೂ ಮಾಡಬೇಕು. ಆಧುನಿಕ ಕಾಲದಲ್ಲಿ ಅನೇಕ ಯಂತ್ರಗಳ ಮಾಧ್ಯಮದಿಂದ ನಾವು ಜಾಗದ ಶಕ್ತಿಯನ್ನು ಅಧ್ಯಯನ ಮಾಡಬಹುದು; ಆದರೆ ಹಿಂದಿನ ತಜ್ಞರು ನಕಾರಾತ್ಮಕ ಶಕ್ತಿಯ ಕೆಲವು ಸ್ಥೂಲ ಲಕ್ಷಣಗಳನ್ನು ಹೇಳಿದ್ದಾರೆ. ಆ ಭಾಗದಲ್ಲಿ ವಾಸ್ತು ನಿರ್ಮಾಣ ಮಾಡದಿರಲು ಹೇಳಲಾಗಿದೆ.
೫ ಅ. ಜಲಾಘಾತ ಮತ್ತು ಅದರ ಪರಿಣಾಮ : ‘ಯಾವ ಕ್ಷೇತ್ರವು ಸತತವಾಗಿ ತೇವದಿಂದ ಕೂಡಿರುತ್ತದೆಯೋ ಅಥವಾ ಯಾವ ಸ್ಥಳದಲ್ಲಿ ನೀರಿನಿಂದಾಗಿ ತೇವವು ಉಂಟಾಗಿರುತ್ತದೆಯೋ, ಅಲ್ಲಿ ಜಲಾಘಾತವಾಗಿದೆ’ ಎಂದು ನಾವು ಹೇಳುತ್ತೇವೆ. ತೇವದಿಂದಾಗಿ ನಕಾರಾತ್ಮಕ ಶಕ್ತಿ ತಯಾರಾಗಬಲ್ಲದು. ಅಲ್ಲಿ ತೇವದ ವಾಸನೆ ಬರುತ್ತಿರುತ್ತದೆ. ಅದು ನಕಾರಾತ್ಮಕ ಶಕ್ತಿಯ ಒಂದು ಭಾಗವಾಗಿರುತ್ತದೆ. ಅನೇಕ ಫ್ಲಾಟ್‌ಗಳಲ್ಲಿ ನೀರು ಗೋಡೆಗಳಲ್ಲಿ ಇಳಿದು ತೇವ ನಿರ್ಮಾಣವಾಗುತ್ತದೆ. ಇದರಿಂದ ಕೂಡ ವಾಸ್ತುವಿನಲ್ಲಿ ನಕಾರಾತ್ಮಕ ಸ್ಪಂದನಗಳು ನಿರ್ಮಾಣವಾಗುತ್ತವೆ.
೫ ಆ. ಹುತ್ತ : ಹುತ್ತವು ನಕಾರಾತ್ಮಕ ಶಕ್ತಿಯಿಂದ ನಿರ್ಮಾಣ ವಾಗಿರುತ್ತದೆ. ಹಿಂದಿನ ಲೇಖನದಲ್ಲಿ ನಾವು ಹುತ್ತಗಳು ಇರುವ ಭೂಮಿಯನ್ನು ವರ್ಜಿಸಬೇಕು ಎಂಬ ವಿಷಯದ ಬಗ್ಗೆ ‘ವಿಶ್ವಕರ್ಮಪ್ರಕಾಶ’ ಎಂಬ ಗ್ರಂಥದ ಶ್ಲೋಕವನ್ನು ನೋಡಿದ್ದೆವು. ಭೂಗರ್ಭಶಾಸ್ತ್ರದ ಪ್ರಕಾರವೂ ಇದು ಸಿದ್ಧವಾಗಿದೆ ಏನೆಂದರೆ, ಇರುವೆಗಳು ಎಲ್ಲಿ ಹುತ್ತ ನಿರ್ಮಿಸುತ್ತವೆಯೋ ಅಲ್ಲಿ ನಕಾರಾತ್ಮಕ ಸ್ಪಂದನಗಳಿರುತ್ತವೆ.
೫ ಇ. ಜೇನುಗೂಡು : ಜೇನುಗೂಡು ಇರುವ ಮರಗಳು ಎಲ್ಲಿರುತ್ತವೆಯೋ ಆ ಜಾಗವನ್ನು ವರ್ಜಿಸಬೇಕು. ಜೇನುನೊಣಗಳು ಕೂಡ ನಕಾರಾತ್ಮಕ ಶಕ್ತಿ ಕ್ಷೇತ್ರಗಳಲ್ಲಿ ಗೂಡು ಕಟ್ಟುತ್ತವೆ.
೬. ನೈಸರ್ಗಿಕ ಸಂರಕ್ಷಣೆಯೊಂದಿಗೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಅವಶ್ಯಕತೆ !
ಈಗಿನ ಕಾಲದಲ್ಲಿ ಆಧುನೀಕರಣದಿಂದಾಗಿ ವಿವಿಧ ಶಕ್ತಿಗಳಿಂದ ನಮಗೆ ದೊರೆಯುತ್ತಿದ್ದ ನೈಸರ್ಗಿಕ ಸಂರಕ್ಷಣೆಯು ನಾಶವಾಗಿದೆ. ಭೂಗರ್ಭದ ಒತ್ತಡದಿಂದ ನಿರ್ಮಾಣವಾಗುವ ಸಮಸ್ಯೆಗಳಿಗೆ ಪರಿಹಾರವಾಗಿ ಹಿಂದಿನ ಕಾಲದಲ್ಲಿ ಹುಲ್ಲಿನ ಹಾಸಿಗೆಗಳು, ಕಂಬಳಿ, ಭೂಮಿಯನ್ನು ಸಗಣಿಯಿಂದ ಸಾರಿಸುವುದು ಇತ್ಯಾದಿ ಸುಲಭ ಉಪಾಯಗಳನ್ನು ಮಾಡಲಾಗುತ್ತಿತ್ತು. ಅದರಿಂದ ನೈಸರ್ಗಿಕ ಸಂರಕ್ಷಣೆ ಲಭಿಸುತ್ತಿತ್ತು. ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಇದರ ಬಳಕೆಯಿದೆ. ಆದ್ದರಿಂದ ನಗರಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಜನರ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಮೈಮೇಲೆ ಲೋಹಗಳನ್ನು (ಚಿನ್ನ, ಬೆಳ್ಳಿ ಮತ್ತು ತಾಮ್ರ) ಧರಿಸುವುದರಿಂದಲೂ ಸಂರಕ್ಷಣೆ ಸಿಗುತ್ತದೆ. ಮೈಮೇಲೆ ರತ್ನ ಅಥವಾ ರುದ್ರಾಕ್ಷಿಯನ್ನು ಧರಿಸುವ ಉಪಾಯಗಳು ಕೂಡ ಪರಿಣಾಮಕಾರಿಯಾಗಿರುತ್ತವೆ.
– ಶ್ರೀ ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ. (೨೨.೧.೨೦೨೬)

|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು