ತಮಿಳುನಾಡಿನ ಶ್ರೀ ಭಾಗಮಪ್ರಿಯಾಳ ದೇವಿಯ ದರ್ಶನ ಪಡೆದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

ಶ್ರೀ ಭಾಗಮಪ್ರಿಯಾಳದೇವಿ

ರಾಮನಾಥಪುರಂ (ತಮಿಳುನಾಡು) – ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಉಲ್ಲೇಖಿಸಿದಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಇಲ್ಲಿನ ತಿರುವೇತ್ರಿಯೂರ್‌ ಗ್ರಾಮದಲ್ಲಿರುವ ಶ್ರೀವಲಮಿಕನಾಥ ಸಮೇತ ಶ್ರೀ ಭಾಗಮಪ್ರಿಯಾಳದೇವಿ ದೇವಸ್ಥಾನದಲ್ಲಿ ನವೆಂಬರ್‌ ೨೮ ರಂದು ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು, ‘ಭಾರತ ಸೇರಿದಂತೆ ಇಡೀ ವಿಶ್ವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯು ಶೀಘ್ರದಲ್ಲಿ ಆಗಲಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ದೊರೆಯಲಿ ಹಾಗೂ ಎಲ್ಲ ಕಡೆಯ ಸಾಧಕರಿಗೆ ರಕ್ಷಣೆಯಾಗಿ ಅವರಿಗೂ ಒಳ್ಳೆಯ ಆರೋಗ್ಯ ಲಭಿಸಲಿ’ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರ ಉಪಸ್ಥಿತಿಯಲ್ಲಿ ದೇವಸ್ಥಾನದಲ್ಲಿ ಶಿವ ಮತ್ತು ದೇವಿಗೆ ಅಭಿಷೇಕ ಮಾಡಲಾಯಿತು. ಈ ಸಮಯದಲ್ಲಿ ದೇವಸ್ಥಾನದ ಪೂಜಾರಿಗಳು ದೇವಿಯ ಪ್ರಸಾದವೆಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ಹಾರ ಹಾಕಿದರು.

ಶ್ರೀ ಭಾಗಮಪ್ರಿಯಾಳದೇವಿಯ ದರ್ಶನದ ನಂತರ ಅರ್ಚಕರು ಪ್ರಸಾದವಾಗಿ ನೀಡಿದ ಹಾರ ಹಾಕಿದ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಶ್ರೀ ಭಾಗಮಪ್ರಿಯಾಳ ದೇವಿಯ ದರ್ಶನ ಪಡೆದ ದಿನವೇ ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ಆರತಿ ಮಾಡ ಬೇಕು. ಇದರಿಂದ ಶ್ರೀ ಭಾಗಮಪ್ರಿಯಾಳ ದೇವಿಯ ಆಶೀರ್ವಾದ ಗುರುದೇವರಿಗೆ ದೊರೆ ಯುತ್ತದೆ’ ಎಂದೂ ಸಪ್ತರ್ಷಿ ಜೀವನಾಡಿ ಪಟ್ಟಿಯಲ್ಲಿ ಉಲ್ಲೇಖಿಸ ಲಾಗಿತ್ತು. ಅದರಂತೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ಆರತಿ ಮಾಡಿದರು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಶ್ರೀ ಭಾಗಮಪ್ರಿಯಾಳದೇವಿಯ ಮಹತ್ವ

ಶ್ರೀ ಭಾಗಮಪ್ರಿಯಾಳದೇವಿ ದೇವಸ್ಥಾನವು ಶಾರೀರಿಕ ವ್ಯಾಧಿಗಳಿಂದ ಮುಕ್ತಿ ಪಡೆಯಲು ಅಂತಿಮ ಸ್ಥಾನವೆಂದು ಪರಿಗಣಿಸಲ್ಪಟ್ಟಿದೆ. ಆಕೆ ತನ್ನ ಭಕ್ತರ ಕೆಟ್ಟ ಸ್ಥಿತಿಯನ್ನು ಉತ್ತಮ ಸ್ಥಿತಿಗೆ ಪರಿವರ್ತಿಸುತ್ತಾಳೆ ಎಂದು ನಂಬಲಾಗಿದೆ. ಅಲ್ಲಿ ಸ್ಥಳ ವೃಕ್ಷವಾಗಿ ಬಿಲ್ವಪತ್ರೆ ಮರವಿದೆ.

ಶ್ರೀ ಭಾಗಮಪ್ರಿಯಾಳ ದೇವಾಲಯದ ಇತಿಹಾಸ !

ಶ್ರೀ ಭಾಗಮಪ್ರಿಯಾಳ ದೇವಸ್ಥಾನವು ರಾಮೇಶ್ವರಂಗೆ ಸಮೀಪದಲ್ಲಿದೆ. ದೇವಾಲಯದ ಪೂಜಾರಿಗಳು ಹೇಳಿದಂತೆ, ಮಹಾಬಲಿ ರಾಜನು ಪೂರ್ವಜನ್ಮದಲ್ಲಿ ಒಂದು ಇಲಿಯಾಗಿದ್ದನು. ಒಂದು ದಿನ ಆ ಇಲಿಯು ಶಿವನ ದೇವಸ್ಥಾನದಲ್ಲಿ ಕದ್ದು ಪ್ರಸಾದ ತಿನ್ನಲು ಹೋಯಿತು. ಆಗ ದೇವಸ್ಥಾನದ ದೀಪವು ಆರಿಹೋಗುವ ಸ್ಥಿತಿಯಲ್ಲಿತ್ತು. ಪ್ರಸಾದ ತಿನ್ನುವಾಗ ಇಲಿಯು ಆಕಸ್ಮಿಕವಾಗಿ ತನ್ನ ಬಾಲದ ತಳ್ಳುವಿಕೆಯಿಂದ ಆರಿ ಹೋಗುತ್ತಿದ್ದ ದೀಪದ ಬತ್ತಿಯನ್ನು ಮುಂದಕ್ಕೆ ಸರಿಸಿತು ಮತ್ತು ಆ ದೀಪವು ಸರಿಯಾಗಿ ಉರಿಯಲು ಪ್ರಾರಂಭಿಸಿತು. ಇಲಿಯ ಈ ಕೃತಿಯಿಂದ ಅದಕ್ಕೆ ಪುಣ್ಯ ದೊರೆಯಿತು; ಆದರೆ ಪ್ರಸಾದ ಕದ್ದು ತಿಂದಿದ್ದರಿಂದ ಅದರಿಂದ ಪಾಪವೂ ಆಗಿತ್ತು. ಅದರ ಮುಂದಿನ ಜನ್ಮವು ರಾಕ್ಷಸ ಕುಲದಲ್ಲಿ ಆಗುತ್ತದೆ; ಆದರೆ ಅರಿವಿಲ್ಲದೆ ಜ್ಯೋತಿಯನ್ನು ಪ್ರಜ್ವಲಿಸಿದ ಕೃತಿಯಿಂದ ದೊರೆತ ಪುಣ್ಯದಿಂದ ಇಲಿಯು  ರಾಜನೂ ಆಗುತ್ತದೆ.

ರಾಜ ಮಹಾಬಲಿಯು ಪರಮ ವಿಷ್ಣುಭಕ್ತನಾಗಿದ್ದನು. ಶ್ರೀವಿಷ್ಣುವು ಮಹಾಬಲಿಗೆ ವಟು ವಾಮನ ರೂಪದಲ್ಲಿ ದರ್ಶನ ನೀಡಿ, ಅವನಿಂದ ೩ ಹೆಜ್ಜೆ ಭೂಮಿಯನ್ನು ಕೇಳಿದರು. ಎರಡು ಹೆಜ್ಜೆಗಳಲ್ಲಿಯೇ ಸಂಪೂರ್ಣ ತ್ರಿಭುವನವನ್ನು ಆವರಿಸಲಾಯಿತು. ಮೂರನೇ ಹೆಜ್ಜೆಯನ್ನು ಶ್ರೀವಿಷ್ಣುವು ಮಹಾಬಲಿಯ ತಲೆಯ ಮೇಲೆ ಇಟ್ಟು ಅವನನ್ನು ಶಾಶ್ವತವಾಗಿ ಪಾತಾಳಕ್ಕೆ ತಳ್ಳಿದರು. ಇದನ್ನೆಲ್ಲ ಮಾಡುವಾಗ ಶ್ರೀವಿಷ್ಣುವು ವ್ಯಾಧಿಗ್ರಸ್ತರಾದರು. ಅವರ ಕಾಲಿಗೆ ಗಾಯವಾಯಿತು. ಶ್ರೀವಿಷ್ಣುವು ತಿರುವೇತ್ರಿಯೂರ್‌ ದೇವಸ್ಥಾನದ ವಾಸುಕಿ ತೀರ್ಥದಲ್ಲಿ ಸ್ನಾನ ಮಾಡಿದಾಗ ಅವರ ಈ ಗಾಯವು ವಾಸಿಯಾಯಿತು. ಆಗ ಶ್ರೀವಿಷ್ಣುವು ಆ ಸ್ಥಳದಲ್ಲಿ ಇರುವ ಶಿವ ಮತ್ತು ಅವನ ಅಂಶ ಅಥವಾ ಭಾಗವಾಗಿರುವ ಪಾರ್ವತಿದೇವಿ ಅಂದರೆ ಭಾಗಮಪ್ರಿಯಾಳದೇವಿಯ ಪೂಜೆ ಮಾಡಿದರು; ಆದ್ದರಿಂದ ಈ ಸ್ಥಳಕ್ಕೆ ಬಹಳ ಮಹತ್ವವಿದೆ.