ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಾಧನೆಯ ಅತ್ಯಾವಶ್ಯಕತೆ !

‘ಕಷ್ಟದ ಸಮಯದಲ್ಲಿ ಸಹಾಯವಾಗಲಿ ಎಂದು ನಾವು ಬ್ಯಾಂಕಿನಲ್ಲಿ ಹಣವನ್ನು ಇಡುತ್ತೇವೆ. ಅದೇ ರೀತಿ ಸಂಕಟದ ಸಮಯದಲ್ಲಿ ಸಹಾಯವಾಗಲಿ ಎಂದು ಸಾಧನೆಯ ಸಂಗ್ರಹ ನಮ್ಮ ಬಳಿ ಇರುವುದು ಅತ್ಯಗತ್ಯವಾಗಿದೆ. ಇದರಿಂದಾಗಿ ಸಂಕಷ್ಟದ ಸಮಯದಲ್ಲಿ ನಮಗೆ ಸಹಾಯವಾಗುತ್ತದೆ.

ಸನಾತನ ಸಂಸ್ಥೆಯ ಅದ್ವಿತೀಯ ಆಶ್ರಮಗಳು !

‘ಸಮಾಜ, ಕಚೇರಿ ಮತ್ತು ಇತರೆಡೆಗಳಲ್ಲಿ ಅಹಂಕಾರ, ಸುಳ್ಳು ಹೇಳುವುದು, ಭ್ರಷ್ಟಾಚಾರ ಇತ್ಯಾದಿಗಳನ್ನು ಅನುಕರಿಸಲಾಗುತ್ತದೆ, ಆದರೆ ಸನಾತನದ ಆಶ್ರಮಗಳಲ್ಲಿ ಸದ್ಗುಣ ಅನುಕರಿಸಲಾಗುತ್ತದೆ !