ವರದಾಪುರದ ಪ.ಪ. (ಪರಮಹಂಸ ಪರಿವ್ರಾಜಕಾಚಾರ್ಯ) ಶ್ರೀ ಶ್ರೀಧರಸ್ವಾಮಿಯವರ ಜಯಂತಿಯ (ಡಿಸೆಂಬರ್‌ ೪) ನಿಮಿತ್ತ ಕೋಟಿ ಕೋಟಿ ಪ್ರಣಾಮ !

ಪುಣ್ಯದ (ಸಾಧನೆಯ) ಜಮಾ-ಖರ್ಚು

ಪ.ಪ. ಶ್ರೀ ಶ್ರೀಧರಸ್ವಾಮಿ

ಒಬ್ಬ ಸಾತ್ತ್ವಿಕವೃತ್ತಿಯ ವ್ಯಕ್ತಿ ಪ್ರಭು ಶ್ರೀರಾಮಚಂದ್ರನ ದರ್ಶನವಾಗಲು ೨೫ ಕೋಟಿ ರಾಮನಾಮವನ್ನು ಜಪಿಸಿದನು; ಆದರೆ ಅವನಿಗೆ  ಪ್ರಭುಗಳ ದರ್ಶನವಾಗಲಿಲ್ಲ. ಇಷ್ಟು ಜಪ  ಪೂರ್ಣಗೊಳಿಸಲು ಅವರಿಗೆ ಸುಮಾರು ೩೦ ವರ್ಷಗಳು ಬೇಕಾದವು. ‘ಪ್ರಭು ಶ್ರೀರಾಮನು ದರ್ಶನ ನೀಡಲಿಲ್ಲವೆಂದು ಆತ ತುಂಬಾ ಉದ್ವಿಗ್ನರಾಗಿ  ಸಜ್ಜನಗಡಕ್ಕೆ ಹೋದರು. ಅಲ್ಲಿ ಸಮರ್ಥ ರಾಮದಾಸಸ್ವಾಮಿಗಳ ಸಮಾಧಿಯ ಬಳಿ ಹೋಗಿ ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದರು. ಅಲ್ಲಿ ಪಕ್ಕದಲ್ಲಿಯೆ  ಪ.ಪ. ಶ್ರೀಧರಸ್ವಾಮಿಗಳು ಕುಳಿತಿದ್ದರು. ತಮ್ಮ ಸದ್ಗುರುಗಳ ಬಗ್ಗೆ ಹೀಗೆ ಮಾತನಾಡುವುದನ್ನು ನೋಡಿ ಅವರಿಗೆ ಸ್ವಲ್ಪ ಕೆಡುಕೆನಿಸಿತು, ಅವರು  ಆ ವ್ಯಕ್ತಿಗೆ ‘ಏನಾಯಿತೆಂದು ? ಕೇಳಿದರು. ಆಗ ಆ ವ್ಯಕ್ತಿಯು, ನಿಮ್ಮ ಈ ರಾಮದಾಸಸ್ವಾಮಿಗಳು, ರಾಮನಾಮದ ೧೩ ಕೋಟಿ ಜಪವಾದ  ನಂತರ ಸಾಕ್ಷಾತ್ ಪ್ರಭು  ಶ್ರೀರಾಮನ ದರ್ಶನವಾಗುವುದು ಎಂದಿದ್ದರು; ಆದರೆ ನಿಮ್ಮ ಸದ್ಗುರುಗಳು ಸುಳ್ಳು ಹೇಳಿದ್ದಾರೆ. ನಾನು ೨೫ ಕೋಟಿ ರಾಮನಾಮ ಜಪ ಮಾಡಿದ್ದೇನೆ, ಆದರೂ ಇದುವರೆಗೆ ಶ್ರೀರಾಮನ ದರ್ಶನವಾಗಿಲ್ಲ. ನನ್ನ ಜೀವನದ ೩೦ ವರ್ಷಗಳು ವ್ಯರ್ಥವಾದವು ನನಗೆ ಏನೂ ಪ್ರಾಪ್ತಿಯಾಗಲಿಲ್ಲ. ಈ ರೀತಿ ಸುಳ್ಳು ಹೇಳಿ ಜನರನ್ನು ಮೋಸಗೊಳಿಸುವುದು ಸರಿಯಲ್ಲ ಎಂದರು. ಪ.ಪ.ಶ್ರೀಧರಸ್ವಾಮಿಯವರು ಒಂದು ಕ್ಷಣ ಕಣ್ಣು  ಮುಚ್ಚಿಕೊಂಡು ನಂತರ ಮುಗುಳ್ನಗುತ್ತಾ ಹೇಳಿದರು, ‘೧೩ ಕೋಟಿ ರಾಮನಾಮದ ಜಪ ಮಾಡಿದಾಗ ಪ್ರಭು ಶ್ರೀರಾಮನ ದರ್ಶನವಾಗುತ್ತದೆ, ಎಂಬುದು ನಿಜ ಹಾಗೂ ನನ್ನ ಸದ್ಗುರುಗಳು ಎಂದಿಗೂ ಸುಳ್ಳು ಹೇಳಲಿಕ್ಕಿಲ್ಲ. ಆಗ ಆ ವ್ಯಕ್ತಿ, ನಾನು ೨೫ ಕೋಟಿ ಜಪ ಮಾಡಿದ್ದು ಸುಳ್ಳೇ ? ಎಂದರುಪ.ಪ. ಶ್ರೀಧರಸ್ವಾಮಿಯವರು ಕಾಗದ, ಪೆನ್ನನ್ನು ವ್ಯಕ್ತಿಗೆ ಕೊಟ್ಟು, ‘ಒಂದೆಡೆ ರಾಮನಾಮದ ಸಂಖ್ಯೆ (ಜಮಾ) ಬರೆಯಿರಿ ಮತ್ತು ಇನ್ನೊಂದೆಡೆ ನಿಮ್ಮ ಪುಣ್ಯಫಲದ ಖರ್ಚು ಬರೆಯಿರಿ ಎಂದು ಹೇಳಿದರು

ಜಮಾ : ಶ್ರೀರಾಮರ ಜಪ ೨೫ ಕೋಟಿ

ಖರ್ಚು : ೧. ಮಗಳ ವಿವಾಹ ಆಗುತ್ತಿರಲಿಲ್ಲ; ಅದಕ್ಕಾಗಿ ಶ್ರೀರಾಮನಿಗೆ ಪಾರ್ಥಿಸಿದಾಗ ನಾಲ್ಕುವರೆ ಕೋಟಿ ಜಪಗಳ ಫಲ ಖರ್ಚಾಯಿತು. ಮಗಳ ವಿವಾಹ ಒಂದು ಒಳ್ಳೆಯ ಕುಟುಂಬದಲ್ಲಿ ಆಯಿತು.

೨. ಪದೇ ಪದೇ ಅನುತ್ತೀರ್ಣನಾಗುತ್ತಿದ್ದ ಮಗನಿಗಾಗಿ ರಾಮನಲ್ಲಿ ಪ್ರಾರ್ಥಿಸಿದಾಗ ಎರಡುವರೆ ಕೋಟಿ ಜಪಗಳ ಫಲ ಖರ್ಚಾಯಿತು. ಮಗ ಒಳ್ಳೆಯ ಅಂಕ ಪಡೆದು ಉತ್ತೀರ್ಣನಾದನು.

೩. ಮಗನಿಗೆ ನೌಕರಿ ಸಿಗಲೆಂದು ಪ್ರಾರ್ಥಿಸಿದಾಗ ೫ ಕೋಟಿ ಜಪಗಳ ಫಲ ಖರ್ಚಾಯಿತು. ಮಗನಿಗೆ ಒಳ್ಳೆಯ ವೇತನದ ನೌಕರಿ ಸಿಕ್ಕಿತು. ೪. ಪತ್ನಿ ತುಂಬಾ ಕಾಯಿಲೆಯಲ್ಲಿರುವಾಗ ಡಾಕ್ಟರರು ಕೂಡ ಕೈ ಚೆಲ್ಲಿದಾಗ ರಾಮನಲ್ಲಿ ಪ್ರಾರ್ಥಿಸಿದಾಗ ೫ ಕೋಟಿ ಜಪ ಖರ್ಚಾಯಿತು. ೫. ಸಿಟ್ಟಿನಿಂದ ನಿರಾಶೆಯಾದಾಗ ಹಾಗೂ ಉದ್ವಿಗ್ನ ಮನಸ್ಥಿತಿಯಲ್ಲಿ ಅನೇಕ ಸಂತಪುರುಷರನ್ನು ಟೀಕಿಸಿ, ಕೆಟ್ಟ ಮಾತುಗಳನ್ನಾಡಿದೆ. ಅದರಲ್ಲಿ ೧ ಕೋಟಿ ಜಪಗಳ ಫಲ ಖರ್ಚಾಯಿತು. ಒಟ್ಟು ಖರ್ಚು ೧೮ ಕೋಟಿ. ಈಗ ನಿಮ್ಮಲ್ಲಿ ಇನ್ನೂ ೭ ಕೋಟಿ ಜಪ ಬಾಕಿಯಿದೆ. ‘ಶ್ರೀರಾಮನ ದರ್ಶನವಾಗಬೇಕಾದರೆ ನಿಷ್ಕಾಮ ಭಾವನೆಯಿಂದ ಇನ್ನೂ ೬ ಕೋಟಿ ಜಪವಾದರೆ ನಿಮಗೆ ಪ್ರಭು ಶ್ರೀರಾಮನ ದರ್ಶನ ಖಚಿತ.ಎಂಬ ಪ.ಪ. ಶ್ರೀಧರ ಸ್ವಾಮಿಯವರ ಉಪದೇಶದಿಂದ ಆ ವ್ಯಕ್ತಿಗೆ ಸಮಾಧಾನವಾಗಿ ಅವರು ಅತ್ಯಂತ ನಿಷ್ಕಾಮಭಾವದಿಂದ ಉಳಿದ ೬ ಕೋಟಿ ಜಪವನ್ನು ಪೂರ್ಣಗೊಳಿಸಿದಾಗ ಶ್ರೀರಾಮನ ದರ್ಶನವಾಯಿತು.

– ಮಂದಾರ ದೇಶಪಾಂಡೆ, ಓರ್ವ ಧರ್ಮಪ್ರೇಮಿ.