ಈ ದಿನ ದತ್ತನ ಜನ್ಮೋತ್ಸವವನ್ನು ಎಲ್ಲ ದತ್ತಕ್ಷೇತ್ರಗಳಲ್ಲಿ ಆಚರಿಸಲಾಗುತ್ತದೆ

೧. ಇತಿಹಾಸ
‘ಹಿಂದಿನ ಕಾಲದಲ್ಲಿ ಪೃಥ್ವಿಯಲ್ಲಿ ಸ್ಥೂಲ ಮತ್ತು ಸೂಕ್ಷ್ಮ ರೂಪದಲ್ಲಿ ಅಸುರೀ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದ್ದವು. ಅವರನ್ನು ದೈತ್ಯರೆಂದು ಕರೆಯಲಾಗುತ್ತಿತ್ತು. ದೇವಗಣರು ಆ ಅಸುರೀ ಶಕ್ತಿಗಳನ್ನು ನಾಶಗೊಳಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಆಗ ಬ್ರಹ್ಮದೇವನ ಆಜ್ಞೆಗನುಸಾರ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ದತ್ತನಿಗೆ ಅವತಾರ ತಾಳಬೇಕಾಯಿತು. ಆನಂತರ ದೈತ್ಯರು ನಾಶವಾದರು. ಆ ದಿವಸವನ್ನು **’ದತ್ತಜಯಂತಿ’**ಯೆಂದು ಆಚರಿಸಲಾಗುತ್ತದೆ.
೨. ಮಹತ್ವ
ಅಂದು ಪೃಥ್ವಿಯಲ್ಲಿ ಮೇಲೆ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ.
![]()
೩. ಜನ್ಮೋತ್ಸವವನ್ನು ಆಚರಿಸುವುದು
ದತ್ತಜಯಂತಿಯನ್ನು ಆಚರಿಸುವ ಸಂಬಂಧದಲ್ಲಿ ಶಾಸ್ತ್ರೋಕ್ತ ವಿಶಿಷ್ಟ ವಿಧಿವಿಧಾನಗಳು ಕಂಡುಬರುವುದಿಲ್ಲ. ಈ ಉತ್ಸವದ ಮೊದಲು ಏಳು ದಿನಗಳ ವರೆಗೆ ಗುರುಚರಿತ್ರೆಯ ಪಾರಾಯಣವನ್ನು ಮಾಡುವ ಪದ್ಧತಿಯಿದೆ. ಇದಕ್ಕೆ ಗುರು ಚರಿತ್ರಸಪ್ತಾಹ ಎನ್ನುತ್ತಾರೆ. ಭಜನೆ, ಪೂಜೆ ಮತ್ತು ವಿಶೇಷವಾಗಿ ಕೀರ್ತನೆ ಇತ್ಯಾದಿ ಭಕ್ತಿಯ ವಿಧಗಳು ಪ್ರಚಲಿತವಾಗಿವೆ. ಮಹಾರಾಷ್ಟ್ರದಲ್ಲಿ ಔದುಂಬರ, ನರಸೋಬಾ ವಾಡಿ, ಗಾಣಗಾಪುರ ಇತ್ಯಾದಿ ದತ್ತಕ್ಷೇತ್ರಗಳಲ್ಲಿ ಈ ಉತ್ಸವಕ್ಕೆ ವಿಶೇಷ ಮಹತ್ವವಿದೆ. ತಮಿಳುನಾಡಿನಲ್ಲಿಯೂ ದತ್ತಜಯಂತಿಯ ರೂಢಿಯಿದೆ. ಕೆಲವು ಬ್ರಾಹ್ಮಣ ಕುಟುಂಬದಲ್ಲಿ ಈ ಉತ್ಸವದ ನಿಮಿತ್ತ ದತ್ತನವರಾತ್ರಿಯನ್ನು ಪಾಲಿಸಲಾಗುತ್ತದೆ ಮತ್ತು ಅದು ಮಾರ್ಗಶಿರ ಶುಕ್ಲ ಅಷ್ಟಮಿಯಿಂದ ಆರಂಭವಾಗುತ್ತದೆ. (ಆಧಾರ: ಸನಾತನ ನಿರ್ಮಿತ ಗ್ರಂಥ ‘ದತ್ತ’)
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ರಾಣಿ ಲಕ್ಷ್ಮೀಬಾಯಿ ಬಲಿದಾನದಿನ ( ೨೧.೬.೨೦೨೬ )
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !