ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

೧. ತ್ರೇತಾಯುಗದ ರಾಮರಾಜ್ಯದಲ್ಲಿ ಎಲ್ಲ ಪ್ರಜೆಗಳು ಸಾತ್ತ್ವಿಕರಾಗಿದ್ದರು; ಆದ್ದರಿಂದ ಅವರಿಗೆ ಶ್ರೀರಾಮನಂತಹ ಆದರ್ಶಪ್ರಾಯ ರಾಜನು ಲಭಿಸಿದನು. ರಾಮರಾಜ್ಯದಂತೆ ಎಲ್ಲ ರೀತಿಯಲ್ಲಿ ಸುಂದರ ಮತ್ತು ಆದರ್ಶವಾಗಿರುವ ಹಿಂದೂ ರಾಷ್ಟ್ರ ಬರಲು ಇಂದಿನ ಸಮಾಜವೂ ಸಾತ್ತ್ವಿಕವಾಗುವುದು ಅನಿವಾರ್ಯವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿನ ಜ್ಞಾನದಿಂದ ಸಮಾಜವು ಸಾತ್ತ್ವಿಕವಾಗಿ ಅದು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗುವುದು. ಇದರಿಂದಲೇ ಹಿಂದೂ ರಾಷ್ಟ್ರವು ಸ್ಥಾಪನೆಯಾಗಲಿದೆ.

೨. ಮೂರನೇ ಮಹಾಯುದ್ಧ, ನೆರೆ ಇತ್ಯಾದಿಗಳ ರೂಪದಲ್ಲಿನ ಮಹಾಭಯಂಕರ ಆಪತ್ಕಾಲದಿಂದ ಬದುಕುಳಿದರೆ ಮಾತ್ರ ನಾವು ಹಿಂದೂ ರಾಷ್ಟ್ರವನ್ನು ನೋಡಬಲ್ಲೆವು ! ನಾವು ಸಾಧನೆಯನ್ನು ಮಾಡಿದರೆ ಮಾತ್ರ ಆಪತ್ಕಾಲದಿಂದ ಪಾರಾಗಲು ಸಾಧ್ಯವಿದೆ; ಏಕೆಂದರೆ ಸಾಧಕರ ಮೇಲೆ ದೇವರ ಕೃಪೆಯು ಇರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನವನ್ನು ಮಾಡುತ್ತಿರುವ ಗ್ರಂಥಗಳಿಂದ ಸುಯೋಗ್ಯ, ಸದ್ಯದ ವೈಜ್ಞಾನಿಕ ಯುಗದಲ್ಲಿನ ಪೀಳಿಗೆಗೆ ಸಹಜವಾಗಿ ತಿಳಿಯುವಂತಹ ವೈಜ್ಞಾನಿಕ ಪರಿಭಾಷೆಯಲ್ಲಿ ಮತ್ತು ಕಾಲಕ್ಕನುಸಾರ ಆವಶ್ಯಕವಿರುವ ಸಾಧನೆಯ ಜ್ಞಾನ ಸಿಗುತ್ತಿದೆ. ಆದ್ದರಿಂದ ಈ ಗ್ರಂಥಗಳ ಮಹತ್ವವು ಅಸಾಧಾರಣವಾಗಿದೆ.

(ಪೂ.) ಶ್ರೀ. ಸಂದೀಪ ಆಳಶಿ

೩. ಪ್ರತಿಯೊಬ್ಬನ ಪ್ರಕೃತಿ ಮತ್ತು ಆಸಕ್ತಿಗನುಸಾರ ಅವನಿಗೆ ಅಧ್ಯಾತ್ಮದ ಶಿಕ್ಷಣ ದೊರಕಿದರೆ, ಅವನಲ್ಲಿ ಸಾಧನೆಯ ಆಸಕ್ತಿ ಬೇಗ ಮೂಡುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ವಿಷಯಗಳ ಬಗ್ಗೆ ಗ್ರಂಥಗಳ ಸಂಕಲನವನ್ನು ಮಾಡುತ್ತಿರುವುದರಿಂದ ಆ ಮಾಧ್ಯಮದಿಂದ ಅನೇಕ ಜನರು ತಮ್ಮ ಪ್ರಕೃತಿ ಮತ್ತು ಆಸಕ್ತಿಗನುಸಾರ ಸಾಧನೆಯ ಕಡೆಗೆ ಬೇಗನೆ ಹೊರಳಬಹುದು.

೪. ಹಿಂದೂ ರಾಷ್ಟ್ರವು ಕೆಲವು ಸಾವಿರ ವರ್ಷಗಳ ವರೆಗೆ ಉಳಿಯಬಹುದು; ಆದರೆ ಗ್ರಂಥಗಳಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹಿಂದೂ ರಾಷ್ಟ್ರವು ಹೇಗೆ ಬೇಗನೆ ಬರುವುದು ಆವಶ್ಯಕವಿದೆಯೋ, ಅಷ್ಟೇ ಅವಸರದಿಂದ ಭೀಕರ ಆಪತ್ಕಾಲವು ಆರಂಭವಾಗುವ ಮೊದಲು ಈ ಗ್ರಂಥಗಳನ್ನು ಮುದ್ರಿಸಬೇಕಾಗಿದೆ. ಅದಕ್ಕಾಗಿಯೇ ‘ಈ ಗ್ರಂಥಗಳ ನಿರ್ಮಿತಿ ಕಾರ್ಯದಲ್ಲಿ ಪಾಲ್ಗೊಳ್ಳುವುದು’, ಈಶ್ವರೀ ಕೃಪೆಯ ಬಹುದೊಡ್ಡ ಪರ್ವವೇ ಆಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಂಕಲನ ಮಾಡಿದ, ಆದರೆ ಇನ್ನೂ ಪ್ರಕಾಶನವಾಗಬೇಕಾದ ಸುಮಾರು ೫೦೦೦ ಗ್ರಂಥಗಳಿವೆ. ಈ ಗ್ರಂಥಗಳ ಮಾಧ್ಯಮದಿಂದ ಅವುಗಳಲ್ಲಿನ ಜ್ಞಾನವನ್ನು ಆದಷ್ಟು ಬೇಗನೇ ಸಮಾಜದ ವರೆಗೆ ತಲುಪಿಸುವುದು ಆವಶ್ಯಕವಾಗಿದೆ. ಈ ಗ್ರಂಥಕಾರ್ಯದಲ್ಲಿ ಪಾಲ್ಗೊಂಡು ಎಲ್ಲರೂ ಈ ಅವಕಾಶದ ಹೆಚ್ಚೆಚ್ಚು ಲಾಭ ಪಡೆಯಬೇಕು ! – (ಪೂ.) ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು.

ಗ್ರಂಥ ಸೇವೆಗೆ ಸಂಬಂಧಿಸಿದ ಸಂಕಲನ, ಅನುವಾದ, ಸಂರಚನೆ, ಮುಖಪುಟ-ನಿರ್ಮಿತಿ, ಮುದ್ರಣ ಮುಂತಾದ ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ತಮ್ಮ ಮಾಹಿತಿಯನ್ನು ಸನಾತನದ ಜಿಲ್ಲಾಸೇವಕರ ಮೂಲಕ ಕಳುಹಿಸಬೇಕು.

ಸಂಪರ್ಕ : ಸೌ. ಭಾಗ್ಯಶ್ರೀ ಸಾವಂತ,

ವಿ-ಅಂಚೆ : [email protected]

ಅಂಚೆ ವಿಳಾಸ : ‘ಸನಾತನ ಆಶ್ರಮ’, ರಾಮನಾಥಿ, ಫೋಂಡಾ, ಗೋವಾ – ೪೦೩ ೪೦೧.’