ಋಷಿಮುನಿಗಳ ಮಹತ್ವ !

ವಸಿಷ್ಠಋಷಿ, ವಿಶ್ವಾಮಿತ್ರಋಷಿ, ಭೃಗುಋಷಿ,  ಅತ್ರಿಋಷಿ, ಅಗಸ್ತ್ಯಋಷಿ, ನಾರದ ಮುನಿ ಮುಂತಾದವರ ಕಲಿಕೆಗಳು (ಬೋಧನೆಗಳು) ಮತ್ತು ಹೆಸರುಗಳು ಯುಗಯುಗಾಂತರಗಳಿಂದ ಚಿರಂತನವಾಗಿವೆ. ಇದಕ್ಕೆ ವಿರುದ್ಧ, ಬುದ್ಧಿವಂತರು, ಧರ್ಮದ್ರೋಹಿಗಳು ಮತ್ತು ಬುದ್ಧಿಪ್ರಾಮಾಣ್ಯವಾದಿಗಳ ಹೆಸರುಗಳು ೧-೨ ಪೀಳಿಗೆಯೊಳಗೆ ಮರೆತುಹೋಗುತ್ತವೆ. ಇದಕ್ಕೆ ಕಾರಣವೇನೆಂದರೆ, ಋಷಿಮುನಿಗಳು ಸತ್ಯವನ್ನು ಹೇಳುತ್ತಾರೆ; ಆದ್ದರಿಂದ ಕಾಲವು ಅವರ ಹೆಸರನ್ನು ಮತ್ತು ಬೋಧನೆಯನ್ನು ಸ್ಪರ್ಶಿಸಲು ಸಾಧ್ಯವಿಲ್ಲ. ಮತ್ತೊಂದೆಡೆ ಬುದ್ಧಿವಂತರು, ಧರ್ಮದ್ರೋಹಿಗಳು ಮತ್ತು ಬುದ್ಧಿಪ್ರಾಮಾಣ್ಯವಾದಿಗಳು ಹೇಳುವುದು ಸತ್ಯವಲ್ಲದ ಕಾರಣ, ಕಾಲದ ಹರಿವಿನಲ್ಲಿ ಅವರ ಹೆಸರುಗಳು ಮತ್ತು ಕಲಿಕೆಗಳು ಮರೆತುಹೋಗುತ್ತವೆ.

‘ಋಷಿಗಳು ಸಗುಣ-ನಿರ್ಗುಣ, ಪಂಚಮಹಾಭೂತಗಳು, ಕಾಲಮಹಾತ್ಮೆ, ಕರ್ಮಫಲನ್ಯಾಯ, ಪುನರ್ಜನ್ಮ ಮುಂತಾದವುಗಳ ಬಗ್ಗೆ ಹೇಳದಿದ್ದರೆ, ಅಧ್ಯಾತ್ಮವನ್ನು ಎಂದಾದರೂ ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿತ್ತೇ ?’ ‘ಯಾವುದಾದರೊಂದು ಮೇಲ್ನೋಟದ ಭೌತಿಕ ಸಂಶೋಧನೆಯನ್ನು ಮಾಡಲು ವಿಜ್ಞಾನಿಗಳಿಗೆ ವರ್ಷಗಟ್ಟಲೆ ಸಂಶೋಧನೆ ಮಾಡಬೇಕಾಗುತ್ತದೆ. ಅದರಲ್ಲಿ ಮುಂದೆ ಇತರ ವಿಜ್ಞಾನಿಗಳು ಬದಲಾವಣೆಗಳನ್ನೂ ಮಾಡುತ್ತಾರೆ. ಇದಕ್ಕೆ ವಿರುದ್ಧ, ಋಷಿಮುನಿಗಳಿಗೆ ಸೂಕ್ಷ್ಮದಿಂದ ಲಭಿಸುವ ಜ್ಞಾನದಿಂದಾಗಿ ಸಂಶೋಧನೆ ಮಾಡದೆಯೇ ಕ್ಷಣಾರ್ಧದಲ್ಲಿ ಅತ್ಯಂತ ಸೂಕ್ಷ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ ಮತ್ತು ಅವು ಅಂತಿಮ ಸತ್ಯವಾಗಿರುವುದರಿಂದ ಯಾರೂ ಅವುಗಳಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ