ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ

ರಾಮಾನಂದಾಚಾರ್ಯ ದಕ್ಷಿಣ ಪೀಠ, ನಾಣಿಜಧಾಮ (ರತ್ನಾಗಿರಿ) ಇಲ್ಲಿನ ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಅವರ ರಾಮನಾಥಿ (ಗೋವಾ) ಇಲ್ಲಿನ ಸನಾತನ ಆಶ್ರಮಕ್ಕೆ ಮಂಗಳಮಯ ಭೇಟಿ !

ಆಶ್ರಮದ ಧ್ಯಾನಮಂದಿರದ ಬಗ್ಗೆ ಮಾಹಿತಿ ನೀಡುತ್ತಿರುವಾಗ ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಅವರಿಗೆ ಶ್ರೀ. ಯೋಗೇಶ ಜಲತಾರ

ರಾಮನಾಥಿ (ಗೋವಾ) – ಪ.ಪೂ. ಡಾ. ಆಠವಲೆ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಅವರ ಕಾರ್ಯ ಅಸಾಮಾನ್ಯವಾಗಿದ್ದು, ಭಗವಂತನು ಅವರನ್ನು ಭೂಮಿಗೆ ಕಳುಹಿಸಿದ್ದಾನೆ. ಅವರು ಅವತಾರಿ ಪುರುಷರಾಗಿದ್ದಾರೆ. ಸನಾತನ ಸಂಸ್ಥೆಯು ವಿಶ್ವಶಾಂತಿಗಾಗಿ ಕಾರ್ಯನಿರ್ವಹಿಸುತ್ತಿದೆ. ಸನಾತನದ ಸಾಧಕರು ಭಾಗ್ಯವಂತರು, ಏಕೆಂದರೆ ಅವರಿಗೆ ಪ.ಪೂ. ಡಾ. ಆಠವಲೆ ಅವರಂತಹ ಸದ್ಗುರುಗಳು ಲಭಿಸಿದ್ದಾರೆ. ಈ ಆಶ್ರಮದಲ್ಲಿ ಸಾಧಕರು ಸದ್ಗುರುಗಳ ಮಾರ್ಗದರ್ಶನದಲ್ಲಿ ಸ್ವತಃ ತಮ್ಮ ಮೌಲ್ಯಮಾಪನ ಮಾಡಿಕೊಳ್ಳುತ್ತಿದ್ದಾರೆ. ಗುರುಗಳಿಲ್ಲದೆ ಆತ್ಮಸಾಕ್ಷಾತ್ಕಾರ ಸಾಧ್ಯವಿಲ್ಲ; ಆದರೆ ಸನಾತನದ ಆಶ್ರಮದಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ಆತ್ಮಸಾಕ್ಷಾತ್ಕಾರದ ಪ್ರಯತ್ನಗಳು (ಸಾಧನೆ) ನಡೆಯುತ್ತಿವೆ. ಗುರುವಿನ ಕೃಪೆಯ ನೆರಳಿನಲ್ಲಿ ರಜ-ತಮ ಗುಣಗಳನ್ನು ದೂರ ಮಾಡಿ ಸಾತ್ವಿಕತೆಯನ್ನು ಹೆಚ್ಚಿಸಲು ಸಾಧಕರು ಪ್ರಯತ್ನಶೀಲರಾಗಿದ್ದಾರೆ, ಎಂದು ರಾಮಾನಂದಾಚಾರ್ಯ ದಕ್ಷಿಣ ಪೀಠ, ನಾಣಿಜಧಾಮ (ರತ್ನಾಗಿರಿ) ಇಲ್ಲಿನ ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಅವರು ಆಶ್ರಮದ ಸಾಧಕರಿಗೆ ಮಾರ್ಗದರ್ಶನ ನೀಡಿದರು. ಹಿಂದೂ ಧರ್ಮದ ರಕ್ಷಣೆಗಾಗಿ ಅವಿರತವಾಗಿ ಹೋರಾಡುವ ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಅವರು ೧೩ ಜುಲೈ ೨೦೨೬ ರಂದು ರಾಮನಾಥಿ (ಗೋವಾ) ಇಲ್ಲಿನ ಸನಾತನ ಸಂಸ್ಥೆಯ ಆಶ್ರಮಕ್ಕೆ ಮಂಗಳಮಯ ಭೇಟಿ ನೀಡಿದರು. ‘ಸನಾತನ ಪ್ರಭಾತ’ ಪ್ರಸಾರ ಮಾಧ್ಯಮ ಸಮೂಹದ ಸಂಪಾದಕ ಶ್ರೀ. ಯೋಗೇಶ ಜಲತಾರೆ ಅವರು ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಅವರಿಗೆ ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮ, ಹಾಗೆಯೇ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯಗಳ ಬಗ್ಗೆ ಪರಿಚಯ ಮಾಡಿಕೊಟ್ಟರು.

ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ತಮ್ಮ ಪ್ರಾಣಶಕ್ತಿ ಅತ್ಯಲ್ಪವಿದ್ದರೂ ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಅವರನ್ನು ಭೇಟಿಯಾದರು.

ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ

‘ಸನಾತನ ಪ್ರಭಾತ’ ಶುದ್ಧವಾಗಿದೆ ಮತ್ತು ಸತ್ಯವಾಗಿದೆ !

ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಅವರು ಶ್ರೀ. ಜಲತಾರೆ ಅವರಿಂದ ‘ಸನಾತನ ಪ್ರಭಾತ’ ಪ್ರಸಾರ ಮಾಧ್ಯಮ ಸಮೂಹದ ಕಾರ್ಯದ ಬಗ್ಗೆ ವಿವರವಾಗಿ ಮತ್ತು ಕುತೂಹಲದಿಂದ ತಿಳಿದುಕೊಂಡರು. ‘ಸಾಧಕರು ಸೇವೆಯಾಗಿ ಸುದ್ದಿಯನ್ನು ತರುವ ಕಾರ್ಯ ಮಾಡುತ್ತಿದ್ದಾರೆ; ಅದಕ್ಕಾಗಿ ‘ಸನಾತನ ಪ್ರಭಾತ’ ಶುದ್ಧವಾಗಿದೆ ಮತ್ತು ಅದರಿಂದಾಗಿ ಅದು ಸತ್ಯವಾಗಿದೆ,’ ಎಂದು ಹೇಳುತ್ತಾ ಅವರು ಸಾಧಕರಿಗೆ ಆಶೀರ್ವದಿಸಿದರು.

ಭಾವಪೂರ್ಣ ವಾತಾವರಣದಲ್ಲಿ ನೆರವೇರಿದ ಸನ್ಮಾನ ಸಮಾರಂಭ !

ಮಾರ್ಗದರ್ಶನದ ಆರಂಭದಲ್ಲಿ ಸನಾತನದ ಸಾಧಕ ದಂಪತಿ ಶ್ರೀ. ಅಭಿಷೇಕ ಪೈ ಮತ್ತು ಸೌ. ಸಿದ್ಧಿ ಪೈ ಅವರು ಗುರುಪಾದುಕಗಳ ಪೂಜೆ ಮಾಡಿದರು, ಹಾಗೆಯೇ ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಅವರಿಗೆ ಆರತಿ ಮಾಡಿದರು. ಈ ಸಮಯದಲ್ಲಿ ಸನಾತನದ ಪುರೋಹಿತ ಶ್ರೀ. ಸಿದ್ದೇಶ ಕರಂದೀಕರ್ ಅವರು ಮಂತ್ರಪಠಣ ಮಾಡಿದರು. ಇದರ ನಂತರ ಸನಾತನದ ಸಂತ ಪೂ. ಪೃಥ್ವಿರಾಜ ಹಜಾರೆ ಅವರು ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಅವರಿಗೆ ಪುಷ್ಪಹಾರ ಹಾಕಿ ಮತ್ತು ಉಡುಗೊರೆಯನ್ನು ಅರ್ಪಿಸಿ ಭಾವಪೂರ್ಣ ಸನ್ಮಾನ ಮಾಡಿದರು.

ಈ ಸಮಯದಲ್ಲಿ ಅವರೊಂದಿಗೆ ಬಂದಿದ್ದ ಎಲ್ಲ ಭಕ್ತರನ್ನೂ ಸತ್ಕರಿಸಲಾಯಿತು. ಈ ಸಮಯದಲ್ಲಿ ಅವರೊಂದಿಗೆ ಬಂದಿದ್ದ ಭರತಾಚಾರ್ಯ ಪೂ. (ಪ್ರಾ.) ಸು.ಗ. ಶೇವಡೆ ಮತ್ತು ಸನಾತನದ ಪೂ. (ಸೌ.) ಜ್ಯೋತಿ ಢವಳೀಕರ್ ಅವರ ವಂದನೀಯ ಉಪಸ್ಥಿತಿ ಲಭಿಸಿತು.