
ಗಣೇಶೋತ್ಸವದ ಮೆರವಣಿಗೆಯಾದ ನಂತರ ಲೋಕಮಾನ್ಯ ತಿಲಕರು ಬರೆದ ‘ನಮ್ಮ ರಾಷ್ಟ್ರೀಯ ಹಬ್ಬಗಳು’ ಎಂಬ ಸಂಪಾದಕೀಯ ಲೇಖನದಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಒಂದು ಹೊಸ ಅಧ್ಯಾಯ ಪ್ರಾರಂಭವಾಗಿ ತನ್ಮೂಲಕ ಸ್ವಾತಂತ್ರ್ಯ ಚಳುವಳಿಯ ಅನೇಕ ಉಪಕ್ರಮಗಳು ರೂಪುಗೊಂಡವು. ೧೯೦೦ ರಿಂದ ೧೯೧೫ ರ ಅವಧಿಯಲ್ಲಿ ತಿಲಕರು, ”ಸ್ವಾತಂತ್ರ್ಯ ಸಿಗಲು ಇನ್ನೆಷ್ಟು ಸಮಯ ಬೇಕೆಂದು ಹೇಳಲು ಸಾಧ್ಯವಿಲ್ಲ, ಆದರೆ ಸ್ವಾತಂತ್ರ್ಯ ದೊರಕಿದಾಗ, ಆಗಿನ ಯುವ ಪೀಳಿಗೆಯು ಬೃಹತ್ ಭಾರತದ ಗಡಿಗಳನ್ನು ನಿರ್ಧರಿಸಬೇಕು. ಗಣಪತಿ ದೇವರು ಎಲ್ಲೆಲ್ಲಿ ತಲುಪಿದ್ದಾರೆಯೋ, ಅಲ್ಲಿ ಬೃಹತ್ ಭಾರತದ ೪ ಗಡಿಗಳನ್ನು ಗುರುತಿಸಬೇಕು. ವಿದೇಶಗಳಲ್ಲಿಯೂ ಇಂದು ಗಣಪತಿ ದೇವರು ಇರುವ ಸ್ಥಳದವರೆಗೆ ಒಂದು ಕಾಲದಲ್ಲಿ ಬೃಹತ್ ಭಾರತ ವಿಸ್ತರಿಸಿತ್ತು ಎಂಬುದನ್ನು ನೆನಪಿನಲ್ಲಿಡಬೇಕು. ಈಗ ಇದು ನಿಜವೆಂದು ಅನಿಸದಿದ್ದರೂ ಮತ್ತು ಸ್ವಾತಂತ್ರ್ಯಾ ನಂತರವೂ ತಕ್ಷಣ ಇದರ ಅನುಭವವಾಗದಿದ್ದರೂ ಮುಂದಿನ ೧೦೦ ವರ್ಷಗಳಲ್ಲಿ ಇದು ಸ್ಪಷ್ಟವಾಗಲಿದೆ’, ಎಂದು ಬರೆದಿದ್ದರು.
(ಅನೇಕ ಸಂತರು-ಮಹಾತ್ಮರು ಹೇಳಿದಂತೆ, ೨೦೨೫ ರಿಂದ ಭಾರತದಲ್ಲಿ ಮತ್ತು ನಂತರ ಜಗತ್ತಿನಾದ್ಯಂತ ‘ಹಿಂದೂ ರಾಷ್ಟ್ರ’ (ರಾಮರಾಜ್ಯ) ಸ್ಥಾಪನೆಯಾಗಲಿದೆ. ಆ ಸಮಯದಲ್ಲಿ ಇತರ ದೇಶಗಳ ನಾಗರಿಕರೂ ಧರ್ಮಾಚರಣೆ (ಶ್ರೀ ಗಣಪತಿ ಮತ್ತು ಇತರ ದೇವತೆಗಳ ಉಪಾಸನೆ) ಮಾಡುವರು. ಸಂಕ್ಷಿಪ್ತವಾಗಿ ಹೇಳುವುದಾದರೆ, ಸತ್ಯ, ತ್ರೇತಾ ಮತ್ತು ದ್ವಾಪರ ಯುಗಗಳಂತೆ, ಜಗತ್ತಿನಾದ್ಯಂತದ ನಾಗರಿಕರು ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವರು. ಈ ವಿಷಯವು ಲೋಕಮಾನ್ಯ ತಿಲಕರಿಗೆ ಸಾಧನೆಯ ಮೂಲಕ ದೊರೆತ ದೂರದೃಷ್ಟಿಯಿಂದಾಗಿ ೧೯೧೫ ರ ಮೊದಲೇ ತಿಳಿದಿತ್ತು ಎಂಬುದು ಅವರ ಮೇಲಿನ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. – ಸಂಕಲನಕಾರರು)
– ಶ್ರೀ. ಮೋರೇಶ್ವರ ಜೋಶಿ
(ಆಧಾರ : ‘ಆಧ್ಯಾತ್ಮಿಕ ಓಂ ಚೈತನ್ಯ’, ಗುರುಪೂರ್ಣಿಮಾ ವಿಶೇಷಾಂಕ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು