ಕೊರೆಗಾಂವ್ ಭೀಮಾ ಹೋರಾಟದ ವಾಸ್ತವವನ್ನು ಸಮಾಜದ ಮುಂದಿಡುತ್ತಿರುವ, ನಿಸ್ವಾರ್ಥ ಹಿಂದೂ ಕಾರ್ಯಕರ್ತ ನ್ಯಾಯವಾದಿ ರೋಹನ್ ಜಮಾದಾರ ಮಾಳವದ್ಕರ್!

ಶ್ರೀ. ರೋಹನ್ ಜಮಾದಾರ ಮಾಳವದ್ಕರ್ ಅವರು ಪುಣೆಯಲ್ಲಿ ವಾಸವಾಗಿದ್ದು, ಪುಣೆ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕಾನೂನು ಪದವಿ ಪಡೆದಿದ್ದು, ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ‘ ಜನವರಿ 1 ಕೊರೆಗಾಂವ್ ಭೀಮಾ ಹೋರಾಟದ ವಾಸ್ತವ’ ಎಂಬ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ. ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ 22 ಸಾವಿರಕ್ಕೂ ಹೆಚ್ಚು ಹಿಂಬಾಲಕರಿದ್ದಾರೆ. ಇಂದು ನಾವು ಅವರ ಕಾರ್ಯದ ಬಗ್ಗೆ ಅವರದೇ ಮಾತುಗಳಲ್ಲಿ ತಿಳಿದುಕೊಳ್ಳೋಣ.

ಶ್ರೀ. ರೋಹನ್ ಜಮಾದಾರ ಮಾಳವದ್ಕರ್


ವಿಶೇಷ ಮಾಲಿಕೆ


ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

1. ಕುಟುಂಬಕ್ಕೆ ದೊರೆತ ಐತಿಹಾಸಿಕ ಪರಂಪರೆ

ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಮಾಳವದ್ಕರ್ ಕುಟುಂಬವು ನಿಷ್ಠಾವಂತ, ಜವಾಬ್ದಾರಿಯುತ ಮತ್ತು ಪರಾಕ್ರಮಿಗಳಾಗಿದ್ದರು. ಜೆಜೂರಿನ ಸೂರ್ಯಾಜಿ ಪಾಟೀಲ್ ಮಾಳವದ್ಕರ್ ಅವರು ತಮ್ಮ ಸಹೋದರನಿಗೆ ಜಾಮೀನಾಗಿ ನಿಂತು ಜವಾಬ್ದಾರಿಯನ್ನು ಹೊತ್ತರು. ಸಹೋದರನು ತೆರಿಗೆಯನ್ನು ಪಾವತಿಸದೆ ಓಡಿಹೋದಾಗ, ಸೂರ್ಯಾಜಿ ಪಾಟೀಲ್ ಅವರು ತಮ್ಮ ಆಸ್ತಿಯನ್ನು ಅಡವಿಟ್ಟು ಸರಕಾರಕ್ಕೆ 300 ಹೋನ್ (ಆ ಕಾಲದ ಚಾಲನ್) ನೀಡಿದರು. ಅವರ ಪ್ರಾಮಾಣಿಕತೆ ಮತ್ತು ಸಂಕಷ್ಟದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರಿಂದ ಛತ್ರಪತಿ ಶಿವಾಜಿ ಮಹಾರಾಜರು ಅವರಿಗೆ ಸಹಾಯ ಮಾಡಿದರು. ಅರ್ಧ ಆಸ್ತಿಯನ್ನು ಜಪ್ತಿ ಮಾಡಿ ಅವರ ಹೆಸರಿಗೆ ವರ್ಗಾಯಿಸಿದರು ಮತ್ತು ಅದರ ಖರ್ಚನ್ನು ಹಿಂತಿರುಗಿಸಿದರು.

ಈ ಘಟನೆ ಮಾಳವದ್ಕರ್ ಕುಟುಂಬದ ನಿಷ್ಠೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ನ್ಯಾಯಪ್ರಿಯತೆಗೆ ಉತ್ತಮ ಉದಾಹರಣೆಯಾಗಿದೆ. ಮಾಳವದ್ಕರ್ ಅವರು ಸ್ವರಾಜ್ಯದ ನಿಜವಾದ ಸೇವಕರಾಗಿದ್ದರು. ನಂತರ ಖಂಡೋಜಿ ಮಾಳವದ್ಕರ್ ಅವರು ಬ್ರಿಟಿಷ್ ಸೈನ್ಯದಲ್ಲಿದ್ದರು ಮತ್ತು ದೌಂಡ್, ಜೆಜೂರಿ, ಕಡೆಪಠಾರ್‌ನ ವತನದಾರ ಪಾಟೀಲರೂ ಆಗಿದ್ದರು. ಅವರು ಜನವರಿ 1.1818 ರಂದು ಕೊರೆಗಾಂವ ಭೀಮಾದಲ್ಲಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು. 1824 ರಲ್ಲಿ ಬ್ರಿಟಿಷ್ ಸರಕಾರ ಅವರನ್ನು ‘ಜಯಸ್ತಂಭ ಇನ್ಚಾರ್ಜ್ (ಮುಖ್ಯಸ್ಥ)’ ಎಂದು ನೇಮಿಸಿತು. ನ್ಯಾಯವಾದಿ ರೋಹನ್ ಜಮಾದಾರ ಮಾಳವದ್ಕರ್ ಅವರ ತಂದೆ ಶ್ರೀ. ಬಾಳಾಸಾಹೇಬ ಜಮಾದಾರ ಮಾಳವದ್ಕರ್ ಅವರು ಭಾರತೀಯ ಸೇನೆಯಲ್ಲಿ ಸುಬೇದಾರ ಮೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

2. ಹಿಂದೂ ಧರ್ಮದ ಕಾರ್ಯಕ್ಕೆ ಸ್ಫೂರ್ತಿ

ನ್ಯಾಯವಾದಿ ರೋಹನ್ ಅವರಿಗೆ ಮನೆಯಿಂದಲೇ ಮತ್ತು ಅವರ ರಕ್ತದಲ್ಲಿಯೇ ದೇಶಸೇವೆಯ ಬಾಲ ಶಿಕ್ಷಣ ದೊರಕಿತ್ತು. 2013 ರಲ್ಲಿ, ಅವರು ದೇವರ ಕೃಪೆಯಿಂದ ಕ್ಯಾನ್ಸರ್‌ನಂತಹ ಮಹಾ ಕಾಯಿಲೆಯ ವಿರುದ್ಧ ಹೋರಾಡಿ ಯಶಸ್ವಿಯಾಗಿ ಗೆದ್ದು ಬಂದರು. ಮಾಳವದ್ಕರ್ ಅವರ ತಂದೆ ನಿವೃತ್ತರಾದ ನಂತರ ಕೊರೆಗಾಂವ ಭೀಮಾ ಪ್ರಕರಣದ ಬಗ್ಗೆ ಆಳವಾದ ಅಧ್ಯಯನ ಮಾಡಿದರು ಮತ್ತು ಅದಕ್ಕಾಗಿ ನ್ಯಾಯಾಲಯದ ಹೋರಾಟವನ್ನು ಪ್ರಾರಂಭಿಸಿದರು. ಅದೇ ಅವಧಿಯಲ್ಲಿ ಅವರ ಮೇಲೆ ಹಲ್ಲೆ ಕೂಡ ನಡೆಯಿತು. ಒಬ್ಬ ಮಾಜಿ ಸೇನಾ ಅಧಿಕಾರಿಯ ಜೊತೆ ಅವಮಾನಕರವಾಗಿ ನಡೆಸಿಕೊಳ್ಳುವುದನ್ನು ನೋಡಿ, ರೋಹನ್ ಜಮಾದಾರ ಮಾಳವದ್ಕರ್ ಅವರು ತಮ್ಮ ತಂದೆಯೊಂದಿಗೆ ಈ ಹೋರಾಟದಲ್ಲಿ ಭಾಗವಹಿಸಿದರು. ಅದರಲ್ಲಿ ಅವರಿಗೆ ಪೊಲೀಸರು, ಸರ್ಕಾರ, ಮಾಜಿ ಸೇನಾಧಿಕಾರಿಗಳು, ವಕೀಲರು, ಹಿಂದೂ ಸಂಘಟನೆಗಳು, ಸ್ನೇಹಿತರು ಇತ್ಯಾದಿಗಳ ಸಹಕಾರವೂ ದೊರಕಿತು ಮತ್ತು ಅಲ್ಲಿಂದಲೇ ಅವರ ಹಿಂದೂ ಕಾರ್ಯದ ಆರಂಭವಾಯಿತು.

3. ‘ಅರ್ಬನ್’ (ನಗರ) ನಕ್ಸಲ್ವಾದ ಮತ್ತು ಕೊರೆಗಾಂವ ಭೀಮಾದ ಇತಿಹಾಸ

ಕೊರೆಗಾಂವ ಭೀಮಾ ಹೋರಾಟ ಯಾವುದೇ ಜಾತಿ-ಧರ್ಮದ ವಿರುದ್ಧವಾಗಿರದೆ, ಬ್ರಿಟಿಷರು ಮತ್ತು ಮರಾಠಾ ಸೈನ್ಯದ ನಡುವೆ ನಡೆದಿದ್ದು, ಈ ಯುದ್ಧವು ಅನಿರೀಕ್ಷಿತವಾಗಿ ನಡೆದಿತ್ತು. ಇದೇ ರೀತಿಯ ಕೆಲವು ಯುದ್ಧಗಳು ಅದೇ ಅವಧಿಯಲ್ಲಿ ಖಡಕಿ, ಯೆರವಡಾ, ಅಷ್ಟಿಗಳಲ್ಲಿ ನಡೆದವು. ಕೊರೆಗಾಂವ ಯುದ್ಧದಲ್ಲಿ, ಮರಾಠರ ಕಡೆಯಿಂದ ಅರಬ, ಗೋಸಾವಿ ಮುಂತಾದ 3000 ಸೈನಿಕರ ತುಕಡಿಯ ವಿರುದ್ಧ 834 ಬ್ರಿಟಿಷ್ ಸೈನಿಕರು ಹೋರಾಡಿದರು. ಈ 834 ಸೈನಿಕರ ಮೂರು ತುಕಡಿಗಳಿದ್ದವು. ಮೊದಲ ತುಕಡಿ ‘ದಿ 2nd ಬೆಟಾಲಿಯನ್ ಆಫ್ ದಿ 1st ಬಾಂಬೆ ರೆಜಿಮೆಂಟ್’ ಆಗಿದ್ದು, ಇದರಲ್ಲಿ 500 ಪದಾತಿಗಳಿದ್ದರು, ಇದರಲ್ಲಿ ಬ್ರಾಹ್ಮಣರು, ಮರಾಠರು, ಗುರ್ಜರರು, ಸಿಖ್ಖರು, ಮುಸಲ್ಮಾನರು, ಅಹಿರರು ಮತ್ತು ಮಹಾರ್ ಸಮುದಾಯದ ಸೈನಿಕರಿದ್ದರು. ಎರಡನೇ ತುಕಡಿ ‘ದಿ ಪುಣೆ ಆಕ್ಸಿಲರಿ ಹಾರ್ಸ್’ ಆಗಿದ್ದು, ಇದರಲ್ಲಿ 250 ಅಶ್ವಸವಾರರಿದ್ದರು ಮತ್ತು ಮೂರನೇ ತುಕಡಿ ‘ದಿ ಮದ್ರಾಸ್ ಆರ್ಟಿಲರಿ’ ಆಗಿದ್ದು, ಇದರಲ್ಲಿ ಕೇವಲ ಯುರೋಪಿಯನ್ನರಿದ್ದರು. ಈ ರೀತಿ ಸೇನಾ ವ್ಯವಸ್ಥೆಯಿತ್ತು; ಆದರೆ ಕೆಲವರು ಮಾತ್ರ ಈ ಯುದ್ಧವು ‘500 ಮಹಾರ್ ಸೈನಿಕರ ವಿರುದ್ಧ 28 ಸಾವಿರ ಪೇಶ್ವೆ ಸೈನಿಕರ ನಡುವೆ ನಡೆದಿತ್ತು ಎಂದು ಹೇಳುತ್ತಿದ್ದಾರೆ. ಇದರ ಹಿಂದಿನ ಉದ್ದೇಶ ‘ಮಹಾರ್ ಸಮುದಾಯವನ್ನು ಹಿಂದೂಗಳಿಂದ ದೂರ ಮಾಡುವುದಾಗಿದೆ.


ಹಿಂದೂ ಯುವಕರಿಗೆ ಸಂದೇಶ!


“ಧರ್ಮದ ಮಾರ್ಗದಲ್ಲಿ ನಡೆಯುವಾಗ, ಆ ಮಾರ್ಗವನ್ನು ಬಿಡಲು ಅನೇಕ ಪ್ರಲೋಭನೆಗಳು ಬರುತ್ತವೆ; ಆದರೆ ಅದರಲ್ಲಿ ಸಿಲುಕಿಕೊಳ್ಳಬೇಡಿ; ಏಕೆಂದರೆ ಮುಂಬರುವ ಇತಿಹಾಸವು ನಿಮ್ಮನ್ನು ಕ್ಷಮಿಸುವುದಿಲ್ಲ. ಹಿಂದೂಗಳು ಸಂಘಟಿತರಾಗಿ ಒಮ್ಮನಸ್ಸಿನಿಂದ ಕೆಲಸ ಮಾಡುವುದು ಮತ್ತು ಕಾರ್ಯ ಮಾಡುವವರ ಬೆಂಬಲಕ್ಕೆ ನಿಲ್ಲುವುದು ಅವಶ್ಯಕ!” – ನ್ಯಾಯವಾದಿ ಮಾಳವದ್ಕರ್

4. ಸುಳ್ಳು ಇತಿಹಾಸವನ್ನು ಸಮಾಜದಲ್ಲಿ ಹರಡುವವರ ವಿರುದ್ಧ ವೈಚಾರಿಕ ಹೋರಾಟ

ಮಹಾರ್ ಸಮಾಜವು ‘ಹಿಂದೂ’ ಆಗಿದೆ. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಮಹಾರ್ ಬೆಟಾಲಿಯನ್’ನ ಜೈಘೋಷ ‘ಬೋಲೋ ಹಿಂದೂಸ್ತಾನ್ ಕಿ ಜೈ’ ಎಂದಾಗಿತ್ತು. ಹೀಗಿರುವಾಗ, ‘ಅವರನ್ನು ಹಿಂದೂ ಸಮಾಜದಿಂದ ದೂರ ಮಾಡುವುದು, ಹಿಂದೂಗಳ ಜಾತಿ-ಜಾತಿಗಳ ನಡುವೆ ವಿಷ ಕಾರುವುದು, ಅವರ ನಡುವೆ ಜಗಳ ಮಾಡಿಸುವುದು’ ಈ ಉದ್ದೇಶದಿಂದ ಅನೇಕ ವಿಭಜನಾಕಾರಿ ಸಂಘಟನೆಗಳು ಮತ್ತು ನಗರ ನಕ್ಸಲರು ಈ ಸುಳ್ಳು ವಿಚಾರಗಳನ್ನು ಮತ್ತು ಅದರ ಅಪಪ್ರಚಾರವನ್ನು ಶಾಲೆಗಳು, ಕಾಲೇಜುಗಳ ಮೂಲಕ ಮಾಡುತ್ತಿದ್ದಾರೆ. ‘ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ’ ಇದಕ್ಕೆ ಒಂದು ಉದಾಹರಣೆ. ಈ ವೈಚಾರಿಕ ಹೋರಾಟವನ್ನು ಚೀನಾ ಮಾರ್ಕ್ಸ್ ವಾದದ ಮೂಲಕ ನಮ್ಮ ಮೇಲೆ ಹೇರಿದೆ. ನಿಜವಾದ ಇತಿಹಾಸವು ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ನ್ಯಾಯವಾದಿ ರೋಹನ್ ಜಮಾದಾರ ಮಾಳವದ್ಕರ್ ಅವರ ಇತಿಹಾಸ ಸಂಶೋಧನೆಯ ಮೂಲಕ ಕೆಲಸ ನಡೆಯುತ್ತಿದೆ. ಬರಹದ ಮೂಲಕ, ಹಾಗೂ ನ್ಯಾಯಾಲಯದ ಪ್ರಕ್ರಿಯೆಯ ಮೂಲಕ ಕೆಲಸ ನಡೆಯುತ್ತಿದೆ. ಇತ್ತೀಚೆಗೆ ಅವರ ಪುಸ್ತಕದ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಯನ್ನು ದೆಹಲಿಯಲ್ಲಿ ಪ್ರೊ. ಗುರುಪ್ರಕಾಶ ಪಾಸ್ವಾನ್, ಪ್ರೊ. ಉಮೇಶ ಕದಮ ಅವರಿಂದ ಬಿಡುಗಡೆ ಮಾಡಲಾಯಿತು.

5. ‘ಪ್ರಬೋಧನ’ದ ಕಾರ್ಯಕ್ಕೆ ‘ಸಾಧನೆ’ಯ ಅಡಿಪಾಯ

ಮನೆಯ ವಾತಾವರಣ ಧಾರ್ಮಿಕವಾಗಿದ್ದರಿಂದ ಬಾಲ್ಯದಿಂದಲೇ ಅವರು ಸುಲಭವಾಗಿ ಧರ್ಮಾಚರಣೆಯನ್ನು ಮಾಡುತ್ತಾ ಬಂದಿದ್ದಾರೆ. ನ್ಯಾಯವಾದಿ ಮಾಳವದ್ಕರ್ ಅವರು ತಮ್ಮ ನೋಟ್‌ಬುಕ್‌ನ ಉದಾಹರಣೆ ನೀಡುತ್ತಾ, ಯಾವುದೇ ಕೆಲಸವನ್ನು ಪ್ರಾರಂಭಿಸುವಾಗ ದೇವರಿಗೆ ಕರ್ತೃತ್ವವನ್ನು ಅರ್ಪಿಸುವುದು, ಅಂದರೆ ‘ಶ್ರೀ’ ಎಂದು ಬರೆದು, ಮತ್ತು ಎಲ್ಲಾ ಕೆಲಸ ಮುಗಿದ ನಂತರ ತಮ್ಮ ಗುರುಗಳ ಚರಣಗಳಿಗೆ ಕೃತಜ್ಞತೆ, ಅಂದರೆ ‘ಜೈ ಶಂಕರ’ ಎಂದು ಬರೆದು ಅರ್ಪಿಸುವುದು ನನಗೆ ಅಭ್ಯಾಸವಾಗಿದೆ ಎಂದು ಹೇಳುತ್ತಾರೆ. ಅವರಿಗೆ ಪುಣೆಯ ಸದ್ಗುರು ಶ್ರೀ ಶಂಕರ ಬಾಬಾ ಮಹಾರಾಜರ ಮೇಲೆ ಶ್ರದ್ಧೆಯಿದೆ. ಅದರೊಂದಿಗೆ ಅವರು ಸಾಧನೆಯ ಭಾಗವಾಗಿ ಧ್ಯಾನವನ್ನು ಮಾಡುತ್ತಾರೆ, ಹಾಗೂ ‘ದೇವರನ್ನು ಕರೆಯದೆ ಮತ್ತು ಶರಣಾಗದೆ ಬೇರೆ ದಾರಿಯಿಲ್ಲ’ ಎಂದೂ ಸಹ ಅವರು ಹೇಳುತ್ತಾರೆ.

6. ಹಿಂದೂ ಧರ್ಮಕ್ಕಾಗಿ ನಿಸ್ವಾರ್ಥ ಕಾರ್ಯ

ವೃತ್ತಿಜೀವನವನ್ನು ನಿರ್ಲಕ್ಷಿಸಿ, ಹಾಗೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೂ ಸಹ ಒಬ್ಬ ಅತ್ಯಂತ ಕಿರಿಯ ಯುವಕ ನಮ್ಮ ನೈಜ ಇತಿಹಾಸವು ಹೊರಬರಬೇಕೆಂದು ಪ್ರಯತ್ನಿಸುತ್ತಿದ್ದಾರೆ ಮತ್ತು ಅನೇಕ ಹಿಂದೂಗಳಿಗೆ ಸ್ಫೂರ್ತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಹಿಂದೂತ್ವ ನಿಷ್ಠರಿಗೆ ನ್ಯಾಯಾಲಯದ ಪ್ರಕ್ರಿಯೆಯ ಜೊತೆಗೆ ಎಲ್ಲಾ ರೀತಿಯ ಸಹಾಯವನ್ನು ಮಾಡಲು ನ್ಯಾಯವಾದಿ ರೋಹನ್ ಜಮಾದಾರ ಮಾಳವದ್ಕರ್ ಅವರು ಸಿದ್ಧವಾಗಿದ್ದಾರೆ, ಇದು ಅವರ ದೇವರ, ದೇಶದ ಮತ್ತು ಧರ್ಮದ ಬಗ್ಗೆ ಇರುವ ನಿಸ್ವಾರ್ಥ ಭಕ್ತಿಯನ್ನು ತೋರಿಸುತ್ತದೆ!

‘ಜನವರಿ 1 ಕೊರೆಗಾಂವ್ ಭೀಮಾ ಹೋರಾಟದ ವಾಸ್ತವ’ ಪುಸ್ತಕ

ಹಿಂದೂತ್ವ ನಿಷ್ಠ ಸುದರ್ಶನ ವಾಹಿನಿಯ ಮುಖ್ಯ ಸಂಪಾದಕ ಡಾ. ಚೌಹಾಣ್ಕೆ ಅವರಿಗೆ ಗ್ರಂಥವನ್ನು ನೀಡುತ್ತಿರುವ ನ್ಯಾಯವಾದಿ ಮಾಳವದ್ಕರ್.


ನ್ಯಾಯವಾದಿ ರೋಹನ್ ಜಮಾದಾರ ಮಾಳವದ್ಕರ್ ಅವರ ಜಮೀನಿನಲ್ಲಿರುವ ‘ಜಯಸ್ತಂಭ’ದಲ್ಲಿ ಪ್ರತಿ ವರ್ಷ ಸಮಾರಂಭಗಳು ನಡೆಯುತ್ತವೆ. ಸರಕಾರಿ ದಾಖಲೆಗಳಲ್ಲಿ, ‘ಈ ಜಯಸ್ತಂಭಕ್ಕೆ ಸಂಬಂಧಿಸಿದಂತೆ ಯಾವುದೇ ಧಾರ್ಮಿಕ ಉತ್ಸವಗಳನ್ನು ಆಚರಿಸುವುದನ್ನು ನಿಷಿದ್ಧ’ ಎಂದು ಬರೆಯಲಾಗಿದೆ. ಹೀಗಿದ್ದರೂ, ಈ ಸಮಾರಂಭಗಳ ಮೂಲಕ ಜಾತಿ-ಜಾತಿಗಳ ನಡುವೆ ಒಡಕು ಮೂಡಿಸುವ ಸುಳ್ಳು ಇತಿಹಾಸವನ್ನು ಜನರಿಗೆ ಹೇಳಲಾಗುತ್ತಿದೆ. ಆಗ ಅವರು ಸತ್ಯಾಂಶಗಳ ಆಧಾರದ ಮೇಲೆ ಮತ್ತು ವಿವಿಧ ಸರಕಾರಿ ದಾಖಲೆಗಳನ್ನು ಆಧರಿಸಿ ‘ ಜನವರಿ 1. 1818 – ಕೊರೆಗಾಂವ್ ಭೀಮಾ ಹೋರಾಟದ ವಾಸ್ತವ’ ಎಂಬ ಪುಸ್ತಕವನ್ನು ಬರೆದರು ಮತ್ತು ಅದರ ಆಧಾರದ ಮೇಲೆ ಜಾಗೃತಿ ಮೂಡಿಸಲು ಪ್ರಾರಂಭಿಸಿದರು.
ಈ ಪುಸ್ತಕವನ್ನು 2022 ರಲ್ಲಿ ಪುಣೆಯಲ್ಲಿ ನಾಗಪುರಕರ ಭೋಸಲೆ, ಶ್ರೀಮಂತ ಮುಧೋಜಿರಾಜೆ ಭೋಸಲೆ ಅವರಿಂದ ಬಿಡುಗಡೆ ಮಾಡಲಾಯಿತು.

ಜನವರಿ 1, 1818 ಕೊರೆಗಾವ ಭಿಮಾ ಹೋರಾಟದ ನೈಜತೆ | ಆಡ್ ರೊಹನ ಬಾ ಮಾಳವದಕರ | #SangamTalks_Marathi

(ಸೌಜನ್ಯ –  Sangam Talks Marathi)

ವಿರೋಧಿಗಳಿಗೂ ಪುಸ್ತಕದ ಪ್ರತಿಯನ್ನು ನೀಡುವುದು!

ಸ್ವತಃ ನಡೆಸಿದ ಸಂಶೋಧನೆ ಮತ್ತು ಬರಹದ ಮೇಲಿನ ಆತ್ಮವಿಶ್ವಾಸ, ಹಾಗೂ ಸತ್ಯದ ಮಾರ್ಗದಲ್ಲಿ ನಡೆಯುತ್ತಿರುವುದರಿಂದ, ಈ ಪುಸ್ತಕದ ಪ್ರತಿಯನ್ನು ಭಾರಿಪ ಬಹುಜನ ಮಹಾಸಂಘದ ಪ್ರಕಾಶ ಅಂಬೇಡ್ಕರ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಶರದ್ ಚಂದ್ರ ಪವಾರ ಪಕ್ಷದ ಶರದ್ ಪವಾರ ಅವರಿಗೆ ನೀಡಲು ವ್ಯಾಯವಾದಿ ರೋಹನ ಅವರಿಗೆ ಯಾವುದೇ ಹಿಂಜರಿಕೆ ಅಥವಾ ಕಷ್ಟವೆನಿಸಲಿಲ್ಲ.