ಪ್ರಾಚೀನ ಜ್ಞಾನ ವ್ಯವಸ್ಥೆಯನ್ನು ಭಾರತದ ಕಾನೂನು ವ್ಯವಸ್ಥೆಯಲ್ಲಿ ಸೇರಿಸಲು ಪ್ರಯತ್ನಿಸುತ್ತಿರುವ ದೆಹಲಿಯ ಹಿರಿಯ ನ್ಯಾಯವಾದಿ ಶ್ರೀಧರ್ ಪೋತರಾಜು !

ನ್ಯಾಯವಾದಿ ಶ್ರೀಧರ್ ಪೋತರಾಜು ಅವರು ಭಾಗ್ಯನಗರ (ತೆಲಂಗಾಣ)ದ ಉಸ್ಮಾನಿಯಾ ವಿಶ್ವವಿದ್ಯಾಲಯದ ವಾಣಿಜ್ಯ ಶಾಖೆಯ ಪದವೀಧರರಾಗಿದ್ದು, ಅವರು 1997 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಪ್ರಸ್ತುತ ಅವರು ದೆಹಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ‘ಹಿರಿಯ ನ್ಯಾಯವಾದಿ’ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಹಾಗೆಯೇ ಅವರು ಅನೇಕ ಪ್ರಮುಖ ಹುದ್ದೆಗಳನ್ನು ಸಹ ಅಲಂಕರಿಸಿದ್ದಾರೆ. 2006 ರಿಂದ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ‘ಅಡ್ವೊಕೇಟ್ ಆನ್ ರೆಕಾರ್ಡ್’ (ನೋಂದಾಯಿತ ನ್ಯಾಯವಾದಿ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಮತ್ತು 2024 ರಿಂದ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ‘ದೆಹಲಿ ಬಾರ್ ಕೌನ್ಸಿಲ್’ ಮತ್ತು ‘ಸರ್ವೋಚ್ಚ ನ್ಯಾಯಾಲಯದ ಬಾರ್ ಅಸೋಸಿಯೇಷನ್’ ನ ಸದಸ್ಯರಾಗಿದ್ದಾರೆ. ಕಾನೂನು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ಅವರು ಅನೇಕ ಹೆಸರಾಂತ ಕಾನೂನು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಸ್ವತಂತ್ರವಾಗಿ ವಕೀಲ ವೃತ್ತಿಯನ್ನು ಮಾಡುತ್ತಿದ್ದು, ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಸಾಂವಿಧಾನಿಕ, ವ್ಯಾಪಾರ, ಪರಿಸರ ಮತ್ತು ತೆರಿಗೆ ಸಂಬಂಧಿತ ಅನೇಕ ಅರ್ಜಿಗಳಲ್ಲಿ ಅವರು ಸಲ್ಲಿಸಿದ್ದಾರೆ.
ಅಯೋಧ್ಯೆಯ ‘ರಾಮಲಲ್ಲಾ ವಿರಾಜಮಾನ’ ಎಂಬ ಬಹು ಚರ್ಚಿತ ಪ್ರಕರಣದಲ್ಲಿ ಹಿರಿಯ ನ್ಯಾಯವಾದಿ ಕೆ. ಪರಾಶರನ್ ಅವರ ನೇತೃತ್ವದಲ್ಲಿ ಅವರು ಕಾರ್ಯನಿರ್ವಹಿಸಿದ್ದರು. 500 ವರ್ಷಗಳಷ್ಟು ಹಳೆಯದಾದ ರಾಮ ಜನ್ಮಭೂಮಿ ವಿವಾದದ ಕಾನೂನು ಪ್ರಕ್ರಿಯೆಯು ಹಲವು ವರ್ಷಗಳ ಕಾಲ ನಡೆಯಿತು. ಈ ವಿಚಾರಣೆಯ ಸಮಯದಲ್ಲಿ ಹಳೆಯ ನ್ಯಾಯಾಲಯದ ದಾಖಲೆಗಳನ್ನು ಹುಡುಕುವುದು ಹಾಗೂ ಪ್ರಾಚೀನ ಧರ್ಮಗ್ರಂಥಗಳ ಅಧ್ಯಯನ ನಡೆಸಿ ಉಲ್ಲೇಖಗಳನ್ನು ಹುಡುಕುವುದು ಅವರ ಕಾರ್ಯವಾಗಿತ್ತು. ಈ ಕಾರ್ಯದ ಬಗ್ಗೆ ಅವರ ಮಾತಿನಲ್ಲಿಯೇ ತಿಳಿಯೋಣ.

1. ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯ ಕ್ಷೇತ್ರದಲ್ಲಿ ನ್ಯಾಯವಾದಿ ಶ್ರೀಧರ್ ಪೋತರಾಜು ಅವರ ಕೊಡುಗೆ

Maxims from Mahabharata(ಮಹಾಭಾರತದಲ್ಲಿನ ನೀತಿ ವಚನಗಳು)

ಅ. ನ್ಯಾಯವಾದಿ ಪೋತರಾಜು ಅವರು ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯ ಜ್ಞಾನ ಸೂತ್ರಗಳನ್ನು ಆಧುನಿಕ ಕಾನೂನು ವ್ಯವಸ್ಥೆಗೆ ಜೋಡಿಸಲು ಪ್ರಯತ್ನಿಸಿದ್ದಾರೆ. ಅವರ ‘ಮ್ಯಾಕ್ಸಿಮ್ಸ್ ಆಫ್ ಮಹಾಭಾರತ’ ಎಂಬ ಗ್ರಂಥದಲ್ಲಿ, ಅವರು ಭಾರತದ ಪ್ರಾಚೀನ ಮತ್ತು ಜನಪ್ರಿಯ ‘ಮಹಾಭಾರತ’ ಮಹಾಕಾವ್ಯದ ನೀತಿ ತತ್ವಗಳ ಆಧುನಿಕ ಕಾನೂನು ವ್ಯವಸ್ಥೆಯೊಂದಿಗಿನ ಸಂಬಂಧವನ್ನು ತೋರಿಸಿದ್ದಾರೆ. ಈ ಗ್ರಂಥದಲ್ಲಿ, ಅವರು ‘ಧರ್ಮವು ಭಾರತದ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯ ಆತ್ಮವಾಗಿದೆ’ ಎಂದು ಬಣ್ಣಿಸಿದ್ದಾರೆ. ‘ಭಾರತದ ‘ಸಂಸ್ಕೃತ’ ಎಂಬ ಗುರುತಿಸುವಿಕೆಯು ನೈತಿಕ ಮತ್ತು ಮೌಲ್ಯಾಧಾರಿತ ಧರ್ಮದ ಅಡಿಪಾಯದ ಮೇಲೆ ನಿಂತಿದೆ. ಈ ಮೂಲಭೂತ ತತ್ವಶಾಸ್ತ್ರವನ್ನು ಭಾರತದ ಕಾನೂನು ವ್ಯವಸ್ಥೆಯಲ್ಲಿ ಅಳವಡಿಸಬೇಕು’ ಎಂದು ಅವರು ಭಾವಿಸುತ್ತಾರೆ.

ಆ. ನ್ಯಾಯವಾದಿ ಪೋತರಾಜು ಅವರನ್ನು ‘ಐಐಟಿ ದೆಹಲಿ’, ಗುಜರಾತ್ ವಿಶ್ವವಿದ್ಯಾಲಯ ಮತ್ತು ಶಾಸ್ತ್ರ ವಿಶ್ವವಿದ್ಯಾಲಯಗಳು ‘ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಆಹ್ವಾನಿಸಿದ್ದವು.

ಇ. ಭಾರತೀಯ ಕಾನೂನು ವ್ಯವಸ್ಥೆಯ ಐತಿಹಾಸಿಕ ಮಹತ್ವದ ತೀರ್ಪುಗಳನ್ನು ಅವರು ಸಂರಕ್ಷಿಸಿದ್ದಾರೆ. ಇದಕ್ಕಾಗಿ ಅವರು ‘ವಾದ-ಪ್ರತಿವಾದ (Vadaprativada.in)’ ಎಂಬ ವೆಬ್‌ಸೈಟ್ ಅನ್ನು ಪ್ರಾರಂಭಿಸಿದ್ದು, ಅದರ ಮೂಲಕ ಶ್ರೀ ರಾಮ ಜನ್ಮಭೂಮಿಯಂತಹ ಐತಿಹಾಸಿಕ ಮಹತ್ವದ ತೀರ್ಪುಗಳನ್ನು ಆನ್ಲೈನ್ ನಲ್ಲಿ ಇಟ್ಟಿದ್ದಾರೆ. ಅವರ ಈ ವೆಬ್‌ಸೈಟ್ ನಿಂದಾಗಿ ಅನ್ಯ ಸಂಶೋಧಕರಿಗೆ ಮಾಹಿತಿಯ ಒಂದು ಮೂಲ ಲಭ್ಯವಾದಂತಾಗಿದೆ. ‘ಭಾರತೀಯ ಕಾನೂನು ವ್ಯವಸ್ಥೆಯ ಶ್ರೀಮಂತ ಪರಂಪರೆಯ ಪರಿಚಯವು ಜಗತ್ತಿನ ಅನ್ಯ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಆಗಬೇಕೆಂಬುದು ಈ ವೆಬ್‌ಸೈಟ್‌ನ ಪ್ರಮುಖ ಉದ್ದೇಶವಾಗಿದೆ.

ಈ. ಸನಾತನ ಧರ್ಮದ ಮೌಲ್ಯಗಳು, ಪ್ರಾಚೀನ ಸಂಪ್ರದಾಯಗಳ ಜ್ಞಾನವನ್ನು ಆಧುನಿಕ ಕಾನೂನುಗಳೊಂದಿಗೆ ಬೆಸೆಯಬೇಕು ಎಂಬ ದೃಷ್ಟಿಯಿಂದ ಅವರು ಪ್ರಯತ್ನಶೀಲರಾಗಿದ್ದಾರೆ. ಸಮಕಾಲೀನ ನ್ಯಾಯಶಾಸ್ತ್ರವನ್ನು ಸಾಂಪ್ರದಾಯಿಕ ಜ್ಞಾನದೊಂದಿಗೆ ಜೋಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ, ಹಾಗೆಯೇ ಆಧುನಿಕ ಭಾರತದ ಕಾನೂನು ಮತ್ತು ಶಿಕ್ಷಣದಲ್ಲಿ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಆಗಬೇಕು ಎಂಬುದು ಅವರ ಪ್ರಯತ್ನವಾಗಿದೆ.

(ಎಡಕ್ಕೆ) ಕೌಸ್ತುಭ ಮೆಹ್ತಾ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ವಕೀಲ ಶ್ರೀಧರ್ ಪೊತ್ತರಾಜು

2. ವಿಶೇಷ ಕೌಶಲ್ಯಗಳು

ಪೋತರಾಜು ಅವರು ಕಳೆದ 25 ವರ್ಷಗಳಿಂದ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಮೆಟ್ರೋ ರೈಲು ಯೋಜನೆ, ಮೂಲಸೌಕರ್ಯ ಯೋಜನೆ, ಟೆಂಡರ್ ಪ್ರಕರಣಗಳು, ಎಂಜಿನಿಯರಿಂಗ್ ಮತ್ತು ‘ಸ್ಥಾಪತ್ಯಶಾಸ್ತ್ರ ಕಾನೂನು 1996’ ರ ಅಡಿಯಲ್ಲಿನ ಮಧ್ಯಸ್ಥಿಕೆ, ಸಾಂವಿಧಾನಿಕ ನಿಬಂಧನೆಗಳು, ಗಣಿಗಾರಿಕೆ ಸಂಬಂಧಿತ ಕಾನೂನುಗಳು, ಪರಿಸರ ಕಾನೂನುಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ಸುಂಕ ಸಂಬಂಧಿತ ಕಾನೂನುಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ. ಇದರೊಂದಿಗೆ ವಿವಿಧ ಸಂಸ್ಥೆಗಳು, ಸಾರ್ವಜನಿಕ ಇಲಾಖೆಗಳು, ವಾಣಿಜ್ಯ ಸಂಸ್ಥೆಗಳು, ವ್ಯಕ್ತಿಗಳು, ಕಾನೂನು ಸಂಸ್ಥೆಗಳು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಯಾಗಿಯೂ ಕೂಡ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಹಿರಿಯ ವಕೀಲ ಕೆ. ಪರಾಸರನ್ ಮತ್ತು ವಕೀಲ ಶ್ರೀಧರ್ ಪೊತ್ತರಾಜು

3. ಹಿರಿಯ ನ್ಯಾಯವಾದಿ ಕೆ. ಪರಾಶರನ್ ಅವರ ಸಹವಾಸದಿಂದ ಪ್ರಾಚೀನ ಭಾರತೀಯ ಜ್ಞಾನ ಗಂಗೆಯನ್ನು ಆಧುನಿಕ ಕಾನೂನು ವ್ಯವಸ್ಥೆಗೆ ತರಲು ಪ್ರಯತ್ನಿಸುತ್ತಿರುವುದು

ಹಿರಿಯ ವಕೀಲ ಕೆ. ಪರಾಸರನ್

ನಾನು ಭಾಗ್ಯನಗರದ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದೆ. ಅಲ್ಲಿ ಧರ್ಮ ಮತ್ತು ಆಧ್ಯಾತ್ಮ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿತ್ತು. ಚಿಕ್ಕಂದಿನಿಂದಲೂ ನಮ್ಮ ಮನಸ್ಸಿನಲ್ಲಿ ಸರಿ ಮತ್ತು ತಪ್ಪುಗಳ ಬಗ್ಗೆ ಸಂಸ್ಕಾರಗಳನ್ನು ತುಂಬಲಾಗಿತ್ತು. ‘ಕೆಟ್ಟ ಕರ್ಮದ ಭಯದಿಂದ ಸರಿಯಾಗಿ ನಡೆದುಕೊಳ್ಳುವುದಕ್ಕಿಂತ ಸರಿಯಾಗಿ ನಡೆದುಕೊಳ್ಳುವುದೇ ಉತ್ತಮ ಆಯ್ಕೆ’ ಎಂದು ನಮಗೆ ಕಲಿಸಲಾಗಿತ್ತು. ಇದೇ ಸಂಸ್ಕಾರಗಳನ್ನು ಹೊತ್ತು ನಾನು ನನ್ನ ವಕೀಲ ವೃತ್ತಿಯನ್ನು ಪ್ರಾರಂಭಿಸಿದೆ. ಆರಂಭದ ದಿನಗಳಲ್ಲಿ ‘ಅನೈತಿಕ ಕೆಲಸಗಳನ್ನು ಮಾಡದೆ ಈ ವೃತ್ತಿಯಲ್ಲಿ ಯಶಸ್ಸು ಸಿಗುವುದಿಲ್ಲ’ ಎಂದು ನಾನು ಭಾವಿಸಿದ್ದೆ. ಕಾಲಾನಂತರದಲ್ಲಿ ‘ಕಾನೂನಿನಂತಹ ವೃತ್ತಿಯಲ್ಲಿದ್ದರೂ ಅನೇಕ ವೃತ್ತಿಪರರು ಧಾರ್ಮಿಕ ಆಚರಣೆಯನ್ನು ಬಿಡುವುದಿಲ್ಲ’ ಎಂದು ನನ್ನ ಗಮನಕ್ಕೆ ಬಂತು. ಅಂತಹ ಪ್ರಸಿದ್ಧ ವಕೀಲರು ಉತ್ತಮ ವ್ಯಕ್ತಿಗಳಾಗಿದ್ದು, ಅವರೊಂದಿಗೆ ಕೆಲಸ ಮಾಡಿದ್ದರಿಂದ ನನ್ನ ಪಯಣ ಸುಗಮವಾಯಿತು.

2018 ರಲ್ಲಿ ನಾನು ಈ ವೃತ್ತಿಗೆ ಬಂದು 20 ವರ್ಷಗಳು ಪೂರ್ಣಗೊಂಡವು ಮತ್ತು ನನ್ನ ಮನಸ್ಸಿನಲ್ಲಿ ‘ನಾನು ಇನ್ನೂ ಏನು ಮಾಡಬಹುದು?’ ಎಂಬ ಆಲೋಚನೆಗಳು ಬರಲಾರಂಭಿಸಿದವು. ಇದು ನಿಧಾನವಾಗಿ ನಡೆಯುವ ವಿಕಾಸವಾಗಿತ್ತು. ಹಿರಿಯ ನ್ಯಾಯವಾದಿ ಕೆ. ಪರಾಶರನ್ ಅವರ 20 ವರ್ಷಗಳ ಸಹವಾಸವು ನನಗೆ ಸನಾತನ ಧರ್ಮ, ರಾಮಾಯಣ, ಮಹಾಭಾರತಗಳ ಬಗ್ಗೆ ಅನೇಕ ಹೊಸ ದೃಷ್ಟಿಕೋನಗಳನ್ನು ನೀಡಿತು. ಚಿಕ್ಕಂದಿನಿಂದಲೂ ನನಗೆ ರಾಮಾಯಣ ಮತ್ತು ಮಹಾಭಾರತವನ್ನು ಓದುವ ಅಭ್ಯಾಸವಿತ್ತು; ಆದರೆ ಈ ಬಗ್ಗೆ ನ್ಯಾಯವಾದಿ ಕೆ. ಪರಾಶರನ್ ಅವರೊಂದಿಗೆ ಚರ್ಚಿಸಿದ ನಂತರ ನನಗೆ ಅವುಗಳ ಹೊಸ ಅರ್ಥ ತಿಳಿಯಿತು. ನ್ಯಾಯವಾದಿ ಕೆ. ಪರಾಶರನ್ ಅವರು ಪ್ರಾಚೀನ ಭಾರತೀಯ ಮೌಲ್ಯಗಳು ಮತ್ತು ಐತಿಹಾಸಿಕ ಪರಿಕಲ್ಪನೆಗಳನ್ನು ಭಾರತದ ಸಂವಿಧಾನದೊಂದಿಗೆ ಬೆಸೆಯುತ್ತಿದ್ದರು. ಆಕ್ರಮಣಕಾರರು, ವಸಾಹತುಶಾಹಿಗಳು ಮತ್ತು ರಾಜಕೀಯ ಪಕ್ಷಗಳ ಪ್ರಭಾವದಿಂದ ನಮ್ಮಲ್ಲಿ ಹೆಚ್ಚಿನವರು ಪಾಶ್ಚಿಮಾತ್ಯರ ಬೌದ್ಧಿಕ ಗುಲಾಮರಾಗಿದ್ದೇವೆ. ಆದ್ದರಿಂದ ಸಾಂಸ್ಕೃತಿಕ ಅಡಿಪಾಯವು ಅಲುಗಾಡುತ್ತಿದೆ. ಪ್ರಾಚೀನ ಭಾರತೀಯ ಜ್ಞಾನ ಮತ್ತು ಇಂಗ್ಲಿಷರ ಪ್ರಭಾವಕ್ಕೊಳಗಾದ ನಮ್ಮ ಕಾನೂನು ವ್ಯವಸ್ಥೆಯ ನಡುವೆ ಸಮನ್ವಯ ಸಾಧಿಸಲು ಯಾರೂ ಪ್ರಯತ್ನಿಸಲಿಲ್ಲ. ನಾನು ಪ್ರಾಚೀನ ಭಾರತೀಯ ಜ್ಞಾನ ಗಂಗೆಯನ್ನು ಆಧುನಿಕ ಕಾನೂನು ವ್ಯವಸ್ಥೆಗೆ ತರಲು ಪ್ರಯತ್ನಿಸುತ್ತಿದ್ದೇನೆ ಮತ್ತು ಇದನ್ನು ಮಾಡುವಾಗ ನಾನು ನನ್ನನ್ನು ಕೇವಲ ಒಂದು ಮಾಧ್ಯಮವೆಂದು ಪರಿಗಣಿಸುತ್ತೇನೆ.

4. ‘ವಾಲ್ಮೀಕಿ ರಾಮಾಯಣ’, ‘ಮಹಾಭಾರತ’ ಮತ್ತು ಇತಿಹಾಸದ ಅಧ್ಯಯನದಿಂದ ವಿವಿಧ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವುದು

ಸನಾತನ ಧರ್ಮವು ಒಂದು ಜೀವನಶೈಲಿಯಾಗಿದ್ದು, ಅದು ನಮ್ಮೊಂದಿಗೆ, ಇತರರೊಂದಿಗೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತದೆ. ಈ ಬೋಧನೆಯನ್ನು ತಿಳಿದುಕೊಳ್ಳುವ ಸುಲಭವಾದ ಮಾರ್ಗವೆಂದರೆ ‘ವಾಲ್ಮೀಕಿ ರಾಮಾಯಣ’ ಮತ್ತು ಮಹರ್ಷಿ ವ್ಯಾಸರ ‘ಮಹಾಭಾರತ’ವನ್ನು ಓದುವುದು. ಈ ಗ್ರಂಥಗಳ ವಾಚನದಿಂದ ದೈನಂದಿನ ಜೀವನದ ಸಮಸ್ಯೆಗಳು ಮತ್ತು ಅವುಗಳಿಗೆ ಧರ್ಮ ಆಧಾರಿತ ಪರಿಹಾರಗಳ ಬಗ್ಗೆ ಜ್ಞಾನವಾಗುತ್ತದೆ. ಇತಿಹಾಸದ ಅಧ್ಯಯನದಿಂದ ದೇಶ ಮತ್ತು ಜಗತ್ತಿನ ಪರಿಚಯವಾಗುತ್ತದೆ. ಈ ರೀತಿ ಜ್ಞಾನವನ್ನು ಪಡೆಯುವ ಯಾವುದೇ ವ್ಯಕ್ತಿಗೆ ಬದಲಾಗುತ್ತಿರುವ ಕಾಲದ ಸವಾಲುಗಳು ಅರ್ಥವಾಗುತ್ತವೆ ಮತ್ತು ಅವನು ಅಪಪ್ರಚಾರ ಮತ್ತು ಸುಳ್ಳು ಕಥೆಗಳಲ್ಲಿ ಸಿಲುಕದೆ ಜಾಗರೂಕನಾಗಿರುತ್ತಾನೆ. ಪರಿಣಾಮವಾಗಿ ಅವನು ಜವಾಬ್ದಾರಿಯುತ ಭಾರತೀಯ ನಾಗರಿಕನಾಗುತ್ತಾನೆ.

‘ರಾಮಲಲ್ಲಾ ವಿರಾಜಮಾನ್’ ಈ ಬಹುಚರ್ಚಿತ ಪ್ರಕರಣದ ತೀರ್ಪಿನ ನಂತರ ಹಿರಿಯ ವಕೀಲ ಕೆ. ಪರಾಸರನ್ (ಕುಳಿತಿರುವವರಲ್ಲಿ ಎಡದಿಂದ ಎರಡನೆಯವರು) ಮತ್ತು ಅವರ ಪಕ್ಕದಲ್ಲಿ ವಕೀಲ ಶ್ರೀಧರ್ ಪೊತ್ತರಾಜು ಮತ್ತು ಇತರ ಭಾಗವಹಿಸಿದ ವಕೀಲರು – ಮಾಡಲಾಗಿದೆ.

5. ‘ಭಗವಂತನು ಎಲ್ಲರಲ್ಲಿಯೂ ಇದ್ದಾನೆ’ ಎಂಬ ಸನಾತನ ಧರ್ಮದ ತತ್ವಶಾಸ್ತ್ರವನ್ನು ಅರಿತು ಧರ್ಮ ಮತ್ತು ಅಧರ್ಮವನ್ನು ಒಂದೇ ಮಾನದಂಡದಿಂದ ನೋಡುವುದು ಅವಶ್ಯಕ!

ನಾವು ನಮ್ಮ ಸಂಸ್ಕೃತಿ, ನಾಗರಿಕತೆ ಮತ್ತು ಪರಂಪರೆಯನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಬೇಕು. ಕೆಲವು ಜನರ ಮನಸ್ಸಿನಲ್ಲಿ ಭಾರತೀಯ ವಿಷಯಗಳ ಬಗ್ಗೆ ದ್ವೇಷ ಏಕೆ ಇದೆ ಎಂಬುದರ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಕಲಿಯುವುದು ಮುಖ್ಯ. ನಮ್ಮ ಬಗ್ಗೆ ದ್ವೇಷವು ಕೆಲವರ ಸ್ವಂತ ನಂಬಿಕೆಗಳಿಂದ ಹುಟ್ಟಿಕೊಂಡಿದೆ. ತಮ್ಮ ಧಾರ್ಮಿಕ ಅಭಿಪ್ರಾಯಗಳು, ಸಿದ್ಧಾಂತಗಳನ್ನು ನಂಬದ ಇತರರನ್ನು ಅವರು ವಿಗ್ರಹ ಆರಾಧಕರು, ಕಾಫಿರ್ ಅಥವಾ ಕ್ರೂರಿ ಎಂದು ಕರೆಯುತ್ತಾರೆ. ತಮ್ಮ ನಂಬಿಕೆಗಳನ್ನು (ಅದು ಧರ್ಮವಾಗಿರಲಿ ಅಥವಾ ಸಿದ್ಧಾಂತವಾಗಿರಲಿ) ಹರಡಲು ನೈತಿಕವಾಗಿ ಖಂಡನೀಯವಾದ ಹಿಂಸೆ ಮತ್ತು ಕ್ರೌರ್ಯ ಕೃತ್ಯಗಳನ್ನು ಬೆಂಬಲಿಸಲಾಗುತ್ತದೆ ಅಥವಾ ಅದಕ್ಕಿಂತಲೂ ಕೆಟ್ಟದಾಗಿ, ಅವುಗಳನ್ನು ವೈಭವೀಕರಿಸಲಾಗುತ್ತದೆ. ಇಡೀ ಜಗತ್ತಿನಲ್ಲಿ ಒಂದು ಸರ್ವಸಮಾನ್ಯ ಧಾರ್ಮಿಕ ಸಮಾಜದ ಅವಶ್ಯಕತೆಯಿದೆ, ಅಲ್ಲಿ ಆರಾಧನಾ ಪದ್ಧತಿ ಅಥವಾ ಸಿದ್ಧಾಂತವನ್ನು ಪಾಲಿಸದ ಕಾರಣದಿಂದ ಯಾರನ್ನೂ ಕೀಳಾಗಿ ಕಾಣಬಾರದು ಅಥವಾ ಜನ್ಮ ಜಾತಿ ‘ಕಾಫಿರ್’ ಅಥವಾ ‘ಕ್ರೂರಿ’ ಎಂದು ವರ್ಗೀಕರಿಸಬಾರದು. ಸನಾತನ ಧರ್ಮದ ತತ್ವಶಾಸ್ತ್ರದ ಅರ್ಥವನ್ನು ಅರಿತುಕೊಳ್ಳುವುದೆಂದರೆ ‘ಭಗವಂತನು ಎಲ್ಲಾ ಜೀವಿಗಳಲ್ಲಿಯೂ ವಾಸಿಸುತ್ತಾನೆ, ಮನುಷ್ಯನು ಈ ವಿಶ್ವದ ಒಡೆಯನಲ್ಲ ಆದ್ದರಿಂದ ಯಾರೂ ಯಾರನ್ನೂ ದ್ವೇಷಿಸುವ ಅಗತ್ಯವಿಲ್ಲ’ ಎಂದು ತಿಳಿಯುವುದು. ಧರ್ಮ ಮತ್ತು ಅಧರ್ಮವನ್ನು ಒಂದೇ ಮಾನದಂಡದಿಂದ ನಾವು ಜಗತ್ತನ್ನು ನೋಡಬೇಕು. ಶ್ರೀವಿಷ್ಣುವಿನ 10 ಅವತಾರಗಳು ಧರ್ಮ ಮತ್ತು ಅಧರ್ಮಗಳ ನಡುವಿನ ವ್ಯತ್ಯಾಸವನ್ನು ಕಲಿಸುತ್ತವೆ.

 

6. ರಾಮಾಯಣ ಮತ್ತು ಮಹಾಭಾರತ ಆಧಾರಿತ ಸಾಂಸ್ಕೃತಿಕ ಪರಂಪರೆಯನ್ನು ಪುನಃಸ್ಥಾಪಿಸಲು ಪ್ರಯತ್ನ!

ಪ್ರತಿಯೊಂದು ಕುಟುಂಬವು ತಮ್ಮ ಮಕ್ಕಳಿಗೆ ಇತಿಹಾಸ ಮತ್ತು ನೈತಿಕ ಮೌಲ್ಯಗಳನ್ನು ಕಲಿಸಬೇಕು. ದೇಶ, ಕಾಲ ಮತ್ತು ಧರ್ಮಕ್ಕೆ ಅನುಗುಣವಾಗಿ ಶಾಲೆ ಮತ್ತು ಸಮಾಜವು ಮುಂದಿನ ಪೀಳಿಗೆಗೆ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳ ಸಕಾರಾತ್ಮಕ ಪರಿಚಯವನ್ನು ಮಾಡಿಕೊಡಬೇಕು. ನಾನು ಇತಿಹಾಸದ ವಿಸ್ತಾರವಾದ ಕಥೆಗಳನ್ನು ಸಂಕ್ಷಿಪ್ತ ಮತ್ತು ಸರಳ ಭಾಷೆಯ ಸೂತ್ರಗಳಲ್ಲಿ ಬರೆಯುತ್ತಿದ್ದೇನೆ. ಇದರ ಹಿಂದಿನ ಉದ್ದೇಶವೇನೆಂದರೆ, ಈ ಸೂತ್ರಗಳನ್ನು ಓದಿ ಹೊಸ ಪೀಳಿಗೆಯ ಮನಸ್ಸಿನಲ್ಲಿ ಕುತೂಹಲ ಜಾಗೃತವಾಗಬೇಕು ಮತ್ತು ಅವರು ಮೂಲ ಇತಿಹಾಸವನ್ನು ಓದಬೇಕು. 2022 ರಲ್ಲಿ ನನ್ನ ಮೊದಲ ಗ್ರಂಥ ‘ಮ್ಯಾಕ್ಸಿಮ್ಸ್ ಆಫ್ ಮಹಾಭಾರತ’ ಪ್ರಕಟವಾಯಿತು ಮತ್ತು ಅದು ಬಹಳ ಜನಪ್ರಿಯವಾಯಿತು. ಪ್ರಸ್ತುತ ನಾನು ‘ಮ್ಯಾಕ್ಸಿಮ್ಸ್ ಆಫ್ ರಾಮಾಯಣ’ವನ್ನು ಬರೆಯುತ್ತಿದ್ದೇನೆ. ಪ್ರಸ್ತುತ ಸಮಾಜ ಜೀವನದಲ್ಲಿ ರಾಮಾಯಣ ಮತ್ತು ಮಹಾಭಾರತ ಆಧಾರಿತ ಸಾಂಸ್ಕೃತಿಕ ಪರಂಪರೆಯನ್ನು ಪುನಃಸ್ಥಾಪಿಸುವುದು ನನ್ನ ಪ್ರಯತ್ನವಾಗಿದೆ.