ಇತರರಿಗೆ ಸಹಾಯ ಮಾಡುವ ಮತ್ತು ದೇವರ ಬಗ್ಗೆ ಆಸಕ್ತಿಯಿರುವ ಬೆಂಗಳೂರಿನ ಕು. ನಿಯಂತ್ರಿ ವಿನಯ ಜಗತಾಪ (ಆಧ್ಯಾತ್ಮಿಕ ಮಟ್ಟ ಶೇ. ೫೬, ವಯಸ್ಸು ೧೬ ವರ್ಷ) !

ಕು. ನಿಯಂತ್ರಿ ಜಗತಾಪ

ಬೆಂಗಳೂರಿನ ಕು. ನಿಯಂತ್ರಿ ವಿನಯ ಜಗತಾಪ ಇವಳ ಬಗ್ಗೆ ಅವಳ ತಾಯಿಗೆ ಅರಿವಾದ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.

ಸೌ. ದೀಪ್ತಿ ಜಗತಾಪ

೧. ಅಚ್ಚುಕಟ್ಟುತನ

‘ಕು. ನಿಯಂತ್ರಿಯು ತನ್ನ ಎಲ್ಲ ವಸ್ತುಗಳನ್ನು ಅಚ್ಚುಕಟ್ಟಾಗಿ ಇಡುತ್ತಾಳೆ.

೨. ಸಮಯಪಾಲನೆ ಮತ್ತು ಪರಿಪೂರ್ಣ ಕೃತಿ ಮಾಡುವುದು

ನಿಯಂತ್ರಿಯು ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣ ಮಾಡುತ್ತಾಳೆ. ಅವಳಿಗೆ ಹೇಳಿದ  ಸೇವೆಯನ್ನು ಅವಳು ಪೂರ್ಣಗೊಳಿಸುತ್ತಾಳೆ. ಅವಳಿಗೆ ಅಧ್ಯಯನ ಮಾಡುವುದಿದ್ದರೆ, ಅವಳು ಅದನ್ನು ಪೂರ್ಣ ಮಾಡಿಯೇ ಊಟ ಮಾಡುತ್ತಾಳೆ.

೩. ಸಹಾಯ ಮಾಡುವುದು

ನಿಯಂತ್ರಿಯು ರಜೆಗಳಲ್ಲಿ ನನಗೆ ‘ಸನಾತನ ಪ್ರಭಾತ’ ನಿಯತಕಾಲಿಕೆಯ ಸೇವೆಯಲ್ಲಿ ಸಹಾಯ ಮಾಡುತ್ತಾಳೆ. ಅವಳು ನನಗೆ ಗಣಕಯಂತ್ರದಲ್ಲಿ ಮಾಹಿತಿಯನ್ನು ತುಂಬಲು ಸಹಾಯ ಮಾಡುತ್ತಾಳೆ. ಅವಳು ನನಗೆ ಅಡುಗೆ ಮನೆಯಲ್ಲಿನ ಕೆಲಸಗಳಲ್ಲಿಯೂ ಸಹಾಯ ಮಾಡುತ್ತಾಳೆ.

೩ ಅ. ಮಂಚದಿಂದ ಕೆಳಗೆ ಬಿದ್ದ ಅಜ್ಜಿಗೆ ತತ್ಪರೆಯಿಂದ ಸಹಾಯ ಮಾಡುವುದು : ಒಮ್ಮೆ ನನ್ನ ಅತ್ತೆಯವರು ರಾತ್ರಿ ಮಲಗಿರು ವಾಗ ಮಂಚದಿಂದ ಕೆಳಗೆ ಬಿದ್ದರು ಮತ್ತು ಅವರ ತಲೆಗೆ ಪೆಟ್ಟು ಬಿದ್ದಿತು. ಆ ಸಮಯದಲ್ಲಿ ನಿಯಂತ್ರಿಯು ತತ್ಪರತೆಯಿಂದ ಅಜ್ಜಿಯ ತಲೆಗೆ ಔಷಧಿಯನ್ನು ಹಚ್ಚಿದಳು, ಹಾಗೆಯೇ ಅಜ್ಜಿಗೆ ವಿಭೂತಿಯನ್ನು ಹಚ್ಚಿದಳು ಅವರಿಗೆ ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ಮಾಡಲು ಹೇಳಿದಳು.

೪. ದೇವರ ಮೇಲೆ ಮತ್ತು ಪರಾತ್ಪರ ಗುರುದೇವರ ಮೇಲೆ ಶ್ರದ್ಧೆ ಇರುವುದು

ನಿಯಂತ್ರಿಯು ತನ್ನ ಮೇಜಿನ ಮೇಲಿಟ್ಟಿದ ಶ್ರೀಕೃಷ್ಣ ಮತ್ತು ಶ್ರೀ ಗಣೇಶನ ಚಿತ್ರಗಳಿಗೆ, ಹಾಗೆಯೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರಕ್ಕೆ ಪ್ರಾರ್ಥನೆಯನ್ನು ಮಾಡಿ ಅಧ್ಯಯನ ಮಾಡುತ್ತಾಳೆ. ಅವಳು ಪರೀಕ್ಷೆಯ ಸಮಯದಲ್ಲಿ ಆಧ್ಯಾತ್ಮಿಕ ಉಪಾಯ, ದತ್ತಗುರುಗಳ ಮತ್ತು ಶ್ರೀಕೃಷ್ಣನ ನಾಮಜಪವನ್ನು ಮಾಡುತ್ತಾಳೆ.

೫. ಸಾತ್ತ್ವಿಕ ಕೃತಿಗಳ ಆಸಕ್ತಿ

ಅವಳು ಶ್ರೀಕೃಷ್ಣನ ಬಾಲರೂಪದಲ್ಲಿನ ಚಿತ್ರಗಳನ್ನು ಬಿಡಿಸುತ್ತಾಳೆ. ಹಬ್ಬದ ಸಮಯದಲ್ಲಿ ಅವಳು ಮನೆಯಲ್ಲಿ ರಂಗೋಲಿಯನ್ನು ಬಿಡಿಸುತ್ತಾಳೆ. ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ದೇವರಿಗೆ ಗಂಧ ಮತ್ತು ಅರಿಶಿಣ-ಕುಂಕುಮವನ್ನು ಹಚ್ಚುತ್ತಾಳೆ. ಅವಳು ದೇವರ ಕೋಣೆಯನ್ನು ಹೂವುಗಳಿಂದ ಅಲಂಕರಿಸುತ್ತಾಳೆ, ಹಾಗೆಯೇ ತುಳಸಿಯ ಪೂಜೆಯನ್ನೂ ಮಾಡುತ್ತಾಳೆ.

೬. ತಪ್ಪುಗಳ ಬಗ್ಗೆ ಗಾಂಭೀರ್ಯವಿರುವುದು

ಅವಳು ತನ್ನ ತಪ್ಪನ್ನು ತಕ್ಷಣ ಸ್ವೀಕರಿಸಿ ಕ್ಷಮೆ ಯಾಚನೆ ಮಾಡುತ್ತಾಳೆ. ಅವಳು ಸ್ವಭಾವದೋಷ-ಅಹಂ ಇವುಗಳ ಪಟ್ಟಿಯಲ್ಲಿ ತನ್ನ ತಪ್ಪುಗಳನ್ನು ಬರೆಯುತ್ತಾಳೆ.

೭. ಧರ್ಮಾಭಿಮಾನ

ನಿಯಂತ್ರಿಯು ಶಾಲೆಯಲ್ಲಿ ಸಾಮಾಜಿಕ ವಿಜ್ಞಾನ (‘ಸೋಶಿಯಲ್‌ ಸೈನ್ಸ್‌’) ಈ ವಿಷಯಗಳಲ್ಲಿ ಅವರಿಗೆ ಮೊಘಲರ ಬಗೆಗಿನ ಪಾಠ ಹೆಚ್ಚಿರುತ್ತವೆ; ಆದರೆ ಹಿಂದೂ ಕ್ರಾಂತಿವೀರರ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಬಗೆಗಿನ ಮಾಹಿತಿಯು ಕಡಿಮೆ ಇರುತ್ತವೆ. ಆದ್ದರಿಂದ ಅವಳಿಗೆ ಈ ವಿಷಯವು ಇಷ್ಟವಾಗುವುದಿಲ್ಲ ಮತ್ತು ಅವಳು ಆ ವಿಷಯದ ಅಧ್ಯಯನವನ್ನೂ ಮಾಡುವುದಿಲ್ಲ.

೮. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬಗೆಗಿನ ಭಾವ

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಎಲ್ಲರ ಮೇಲೆ ನಿರಪೇಕ್ಷ ಪ್ರೀತಿಯನ್ನು ಮಾಡುತ್ತಾರೆ. ‘ಸಾಧಕರಲ್ಲಿ ಎಷ್ಟೇ ಸ್ವಭಾವದೋಷಗಳಿದ್ದರೂ, ಗುರುದೇವರು ಎಲ್ಲರನ್ನೂ ಸ್ವೀಕರಿಸುತ್ತಾರೆ’, ಎಂದು ನಿಯಂತ್ರಿಯು ಹೇಳುತ್ತಾಳೆ. ಹತ್ತನೇ ಪರೀಕ್ಷೆಯಲ್ಲಿ ಅವಳಿಗೆ ಶೇ. ೯೨ ರಷ್ಟು ಅಂಕ ಬರಬಹುದು ಎಂದಿತ್ತು; ಆದರೆ ಅವಳು ಶೇ. ೯೪ ರಷ್ಟು ಅಂಕಗಳನ್ನು ಪಡೆದಳು. ಆ ಸಮಯದಲ್ಲಿ ‘ಗುರುಕೃಪೆಯಿಂದ ನನಗೆ ಇಷ್ಟೊಂದು ಅಂಕಗಳು ಸಿಕ್ಕಿವೆ’, ಎಂದು ಹೇಳಿ ಅವಳಿಗೆ ಗುರುದೇವರ ಬಗ್ಗೆ ತುಂಬ ಕೃತಜ್ಞತೆ ಎನಿಸಿತು.

ಸೌ. ದೀಪ್ತಿ ಜಗತಾಪ (ಕು. ನಿಯಂತ್ರಿಯ ತಾಯಿ), ಬೆಂಗಳೂರು, ಕರ್ನಾಟಕ. (೯.೪.೨೦೨೪)

೨೦೧೬ ರಲ್ಲಿ ‘ಕು. ನಿಯಂತ್ರಿ ಜಗತಾಪ ಇವಳ ಆಧ್ಯಾತ್ಮಿಕ ಮಟ್ಟ ಶೇ. ೫೫ ರಷ್ಟಿತ್ತು. ೨೦೨೪ ರಲ್ಲಿ ಅವಳ ಆಧ್ಯಾತ್ಮಿಕ ಮಟ್ಟ ಶೇ. ೫೬ ರಷ್ಟಾಯಿತು. ಪಾಲಕರು ಅವಳ ಮೇಲೆ ಮಾಡಿದ ಯೋಗ್ಯ ಸಂಸ್ಕಾರ, ಅವಳ ಸಾಧನೆಯ ತಳಮಳ ಮತ್ತು ಭಾವದಿಂದಾಗಿ ಅವಳ ಸಾಧನೆಯಲ್ಲಿ ಪ್ರಗತಿಯಾಗುತ್ತಿದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ