ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/132743.html |
ಪ್ರಧಾನಮಂತ್ರಿಯಾಗಿ ಮೂರನೇ ಬಾರಿ ಪ್ರಮಾಣ ವಚನ ಪಡೆದ ನಂತರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ದೊಡ್ಡ ಒಂದು ರಾಜಕೀಯ ನಿರ್ಣಯ ತೆಗೆದುಕೊಂಡಿತು. ಅದೇನೆಂದರೆ, ‘ಒಂದು ದೇಶ ಒಂದು ಚುನಾವಣೆ’ ಈ ಸಂಕಲ್ಪನೆಗೆ ಕೇಂದ್ರ ಸಚಿವಸಂಪುಟದ ಮನ್ನಣೆ ಸಿಕ್ಕಿರುವುದು. ಸಚಿವಸಂಪುಟದ ಸಮ್ಮತಿಯ ನಂತರ ಈ ವಿಷಯದ ಸಂವಿಧಾನ ದುರಸ್ತಿ ಮಸೂದೆ ಶೀಘ್ರದಲ್ಲಿಯೆ ಸಂಸತ್ತಿನಲ್ಲಿ ಮಂಡಿಸಲಾಗುವುದು. ಕೇಂದ್ರ ಸರಕಾರದ ಈ ನಿರ್ಣಯ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಇವರ ನೇತೃತ್ವದಲ್ಲಿನ ಸಮಿತಿಯ ಶಿಫಾರಸನ್ನು ಆಧರಿಸಿದೆ. ಈ ಸಮಿತಿಯನ್ನು ಕಳೆದ ವರ್ಷ ಸಪ್ಟೆಂಬರ ತಿಂಗಳಲ್ಲಿ ಮಾಡಲಾಗಿತ್ತು. ಸಮಿತಿ ಮಾರ್ಚ್ ೨೦೨೪ ರಲ್ಲಿ ಸಲ್ಲಿಸಿದ ಅವರ ವರದಿಯಲ್ಲಿ ಈ ಸಂಕಲ್ಪನೆಯನ್ನು ಭಾರತದಲ್ಲಿ ಹಮ್ಮಿಕೊಳ್ಳಬಹುದೆಂಬ ಸಂಕೇತ ನೀಡಿದ್ದರು. ಈ ಕಾನೂನು ಸಮ್ಮತವಾದರೆ ೨ ಹಂತಗಳಲ್ಲಿ ಈ ಸಂಕಲ್ಪನೆಯ ಅನುಷ್ಠಾನವಾಗುವುದು. ಮೊದಲ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಮತ್ತು ಎರಡನೆಯ ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದು. ಈ ಎಲ್ಲ ಪ್ರಕ್ರಿಯೆಗಳು ೧೦೦ ದಿನಗಳಲ್ಲಿ ಪೂರ್ಣವಾಗುವವು. ಆದ್ದರಿಂದ ಭವಿಷ್ಯದಲ್ಲಿ ಇದರ ಬಗ್ಗೆ ಪುನಃ ಚರ್ಚೆಯಾಗುವುದು ಖಚಿತವಾಗಿದೆ. ಸಪ್ಟೆಂಬರ ೩೦ ರಂದು ಪ್ರಸಿದ್ಧವಾದ ಲೇಖನದಲ್ಲಿ ನಾವು ‘ದೇಶದಲ್ಲಿ ಸುಶಾಸನ ನಿರ್ಮಾಣ ಮಾಡುವ ಉದ್ದೇಶದಿಂದ ‘ಒಂದು ದೇಶ ಒಂದು ಚುನಾವಣೆ’ಯ ಕಡೆಗೆ ನೋಡುವ ಅವಶ್ಯಕತೆ, ‘ಒಂದು ದೇಶ ಒಂದು ಚುನಾವಣೆ’ಯ ಅವಶ್ಯಕತೆ ಭಾರತದಲ್ಲಿ ಇದೆಯೆ ? ಮತ್ತು ಒಂದೇ ಬಾರಿ ದೇಶದ ಎಲ್ಲ ಚುನಾವಣೆಗಳನ್ನು ಮಾಡಿದರೆ ಆಗುವ ಮಹತ್ವಪೂರ್ಣ ಲಾಭ’, ಈ ವಿಷಯವನ್ನು ಓದಿದೆವು. ಇಂದು ಅಂತಿಮ ಭಾಗವನ್ನು ನೋಡೋಣ.
೫. ಭಾರತದಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಸಲು ಏಕೆ ಸಾಧ್ಯವಿಲ್ಲ ? ಎಂಬುದರ ಕಾರಣ
೨೦೧೯ ರಲ್ಲಿ ‘ಸದ್ಯದ ಸ್ಥಿತಿಯಲ್ಲಿ ತಕ್ಷಣವೇ ಎಲ್ಲ ಚುನಾವಣೆಗಳನ್ನು ನಡೆಸುವುದು ಅಸಾಧ್ಯ’, ಎಂದು ಚುನಾವಣಾ ಆಯೋಗ ಹೇಳಿತ್ತು. ಅದರ ಮಹತ್ವದ ಕಾರಣವೆಂದರೆ, ಚುನಾವಣಾ ಆಯೋಗದ ಬಳಿ ಒಂದೇ ಬಾರಿ ಚುನಾವಣೆ ನಡೆಸಲು ಬೇಕಾಗುವ ವ್ಯವಸ್ಥೆಯ ಅಭಾವ ! ೨೦೧೪ ರ ಸಾರ್ವಜನಿಕ ಲೋಕಸಭಾ ಚುನಾವಣೆಯಲ್ಲಿ ೧೮ ಲಕ್ಷ ಮತದಾನ ಯಂತ್ರಗಳನ್ನು ಉಪಯೋಗಿಸಲಾಗಿತ್ತು. ಕೇಂದ್ರ ಹಾಗೂ ರಾಜ್ಯಗಳಲ್ಲಿ ಒಂದೇ ಬಾರಿ ಚುನಾವಣೆ ನಡೆಸಲಿಕ್ಕಿದ್ದರೆ ಸುಮಾರು ೪೦ ಲಕ್ಷಕ್ಕಿಂತಲೂ ಹೆಚ್ಚು ಮತದಾನ ಯಂತ್ರಗಳನ್ನು ಸಿದ್ಧ ಪಡಿಸಬೇಕಾಗುವುದು. ಇನ್ನೊಂದು ವಿಷಯವೆಂದರೆ, ಚುನಾವಣಾ ಆಯೋಗ ಹಂತಹಂತವಾಗಿ ಮತದಾನ ಮಾಡಿಸುತ್ತದೆ. ಇದರ ಮುಖ್ಯ ಕಾರಣ ನಮ್ಮಲ್ಲಿರುವ ಭದ್ರತಾ ವ್ಯವಸ್ಥೆಯ ಅಭಾವ; ಏಕೆಂದರೆ ಚುನಾವಣೆ ಮತ್ತು ಮತದಾನದ ಅವಧಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ನೇಮಿಸಬೇಕಾಗುತ್ತದೆ. ಇಷ್ಟು ಮಾತ್ರವಲ್ಲ, ಅರೆಸೇನಾಪಡೆಯನ್ನು ನೇಮಿಸಬೇಕಾಗುತ್ತದೆ. ಅವುಗಳ ಸಂಖ್ಯೆಯೂ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿಲ್ಲ. ಹಂತಹಂತವಾಗಿ ಚುನಾವಣೆ ನಡೆಸುವುದರಿಂದ ಭದ್ರತೆಯ ವ್ಯವಸ್ಥೆಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದು. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಬಾರಿ ಚುನಾವಣೆ ನಡೆಸಲಿಕ್ಕಿದ್ದರೆ, ದೊಡ್ಡ ಪ್ರಮಾಣದಲ್ಲಿ ಭದ್ರತೆಯ ವ್ಯವಸ್ಥೆ ಮಾಡಬೇಕಾಗುತ್ತದೆ, ಅದನ್ನೂ ಆಯೋಜಿಸಬೇಕಾಗುತ್ತದೆ.
೬. ‘ಒಂದು ದೇಶ ಒಂದು ಚುನಾವಣೆ’ಯ ವಿಷಯದಲ್ಲಿ ಮಾಡಿದ ಮಹತ್ವದ ಸಂಶೋಧನೆ
ಇನ್ನೊಂದು ಮಹತ್ವದ ಅಂಶವೆಂದರೆ, ‘ಒಂದು ದೇಶ ಒಂದು ಚುನಾವಣೆ’, ಈ ವಿಷಯದಲ್ಲಿ ರಾಜಕೀಯ ಪಕ್ಷಗಳಲ್ಲಿ ಕೆಲವು ಅಭ್ಯಾಸಿಗರ, ಚಿಂತಕರಲ್ಲಿ ಭಿನ್ನಾಭಿಪ್ರಾಯವಿದೆ. ಈ ವಿಷಯದಲ್ಲಿ ಇತ್ತೀಚೆಗೆ ಕೆಲವು ಮಹತ್ವದ ಸಂಶೋಧನೆ ಮಾಡಲಾಗಿದ್ದು ಈ ಮುಂದಿನ ಕೆಲವು ಸಂಶೋಧನೆಗಳು ಮಹತ್ವದ್ದಾಗಿವೆ.
ಅ. ಇದರಲ್ಲಿನ ಮೊದಲ ಸಂಶೋಧನೆಯೆಂದರೆ, ವಿವೇಕ ದೇಬ ರಾಯ ಮತ್ತು ಕಿಶೋರ ದೇಸಾಯಿ ಇವರು ನೀತಿ ಆಯೋಗಕ್ಕಾಗಿ ಸಿದ್ಧಪಡಿಸಿದ ಸವಿಸ್ತಾರವಾದ ವರದಿಯಲ್ಲಿ ‘ಒಂದು ದೇಶ ಒಂದು ಚುನಾವಣೆ’, ಈ ಸಂಕಲ್ಪನೆಯ ಗುಣದೋಷಗಳ ವಿಚಾರಗಳನ್ನು ಸವಿಸ್ತಾರವಾಗಿ ಮಾಡಲಾಗಿದೆ.
ಆ. ಇದಲ್ಲದೆ, ‘ಸಿ.ಎಸ್.ಡಿ.ಎಸ್.’ (ಸೆಂಟರ್ ಫಾರ್ ಸ್ಟಡೀಸ್ ಇನ್ ಡೆವಲ್ಪಮೆಂಟ್ ಸೊಸೈಟೀಸ್), ‘ಎ.ಡಿ.ಆರ್.’ (ಅಸೋಸಿಯೇಶನ್ ಫಾರ್ ಡೆಮೋಕ್ರಟಿಕ್ ರಿಫಾರ್ಮ್ಸ್) ಇಂತಹ ಬೌದ್ಧಿಕ ಗುಂಪಿನವರು (‘ಥಿಂಕ್ ಟ್ಯಾಂಕ್’ನ) ಕೂಡ ಈ ವಿಷಯದಲ್ಲಿ ‘ಮತದಾರರ ವರ್ತನೆ’ ಈ ದೃಷ್ಟಿಕೋನದಿಂದ ಸಂಶೋಧನೆ ಮಾಡಿದ್ದಾರೆ. ಅವರ ಅಭಿಪ್ರಾಯದಲ್ಲಿ ಈ ಸಂಕಲ್ಪನೆಯನ್ನು ಹಮ್ಮಿಕೊಂಡರೆ, ಅದರ ಪರಿಣಾಮ ಮತದಾರರ ವರ್ತನೆಯ ಮೇಲಾಗಬಹುದು. ಅಭ್ಯಾಸಕರ ಅಭಿಪ್ರಾಯಕ್ಕನುಸಾರ ‘ಮತದಾನದ ಅಧಿಕಾರವು ಭಾರತೀಯ ಸಂವಿಧಾನವು ನಾಗರಿಕರಿಗೆ ನೀಡಿರುವ ಸರ್ವೋಚ್ಚ ಶಕ್ತಿಯಾಗಿದೆ. ಮತದಾನದ ಅಧಿಕಾರವು ಮೂಲಭೂತವಾಗಿದೆ. ಮತದಾನದ ಸಮಯದಲ್ಲಿ ನಾವು ಸಕ್ಷಮರಾಗಿದ್ದೇವೆ, ಎನ್ನುವ ಭಾವನೆ ಮತದಾರರಲ್ಲಿರುತ್ತದೆ. ‘ಯಾರ ಸರಕಾರ ಇರಬೇಕು ?, ಎಂಬುದನ್ನು ನಾನು ನಿರ್ಧರಿಸುತ್ತೇನೆ’, ಎನ್ನುವ ಭಾವನೆ ಅವರಲ್ಲಿರುತ್ತದೆ. ಒಂದೇ ಬಾರಿ ಮತದಾನ ನಡೆಸಿದರೆ ಮತದಾರನ ಹಕ್ಕಿನ ಆ ಶಕ್ತಿಯನ್ನು ಅವನು ಒಮ್ಮೆ ಮಾತ್ರ ಉಪಯೋಗಿಸಲು ಸಾಧ್ಯ. ಅದನ್ನು ಪದೇ ಪದೇ ಉಪಯೋಗಿಸಿದರೆ ಮತದಾರನಿಗೆ ಈ ಶಕ್ತಿಯ ಅನುಭವವಾಗಬಹುದು. ಅದೇ ರೀತಿ ‘ಒಂದು ದೇಶ ಒಂದು ಚುನಾವಣೆ’ಯಿಂದ ರಾಜಕೀಯ ಪಕ್ಷಗಳು ಒಮ್ಮೆ ಮಾತ್ರ ಮತದಾರರಿಗೆ ಹೊಣೆಯಾಗಿರುವರು. ಪದೇ ಪದೇ ಚುನಾವಣೆ ನಡೆಯುತ್ತಾ ಇದ್ದರೆ ಅಲ್ಲಿ ಅವರು ಶಾಶ್ವತವಾಗಿ ಹೊಣೆಗಾರ ರಾಗಿರಬಹುದು. ಅದು ಪದೇ ಪದೇ ಏಕೆ ಬರಬಾರದು ?’, ಎಂಬುದು ಅಭ್ಯಾಸಕರ ಪ್ರಶ್ನೆಯಾಗಿದೆ.
ಇ. ಇನ್ನೂ ಒಂದು ಅನುಮಾನ, ಅಂದರೆ ಎಲ್ಲಕ್ಕಿಂತ ಪ್ರಸಿದ್ಧ ಅಥವಾ ಜನಪ್ರಿಯ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ, ಆ ಪಕ್ಷಕ್ಕೆ ‘ಒಂದು ದೇಶ ಒಂದು ಚುನಾವಣೆ’ ಈ ನೀತಿಯಿಂದ ಅತೀ ಹೆಚ್ಚು ಲಾಭವಾಗಬಹುದು. ಕೆಲವು ಅಭ್ಯಾಸಕರ ಅಭಿಪ್ರಾಯದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ರಾಜ್ಯದಲ್ಲಿಯೂ ಇರಬೇಕು, ಎನ್ನುವ ಭಾವನೆಯಿಂದ ಅದೇ ಪಕ್ಷಕ್ಕೆ ಮತದಾನ ಮಾಡುವ ಸಾಧ್ಯತೆ ಹೆಚ್ಚು ಪ್ರಮಾಣದಲ್ಲಿರುತ್ತದೆ. ಆದರೂ ಇದರಲ್ಲಿನ ವಾಸ್ತವಿಕತೆಯನ್ನು ಪರಿಶೀಲಿಸಿ ನೋಡಬೇಕು.
ಈ. ‘ಒಂದು ದೇಶ ಒಂದು ಚುನಾವಣೆ’ಯಲ್ಲಿನ ಇನ್ನೊಂದು ತಾಂತ್ರಿಕ ವಿಷಯವನ್ನು ತಿಳಿದುಕೊಳ್ಳಬೇಕು. ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಪದ್ಧತಿ ಇದೆ. ಇಲ್ಲಿ ದೇಶದ ಪ್ರಧಾನಮಂತ್ರಿ ಮತ್ತು ಅವರ ಸಚಿವಸಂಪುಟಕ್ಕೆ ಭಾರತೀಯ ಸಂಸತ್ತು ಜವಾಬ್ದಾರವಾಗಿರು ತ್ತದೆ. ಇಂತಹ ಪದ್ಧತಿ ಅಮೇರಿಕಾದಲ್ಲಿಲ್ಲ. ಅಮೇರಿಕಾದಂತಹ ದೇಶದಲ್ಲಿ ಪ್ರಜಾಪ್ರಭುತ್ವವಿದ್ದರೂ, ಕಾನೂನು ಮಂಡಳಿ ಮತ್ತು ಕಾರ್ಯಕಾರಿ ಮಂಡಳಿ ಪರಸ್ಪರರಿಂದ ತಟಸ್ಥವಾಗಿದೆ. ಆದ್ದರಿಂದ ಅಲ್ಲಿ ಕಾರ್ಯಕಾಲವನ್ನು ನಿರ್ಧರಿಸಲಾಗಿದೆ. ನಮ್ಮಲ್ಲಿ ಭಿನ್ನ ಪ್ರಕ್ರಿಯೆ ಇದೆ. ಸಂವಿಧಾನದ ಕಲಮ್ ೧೭೨ ಕ್ಕನುಸಾರ ರಾಜ್ಯ ಸರಕಾರ ವಿಧಾನಸಭೆಯನ್ನು ಅವಧಿಗಿಂತ ಮೊದಲೇ ವಿಸರ್ಜಿಸ ಬಹುದು ಹಾಗೂ ಸಂವಿಧಾನದಲ್ಲಿ ವಿಧಿಮಂಡಳಗಳ ಅವಧಿ ೫ ವರ್ಷವೆಂದು ನಿರ್ಧರಿಸಲಾಗಿದ್ದರೂ, ಅನೇಕ ಬಾರಿ ವಿಧಿಮಂಡಳ ಗಳು ಅವಧಿಯ ಮೊದಲೇ ವಿಸರ್ಜನೆಯಾಗುತ್ತವೆ. ಆದ್ದರಿಂದ ಭಾರತದಲ್ಲಿ ಈ ಚುನಾವಣಾ ಸುಧಾರಣೆ ಮಾಡಲಿಕ್ಕಿದ್ದರೆ, ಸಂಸತ್ತಿನ ಆಡಳಿತ ಪದ್ಧತಿಯಿಂದ ಅಧ್ಯಕ್ಷೀಯ ಪದ್ಧತಿಗೆ ಹೋಗಬೇಕಾಗು ತ್ತದೆ, ಎಂದು ಕೂಡ ಕೆಲವು ಅಭ್ಯಾಸಕರು ಹೇಳುತ್ತಾರೆ; ಆದರೆ ಸದ್ಯ ಇಂತಹ ವ್ಯವಸ್ಥೆಯನ್ನು ತರುವುದು ಅಸಾಧ್ಯ, ಏಕೆಂದರೆ, ಕೇಶವಾನಂದ ಭಾರತಿ ಖಟ್ಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ೧೩ ನ್ಯಾಯಾಧೀಶರ ಪೀಠವು ‘ಭಾರತೀಯ ಸಂಸದೀಯ ಪ್ರಜಾ ಪ್ರಭುತ್ವವು ಭಾರತದ ಮೂಲಭೂತ ಸಂರಚನೆಯ ಭಾಗವಾಗಿದೆ. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿ ಈ ಸಂಸತ್ ಸಂರಚನೆಯ ಚೌಕಟ್ಟನ್ನು ಬದಲಾಯಿಸಲು ಸಾಧ್ಯವಿಲ್ಲ’, ಎಂದು ಸ್ಪಷ್ಟಪಡಿಸಿತ್ತು. ಅದರ ಪರಿಣಾಮವೆಂದು ಸದ್ಯ ಭಾರತದಲ್ಲಿ ಅಧ್ಯಕ್ಷ ವ್ಯವಸ್ಥೆಯನ್ನು ತರಲು ಸಾಧ್ಯವಿಲ್ಲ.
೭. ಚುನಾವಣೆಯ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡುವುದರ ವಿಷಯದಲ್ಲಿ ಸೂಚನೆ
ಇದೆಲ್ಲವನ್ನೂ ಗಮನಿಸಿದಾಗ ನಮಗೆ ಕೆಲವು ಸಾಧ್ಯವಿರುವ ಸುಧಾರಣೆಗಳನ್ನು ಮಾಡಲು ಖಂಡಿತ ಸಾಧ್ಯವಿದೆ. ಈ ವಿಷಯದಲ್ಲಿ ಕೆಲವು ಸೂಚನೆಗಳು ಬಂದಿವೆ.
ಅ. ವಿಧಾನಸಭೆ ಮತ್ತು ಸಂಸತ್ತಿನ ಕಾರ್ಯಾವಧಿಯ ನಿರ್ಧಾರ (Permanently fixed, no prematurely dissolution – ಶಾಶ್ವತ ನಿರ್ಧಾರ, ಅಕಾಲಿಕ ವಿಸರ್ಜನೆ ಇಲ್ಲ) ಮಾಡುವುದು.
ಆ. ಒಂದು ದೇಶ ಎರಡು ಚುನಾವಣೆ ಸುಮಾರು ೫ ವರ್ಷಗಳಲ್ಲಿ ೨ ಬಾರಿ ಈ ಚುನಾವಣೆ ನಡೆಸಬಹುದು. ಯಾವುದೇ ವಿಧಾನಸಭೆ ಅವಧಿಪೂರ್ವ ವಿಸರ್ಜನೆಯಾದರೆ ೫ ವರ್ಷ ಕಾಯಬೇಕಾ ಗಿಲ್ಲ. ಎರಡನೆಯ ಬಾರಿ ಮಧ್ಯಂತರ ಚುನಾವಣೆಗೆ ದಿನಾಂಕ ನಿರ್ಧರಿಸಬೇಕು. ರಾಮನಾಥ ಕೋವಿಂದ ಸಮಿತಿಯ ಮಹತ್ವದ ಶಿಫಾರಸುಗಳ ಬಗ್ಗೆ ಕೂಡ ವಿಚಾರ ಮಾಡಬೇಕು.
(ಮುಕ್ತಾಯ)
ಡಾ. ಶೈಲೇಂದ್ರ ದೇವಳಾಣಕರ, ವಿದೇಶಾಂಗ ನೀತಿ ಮತ್ತು ರಾಜಕೀಯ ಘಟನಾವಳಿಗಳ ಅಭ್ಯಾಸಕರು (೨೩.೯.೨೦೨೪)
ಭಾರತದ ಸ್ವಾತಂತ್ರ್ಯದ ನಂತರ ಚುನಾವಣಾ ಪ್ರಕ್ರಿಯೆಯಲ್ಲಾಗಲಿರುವ ಅತಿದೊಡ್ಡ ಸುಧಾರಣೆ !ಇದು ಭಾರತದ ಸ್ವಾತಂತ್ರ್ಯದ ನಂತರ ನಡೆಯುವ ಅತೀ ದೊಡ್ಡ ಚುನಾವಣೆಯ ಸುಧಾರಣೆಯಾಗಿರುತ್ತದೆ. ಇತರ ದೇಶಗಳಲ್ಲಿ ಈ ಪದ್ಧತಿಯ ಬದಲಾವಣೆಯಾಗಿದೆ. ಭಾರತದಲ್ಲಿ ಇದುವರೆಗೆ ಅದು ಆಗಿಲ್ಲ. ಆದ್ದರಿಂದ ಅದಕ್ಕಾಗಿ ರಾಷ್ಟ್ರೀಯ ಒಮ್ಮತ ಸಿದ್ಧಪಡಿಸುವುದು ಅತ್ಯಂತ ಆವಶ್ಯಕವಾಗಿದೆ. ಆದ್ದರಿಂದ ಕೇಂದ್ರ ಸಚಿವಸಂಪುಟ ‘ಒಂದು ದೇಶ ಒಂದೇ ಚುನಾವಣೆ’ಯ ಸಂಕಲ್ಪನೆಗೆ ಮನ್ನಣೆ ನೀಡಿರುವುದರಿಂದ ಈಗ ಅದರ ಬಗ್ಗೆ ಚರ್ಚೆ ನಡೆಯಲು ಆರಂಭವಾಗಿದೆ ಹಾಗೂ ಇದು ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸುವುದರ ಪ್ರಾರಂಭವೆಂದೇ ಹೇಳಬೇಕು ! – ಡಾ. ಶೈಲೇಂದ್ರ ದೇವಳಾಣಕರ್ |