(ಟಿಪ್ಪಣಿ : ‘ಡೀಪ್ ಸ್ಟೇಟ್’ ಎಂದರೆ ಸರಕಾರಿ ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳ ರಹಸ್ಯ ಜಾಲ. ಇದರ ಮೂಲಕ ಸರಕಾರಿ ನಿಲುವುಗಳನ್ನು ಖಾಸಗಿ ಸಂಸ್ಥೆಗಳಿಗೆ ಅನುಕೂಲಗೊಳಿಸಲಾಗುತ್ತದೆ.)
ಜಗತ್ತಿನಲ್ಲಿನ ಪ್ರತಿಯೊಂದು ದೇಶದ ಸರಕಾರ ಹಾಗೂ ಆ ದೇಶದ ಅರ್ಥವ್ಯವಸ್ಥೆಯನ್ನು ತನ್ನ ಮುಷ್ಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವ ಪ್ರಭಾವಶಾಲಿ ಜನರ ಗುಂಪು, ಎಂದರೆ ‘ಡೀಪ್ ಸ್ಟೇಟ್’ ! ‘ಡೀಪ್ ಸ್ಟೇಟ್’ ಇದು ದೊಡ್ಡ ಅಪಾಯಕಾರಿ ವ್ಯವಸ್ಥೆಯಾಗಿದೆ. ಆದ್ದರಿಂದ ಪ್ರತಿಯೊಂದು ದೇಶವೂ ಇದರಿಂದ ಜಾಗರೂಕ ಮತ್ತು ಎಚ್ಚರ ದಿಂದಿರುವ ಅವಶ್ಯಕತೆಯಿದೆ. ಈ ಗುಂಪು ತನ್ನ ಹಿತ ಸಾಧಿಸಲು ಏನು ಬೇಕಾದರೂ ಮಾಡಬಹುದು. ಸರಕಾರವನ್ನು ಉರುಳಿಸಬಹುದು, ಗೃಹಯುದ್ಧ ಮಾಡಿಸಬಹುದು, ರಾಜಕೀಯ ಅಸ್ಥಿರತೆ ಸೃಷ್ಟಿಸಬಹುದು ಹಾಗೂ ಹಿಂಸಾಚಾರ ಅಥವಾ ಯುದ್ಧ ಮಾಡಿಸಬಹುದು. ತೆರೆಮರೆಯಲ್ಲಿದ್ದು ಜಗತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ‘ಡೀಪ್ ಸ್ಟೇಟ್’ನ ಜಾಲದಲ್ಲಿ ಸಿಲುಕದಂತೆ ತನ್ನನ್ನು ರಕ್ಷಿಸಿಕೊಳ್ಳುವುದು ಮತ್ತು ಸೂಕ್ಷ್ಮ ನಿಗಾ ಇಟ್ಟುಕೊಂಡು ಅದನ್ನೇ ಮುಷ್ಟಿಯಲ್ಲಿಟ್ಟುಕೊಳ್ಳುವುದೇ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ.
‘ಡೀಪ್ ಸ್ಟೇಟ್’ನ ವಿಷಯ ಈಗ ಹೆಚ್ಚು ಚರ್ಚೆಯಲ್ಲಿದೆ, ಇದರ ಹಿಂದೆ ಮಹತ್ವದ ಕಾರಣವೆಂದರೆ, ಬಾಂಗ್ಲಾದೇಶದಲ್ಲಿ ಘಟಿಸಿರುವ ಅಥವಾ ಮಾಡಿಸಿರುವ ಅಧಿಕಾರ ಬದಲಾವಣೆ ! ಬಾಂಗ್ಲಾದೇಶದಲ್ಲಿ ಆಗಿರುವ ಬದಲಾವಣೆ ಇದು ವಿದ್ಯಾರ್ಥಿ ಆಂದೋಲನದ ಮೂಲಕ ಘಟಿಸಿತು. ಅನಿರೀಕ್ಷಿತವಾಗಿ ವಿದ್ಯಾರ್ಥಿಗಳು ಒಟ್ಟಾದರು ಹಾಗೂ ಅವರು ರಸ್ತೆಗಿಳಿದು ಆಂದೋಲನ ಆರಂಭಿಸಿದರು. ಈ ಆಂದೋಲನದ ಸ್ವರೂಪ ಎಷ್ಟು ತೀವ್ರ ಹಾಗೂ ಹಿಂಸಾತ್ಮಕವಾಗಿತ್ತೆಂದರೆ, ಪ್ರಧಾನಮಂತ್ರಿ ಶೇಖ ಹಸೀನಾ ಇವರು ತಕ್ಷಣ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. ಅನಂತರ ಅಲ್ಲಿ ಹಂಗಾಮಿ ಸರಕಾರ ಬಂತು. ‘ನೋಬೆಲ್’ ಪ್ರಶಸ್ತಿ ವಿಜೇತ ಮಹಮ್ಮದ ಯೂನಸ್‌ರನ್ನು ಬಾಂಗ್ಲಾದೇಶದ ಪ್ರಧಾನಮಂತ್ರಿಯ ಹುದ್ದೆಯಲ್ಲಿ ಕೂರಿಸಲಾಯಿತು.
೧. ಮೇಲ್ನೋಟಕ್ಕೆ ವಿದ್ಯಾರ್ಥಿಗಳ ಆಂದೋಲನವೆಂದು ಕಾಣಿಸುವುದರ ಹಿಂದಿದೆ ‘ಡೀಪ್ ಸ್ಟೇಟ್’ !
ಇಲ್ಲಿ ವಿಚಾರ ಮಾಡುವಂತಹ ಮಹತ್ವದ ಅಂಶವೆಂದರೆ, ಬಾಂಗ್ಲಾದೇಶದಲ್ಲಿನ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹೀಗೆ ಏಕಾಏಕಿ ಹೇಗೆ ಸಕ್ರಿಯರಾದರು ? ಹೇಗೆ ಆಕ್ರಮಣವಾಯಿತು ? ಹೇಗೆ ರಸ್ತೆಗಿಳಿದರು ? ಇವರು ತಾವಾಗಿಯೇ ಇಳಿದರೆ ಅಥವಾ ಯಾರಾದರೂ ಉತ್ತೇಜಿಸುತ್ತಿದ್ದರೇ ? ಎನ್ನುವ ಅನೇಕ ಪ್ರಶ್ನೆಗಳು ಸಾಮಾನ್ಯರಲ್ಲಿ ಉದ್ಭವಿಸದಿದ್ದರೂ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಟುವಟಿಕೆಗಳ ವಿಶ್ಲೇಷಕರಲ್ಲಿ, ವಿಚಾರವಾದಿ ಗಳಲ್ಲಿ, ಪತ್ರಕರ್ತರಲ್ಲಿ, ಜಾಗತಿಕ ಸಂಘಟನೆಗಳ ಪದಾಧಿಕಾರಿಗಳಲ್ಲಿ ಈ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ; ಏಕೆಂದರೆ ಇಂತಹ ಆಂದೋಲನ ಕ್ಷಣಾರ್ಧದಲ್ಲಿ ನಿರ್ಮಾಣವಾಗುವುದಿಲ್ಲ, ಇದರ ಹಿಂದೆ ವರ್ಷಾನುವರ್ಷ ಪೂರ್ವನಿಯೋಜನೆಯಾಗಿರಬೇಕು. ‘ವಿದ್ಯಾರ್ಥಿಗಳ ಆಂದೋಲನ ನಡೆಯುತ್ತದೆ’, ಎಂಬುದು ಮೇಲ್ನೋಟಕ್ಕೆ ಮಾತ್ರ ಕಾಣಿಸುವುದಾಗಿದೆ. ಸತ್ಯ ಬೇರೆಯೆ ಇದೆ ಹಾಗೂ ಕಾಣಿಸದಿರುವ ಅದೃಶ್ಯವಾಗಿರುವ ಮಹಾಶಕ್ತಿಯ ಕೈವಾಡ ಅದರಲ್ಲಿದೆ. ಈ ಮಹಾಶಕ್ತಿಯೆ ‘ಡೀಪ್ ಸ್ಟೇಟ್’ !
೨. ತನ್ನ ಪ್ರಭುತ್ವವನ್ನು ಕಾಪಾಡಲು ‘ಡೀಪ್ ಸ್ಟೇಟ್’ ಏನು ಮಾಡಬಹುದು ?
ಜಗತ್ತಿನ ಎಲ್ಲ ದೇಶಗಳ ಸರಕಾರ, ಆ ದೇಶದ ಅರ್ಥವ್ಯವಸ್ಥೆ, ಆಡಳಿತ, ಮಾಹಿತಿ ಮತ್ತು ಪ್ರಸಾರ ಎಲ್ಲವನ್ನೂ ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ‘ಡೀಪ್ ಸ್ಟೇಟ್’ ಪ್ರಯತ್ನಿಸುತ್ತಿರುತ್ತದೆ. ಜಗತ್ತಿನ ಪ್ರಭಾವಶಾಲಿ ಜನರ ಈ ಗುಂಪಿನಲ್ಲಿ ರಾಜಕಾರಣಿಗಳು, ಬಂಡವಾಳದಾರರು, ಉದ್ಯಮಿಗಳು ಮುಂತಾದವರು ಇರುತ್ತಾರೆ. ಈ ಗುಂಪು ಎಲ್ಲ ಕಡೆಗಳಲ್ಲಿ ಸಕ್ರಿಯವಾಗಿರುತ್ತದೆ; ಆದರೆ ಅದೃಶ್ಯವಾಗಿರುತ್ತದೆ ! ಇದುವೇ ‘ಡೀಪ್ ಸ್ಟೇಟ್’. ಈ ಗುಂಪು ತನ್ನ ಹಿತ ಸಾಧಿಸಲು ಏನು ಬೇಕಾದರೂ ಮಾಡುತ್ತದೆ. ಯಾವುದೇ ಒಂದು ದೇಶದ ಸರಕಾರ ಅವರಿಗೆ ಅನುಕೂಲಕರವಾಗಿ ಕಾರ್ಯ ಮಾಡದಿದ್ದರೆ, ‘ಡೀಪ್ ಸ್ಟೇಟ್’ ಆ ದೇಶದಲ್ಲಿನ ಸರಕಾರವನ್ನು ಉರುಳಿಸಬಹುದು. ‘ವಾರ್ ಇಂಡಸ್ಟ್ರಿ’ಯ (ಸಂರಕ್ಷಣೆ ಅಥವಾ ಯುದ್ಧಕ್ಷೇತ್ರದ) ವ್ಯವಸಾಯ ನಡೆಯಬೇಕೆಂದು ಯುದ್ಧಜನ್ಯ ಪರಿಸ್ಥಿತಿ ಸೃಷ್ಟಿಸಬಹುದು. ಪ್ರಸಂಗಾನುಸಾರ ಯುದ್ಧವನ್ನೂ ಮಾಡಿಸಬಹುದು. ಗೃಹಯುದ್ಧವನ್ನು ಉತ್ತೇಜಿಸುವುದು, ಇದಂತೂ ಅವರಿಗೆ ಮಕ್ಕಳಾಟದಂತಿದೆ ! ಸಮಾಜದ ವಿವಿಧ ಘಟಕಗಳನ್ನು ಜೊತೆಗಿಟ್ಟುಕೊಂಡು ರಾಜಕೀಯ ಅಸ್ಥಿರತೆ ಸೃಷ್ಟಿಸುವುದೇ ಅವರ ಆಸಕ್ತಿಯಾಗಿದೆ ! ಇಡೀ ಜಗತ್ತನ್ನು ಪ್ರಭಾವಿತಗೊಳಿಸುವಂತಹ ಯಾವುದಾದರೂ ಘಟನೆ ನೋಡಲು ಸಿಕ್ಕಿದರೆ, ಅದರ ಹಿಂದೆ ಈ ನಿಪುಣರ ಕೈವಾಡವಿದೆಯೆಂದೇ ತಿಳಿಯಬೇಕು. ಹೇಗೆ ಅನಿರೀಕ್ಷಿತವಾಗಿ ‘ಸೆನ್ಸೆಕ್ಸ್’ ಕುಸಿತವಾಗುತ್ತದೆ, ಎರಡು ದೇಶಗಳ ನಡುವೆ ಒತ್ತಡ ನಿರ್ಮಾಣವಾಗುವುದು, ದೇಶದಾದ್ಯಂತ ಉದ್ವಿಗ್ನತೆ ನಿರ್ಮಾಣವಾಗುವುದು, ದೇಶ ದೇಶಗಳನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟುವುದು, ಬಾಂಗ್ಲಾದೇಶದಲ್ಲಿ ಘಟಿಸಿರುವ ಹಾಗೆ ಆಂದೋಲನ ಅಥವಾ ಹಿಂಸೆ ನಡೆಸುವುದು ಇತ್ಯಾದಿ.
ಪ್ರಜಾಪ್ರಭುತ್ವ ಸುಸೂತ್ರವಾಗಿರುವಾಗ ದೇಶದಲ್ಲಿ ಒಂದು ಸರಕಾರವಿರುತ್ತದೆ. ಈ ಸರಕಾರದಿಂದಲೇ ಪ್ರತಿಯೊಂದು ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ನಿಲುವುಗಳನ್ನು ನಿರ್ಧರಿಸಲಾಗುತ್ತದೆ; ಆದರೆ ಸರಕಾರ ಯಾವ ನಿರ್ಣಯ ತೆಗೆದುಕೊಳ್ಳಬೇಕು ? ಹಾಗೂ ಯಾವ ನಿಲುವನ್ನು ಹೇಗೆ ಹಮ್ಮಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಕಾರ್ಯ ‘ಡೀಪ್ ಸ್ಟೇಟ್’ನ ಮೂಲಕ ನಡೆಯುತ್ತದೆ. ಸರಕಾರದ ನಿರ್ಣಯ ಅಥವಾ ನಿಲುವು ‘ಡೀಪ್ ಸ್ಟೇಟ್’ಗೆ ಅನುಕೂಲವಿಲ್ಲದಿದ್ದರೆ, ಬಾಂಗ್ಲಾದೇಶದ ಹಾಗೆ ಬದಲಾವಣೆ ಮಾಡಲಾಗುತ್ತದೆ ಹಾಗೂ ಇದರ ಸುಳಿವು ಜನಸಾಮಾನ್ಯರಿಗೆ ಸಿಗುವುದಿಲ್ಲ.
೩. ನಿಜವಾಗಿಯೂ ‘ಡೀಪ್ ಸ್ಟೇಟ್’ ಎಂದರೇನು ? ಅದರ ಕಾರ್ಯ ಹೇಗಿರುತ್ತದೆ ?
ಮೊದಲು ‘ಡೀಪ್ ಸ್ಟೇಟ್’ ಎಂಬ ಸಂಕಲ್ಪನೆಯನ್ನು ತಿಳಿದುಕೊಳ್ಳಬೇಕು. ‘ಡೀಪ್ ಸ್ಟೇಟ್’ ಈ ಗುಂಪು ಅದೃಶ್ಯವಾಗಿರುತ್ತದೆ ಹಾಗೂ ಅದರಲ್ಲಿ ಸಮಾಜವನ್ನು ಪ್ರಭಾವಿತಗೊಳಿಸುವ ಪ್ರತಿಯೊಂದು ಘಟಕ ಸಮಾವೇಶವಿರುತ್ತದೆ. ಈ ಗುಂಪು ತನಗೆ ಅನುಕೂಲವಾಗುವಂತಹ ‘ಇಕೋಸಿಸ್ಟಮ್’ ತಯಾರಿಸುತ್ತದೆ. ಇದರಲ್ಲಿ ಯಾರು ಕೂಡ ಇರಬಹುದು. ರಾಜಕಾರಣಿ, ಸಾಮಾನ್ಯ ವ್ಯಕ್ತಿ, ಸಂಸ್ಥೆ, ಪತ್ರಕರ್ತರು, ಲೇಖಕರು, ಆಂದೋಲನಕಾರರು, ಸಾಮ್ಯವಾದಿಗಳು, ಶಾಂತಿಪ್ರಿಯ ಸಮುದಾಯ, ಉದ್ಯಮಿಗಳು, ಸೇವೆಯಲ್ಲಿರುವ-ಇಲ್ಲದಿರುವ ಸರಕಾರಿ ಅಧಿಕಾರಿಗಳು, ಕಲಾವಿದರು ಮುಂತಾದವರು ಅದರಲ್ಲಿರಬಹುದು. ಈ ಜನರು ‘ಡೀಪ್ ಸ್ಟೇಟ್’ಗಾಗಿ ಅದೃಶ್ಯ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಈ ‘ಇಕೋಸಿಸ್ಟಮ್ ಡೀಪ್ ಸ್ಟೇಟ್’ಗೆ ಪೂರಕ, ಪೋಷಕ ಹಾಗೂ ಅನುಕೂಲಕರ ವಾತಾವರಣ ನಿರ್ಮಿಸುವ ಕಾರ್ಯ ಮಾಡುತ್ತದೆ. ‘ಡೀಪ್ ಸ್ಟೇಟ್’ಗಾಗಿ ಕಾರ್ಯ ಮಾಡುವಾಗ ಈ ಗುಂಪು ತನ್ನ ದೇಶದ ಹಿತವನ್ನೂ ಮಣ್ಣುಪಾಲು ಮಾಡಲು ಹಿಂಜರಿಯುವುದಿಲ್ಲ’, ಎಂದು ಹೇಳಿದರೂ ತಪ್ಪಾಗದು.
ಕಳೆದ ೫ ವರ್ಷಗಳಲ್ಲಿ ದಕ್ಷಿಣ ಏಶಿಯಾ ಖಂಡದಲ್ಲಿನ ೫ ದೇಶ ಗಳಲ್ಲಿ ಅಧಿಕಾರ ಬದಲಾಗಿರುವುದು ತಮಗೆ ತಿಳಿದಿರಬಹುದು. ಇದರಲ್ಲಿ ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಮಾಲ್ದೀವ್ ಮತ್ತು ಬಾಂಗ್ಲಾದೇಶ ಇವುಗಳ ಸಮಾವೇಶವಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರು ಸೆರೆಮನೆಗೆ ಹೋಗಬೇಕಾಯಿತು. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಇವರ ಸರಕಾರ ೧೫ ವರ್ಷ ಗಳಿಂದ ಅಸ್ತಿತ್ವದಲ್ಲಿತ್ತು; ಆದರೆ ಅನಿರೀಕ್ಷಿತವಾಗಿ ಆಂದೋಲನವಾಗುತ್ತದೆ ಹಾಗೂ ಅಧಿಕಾರ ಬದಲಾಗುತ್ತದೆ. ಮಾಲ್ದೀವ್‌ನಲ್ಲಿ ‘ಗೋ ಬ್ಯಾಕ್ ಇಂಡಿಯಾ’ (ಭಾರತ ಹಿಂತಿರುಗಿ ಹೋಗು) ಆಂದೋಲನ ಹೇಗೆ ಆರಂಭವಾಗುತ್ತದೆ ? ಇದರಲ್ಲಿಯೂ ಶ್ರೀಲಂಕಾದ ಕೊಲಂಬೋದಲ್ಲಿ, ಪಾಕಿಸ್ತಾನದ ಲಾಹೋರದಲ್ಲಿ, ಮಾಲ್ದೀವ್ ಮತ್ತು ಬಾಂಗ್ಲಾದೇಶದ ರಾಜಧಾನಿ ಢಾಕಾ ಈ ನಾಲ್ಕೂ ಸ್ಥಳಗಳಲ್ಲಿ ಜನರು ನೇರವಾಗಿ ರಾಷ್ಟ್ರಪತಿ ಅಥವಾ ಪ್ರಧಾನಮಂತ್ರಿಗಳ ನಿವಾಸಸ್ಥಾನಗಳಿಗೆ ಹೇಗೆ ನುಗ್ಗುತ್ತಾರೆ ? ಅಲ್ಲಿ ಅಭೇದ್ಯವಾದ ಭದ್ರತಾ ವ್ಯವಸ್ಥೆ ಇದ್ದರೂ ಇದೆಲ್ಲವೂ ನಡೆಯುತ್ತದೆ. ಈ ಎಲ್ಲ ವಿಷಯದಲ್ಲಿ ವಿಚಾರ ಮಾಡಬೇಕಾಗಿದೆ. ಅದಕ್ಕಾಗಿ ‘ಡೀಪ್ ಸ್ಟೇಟ್’ನ ಬಗ್ಗೆ ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ. ‘ಡೀಪ್ ಸ್ಟೇಟ್’ ಒಂದು ಸಂಕಲ್ಪನೆಯಾಗಿದೆ. ಯಾವುದೇ ಸರಕಾರ ದೇಶವನ್ನು ಹೇಗೆ ನಡೆಸುತ್ತದೆ ಎಂಬುದರಿಂದ ಆ ದೇಶದ ‘ಡೀಪ್ ಸ್ಟೇಟ್’ನ ಚಟುವಟಿಕೆಯ ಬಗ್ಗೆ ಅರಿವಾಗುತ್ತದೆ. ಈ ಶಕ್ತಿಯನ್ನು ನಿಯಂತ್ರದಲ್ಲಿಡುವುದು ಆವಶ್ಯಕವಾಗಿದೆ. ಇಲ್ಲದಿದ್ದರೆ ಅದು ಸಂಪೂರ್ಣ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹಿಂಜರಿಯುವುದಿಲ್ಲ. ಇದರಿಂದ ದೇಶದ ಅಧಿಕಾರವನ್ನು ಪಡೆಯುವುದು ಎಷ್ಟು ಮಹತ್ವದ್ದಾಗಿದೆಯೊ, ಅಷ್ಟೇ ಅದನ್ನು ಉಳಿಸಿಕೊಳ್ಳುವುದು ಮಹತ್ವದ್ದಾಗಿದೆ ! ಅದಕ್ಕಾಗಿ ಸರಕಾರದ ಪ್ರತಿಯೊಂದು ವಿಭಾಗದ ಮೇಲೆ ನಿಯಂತ್ರಣವಿರಬೇಕಾಗುತ್ತದೆ. ಮುತ್ಸದ್ಧಿತನ ಎಷ್ಟು ಆವಶ್ಯಕವೋ, ಅಷ್ಟೇ ಸೈನ್ಯ ಶಕ್ತಿಯೂ ಆವಶ್ಯಕವಾಗಿದೆ. ಈ ಎಲ್ಲ ಶಕ್ತಿಸ್ಥಾನಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಬೇಕು. ದೇಶದ ತೆರಿಗೆಯ ಪದ್ಧತಿ ಕೂಡ ಪ್ರಭಾವಪೂರ್ಣ ಆಗಿರಬೇಕು !
ತಮ್ಮ ಲಾಭಕ್ಕಾಗಿ ‘ಡೀಪ್ ಸ್ಟೇಟ್’ ತಮ್ಮ ದೇಶದ ಒಳಗಿನ ವ್ಯವಹಾರಗಳಲ್ಲಿ ನಿರ್ದಾಕ್ಷಿಣ್ಯವಾಗಿ ಹಸ್ತಕ್ಷೇಪಕ್ಕೆ ಸದಾ ಸಿದ್ಧವಾಗಿರುತ್ತದೆ. ಪ್ರಪಂಚದ ಯಾವುದೇ ದೇಶವು ತಮ್ಮ ದೇಶದ ‘ಡೀಪ್ ಸ್ಟೇಟ್’ಗೆ ಎಂದಿಗೂ ಮಾನ್ಯತೆ ನೀಡಿಲ್ಲ ಮತ್ತು ಎಂದಿಗೂ ನೀಡುವುದೂ ಇಲ್ಲ. ‘ಡೀಪ್ ಸ್ಟೇಟ್’ನ ಕಾರ್ಯ ಏನೆಂದರೆ ಕೆಲವೊಮ್ಮೆ ಅಲ್ಲಿನ ಸರಕಾರಕ್ಕೆ ನೇರವಾಗಿ ಸಹಾಯ ಮಾಡುವುದು ಅಥವಾ ಪರೋಕ್ಷವಾಗಿ ಸಹಾಯ ನೀಡುವುದು ಅಥವಾ ತಮ್ಮದೇ ಆದ ಗುಪ್ತ ‘ಅಜೆಂಡಾ’ (ಕಾರ್ಯಪಟ್ಟಿ) ಕಾರ್ಯಗತಗೊಳಿಸುವು ದಾಗಿರುತ್ತದೆ. ಸಾಮಾನ್ಯವಾಗಿ ‘ಡೀಪ್ ಸ್ಟೇಟ್’ ತನ್ನ ದೇಶದ ಹಿತಕ್ಕೆ ಹಾನಿಯನ್ನೂ ಮಾಡುವುದಿಲ್ಲ. ಈ ಮೂಲಕ ಸರಕಾರವು ಗೋಚರವಾಗಿ ಮಾಡಲಾಗದ ಕೆಲಸಗಳನ್ನು ‘ಡೀಪ್ ಸ್ಟೇಟ್’ ಮೂಲಕ ಮಾಡಿ ಕೊಳ್ಳುತ್ತದೆ. ಹೀಗಾಗಿ ಸರಕಾರವೂ ‘ಡೀಪ್ ಸ್ಟೇಟ್’ನ ಅದೃಶ್ಯತೆಯ ಆವರಣವನ್ನು ತೆಗೆಯುವ ಪ್ರಯತ್ನವಿಲ್ಲದೆ ಕಾರ್ಯನಿರ್ವಹಿಸುತ್ತದೆ.
‘ಡೀಪ್ ಸ್ಟೇಟ್’ನ ಶಕ್ತಿ ಅದರಲ್ಲಿರುವ ಘಟಕಗಳ ಅನುಭವ, ಜ್ಞಾನ, ಸಂಬಂಧಗಳು, ಅಂತರ್‌ದೃಷ್ಟಿ, ಕಲಾಕುಶಲತೆ, ವಿಶೇಷ ಕೌಶಲ್ಯಗಳು, ಪರಂಪರೆ ಮತ್ತು ಸಾಮೂಹಿಕ ಮೌಲ್ಯಗಳಿಂದ ಅನುಭವಿಸಬಹುದು. ಇವೆಲ್ಲವೂ ಘಟಕಗಳ ಒಟ್ಟಾದ ಗುಣಧರ್ಮದಿಂದಾಗಿ ಈ ಅನಾಮಧೇಯ ನೌಕರಶಾಹಿಯು ‘ಮಹಾಅಧಿಪತಿ’ ಆಗಿ ವರ್ತಿಸುತ್ತಾರೆ ಮತ್ತು ಅವರು ಯಾರಿಗೂ ಬಾಧ್ಯರಾಗಿರುವುದಿಲ್ಲ. ‘ಡೀಪ್ ಸ್ಟೇಟ್’ ಸ್ವರೂಪದ ಅಸ್ತ್ರ ಸರಕಾರವು ಸಂಭಾವ್ಯ ಗುಪ್ತ ಮತ್ತು ಅನಧಿಕೃತ ಶಕ್ತಿಗಳ ಅಂತರ್ಜಾಲದಿಂದ (‘ನೆಟ್ವರ್ಕ’ದಿಂದ) ರೂಪುಗೊಂಡಿರುತ್ತದೆ. ರಾಜಕೀಯ ನೇತೃತ್ವದಿಂದ ಭಿನ್ನವಾಗಿದ್ದು ತನ್ನ ‘ಅಜೆಂಡಾ’ ಮತ್ತು ಧ್ಯೇಯ ಇವುಗಳ ಬಗ್ಗೆ ಬೆಂಬತ್ತುತ್ತಿರುವುದೇ ಇದರ ಕಾರ್ಯ.
‘ಡೀಪ್ ಸ್ಟೇಟ್’ ಎಂದರೆ ನಿಜವಾದ ಅರ್ಥದಲ್ಲಿ ನಕಾರಾತ್ಮಕವಾಗಿರುವ ಎಂತಹ ಶಕ್ತಿಯಿಂದರೆ, ಅದರ ಅಸ್ತಿತ್ವವನ್ನು ಯಾರೂ ಒಪ್ಪುವುದೂ ಇಲ್ಲ ಮತ್ತು ಯಾವುದೇ ರೀತಿ ಸಾಬೀತು ಮಾಡ ಲಾಗದು; ಇದರ ಮೇಲ್ವಿಚಾರಣೆವು ಅತಿಶಯ ಅವಶ್ಯಕವಾಗಿದೆ. ‘ಡೀಪ್ ಸ್ಟೇಟ್’ನ ಕ್ರಿಯೆಗಳನ್ನು ಆಧಾರಿತವಾಗಿ ಗಮನವಿಟ್ಟು ಅವು ದೇಶದ ಹಿತಕ್ಕಾಗಿ ಇದೆಯೋ ಇಲ್ಲವೋ ಎನ್ನುವ ನಿರ್ಣಯ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದು ಯಾವುದೇ ರಾಷ್ಟ್ರಕ್ಕಾಗಿ ಆವಶ್ಯಕವಾಗಿದೆ.
೪. ‘ಡೀಪ್ ಸ್ಟೇಟ್’ನ ಪ್ರಾರಂಭ
ಅಮೇರಿಕಾ, ಆಫ್ರಿಕಾ, ಯುರೋಪಿನ ಮಹಾದ್ವೀಪಗಳು, ಆರ್ಥಿಕ ಸಂಪನ್ಮೂಲಗಳ ಮೂಲಕ ಪ್ರಪಂಚದಲ್ಲಿ ಏಕಾಧಿಪಥ್ಯವಿತ್ತು. ಕ್ರಿಸ್ತೋಫರ್ ಕೊಲಂಬಸ್ ಅಮೆರಿಕಾಕ್ಕೆ ತಲುಪಿದಾಗ ಈ ಆರ್ಥಿಕ ಸಾಮ್ರಾಜ್ಯ ಸ್ಥಾಪನೆಗೆ ಹೆಜ್ಜೆ ಹಾಕಲಾಗಿತ್ತು. ಡಚ್‌ಗಳು ಮಾಸಾಲಾ ವ್ಯಾಪಾರಕ್ಕಾಗಿ ಇಂಡೋನೇಷ್ಯಾ ಪಯಣಿಸಿ ಜಾಜಿಫಲ ವ್ಯಾಪಾರ ಮಾಡಿ ಅವರು ಆರ್ಥಿಕ ಸುಭಿಕ್ಷೆಯನ್ನು ಪಡೆದರು. ಅನಂತರ ಡಚ್ಚರು ಈಸ್ಟ್ ಇಂಡೀಸ್ ಮತ್ತು ಫಿಲಿಫೈನ್ಸ್‌ಗೆ ತಲುಪಿದರು. ಈ ‘ಕೊಲೊನೈಸೇಶನ್’ (ವಸಾಹತುಶಾಹಿ) ಹಿಂದೆಯೂ ಜಗತ್ತಿನ ಆರ್ಥಿಕವ್ಯವಸ್ಥೆಯನ್ನು ನಿಯಂತ್ರಿಸುವ ಕೈವಾಡವಿತ್ತು. ಬ್ರಿಟಿಶ ಅಥವಾ ಯುರೋಪಿಯ ದೇಶದ ಬಂಡವಾಳದಾರರು ಜಗತ್ತಿನ ಆರ್ಥಿಕವ್ಯವಸ್ಥೆ ತಮ್ಮ ಕೈಯಲ್ಲಿರಲು ವಿವಿಧ ದೇಶಗಳ ಮೇಲೆ ನಿಯಂತ್ರಣವಿಡಲು ಪ್ರಯತ್ನಿಸಿದ್ದವು. ಇದರಲ್ಲಿ ಈಸ್ಟ್ ಇಂಡಿಯಾ ಕಂಪನಿಯೂ ಭಾರತದಲ್ಲಿ ಅನೇಕ ವರ್ಷಗಳ ಕಾಲ ರಾಜ್ಯವಾಳಿತು.
ಬ್ರಿಟಿಷರು ಕೇರಳದಲ್ಲಿ ಮಸಾಲೆ ವ್ಯಾಪಾರದ ಮೇಲೆ ನಿಯಂತ್ರಣ ಪಡೆದರು. ಮುಂಬೈ, ಸೂರತ, ಪಾಂಡಿಚೇರಿ ಇವುಗಳಂತಹ ನಗರಗಳು ಸಮುದ್ರತೀರದಲ್ಲಿವೆ, ಅಲ್ಲಿ ‘ಪೋರ್ಟ್’ (ಬಂದರು) ನಿರ್ಮಿಸಿದರು. ಇದರಿಂದ ಅವರಿಗೆ ವ್ಯಾಪಾರ ಮಾಡಬಹುದು. ಈ ‘ಡೀಪ್ ಸ್ಟೇಟ್’ ವ್ಯಾಪಾರಿಗಳೊಂದಿಗೆ ಕೈಜೋಡಿಸಿದರು ಮತ್ತು ಆಯಾ ಸ್ಥಳದ ವ್ಯವಸಾಯದಲ್ಲಿ ರಾಜ್ಯಾಧಿಕಾರ ಪ್ರಸ್ತಾಪಿತ ವಾಯಿತು. ‘ಡೀಪ್ ಸ್ಟೇಟ್’ ಇದು ಮೊದಲು ವ್ಯಾಪಾರದ ಮೇಲೆ ನಿಯಂತ್ರಣ ಪಡೆಯಿತು ಮತ್ತು ವ್ಯಾಪಾರ ಮಾಡಲು ಯಾವುದೇ ಅಡಚಣೆ ಬರಬಾರದೆಂದು ತನ್ನ ಸೇನಾದಳವನ್ನು ಸ್ಥಾಪಿಸಿತು. ಈಸ್ಟ್ ಇಂಡಿಯಾ ಕಂಪನಿ ಬಳಿ ತನ್ನದೇ ಪೊಲೀಸ್ ವ್ಯವಸ್ಥೆ ಇತ್ತು. ಅವರನ್ನು ‘ರಾಯಲ್ ಪೊಲೀಸ್’ ಎನ್ನಲಾಗುತ್ತಿತ್ತು. ಇವೆಲ್ಲವನ್ನು ಈಸ್ಟ್ ಇಂಡಿಯಾ ಕಂಪನಿಯ ಮಾಧ್ಯಮದಿಂದ ಮಾಡಲಾಗುತ್ತಿತ್ತು ಮತ್ತು ಈ ಕಂಪನಿಯಲ್ಲಿ ಯಾರಿದ್ದರು ? ಅದರಲ್ಲಿ ಬಂಡವಾಳದಾರರು ಇದ್ದರು. ಇದೇ ಬಂಡವಾಳದಾರರನ್ನು ‘ಹೌಸ್ ಆಫ್ ಲಾರ್ಡ್ಸ್’ ಎನ್ನಲಾಗುತ್ತದೆ.
(ಮುಂದುವರಿಯುವುದು)
– ಲೆಫ್ಟಿನಂಟ ಜನರಲ್ ವಿನೋದ ಕಂದಾರೆ (ನಿವೃತ್ತ), ಸಲಹೆಗಾರರು, ರಕ್ಷಣಾ ಸಚಿವಾಲಯ, ನವ ದೆಹಲಿ.
(ಕೃಪೆ : ಸಾಪ್ತಾಹಿಕ ‘ಹಿಂದುಸ್ಥಾನ ಪೋಸ್ಟ್’ನ ದೀಪಾವಳಿ ವಿಶೇಷಾಂಕ, ವರ್ಷ ೧, ಅಕ್ಟೋಬರ್-ನವೆಂಬರ್ ೨೦೨೪)