‘ನೇತ್ರಗಳು ಶರೀರದ ‘ನವದ್ವಾರಗಳ ಪೈಕಿ ಎರಡು ‘ದ್ವಾರ’ ಗಳು. ನೇತ್ರಗಳು ತೇಜತತ್ತ್ವಕ್ಕೆ ಸಂಬಂಧಿಸಿರುವುದರಿಂದ ಆ ದ್ವಾರಗಳಿಂದ ವ್ಯಕ್ತಿಯ ಸ್ಪಂದನಗಳು ಶಕ್ತಿಯ ಸ್ವರೂಪದಲ್ಲಿ ಪ್ರಕ್ಷೇಪಿಸುತ್ತವೆ. ಆದುದರಿಂದ ಯೋಗ್ಯ ಸಾಧನೆಯನ್ನು ಮಾಡುವ ಮತ್ತು ಸೂಕ್ಷ್ಮದಲ್ಲಿನ ಸ್ಪಂದನಗಳನ್ನು ತಿಳಿದುಕೊಳ್ಳುವ ಸಾಧಕನಿಗೆ ಯಾವುದಾದರೊಬ್ಬ ವ್ಯಕ್ತಿಯ ಕಣ್ಣುಗಳನ್ನು ನೋಡಿ ಅವನ ಆಧ್ಯಾತ್ಮಿಕ ಸ್ಥಿತಿ, ಅಂದರೆ ಅವನಿಗೆ ಆಧ್ಯಾತ್ಮಿಕ ತೊಂದರೆ ಇದೆಯೋ ಅಥವಾ ಇಲ್ಲವೋ?, ಆ ವ್ಯಕ್ತಿಯ ಭಾವ, ಅವನ ಸಾಧನೆ ಇತ್ಯಾದಿಗಳು ಸಹಜವಾಗಿಯೇ ಗಮನಕ್ಕೆ ಬರುತ್ತವೆ. ಸಾಮಾನ್ಯ ವ್ಯಕ್ತಿಗೆ ಸಮಾಜದಲ್ಲಿನ ಕೆಟ್ಟ ಶಕ್ತಿಗಳ ತೊಂದರೆಯಿರುವ ವ್ಯಕ್ತಿಯನ್ನು ನೋಡಿ ಅಥವಾ ತಥಾಕಥಿತ ಸಂತರನ್ನು ನೋಡಿ ಅವರ ಆಧ್ಯಾತ್ಮಿಕ ಸ್ಥಿತಿ ಗಮನಕ್ಕೆ ಬರುವುದಿಲ್ಲ. ತದ್ವಿರುದ್ಧ ಒಳ್ಳೆಯ ಸಾಧನೆ ಮಾಡಿರುವ ಸಾಧಕನಿಗೆ ವ್ಯಕ್ತಿಯ ಕಣ್ಣುಗಳನ್ನು ಸ್ವಲ್ಪ ಸಮಯದ ವರೆಗೆ ನೋಡಿದರೆ ಆ ವ್ಯಕ್ತಿಯ ಆಧ್ಯಾತ್ಮಿಕ ಸ್ಥಿತಿ ಸಹಜವಾಗಿ ಗಮನಕ್ಕೆ ಬರುತ್ತದೆ. ಅಧ್ಯಾತ್ಮವು ಅನುಭೂತಿಯ ಶಾಸ್ತ್ರವಾಗಿರುವುದರಿಂದ ನಾವೂ ಕಣ್ಣುಗಳ ಮಾಧ್ಯಮದಿಂದ ವ್ಯಕ್ತಿಯ ಸ್ಥಿತಿಯನ್ನು ತಿಳಿದುಕೊಳ್ಳುವ ಸಂದರ್ಭದಲ್ಲಿ ಅನುಭೂತಿಯನ್ನು ಪಡೆಯಬಹುದು. ಅದಕ್ಕಾಗಿ ಮುಂದೆ ನೀಡಿರುವ ಸೂಕ್ಷ್ಮ ಪ್ರಯೋಗವನ್ನು ಮಾಡಬೇಕು.
ಛಾಯಾಚಿತ್ರ ಕ್ರಮಾಂಕ ೧
ಛಾಯಾಚಿತ್ರ ಕ್ರಮಾಂಕ ೨
ಪಕ್ಕದಲ್ಲಿ ನೀಡಿರುವ ಇಬ್ಬರು ವ್ಯಕ್ತಿಗಳ ಕಣ್ಣುಗಳ ಛಾಯಾಚಿತ್ರಗಳನ್ನು ಒಂದೊಂದಾಗಿ ನಿರಂತರವಾಗಿ ೧-೨ ನಿಮಿಷಗಳವರೆಗೆ ನೋಡಬೇಕು. ಎರಡೂ ಛಾಯಾಚಿತ್ರಗಳನ್ನು ನೋಡಿ ‘ನಿಮಗೇನು ಅರಿವಾಗುತ್ತದೆ ?’, ಎಂದು ಅಧ್ಯಯನ ಮಾಡಿ.
ಇಬ್ಬರೂ ವ್ಯಕ್ತಿಗಳ ಕಣ್ಣುಗಳ ಕಡೆಗೆ ನೋಡಿ ಬಂದ ಅನುಭೂತಿಯನ್ನು ಒಂದು ಕಾಗದದಲ್ಲಿ ಬರೆದಿಡಬೇಕು ಮತ್ತು ನಂತರ ಕೆಳಗೆ ನೀಡಿರುವ ಉತ್ತರವನ್ನು ನೋಡಬೇಕು. ಸೂಕ್ಷ್ಮದ ಪ್ರಯೋಗ ಮಾಡಿದ ಬಳಿಕವೇ ಕೆಳಗಿನ ಉತ್ತರ ಓದಬೇಕು.
ಸೂಕ್ಷ್ಮದಲ್ಲಿನ ಪ್ರಯೋಗದ ಉತ್ತರ
ಛಾಯಾಚಿತ್ರ ಕ್ರಮಾಂಕ ೧ ರಲ್ಲಿನ ಕಣ್ಣುಗಳನ್ನು ನೋಡಿದಾಗ ತೊಂದರೆದಾಯಕ ಅನುಭೂತಿ ಬರುವುದು ಮತ್ತು ಛಾಯಾಚಿತ್ರ ಕ್ರಮಾಂಕ ೨ ರಲ್ಲಿನ ಕಣ್ಣುಗಳನ್ನು ನೋಡಿದಾಗ ಉಚ್ಚ ಸ್ತರದ ಒಳ್ಳೆಯ ಅನುಭೂತಿ ಬರುವುದು
ಛಾಯಾಚಿತ್ರ ಕ್ರಮಾಂಕ ೧ ರಲ್ಲಿನ ಕಣ್ಣುಗಳ ಛಾಯಾಚಿತ್ರ ಓರ್ವ ಸಂತರದ್ದಾಗಿದೆ. ಈ ಸಂತರ ಕಣ್ಣುಗಳನ್ನು ನೋಡುವಾಗ ತಲೆ ಭಾರವಾಗುವುದು ‘ಕಣ್ಣುಗಳನ್ನು ನೋಡಬಾರದು’, ತಲೆ ಸುತ್ತು, ಹೊಟ್ಟೆ ತೊಳೆಸುವಿಕೆ ಇತ್ಯಾದಿ ತೊಂದರೆದಾಯಕ ಅನುಭೂತಿಗಳು ಬರುತ್ತವೆ. ಅವರಿಗೆ ಕೆಟ್ಟ ಶಕ್ತಿಗಳ ತೊಂದರೆಯಿದೆ. ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಉಪಕರಣದಿಂದ ಸಂತರ ಕಣ್ಣುಗಳ ಛಾಯಾಚಿತ್ರದ ತಪಾಸಣೆ ಮಾಡಿದಾಗ, ಕಣ್ಣುಗಳಿಂದ ನಕಾರಾತ್ಮಕ ಊರ್ಜೆ ಪ್ರಕ್ಷೇಪಿತವಾಗುವುದು ಅರಿವಾಯಿತು.
ಛಾಯಾಚಿತ್ರ ಕ್ರಮಾಂಕ ೨ ರಲ್ಲಿನ ಕಣ್ಣುಗಳ ಛಾಯಾಚಿತ್ರ ಸನಾತನ ಸಂಸ್ಥೆಯ ಸಂತರಾದ ಸದ್ಗುರು (ಡಾ.) ಮುಕುಲ ಗಾಡಗೀಳ ಇವರದ್ದಾಗಿದೆ. ಈ ಸಂತರ ಕಣ್ಣುಗಳಿಂದ ಪ್ರಕ್ಷೇಪಿಸುವ ಸಕಾರಾತ್ಮಕ ಊರ್ಜೆಯಿಂದ ಈ ಸಂತರ ಕಣ್ಣುಗಳನ್ನು ನೋಡುವಾಗ ‘ಅವುಗಳ ಕಡೆಗೆ ಸತತವಾಗಿ ನೋಡುತ್ತಿರಬೇಕು’ ಎಂದೆನಿಸುವುದು, ಹಗುರವೆನಿಸುವುದು, ಶಾಂತವೆನಿಸುವುದು ಇತ್ಯಾದಿ ಒಳ್ಳೆಯ ಅನುಭೂತಿಗಳು ಬರುತ್ತವೆ. ಈ ಸಂತರಿಗೆ ಕೆಟ್ಟ ಶಕ್ತಿಗಳ ತೊಂದರೆ ಇಲ್ಲ. ಈ ಸಂತರ ಕಣ್ಣುಗಳ ಛಾಯಾಚಿತ್ರದ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಉಪಕರಣದ ಮೂಲಕ ತಪಾಸಣೆ ಮಾಡಿದಾಗ ಅವರ ಕಣ್ಣುಗಳಿಂದ ಸಕಾರಾತ್ಮಕ ಊರ್ಜೆ ಪ್ರಕ್ಷೇಪಿಸುವುದು ಗಮನಕ್ಕೆ ಬಂದಿತು.
(ಈ ಪರೀಕ್ಷಣೆಯು ವರ್ಷ ೨೦೧೯ ರದ್ದಾಗಿದ್ದರಿಂದ ‘ಸದ್ಗುರು (ಡಾ.) ಮುಕುಲ’ ಗಾಡಗೀಳ ಇವರ ಹೆಸರನ್ನು ಪೂ. (ಡಾ.) ಮುಕುಲ ಗಾಡಗೀಳ ಎಂದು ಮಾಡಲಾಗಿದೆ)
ಛಾಯಾಚಿತ್ರ ಕ್ರಮಾಂಕ ೧ ಮತ್ತು ಛಾಯಾಚಿತ್ರ ಕ್ರಮಾಂಕ ೨ ಇವುಗಳ ಪ್ರಭಾವಲಯಗಳ ತುಲನಾತ್ಮಕ ಕೋಷ್ಟಕ
೧. ಆಧ್ಯಾತ್ಮಿಕ ಸ್ಥಿತಿಯು ಕಣ್ಣುಗಳಿಂದ ಕೂಡಲೇ ಗಮನಕ್ಕೆ ಬರುತ್ತದೆ
ಕಣ್ಣುಗಳ ಪ್ರಯೋಗದಿಂದ ಗಮನಕ್ಕೆ ಬರುವುದೇನೆಂದರೆ, ಯಾವುದಾದರೊಬ್ಬ ವ್ಯಕ್ತಿಯ ಕಣ್ಣುಗಳನ್ನು ನೋಡಿ ಆ ವ್ಯಕ್ತಿಗಿರುವ ಆಧ್ಯಾತ್ಮಿಕ ತೊಂದರೆ ಕೂಡಲೇ ಗಮನಕ್ಕೆ ಬರುತ್ತದೆ. ವ್ಯಕ್ತಿಯ ಕಣ್ಣುಗಳು ಮನಸ್ಸಿನ ಕನ್ನಡಿಯಾಗಿರುತ್ತವೆ. (Eyes are mirror of soul.) ಆದುದರಿಂದ ವ್ಯಕ್ತಿಯ ಕಣ್ಣುಗಳನ್ನು ನೋಡಿ ಆ ವ್ಯಕ್ತಿಯ ಮನಸ್ಸಿನಲ್ಲಿನ ವಿಚಾರ ಮತ್ತು ಭಾವವನ್ನು ಕೂಡ ನಾವು ತಿಳಿದುಕೊಳ್ಳಬಹುದು.
೨. ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ತೊಂದರೆಯನ್ನು ದೂರಗೊಳಿಸಬಹುದು !
ಯಾವುದಾದರೂಬ್ಬ ವ್ಯಕ್ತಿಗೆ ಆಧ್ಯಾತ್ಮಿಕ ತೊಂದರೆಯಿದ್ದರೂ, ಅವನಿಗೆ ಆ ತೊಂದರೆಯನ್ನು ದೂರಗೊಳಿಸಲು ಸಾಧ್ಯವಿದೆ. ಅದಕ್ಕಾಗಿ ಆ ವ್ಯಕ್ತಿಯು ಸಾಧನೆಯನ್ನು ಮಾಡುವುದು, ಸತ್ಪ್ರವೃತ್ತಿಯಿರುವ ವ್ಯಕ್ತಿಯ ಅಂದರೆ ಸಂತರ ಸತ್ಸಂಗದಲ್ಲಿರುವುದು ಅವರ ಮಾರ್ಗದರ್ಶನ ಪಡೆಯುವುದು ಮತ್ತು ಈಶ್ವರನಿಗೆ ಅಪೇಕ್ಷಿತವಿರುವ ಸಮಷ್ಟಿ ಕಾರ್ಯದಲಿಲ್, ಅಂದರೆ ಸಮಾಜದ ಪಾರಮಾರ್ಥಿಕ ಉದ್ಧಾರಕ್ಕಾಗಿ ಮಾಡಬೇಕಾದ ಕಾರ್ಯದಲ್ಲಿ ಸಹಭಾಗಿಯಾಗುವುದು, ಅದಕ್ಕಾಗಿ ತನು, ಮನ ಮತ್ತು ಧನವನ್ನು ತ್ಯಾಗ ಮಾಡುವುದು ಇಂತಹ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ಈಶ್ವರನ ಕೃಪೆಯಾಗಿ ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆ ದೂರವಾಗುತ್ತದೆ.
೨ ಅ. ಸಂತರ ಕೇವಲ ಅಸ್ತಿತ್ವದಿಂದಲೂ ಆಧ್ಯಾತ್ಮಿಕ ತೊಂದರೆಗಳು ದೂರವಾಗಬಹುದು : ಯಾವುದಾದರೊಂದು ಕತ್ತಲೆ ಕೋಣೆಯಲ್ಲಿ ತುಪ್ಪದ ದೀಪವನ್ನು ಹಚ್ಚಿದರೆ, ಆ ಕೋಣೆಯ ಕತ್ತಲೆಯಂತೂ ದೂರವಾಗುತ್ತದೆ, ಅದರೊಂದಿಗೆ ಕೋಣೆಯಲ್ಲಿರುವ ತೊಂದರೆದಾಯಕ ಸ್ಪಂದನಗಳೂ ದೂರವಾಗಿ ಅಲ್ಲಿ ಒಳ್ಳೆಯ ಸ್ಪಂದನಗಳುನಿರ್ಮಾಣವಾಗುತ್ತವೆ. ಅದರಂತೆಯೇ ಆಧ್ಯಾತ್ಮಿಕ ತೊಂದರೆಯಿರುವ ವ್ಯಕ್ತಿಯು ಉಚ್ಚ ಕೋಟಿಯ ಸಂತರ ಸಾನ್ನಿಧ್ಯದಲ್ಲಿದ್ದು ಅವರ ಕೃಪೆಯನ್ನು ಸಂಪಾಸಿದರೆ, ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳೂ ಕಡಿಮೆಯಾಗಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗು ತ್ತದೆ. ಚೈತನ್ಯಮಯವಾಗಿರುವ ಸಂತರ ಅಸ್ತಿತ್ವದಿಂದ ಅಥವಾ ಅವರ ಒಂದು ಕೃಪಾಕಟಾಕ್ಷದಿಂದಲೂ ವ್ಯಕ್ತಿಯಲ್ಲಿ ಒಳ್ಳೆಯ ಬದಲಾವಣೆಯಾಗುತ್ತದೆ. ಸಂತರ ಸಹವಾಸದ ಮಹತ್ವ ಹೀಗಿರುತ್ತದೆ.
೨ ಆ. ಸಾಧನೆಗಾಗಿ ಆಧ್ಯಾತ್ಮಿಕ ಕಾರ್ಯವನ್ನು ಮಾಡುವ ಆಶ್ರಮದಲ್ಲಿ ವಾಸಿಸುವುದರಿಂದಲೂ ಆಧ್ಯಾತ್ಮಿಕ ತೊಂದರೆಗಳು ದೂರವಾಗುತ್ತವೆ : ಆಧ್ಯಾತ್ಮಿಕ ಕಾರ್ಯವನ್ನು ಮಾಡುವ ಸಂತರ ಆಶ್ರಮ ಅಥವಾ ಮಠದಲ್ಲಿ ಸಾಧನೆಗಾಗಿ ವಾಸಿಸಿದರೂ, ಅಲ್ಲಿಯ ಚೈತನ್ಯದಿಂದ ವ್ಯಕ್ತಿಯಲ್ಲಿ ಒಳ್ಳೆಯ ಬದಲಾವಣೆಯಾಗಬಹುದು. ಸನಾತನದ ಆಶ್ರಮವು ಈಶ್ವರೀ ಚೈತನ್ಯದಿಂದ ತುಂಬಿರುವ ಇಂತಹ ಒಂದು ಆಶ್ರಮವಾಗಿದೆ. ಅಲ್ಲಿ ಸಾಧನೆಯನ್ನು ಮಾಡಲು ಪ್ರೇರಣೆ ಸಿಗುತ್ತದೆ, ಹಾಗೆಯೇ ಸಾಧನೆಯ ದೃಷ್ಟಿಯಿಂದ ಸಮಷ್ಟಿ ಕಾರ್ಯ ವನ್ನು ಮಾಡುವ ಸಂದರ್ಭದಲ್ಲಿ ಪರಾತ್ಪರ ಗುರು ಡಾ. ಆಠವಲೆ ಯವರ ಮಾರ್ಗದರ್ಶನವೂ ಲಭಿಸುತ್ತದೆ. ಇದರ ಲಾಭ ಹೇಗಾಗುತ್ತದೆ ಎಂಬುದು ಮುಂದಿನ ಉದಾಹರಣೆಯಿಂದ ಸ್ಪಷ್ಟವಾಗ ಬಹುದು.
೩. ಓರ್ವ ಪ್ರವಚನಕಾರರ ಮೇಲೆ ಸನಾತನದ ಆಶ್ರಮದಲ್ಲಿನ ಚೈತನ್ಯದ ಮತ್ತು ಸಮಷ್ಟಿ ಕಾರ್ಯದಲ್ಲಿ ಸಹಭಾಗಿಯಾಗಿದ್ದರಿಂದ ಆಗಿರುವ ಒಳ್ಳೆಯ ಪರಿಣಾಮ
‘೨೭.೮.೨೦೧೯ ರಂದು ಓರ್ವ ಪ್ರವಚನಕಾರರು ಗೋವಾದ ಸನಾತನದ ರಾಮನಾಥಿ ಆಶ್ರಮಕ್ಕೆ ಬಂದಾಗ ಅವರ ‘ಯುನಿವರ್ಸಲ್ ಔರಾ ಸ್ಕ್ಯಾನರ (ಯು.ಎ.ಎಸ್.)’ ಉಪಕರಣದಿಂದ ತಪಾಸಣೆ ಮಾಡಲಾಯಿತು. ಆ ಸಮಯದಲ್ಲಿ ಅವರ ನಕಾರಾತ್ಮಕ ಊರ್ಜೆಯ ಪ್ರಭಾವಲಯ ೧೪.೩೮ ಮೀಟರ್ ಇತ್ತು. ತದನಂತರ ಆಶ್ರಮದಲ್ಲಿ ಸತತವಾಗಿ ೩ ದಿನ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಸಂಗೀತ ಮತ್ತು ವೇದ’, ‘ಸಂಗೀತ ಮತ್ತು ಪುರಾಣ’, ‘ಸಂಗೀತ ಮತ್ತು ಬೀಜಮಂತ್ರ’ ಈ ವಿಷಯಗಳ ಬಗ್ಗೆ ಅವರ ಪ್ರವಚನಗಳನ್ನು ಇಡಲಾಯಿತು. ಅವರು ಸಂಗೀತದ ಸಂದರ್ಭದಲ್ಲಿ ಕೆಲವು ಪ್ರಯೋಗಗಳನ್ನು ಮಾಡಿದರು. ಹಾಗೆಯೇ ಅವರು ಆಶ್ರಮದಲ್ಲಿ ವಾಸ್ತವ್ಯದಲ್ಲಿರುವಾಗ ಪರಾತ್ಪರ ಗುರು ಡಾ. ಆಠವಲೆಯವರ ಧರ್ಮಕಾರ್ಯದ ಸಂದರ್ಭದಲ್ಲಿ ಅವರನ್ನು ಭೇಟಿಯಾದರು. ಆ ಪ್ರವಚನಕಾರರು ಆಶ್ರಮದಿಂದ ಹೋಗುವ ದಿನ ಪುನಃ ‘ಯು.ಎ.ಎಸ್.’ ತಪಾಸಣೆ ಮಾಡಿದಾಗ ಅವರಲ್ಲಿರುವ ನಕಾರಾತ್ಮಕ ಊರ್ಜೆ ನಾಶವಾಗಿ ಅವರಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗಿತ್ತು ಮತ್ತು ಆ ಊರ್ಜೆಯ ಪ್ರಭಾವಲಯ ೧೫.೦೮ ಮೀಟರನಷ್ಟು ಇತ್ತು’, ಎಂದು ಆ ತಪಾಸಣೆಯಲ್ಲಿ ಕಂಡು ಬಂದಿತು.’
– ಸೌ. ಪ್ರಿಯಾಂಕಾ ಸುಯಶ ಗಾಡಗೀಳ, ಡೊಂಬಿವಲಿ, ಠಾಣೆ ಜಿಲ್ಲೆ (ಮೊದಲಿನ ಕು. ಪ್ರಿಯಂಕಾ ಲೋಟಲಿಕರ) (೨೬.೧೨.೨೦೧೯)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. * ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. * ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. |