ತಮಿಳುನಾಡಿನಲ್ಲಿ ಚಿಗುರುತ್ತಿರುವ ಭಯೋತ್ಪಾದಕತೆ ಮತ್ತು ಪ್ರತ್ಯೇಕತಾವಾದವನ್ನು ತಡೆಯಿರಿ !

‘ಹಿಂದೂ ಯೆಲ್ಲೂಚಿ ಪುರವೈ’ ಯಿಂದ ಕೇಂದ್ರ ಸರಕಾರಕ್ಕೆ ಮನವಿ

ಚೆನ್ನೈ – ತಮಿಳುನಾಡುನಲ್ಲಿ ಚಿಗುರುತ್ತಿರುವ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ತಡೆಯಲು ಕೇಂದ್ರ ಸರಕಾರ ವಿಶೇಷವಾಗಿ ಗಮನ ಹರಿಸಬೇಕು. ಹಾಗೆಯೇ ರಾಜ್ಯದಲ್ಲಿ ಭಯೋತ್ಪಾದನೆ ದಮನ ಮಾಡಲು ವಿಶೇಷ ಇಲಾಖೆಯನ್ನು ಸ್ಥಾಪಿಸಬೇಕು, ಎಂದು ತಮಿಳುನಾಡಿನ ‘ಹಿಂದೂ ಯೆಲ್ಲೂಚಿ ಪುರವೈ’ನ ಸಂಸ್ಥಾಪಕ ಅಧ್ಯಕ್ಷ ಡಾ. ಪಾಳಾ ಸಂತೋಷ ಕುಮಾರ ಅವರು ಕೇಂದ್ರ ಸರಕಾರದ ಬಳಿ ಮನವಿ ಮಾಡಿದ್ದಾರೆ. ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯನ್ನು ನಾಶಗೊಳಿಸಲು ಉಪಾಯಗಳನ್ನು ಕೈಕೊಳ್ಳಬೇಕು ಎಂದು ಕೋರಿದ್ದಾರೆ.

1. ಅಲ್ಪಸಂಖ್ಯಾತರ ಆಂದೋಲನದ ಹೆಸರಿನಲ್ಲಿ ತಮಿಳುನಾಡಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಪ್ರಾರಂಭವಾಗಿದೆ. ತಮಿಳುನಾಡು ಸರಕಾರ ಮತ್ತು ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಒಂದು ಗುಂಪಿನ ಮತಕ್ಕಾಗಿ ಭಯೋತ್ಪಾದನೆಯನ್ನು ವಿರೋಧಿಸಲು ಮುಂದಾಗುತ್ತಿಲ್ಲ. ತಮಿಳುನಾಡಿನ ಕೆಲವು ಪ್ರತ್ಯೇಕತಾವಾದಿ ಆಂದೋಲನಗಳು ರಾಷ್ಟ್ರೀಯ ಏಕತೆಯ ವಿರುದ್ಧ ಬಹಿರಂಗವಾಗಿ ಪ್ರಚಾರ ಮಾಡುತ್ತಿವೆ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುತ್ತಿವೆ, ಎಂದು ಪತ್ರದಲ್ಲಿ ತಿಳಿಸಿದ್ದಾರೆ.

2. ರಾಜ್ಯದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳು, ಬಾಂಬ್ ಸ್ಪೋಟದ ಸರಣಿಗಳು ಮತ್ತು ಜಿಹಾದಿ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿವೆ. ದೇಶದ ಶಾಂತಿಗೆ ಭಂಗ ತರುವ ಉದ್ದೇಶದಿಂದ ತಮಿಳುನಾಡುವಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿದೆ. ಕೇಂದ್ರ ಗೃಹ ಸಚಿವಾಲಯ ಇತ್ತಕಡೆಗೆ ವಿಶೇಷ ಗಮನ ಹರಿಸಬೇಕು ಎಂದು ಈ ಪತ್ರದಲ್ಲಿ ಕೋರಲಾಗಿದೆ.

ಸಂಪಾದಕೀಯ ನಿಲುವು

ವಾಸ್ತವದಲ್ಲಿ ರಾಷ್ಟ್ರಪ್ರೇಮಿ ಸಂಘಟನೆಗಳ ಮೇಲೆ ಇಂತಹ ಬೇಡಿಕೆ ಮಂಡಿಸುವ ಸಮಯ ಬರಬಾರದು, ಸರಕಾರ ತಾನೇ ಮುಂದಾಗಿ ಕ್ರಮ ಕೈಗೊಳ್ಳಬೇಕು !