ದಿಲ್ಲಿ ಆರ್ಟ್ ಗ್ಯಾಲರಿಯ ಸಿಸಿಟಿವಿ ಫೂಟೇಜ್ ಸುರಕ್ಷಿತವಾಗಿಡಲು ಆದೇಶಿಸಿದ ಪಟಿಯಾಲ ನ್ಯಾಯಾಲಯ !

ಹಿಂದೂದ್ವೇಷಿ ಚಿತ್ರಕಾರ ಎಮ್. ಎಫ್. ಹುಸೇನ್ ನ ವಿವಾದಿತ ಚಿತ್ರಗಳನ್ನು ಗೌಪ್ಯವಾಗಿಟ್ಟು ಸಾಕ್ಷಿನಾಶ ಮಾಡುವ ಪ್ರಯತ್ನ !

MF Hussain ಬಿಡಿಸಿದ ಹಿಂದೂ ದೇವತೆಗಳ ಅಪಮಾನಾತ್ಮಕ ಚಿತ್ರಗಳು

ನವದೆಹಲಿ – ಹಿಂದೂದ್ವೇಷಿ ಚಿತ್ರಕಾರ ಎಂ. ಎಫ್ ಹುಸೇನ್ ಇವರ ಹಿಂದೂ ದೇವಿ-ದೇವತೆಗಳ ಆಕ್ಷೇಪಾರ್ಹ ಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಿದ್ದ ಪ್ರಕರಣದಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳಿಂದ ನೀಡಲಾದ ದೂರಿನ ನಂತರ ಮಹತ್ವಪೂರ್ಣ ತೀರ್ಪು ಬಂದಿದೆ. ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಮಹಾನಗರ ದಂಡಾಧಿಕಾರಿ ಸಾಹಿಲ ಮೋಂಗ ಇವರು ಡಿಸೆಂಬರ್ 4 ರಿಂದ ಡಿಸೆಂಬರ್ 10, 2024 ವರೆಗಿನ ಸಿಸಿಟಿವಿ ಫೂಟೇಜ್ ಗಳನ್ನು ಸುರಕ್ಷಿತವಾಗಿರಿಸಲು ಪೊಲೀಸರಿಗೆ ಆದೇಶ ನೀಡಿದೆ.

ಇದರಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ನರೇಂದ್ರ ಸುರ್ವೆ ಇವರು, ಈ ಆದೇಶ ಹಿಂದೂ ಧರ್ಮ ರಕ್ಷಣೆಗಾಗಿ ಹೋರಾಡುವ ಯೋಧರ ಮತ್ತು ಹಿಂದೂ ಸಂಘಟನೆಗಳ ದೊಡ್ಡ ಗೆಲುವಾಗಿದೆ. ಈ ಆದೇಶದಿಂದ ಸತ್ಯ ಬೆಳಕಿಗೆ ತರಲು ಸಹಾಯವಾಗಲಿದೆ. ನಾವು ಸರಕಾರಕ್ಕೆ ಅಪರಾಧ ಮರೆಮಾಚಲು ಸಾಕ್ಷಿ ನಾಶ ಮಾಡುವವರ ಮೇಲೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ ಎಂದರು.

ದಿಲ್ಲಿ ಆರ್ಟ್ ಗ್ಯಾಲರಿಯಲ್ಲಿನ ‘ಹುಸೇನ್ : ದ ಟೈಮಲೇಸ್ ಮಾಡರ್ನಿಸ್ಟ್’ ಈ ಪ್ರದರ್ಶನದಲ್ಲಿ ಹಿಂದೂ ದೇವಿ ದೇವತೆಯರ ನಗ್ನ ಮತ್ತು ಆಕ್ಷೇಪಾರ್ಹ ಚಿತ್ರಗಳ ಸಮಾವೇಶವಿತ್ತು. ಇದರಲ್ಲಿ ಒಂದು ಚಿತ್ರದಲ್ಲಿ ಭಗವಂತ ಗಣೇಶನ ತೊಡೆಯ ಮೇಲೆ ನಗ್ನ ಸ್ತ್ರೀ (ಬಹುತೇಕ ರೀದ್ಧಿ/ಸಿದ್ಧಿ) ತೋರಿಸಲಾಗಿದೆ. ಇನ್ನೊಂದು ಚಿತ್ರದಲ್ಲಿ ಭಗವಂತ ಹನುಮಂತ ಓರ್ವ ನಗ್ನ ಸ್ತ್ರೀಗೆ (ಬಹುಶಃ ಸೀತಾ ಮಾತೆ) ಕೈಯಲ್ಲಿ ಹಿಡಿದು ಹಾರುತ್ತಿರುವುದು ಕಾಣುತ್ತಿದೆ. ಇನ್ನೊಂದು ಚಿತ್ರದಲ್ಲಿ ಶಂಕರನ ತೊಡೆಯ ಮೇಲೆ ಅತ್ಯಂತ ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿದೆ. ಈ ಚಿತ್ರಗಳಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಪ್ರಯತ್ನಪೂರ್ವಕವಾಗಿ ನೋವುಂಟು ಮಾಡುವುದಕ್ಕಾಗಿ ರೂಪಗೊಂಡಿವೆ ಎಂದು ಸ್ಪಷ್ಟವಾಗುತ್ತದೆ. ಸಮಿತಿಯು ಭಾರತೀಯ ದಂಡ ವಿಧಾನ ಕಲಂ 295 (A) ಮತ್ತು ನ್ಯಾಯ ಸಂಹಿತೆ ಕಲಂ 299 ಅಂತರ್ಗತ ಆಯೋಜಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿತ್ತು.

ದೂರಿನ ನಂತರ ಗ್ಯಾಲರಿ ವ್ಯವಸ್ಥಾಪಕರಿಂದ ವಿವಾದಿತ ಚಿತ್ರಗಳು ಗೌಪ್ಯವಾಗಿ ತೆಗೆಯಲಾದವು; ಆದರೆ ಪೊಲೀಸ್ ವಿಚಾರಣೆಯಲ್ಲಿ ಈ ಚಿತ್ರಗಳು ಪ್ರದರ್ಶನಗೊಂಡಿರುವುದರ ಕುರಿತು ನಿರಾಕರಿಸಿದರು. ಸಮಿತಿಯ ನ್ಯಾಯವಾದಿ ಅಮಿತಾ ಸಚದೇವ್ ಮತ್ತು ಇತರರು ಪಟಿಯಾಲ ನ್ಯಾಯಾಲಯದಲ್ಲಿ ಸುರಕ್ಷಿತ ಇರಿಸಲು ಮತ್ತು ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್) ದಾಖಲಿಸಲು ಆಗ್ರಹಿಸಿದ್ದಾರೆ. ಸನ್ಮಾನ್ಯ ನ್ಯಾಯಾಲಯವು ಈ ಬೇಡಿಕೆ ಒಪ್ಪಿಕೊಂಡು ದೆಹಲಿ ಪೊಲೀಸರಿಗೆ ಆದೇಶ ನೀಡಿರುವುದು, ಸಂಬಂಧಿತ ಕಾಲಾವಧಿಯಲ್ಲಿನ ಫೂಟೇಜ್ ಸುರಕ್ಷಿತ ಇರಿಸಬೇಕು ಮತ್ತು ವರದಿ ಪ್ರಸ್ತುತಪಡಿಸಬೇಕು. ಮುಂದಿನ ವಿಚಾರಣೆ ಜನವರಿ 4, 2025 ರಂದು ನಡೆಯುವುದು ಎಂದು ಹೇಳಿದೆ.

ಈ ಹೋರಾಟದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಮಕರಂದ ಆಡಕರ, ನ್ಯಾಯವಾದಿ ಶಾಂತನು, ನ್ಯಾಯವಾದಿ ಕೇಸರಿ, ನ್ಯಾಯವಾದಿ ವಿಕ್ರಂ, ನ್ಯಾಯವಾದಿ ಯಾದವೇಂದ್ರ, ಸನಾತನ ಸ್ವಾಭಿಮಾನ ಸಭೆಯ ಅಧ್ಯಕ್ಷ ಬ್ರಿಜೇಶ್ ಶರ್ಮಾ ಮತ್ತು ಸಮಿತಿಯ ವಕ್ತಾರರು ಶ್ರೀ. ನರೇಂದ್ರ ಸುರ್ವೆ ಇವರು ಸಹಭಾಗಿಯಿದ್ದರು.

ಮೇಲೆ ಪ್ರಕಾಶಿಸಿದ ಚಿತ್ರದ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ ! – ಸಂಪಾದಕರು