Another Temple Found In Sambhal : ಸಂಭಲ(ಉತ್ತರಪ್ರದೇಶ) ಜಿಲ್ಲೆಯಲ್ಲಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ಇನ್ನೊಂದು ದೇವಸ್ಥಾನ ಪತ್ತೆ !

ದೇವಸ್ಥಾನ ಪಾಳು ಬಿದ್ದಿದ್ದು ಮತಾಂಧ ಮುಸಲ್ಮಾನರಿಂದ ದೇವಸ್ಥಾನದಲ್ಲಿನ ಮೂರ್ತಿಗಳ ಧ್ವಂಸ

ಸಂಭಲ (ಉತ್ತರಪ್ರದೇಶ) – ಸಂಭಲದಲ್ಲಿ ಕಳೆದ ೩ ದಿನಗಳಲ್ಲಿ ಅನೇಕ ವರ್ಷಗಳಿಂದ ಮುಚ್ಚಿರುವ ೨ ದೇವಸ್ಥಾನಗಳು ದೊರೆತನಂತರ ಈಗ ಇದೇ ಜಿಲ್ಲೆಯಲ್ಲಿನ ಚಂದೌಸಿ ನಗರದ ಲಕ್ಷ್ಮಣಗಂಜ ಇಲ್ಲಿಯ ಶೇಕಡ ೧೦೦ ರಷ್ಟು ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ಬಾಂಕೇ ಬಿಹಾರಿ ದೇವಸ್ಥಾನ ಪತ್ತೆಯಾಗಿದೆ. ಈ ದೇವಸ್ಥಾನ ಈಗ ಪಾಳು ಬಿದ್ದಿದೆ. ಹಿಂದೂಗಳ ಪಲಾಯನದ ನಂತರ ೨೦೧೦ ರಲ್ಲಿ ಮತಾಂಧ ಮುಸಲ್ಮಾನರು ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ.

೧. ಲಕ್ಷ್ಮಣಗಂಜ ಇಲ್ಲಿ ೨೫ ವರ್ಷಗಳ ಹಿಂದಿನವರೆಗೂ ಹಿಂದುಗಳ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿತ್ತು, ಆದರೆ ನಿಧಾನವಾಗಿ ಇಲ್ಲಿಯ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಾ ಹೋಯಿತು. ಅದರ ನಂತರ ಹಿಂದುಗಳ ಸ್ಥಳಾಂತರ ಆರಂಭವಾಯಿತು ಮತ್ತು ಅದರ ಪರಿಣಾಮ ಇಲ್ಲಿ ಇರುವ ೧೫೨ ವರ್ಷಗಳಷ್ಟು ಪ್ರಾಚೀನ ಬಾಂಕೆಬಿಹಾರಿ ಮಂದಿರದ ಮೇಲೆ ಆಗಿದೆ. ಆಗಿನ ಕಾಲದಲ್ಲಿ ಈ ದೇವಸ್ಥಾನದಲ್ಲಿ ಬೆಳಿಗ್ಗೆ ಸಂಜೆ ಪೂಜೆ ನಡೆಯುತ್ತಿತ್ತು. ಹಿಂದುಗಳು ದರ್ಶನಕ್ಕಾಗಿ ಬರುತ್ತಿದ್ದರು.

೨. ದೇವಸ್ಥಾನದ ರಕ್ಷಕ ಕೃಷ್ಣಕುಮಾರ ಇವರು ನೀಡಿರುವ ಮಾಹಿತಿಯ ಪ್ರಕಾರ, ೨೦೧೦ ವರೆಗೆ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿತ್ತು. ಈ ವರ್ಷ ಮತಾಂಧ ಮುಸಲ್ಮಾನರಿಂದ ಭಗವಾನ್ ಬಾಂಕೆ ಬಿಹಾರಿಯ ಮೂರ್ತಿ ಮತ್ತು ದೇವಸ್ಥಾನದಲ್ಲಿನ ಶಿವಲಿಂಗದ ಸಹಿತ ಇತರ ಮೂರ್ತಿಗಳು ಧ್ವಂಸ ಮಾಡಿದರು. ಪೊಲೀಸರು ಕ್ರಮ ಕೈಗೊಂಡರು; ಆದರೆ ದೇವಸ್ಥಾನದ ಕಡೆಗೆ ಗಮನ ನೀಡಲಾಗಿಲ್ಲ. ನಿಧಾನವಾಗಿ ದೇವಸ್ಥಾನದ ಬಾಗಿಲಗಳು ಶಿಖರ ಮುಂತಾದವು ಕುಸಿದವು. ದೇವಸ್ಥಾನ ಸಂಪೂರ್ಣವಾಗಿ ದುರಾವಸ್ಥೆಯಾಗಿದೆ. ಇಲ್ಲಿ ದೇವಸ್ಥಾನದ ಮೂರ್ತಿಯ ಬದಲು ಅವರ ಗುರುತುಗಳು ಕಾಣುತ್ತಿವೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇತರ ರಾಜ್ಯದಲ್ಲಿ ಕೂಡ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿನ ದೇವಸ್ಥಾನಗಳ ಶೋಧ ಅಭಿಯಾನ ನಡೆಸುವ ಆವಶ್ಯಕತೆ ಇದೆ ! ಅದಕ್ಕಾಗಿ ಹಿಂದೂ ಸಂಘಟನೆಗಳು ಸ್ಥಳೀಯ ಸರಕಾರದ ಮೇಲೆ ಒತ್ತಡ ನಿರ್ಮಾಣ ಮಾಡಬೇಕು !